ಮೊಡವೆಗಳು ಎಲ್ಲರನ್ನು ಕಾಡುವ ಸಮಸ್ಯೆ. ಕೆಲವರು ಇದಕ್ಕೆ ಕ್ರೀಮ್, ಟ್ಯಾಬ್ಲೆಟ್ ಮೊದಲಾದವುಗಳನ್ನು ತೆಗೆದುಕೊಂಡ್ರೆ, ಇನ್ನು ಕೆಲವರು ಲೇಸರ್ ಟ್ರೀಟ್‌ಮೆಂಟ್ ಮಾಡಿಕೊಳ್ತಾರೆ. ಆದ್ರೆ ಮೊಡವೆ ಸಮಸ್ಯೆ ಹೋಗಲಾಡಿಸಲು ಜನನ ನಿಯಂತ್ರಣ ಮಾತ್ರೆ ತೆಗೆದುಕೊಳ್ಳುವ ಬಗ್ಗೆ ನಿಮ್ಗೆ ಗೊತ್ತಿದ್ಯಾ ? ಅದು ಎಷ್ಟರಮಟ್ಟಿಗೆ ಸುರಕ್ಷಿತ, ತಜ್ಞರು ಏನ್ ಹೇಳ್ತಾರೆ ತಿಳಿಯೋಣ.
ಮೊಡವೆಗಳನ್ನು ಗುಣಪಡಿಸಲು ಜನನ ನಿಯಂತ್ರಣ ಮಾತ್ರೆಗಳನ್ನು ಸೇವಿಸುವ ಇಂತಹ ಅನೇಕ ವೀಡಿಯೊಗಳನ್ನು ನೀವು ನೋಡಿರಬೇಕು. ಅಂತರ್ಜಾಲದಲ್ಲಿ ಲಭ್ಯವಿರುವ ಅನೇಕ ವೀಡಿಯೊಗಳಲ್ಲಿ, ಅದನ್ನು ತೆಗೆದುಕೊಳ್ಳುವ ಕೆಲವು ಪ್ರಯೋಜನಗಳನ್ನು ತೋರಿಸಲಾಗಿದೆ. ಜೊತೆಗೆ ಹೀಗೆ ಮೊಡವೆಗೆ ಜನನ ನಿಯಂತ್ರಣ ಮಾತ್ರೆ (Birth control pills) ತೆಗೆದುಕೊಳ್ಳುವ ಬಗ್ಗೆ ಕೆಲವು ಅನಾನುಕೂಲಗಳನ್ನು ತೋರಿಸಲಾಗಿದೆ. ಜನನ ನಿಯಂತ್ರಣ ಮಾತ್ರೆಗಳಿಂದ ತಮ್ಮ ಮೊಡವೆಗಳು (Pimples) ಬೇಗನೆ ಗುಣವಾಗುತ್ತವೆ ಎಂದು ಕೆಲವರು ಹೇಳಿದರೆ, ಇತರರು ಅದನ್ನು ತೆಗೆದುಕೊಂಡ ನಂತರ ಮೊಡವೆಗಳು ಕೆಟ್ಟದಾಗಿವೆ ಎಂದು ಹೇಳುತ್ತಾರೆ. ಆದರೆ ಇದರ ಬಗ್ಗೆ ವೈದ್ಯರು ಏನು ಹೇಳುತ್ತಾರೆ ತಿಳಿಯೋಣ.
ಮೊಡವೆ ಚಿಕಿತ್ಸೆಗಾಗಿ ಗರ್ಭನಿರೋಧಕ ಮಾತ್ರೆಗಳ ಬಳಕೆಗೆ ತಾನು ಹೆಚ್ಚು ಆದ್ಯತೆ ನೀಡುವುದಿಲ್ಲ, ಆದರೆ ಕೆಲವೊಮ್ಮೆ ಅವುಗಳನ್ನು ಬಳಸುವುದು ಅನಿವಾರ್ಯವಾಗುತ್ತದೆ ಎಂದು ಡಾ.ರಶ್ಮಿ ತನ್ನ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ವಿಶೇಷವಾಗಿ ರೋಗಿಯು ಪಿಸಿಓಎಸ್ ಅಥವಾ ಪಿಸಿಓಡಿ ಹೊಂದಿರುವ ಸಂದರ್ಭಗಳಲ್ಲಿ. ಈ ಆರೋಗ್ಯ ಸಮಸ್ಯೆ (Health problem)ಗಳಿಂದಲೂ ಮೊಡವೆಗಳು ಹುಟ್ಟುತ್ತವೆ.
Birth Control Pills ಬಗ್ಗೆ ನಾಚಿಕೆ ಪಡದೆ ವೈದ್ಯರಲ್ಲಿ ಕೇಳಬೇಕಾದ ಪ್ರಶ್ನೆಗಳಿವು
ಮೊಡವೆಗಳ ಬಗ್ಗೆ ತಿಳಿಯಲು ಮೊದಲು ವೈದ್ಯರನ್ನು ಭೇಟಿ ಮಾಡಿ
ಮೊಡವೆಗೆ ನಿಜವಾದ ಕಾರಣ ಏನು ಎಂದು ಪತ್ತೆ ಹಚ್ಚಲು, ಮೊದಲು ತಪಾಸಣೆ ನಡೆಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಇದಕ್ಕಾಗಿ ನೀವು ಅಂತಃಸ್ರಾವಶಾಸ್ತ್ರಜ್ಞ, ಸ್ತ್ರೀರೋಗತಜ್ಞ ಅಥವಾ ಚರ್ಮಶಾಸ್ತ್ರಜ್ಞರ ಬಳಿಗೆ ಹೋಗಬೇಕು. ಈ ಪರೀಕ್ಷೆಗಳು ಮೊಡವೆಗಳು ಹಾರ್ಮೋನ್ ಸಮಸ್ಯೆಗಳಿಂದ ಉಂಟಾಗುತ್ತಿದೆಯೇ ಅಥವಾ ಬೇರೆ ಯಾವುದಾದರೂ ಆರೋಗ್ಯ ಸಮಸ್ಯೆಯಿಂದ ಉಂಟಾಗುತ್ತಿದೆಯೇ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಜನನ ನಿಯಂತ್ರಣ ಮಾತ್ರೆಗಳು ಹೇಗೆ ಸಹಾಯ ಮಾಡುತ್ತವೆ ?
ಮೊಡವೆಗಳ ಚಿಕಿತ್ಸೆಯ ಸಂದರ್ಭ ಪ್ರತಿ ಬಾರಿಯೂ ಜನನ ನಿಯಂತ್ರಣ ಮಾತ್ರೆಗಳನ್ನು ನೀಡಲಾಗುವುದಿಲ್ಲ. ಆದರೆ ಮೊಡವೆಗೆ ಕಾರಣ PCOS ಅಥವಾ PCOD ಎಂದು ಕಂಡುಬಂದರೆ, ಕೆಲವು ಸಂದರ್ಭಗಳಲ್ಲಿ ರೋಗಿಗೆ ಜನನ ನಿಯಂತ್ರಣ ಮಾತ್ರೆ ನೀಡಲಾಗುತ್ತದೆ. ಇದು ಹಾರ್ಮೋನುಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ, ಇದರಿಂದಾಗಿ ಮೊಡವೆಗಳು ಸಹ ಗುಣವಾಗಲು ಪ್ರಾರಂಭಿಸುತ್ತವೆ. ಕೆಲವೊಮ್ಮೆ ಇತರ ಹಾರ್ಮೋನ್‌ಗಳ ತ್ವರಿತ ಹೆಚ್ಚಳ (Weight gain) ಅಥವಾ ಕಡಿಮೆಯಾಗುವುದು ಸಹ ಸಮಸ್ಯೆಗೆ ಕಾರಣವಾಗಬಹುದು. ಇದಕ್ಕಾಗಿ ಹೆಚ್ಚುವರಿ ಹಾರ್ಮೋನ್ ಸಮತೋಲನ ಔಷಧಗಳನ್ನು ನೀಡಲಾಗುತ್ತದೆ.
ಮಹಿಳೆಯರೇ ಗರ್ಭ ನಿರೋಧಕ ಮಾತ್ರೆ ಸೇವಿಸ್ತೀರಾ , ಸ್ತನ ಹಿಗ್ಗುವಿಕೆ ಸಮಸ್ಯೆನೂ ಕಾಡ್ಬೋದು ಎಚ್ಚರ..!
ಮೊಡವೆಗಳಿಗೆ ಜನನ ನಿಯಂತ್ರಣ ಮಾತ್ರೆ ತೆಗೆದುಕೊಳ್ಳುವುದು ಸರಿಯೋ ?
ಜನನ ನಿಯಂತ್ರಣ ಮಾತ್ರೆಗಳನ್ನು ಮೊಡವೆ ಚಿಕಿತ್ಸೆಗಾಗಿ ತೆಗೆದುಕೊಳ್ಳಬಹುದು. ಆದರೆ, ಸರಿಯಾದ ಪರೀಕ್ಷೆ (Test) ಮತ್ತು ವೈದ್ಯರೊಂದಿಗೆ ಸಮಾಲೋಚಿಸಿದ ನಂತರವೇ ಇದನ್ನು ಮಾಡಬೇಕು. ಯಾವ ಜನನ ನಿಯಂತ್ರಣವನ್ನು ತೆಗೆದುಕೊಳ್ಳಬೇಕು ಮತ್ತು ಎಷ್ಟು ದಿನಗಳವರೆಗೆ ತೆಗೆದುಕೊಳ್ಳಬೇಕು ಎಂದು ಅವರು ಸೂಚಿಸುತ್ತಾರೆ. ಈ ಮಾತ್ರೆಗಳನ್ನು (Tablets) ನಿಮ್ಮ ಸ್ವಂತ ಇಚ್ಛೆಯಿಂದ ನಿರಂತರವಾಗಿ ತೆಗೆದುಕೊಳ್ಳಬಾರದು.
ಮಾತ್ರೆಗಳ ಜೊತೆಗೆ, ಆರೋಗ್ಯಕರ ಜೀವನಶೈಲಿ (Lifestyle)ಯನ್ನು ಸಹ ಅಳವಡಿಸಿಕೊಳ್ಳುವುದು ಮುಖ್ಯ ಎಂದು ವೈದ್ಯರು ಸೂಚಿಸುತ್ತಾರೆ. ಅದಿಲ್ಲದೆ PCOS ಅಥವಾ ಇತರ ಹಾರ್ಮೋನುಗಳ ಸಮಸ್ಯೆಗಳನ್ನು ಗುಣಪಡಿಸುವುದು ಕಷ್ಟ. ಮತ್ತು ಇದನ್ನು ಸರಿಯಾಗಿ ಮಾಡದಿದ್ದರೆ, ಮೊಡವೆಗಳು ಮಾತ್ರವಲ್ಲದೆ ಇತರ ರೀತಿಯ ಸಮಸ್ಯೆಗಳು ಸಹ ಉದ್ಭವಿಸಬಹುದು. ಅಂತಹ ಪರಿಸ್ಥಿತಿಯಲ್ಲಿ ತಜ್ಞರ ಅಭಿಪ್ರಾಯವನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ.