Mushrooms for Hair Growth: ಸಣ್ಣ ವಯಸ್ಸಲ್ಲೇ ಕೂದಲು ಬಿಳಿಯಾಗಿದ್ಯಾ? ಹಾಗಿದ್ರೆ ಈ ಮಶ್ರೂಮ್ ತಿಂದು ನೋಡಿ

Published : Jul 08, 2026, 01:32 PM IST
mushroom

ಸಾರಾಂಶ

Mushroom for hair growth: ಮಶ್ರೂಮ್ ರುಚಿಕರ ಮತ್ತು ಆರೋಗ್ಯಕ್ಕೆ ಪ್ರಯೋಜನ ನೀಡುವಂತಹ ಆಹಾರವಾಗಿದೆ. ಆದರೆ ಅವುಗಳನ್ನು ಸೇವಿಸುವುದರಿಂದ ಕೂದಲು ಬಿಳಿ ಬಣ್ಣಕ್ಕೆ ತಿರುಗುವುದನ್ನು ತಡೆಯಬಹುದು ಎಂದು ನಿಮಗೆ ತಿಳಿದಿದೆಯೇ? ಅವುಗಳನ್ನು ಸರಿಯಾಗಿ ಹೇಗೆ ಸೇವಿಸಬೇಕೆಂದು ತಿಳಿಯಿರಿ. 

ಸಣ್ಣ ವಯಸ್ಸಲ್ಲೇ ಕೂದಲು ಬಿಳಿಯಾಗಿದೆಯೆ?

ಕೂದಲು ಬಿಳಿಯಾಗುವುದು ಬಹಳ ಸಾಮಾನ್ಯ ಸಮಸ್ಯೆ . ಇತ್ತೀಚೆಗಂತೂ ಕಿರಿಯರಿಂದ ಹಿರಿಯರವರೆಗೂ ಎಲ್ಲರೂ ಈ ಸಮಸ್ಯೆ ಅನುಭವಿಸುತ್ತಿದ್ದಾರೆ. ಹಾಗಾಗಿ, ಒತ್ತಡ, ನಿಮ್ಮ ಜೀವನಶೈಲಿ ಮತ್ತು ನಿಮ್ಮ ಅಭ್ಯಾಸಗಳಿಗೆ ಗಮನ ಕೊಡುವುದು ಮುಖ್ಯ. ಕೆಲವೊಮ್ಮೆ, ಎಷ್ಟೇ ಜಾಗೃತೆ ವಹಿಸಿದರೂ ಕೂಡ ಕೂದಲು ಬಿಳಿಯಾಗೋದು ತಪ್ಪೋದಿಲ್ಲ. ಇನ್ನು ಕೂದಲನ್ನು ಕಪ್ಪಾಗಿಸಲು ಜನ ಹೆನ್ನಾ ಮತ್ತು ಹೇರ್ ಡೈ ಮೊರೆ ಹೋಗುತ್ತಾರೆ. ಆದರೆ ನೀವು ನಿಮ್ಮ ಆಹಾರದಲ್ಲಿ ಬದಲಾವಣೆ ಮಾಡುವ ಮೂಲಕವೂ ಕೂದಲನ್ನು ಕಪ್ಪಾಗಿಸಬಹುದು. ಅದಕ್ಕಾಗಿ ನೀವು ಅಣಬೆಯನ್ನು ನಿಮ್ಮ ಆಹಾರದಲ್ಲಿ ಸೇರಿಸಬಹುದು.

ಮಶ್ರೂಮ್ ಬಿಳಿ ಕೂದಲನ್ನು ಕಪ್ಪಾಗಿಸಬಹುದೇ?

ಕೂದಲು ಉದುರುವುದು, ಕೂದಲು ಬಿಳಿಯಾಗುವುದು ಹಲವು ಅಂಶಗಳಿಂದ ಉಂಟಾಗಬಹುದು, ಅದಕ್ಕೆ ಮುಖ್ಯ ಕಾರಣ ಹಾರ್ಮೋನ್ ಬದಲಾವಣೆಗಳು, ಕಬ್ಬಿಣ, ಪ್ರೋಟೀನ್ ಅಥವಾ ವಿಟಮಿನ್ ಕೊರತೆ. ಆದ್ದರಿಂದ, ಈ ಕೊರತೆಗಳನ್ನು ತುಂಬುವ ಆಹಾರ ಸೇವಿಸುವುದು ಅತ್ಯಗತ್ಯ. ಅದರಲ್ಲೂ ಅಣಬೆಯನ್ನು ಸರಿಯಾದ ರೀತಿಯಲ್ಲಿ ಸೇವಿಸುವ ಮೂಲಕ ಬಿಳಿ ಕೂದಲಿನ ಸಮಸ್ಯೆ ನಿವಾರಿಸಿ, ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಕೂದಲು ಬಿಳಿಯಾಗಲು ಕಾರಣಗಳು:

  • ವಿಟಮಿನ್ ಬಿ12
  • ಮೆಲನಿನ್
  • ಕಬ್ಬಿಣ ಅಥವಾ ಫೋಲೇಟ್ ಕೊರತೆ
  • ದೀರ್ಘಕಾಲದ ಒತ್ತಡ
  • ಥೈರಾಯ್ಡ್ ಸಮಸ್ಯೆಗಳು
  • ವಯಸ್ಸಾಗುತವಿಕೆ
  • ರಾಸಾಯನಿಕಗಳ ಬಳಕೆ

ಅಣಬೆಗಳನ್ನು ತಿನ್ನುವುದರಿಂದ ಏನೆಲ್ಲಾ ಬದಲಾವಣೆ ಆಗುತ್ತದೆ?

  • ಕೆಲವು ರೀತಿಯ ಮಶ್ರೂಮ್ ವಿಟಮಿನ್ ಡಿ ಯ ಉತ್ತಮ ಮೂಲವಾಗಿದೆ, ವಿಶೇಷವಾಗಿ ಆಲ್ಟ್ರಾವಯಲೇಟ್ ಬೆಳಕಿನಲ್ಲಿ ಬೆಳೆಯುವ ಮಶ್ರೂಮ್. ಇವು ಮೂಳೆ ಮತ್ತು ಜೀವಕೋಶಗಳ ಆರೋಗ್ಯಕ್ಕೆ ಉತ್ತಮ.
  • ಮಶ್ರೂಮ್ ದೇಹದ ಜೀವಕೋಶಗಳನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸಲು ಸಹಾಯ ಮಾಡುವ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಆಕ್ಸಿಡೇಟಿವ್ ಒತ್ತಡವು ಅಕಾಲಿಕ ವಯಸ್ಸಾಗುವಿಕೆ ಮತ್ತು ಕೂದಲಿನ ಗುಣಮಟ್ಟ ಕಡಿಮೆಯಾಗುವುದಕ್ಕೂ ಸಂಬಂಧಿಸಿದೆ.
  • ಅಣಬೆಗಳು ಶಕ್ತಿಯನ್ನು ಒದಗಿಸುವ ರಿಬೋಫ್ಲಾವಿನ್, ನಿಯಾಸಿನ್ ಮತ್ತು ಪ್ಯಾಂಟೊಥೆನಿಕ್ ಆಮ್ಲದಂತಹ ಬಿ ಜೀವಸತ್ವಗಳನ್ನು ಹೊಂದಿರುತ್ತವೆ.
  • ಅಣಬೆಗಳು ಸೆಲೆನಿಯಮ್, ತಾಮ್ರ ಮತ್ತು ಪೊಟ್ಯಾಸಿಯಮ್‌ನಂತಹ ಖನಿಜಗಳನ್ನು ಹೊಂದಿರುತ್ತವೆ. ತಾಮ್ರವು ದೇಹದ ಮೆಲನಿನ್ ಉತ್ಪಾದನೆಯಲ್ಲಿ ಪಾತ್ರವಹಿಸುತ್ತದೆ, ಆದರೆ ತಾಮ್ರವನ್ನು ಮಾತ್ರ ತಿನ್ನುವುದರಿಂದ ಬಿಳಿ ಕೂದಲು ಕಪ್ಪಾಗುತ್ತದೆ ಎಂದು ಹೇಳುವಂತಿಲ್ಲ. ಆದರೆ ಇದು ಕೂಡ ಸಹಾಯ ಮಾಡುತ್ತದೆ.

ಕೂದಲಿನ ಆರೋಗ್ಯಕ್ಕೆ ಬೇರೆ ಏನು ತಿನ್ನಬಹುದು?

ನಿಮ್ಮ ಆಹಾರದಲ್ಲಿ ಹಸಿರು ಎಲೆ ತರಕಾರಿಗಳನ್ನು ಸೇರಿಸಿ ಮತ್ತು ಮೊಟ್ಟೆ ಸೇವಿಸಿ. ಬೀನ್ಸ್‌ನೊಂದಿಗೆ ಡ್ರೈ ಫ್ರುಟ್ಸ್ ಆಂದ್ ನಟ್ಸ್ ತಿನ್ನುವುದು ಸಹ ಒಳ್ಳೆಯದು. ನಿಮ್ಮ ಕೂದಲಿಗೆ ಎಣ್ಣೆ ಹಚ್ಚುವುದರಿಂದ ಅದರ ಆರೋಗ್ಯ ಸುಧಾರಿಸುತ್ತದೆ ಮತ್ತು ಕೂದಲು ಬಿಳಿಯಾಗುವುದನ್ನು ತಡೆಯಬಹುದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪ್ರತಿ ದಿನ ಚಪಾತಿ ತಿನ್ನೋರು ಒಂದು ತಿಂಗಳು ರೂಟೀನ್‌ ಬದಲಿಸಿ, ಗೋಧಿ ಬಿಟ್ರೆ ಏನಾಗುತ್ತೆ ಗೊತ್ತಾ?
Health Tips: ಆರೋಗ್ಯವಾಗಿದ್ದೇನೆ ಅಂತಾ ನಿರ್ಲಕ್ಷ್ಯ ಬೇಡ; ವರ್ಷಕ್ಕೊಮ್ಮೆ ಈ 5 ದೇಹ ಪರೀಕ್ಷೆ ಮಾಡಿಸಿಕೊಳ್ಳಿ!