ಮನುಷ್ಯದ ದೇಹದೊಳಗೆ ಏನಾಗಿದೆ ಎಂಬುದನ್ನು ಪತ್ತೆ ಮಾಡಲು ಸಾಕಷ್ಟು ಯಂತ್ರಗಳಿವೆ. ಇಷ್ಟಿದ್ರೂ ಕೆಲವೊಮ್ಮೆ ಸ್ಪಷ್ಟತೆ ಸಿಗೋದಿಲ್ಲ. ಹಾಗಾಗಿಯೇ ಈ ಬಗ್ಗೆ ನಿರಂತರ ಪ್ರಯತ್ನ ನಡೆಯುತ್ತಿರುತ್ತದೆ. ಈಗ ವಿಜ್ಞಾನಿಗಳು ರೊಬೊಟ್ ತಂತ್ರಕ್ಕೆ ಕೈ ಹಾಕಿದ್ದಾರೆ.
ವಿಜ್ಞಾನ ಬಹಳ ಮುಂದುವರೆದಿದೆ. ದಿನೇ ದಿನೇ ಹೊಸ ಹೊಸ ತಂತ್ರಜ್ಞಾನಗಳ ಸಂಶೊಧನೆಯಾಗುತ್ತಿದೆ. ತಂತ್ರಜ್ಞಾನಗಳ ಸಹಾಯದಿಂದ ನಾವು ಇಂದು ಎಷ್ಟೋ ಕೆಲಸಗಳನ್ನು ಸುಲಭವಾಗಿ ಮಾಡುತ್ತಿದ್ದೇವೆ. ಮನುಷ್ಯ ಮಾಡಲಾಗದ ಅಥವಾ ಸುಲಭವಾಗಿ ಮಾಡಲಾಗದ ಕೆಲಸಗಳನ್ನು ಮನುಷ್ಯನೇ ನಿರ್ಮಿಸಿದ ಅನೇಕ ಯಂತ್ರಗಳು ಕಣ್ಣು ಬಿಡುವಷ್ಟರಲ್ಲಿ ಮಾಡಿಮುಗಿಸುತ್ತಿವೆ. ಮುಂದುವರೆದ ತಂತ್ರಜ್ಞಾನದಲ್ಲಿ ಮಾನವ ನಿರ್ಮಿತ ರೊಬೊಟ್ ಕೂಡ ಸೇರಿದೆ. ಒಬ್ಬ ವ್ಯಕ್ತಿಯ ಸೂಚನೆಯ ಪ್ರಕಾರ ಕೆಲಸ ಮಾಡುವ ಯಂತ್ರಗಳು ಮನುಷ್ಯನ ಅದ್ಭುತ ಸೃಷ್ಠಿಗಳಲ್ಲಿ ಒಂದಾಗಿದೆ.
ರೊಬೊಟ್ (Robot) ಕುರಿತು ಯಾರಿಗೆ ತಿಳಿದಿಲ್ಲ ಹೇಳಿ. ಕಂಪ್ಯೂಟರ್ (Computer ) ಯುಗದ ನಂತರ ಈಗ ಎಲ್ಲಿ ನೋಡಿದರೂ ರೊಬೊಟ್ ನದ್ದೇ ಹವಾ. ಪ್ರಾರಂಭದ ಹಂತದಲ್ಲಿ ಕೇವಲ ಐಟಿಬಿಟಿಯಲ್ಲಿ ಬಳಸಲಾಗುತ್ತಿದ್ದ ರೊಬೊಟ್ ಈಗ ಯುದ್ಧ, ಸೇನೆ, ಶಸ್ತ್ರ ಚಿಕಿತ್ಸೆ, ಶೈಕ್ಷಣಿಕ ರಂಗ, ಭಾಷಾನುವಾದ ಅಷ್ಟೇ ಏಕೆ ನಿತ್ಯ ಮನೆ ಕೆಲಸದಿಂದ ಹಿಡಿದು ಮ್ಯಾನ್ ಹೋಲ್ ಸ್ವಚ್ಛಗೊಳಿವುದರಲ್ಲಿ ಕೂಡ ರೊಬೊಟ್ ತನ್ನ ಕೈಚಳಕ ತೋರಿಸಿದೆ. ಮಾನವ ನಿರ್ಮಿತ ಈ ರೊಬೊಟ್ ಗಳು ಮಾಡುವ ಕೆಲಸಕ್ಕೆ ಮನುಷ್ಯನೇ ಇಂದು ತಲೆಬಾಗಿದ್ದಾನೆ. ತಂತ್ರಜ್ಞಾನ ಆಧಾರಿತ ಶಸ್ತ್ರ ಚಿಕಿತ್ಸೆಗಳನ್ನು ಬಹಳಷ್ಟು ಕಡೆಗಳಲ್ಲಿ ನಡೆಸಲಾಗುತ್ತಿದೆ. ಈಗಾಗಲೇ ಸಂಧಿವಾತ ಮತ್ತು ಆಸ್ಟಿಯೋಥ್ರೈಟಿಸ್ ಮುಂತಾದ ಹತ್ತು ಹಲವು ಚಿಕಿತ್ಸೆಗಳನ್ನು ರೊಬೊಟ್ ಗಳು ಯಶಸ್ವಿಯಾಗಿ ಮಾಡುತ್ತಿವೆ. ಈಗ ವಿಜ್ಞಾನಿಗಳು ‘ರೊಬೊಟಿಕ್ ಆರ್ಮ್’ ಎಂಬ ಹೊಸ ತಂತ್ರಜ್ಞಾನವನ್ನು ಕಂಡುಹಿಡಿದಿದ್ದಾರೆ.
undefined
Heart Health : ವಯಸ್ಸಾದಂತೆ ಹೃದಯವೂ ಬದಲಾಗುತ್ತೆ, ಹೇಗಿರಬೇಕು ಲೈಫ್‌ಸ್ಟೈಲ್
ರೊಬೊಟಿಕ್ ಆರ್ಮ್ (Robotic Arm) ಎಂದರೇನು? : ಸಿಡ್ನಿಯ ನ್ಯೂ ಸೌತ್ ವೆಲ್ಸ್ ಯುನಿವರ್ಸಿಟಿಯ ಸಂಶೋಧನಾಕಾರರು ಸಣ್ಣ ಮತ್ತು ಫ್ಲೆಕ್ಸಿಬಲ್ 3ಡಿ ಬಯೋಪ್ರಿಂಟರ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಎಂಡೋಸ್ಕೋಪಿಯಂತೆ ಸಲೀಸಾಗಿ ನಮ್ಮ ಶರೀರದೊಳಕ್ಕೆ ಪ್ರವೇಶಿಸುತ್ತದೆ. ಈ ಹೊಸ ರೋಬೋಟಿಕ್ ಆರ್ಮ್ ನಿಂದ ನೈಸರ್ಗಿಕ ಅಂಗಾಂಶಗಳ ರಚನೆಯನ್ನು ರಚಿಸಲು ಬಯೋ ಇಂಕ್ ಗಳನ್ನು ಬಳಸಿ ಬಯೋಮೆಡಿಕಲ್ ಭಾಗಗಳನ್ನು ತಯಾರಿಸುವ ಪ್ರಕ್ರಿಯೆಯಾಗಿದೆ.
ಬಯೋಪ್ರಿಂಟಿಂಗ್ ನ ಉಪಯೋಗ ಏನು? : ಈ ಬಯೋಪ್ರಿಂಟಿಂಗ್ ಅನ್ನು ಮುಖ್ಯವಾಗಿ ಅಂಗಾಂಶ ಇಂಜಿನಿಯರಿಂಗ್ ಮತ್ತು ಹೊಸ ಔಷಧಿಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಸಾಮಾನ್ಯವಾಗಿ ಮಾನವ ಶರೀರದ ಸೆಲ್ಯುಲಾರ್ ರಚನೆಯನ್ನು ನಿರ್ಮಿಸಲು ದೊಡ್ಡ ಗಾತ್ರದ 3ಡಿ ಮುದ್ರಣ ಯಂತ್ರಗಳು ಬೇಕಾಗುತ್ತವೆ. ಈಗ ಸೌತ್ ವೇಲ್ಸ್ ಸಂಶೋಧಕರು ಈ ಸಣ್ಣ ಬಯೋಪ್ರಿಂಟರ್ ಅನ್ನು ತಯಾರಿಸಿದ್ದಾರೆ.
ಆರೋಗ್ಯ ಟ್ರ್ಯಾಕ್ ಮಾಡಲು Smart Watch ಬಳಸಿ ಆಸ್ಪತ್ರೆ ಸೇರಿದ ಯುವಕ!
ಕ್ಯಾನ್ಸರ್ (Cancer) ಚಿಕಿತ್ಸೆಯನ್ನೂ ಮಾಡಬಹುದು : ಈ ಚಿಕ್ಕದಾದ ರೊಬೊಟಿಕ್ ಆರ್ಮ್ ನ ತುದಿಯಲ್ಲಿ ಎಫ್3ಡಿಬಿ ಎಂಬ ಹೊಸ ಫ್ರೂಪ್-ಆಫ್-ಕಾನ್ಸೆಪ್ಟ್ ಸಾಧನವನ್ನು ಹೊಂದಿದೆ. ಇದು ಬಯೋಇಂಕ್ ಗಳನ್ನು ಮುದ್ರಿಸುವ ಸ್ವಿವೆಲ್ ಹೆಡ್ ಹೊಂದಿದೆ. ನೋಡುಗರ ಕಣ್ಣಿಗೆ ಇದು ಉದ್ದವಾದ ಬಳುಕುವ ಹಾವಿನಂತೆ ಕಾಣುತ್ತದೆ. ಈ ರೊಬೊಟಿಕ್ ಆರ್ಮ್ ನ ಚಲನೆಯನ್ನು ಹೊರಗಿನಿಂದಲೇ ನಿಯಂತ್ರಿಸಲಾಗುತ್ತದೆ. ಎಂಡೋಸ್ಕೋಪಿಕ್ ಸಬ್ ಮ್ಯುಕೋಸಲ್ ಡಿಸೆಕ್ಷನ್ (ESD) ನಿಂದ ಕೊಲೊರೆಕ್ಟಲ್ ಕ್ಯಾನ್ಸರ್ ನಂತಹ ಕೆಲವು ಕ್ಯಾನ್ಸರ್ ಕಣಗಳನ್ನು ತೆಗೆದುಹಾಕಲು ಬಳಸಬಹುದು ಎಂದು ಸಂಶೋಧನಾಕಾರರು ಹೇಳಿದ್ದಾರೆ.
ದೇಹದ ಎಲ್ಲ ಭಾಗಗಳನ್ನೂ ತಲುಪಲು ಸಾಧ್ಯ : ಸಂಶೋಧನಾಕಾರರು ಹೇಳುವ ಪ್ರಕಾರ ಮುಂಬರುವ 5-7 ವರ್ಷಗಳಲ್ಲಿ ವೈದ್ಯರು ಈ ರೊಬೊಟಿಕ್ ಆರ್ಮ್ ಅನ್ನು ಬಳಸಬಹುದಾಗಿದೆ. ಚಿಕ್ಕ ಮತ್ತು ಫ್ಲೆಗ್ಸಿಬಲ್ ಇರುವ ಈ ಸಾಧನ ದೇಹದ ಕಷ್ಟಕರ ಭಾಗಕ್ಕೂ ಸಹ ಸುಲಭವಾಗಿ ತಲುಪುತ್ತೆ. ಸಂಶೋಧನಾಕಾರರು ಈ ರೊಬೊಟಿಕ್ ಆರ್ಮ್ ಅನ್ನು ಕೃತಕ ಕರುಳಿನ ಒಳಗೆ ಹಾಕಿ ಪರೀಕ್ಷೆ ನಡೆಸಿದ್ದಾರೆ. ಮನುಷ್ಯ ಜೊತೆಗೆ ಪ್ರಾಣಿಯ ಶರೀರದ ಮೇಲೂ ಇದರ ಪರೀಕ್ಷೆಗಳು ನಡೆದಿವೆ. ಸಂಶೋಧನಾಕಾರರು ಹಂದಿಯ ಮೂತ್ರಪಿಂಡದ ಮೇಲ್ಮೈ ಮೇಲೆ 3ಡಿ ಮುದ್ರಣ ವಸ್ತುಗಳನ್ನು ಪರೀಕ್ಷಿಸಿದ್ದಾರೆ.