ಮಿತಿ ಮೀರಿದ್ರೆ ಸಾವಿಗೆ ಸನಿಹ ಮಾಡುತ್ತೆ ಜಿಮ್ ! ಎಷ್ಟು ವರ್ಕ್‌ಔಟ್ ಮಾಡಿದ್ರೆ ಒಳ್ಳೇದು ?

Published : Jun 12, 2022, 11:02 AM ISTUpdated : Jun 12, 2022, 11:03 AM IST
ಮಿತಿ ಮೀರಿದ್ರೆ ಸಾವಿಗೆ ಸನಿಹ ಮಾಡುತ್ತೆ ಜಿಮ್ ! ಎಷ್ಟು ವರ್ಕ್‌ಔಟ್ ಮಾಡಿದ್ರೆ ಒಳ್ಳೇದು ?

ಸಾರಾಂಶ

ನೀವೂ ವರ್ಕೌಟ್ (Workout) ಮಾಡ್ತೀರಾ ? ಬೆಳಗ್ಗೇ ಎದ್ದು ವ್ಯಾಯಾಮ (Exercise) ಮಾಡಿ ಬಂದ್ ಬಿಟ್ರೆ ಮತ್ತೇನ್ ಪ್ರಾಬ್ಲಂ ಇಲ್ಲ ಅಂದ್ಕೊಂಡಿದ್ದೀರಾ ? ಆದ್ರೆ ತಿಳ್ಕೊಳ್ಳಿ ಆರೋಗ್ಯಕ್ಕೆ  (Health) ಒಳ್ಳೇದು ಅಂತ ನೀವು ಅಂದ್ಕೊಂಡಿರೋ ವರ್ಕ್‌ ಔಟ್‌ (Workout) ಸಾವಿಗೂ ಹತ್ರ ಮಾಡುತ್ತೆ. ಹೀಗಾಗಿ ಮೊದ್ಲು ಎಷ್ಟು ವರ್ಕ್ ಔಟ್ ಮಾಡಿದ್ರೆ ಆರೋಗ್ಯಕ್ಕೆ ಒಳ್ಳೇದು ಅನ್ನೋದನ್ನು ತಿಳ್ಳೊಳ್ಳೀ. 

ಈಗಂತೂ ವರ್ಕೌಟ್ (Workout) ಮಾಡದವರೇ ಇಲ್ಲ. ಕುಳಿತು ಮಾಡುವ ಕೆಲಸ, ಒತ್ತಡದ (Pressure) ಜೀವನಶೈಲಿಯಿಂದ ತೂಕ (Weight) ಹೆಚ್ಚಳವೆಂಬುದು ಸಾರ್ವತ್ರಿಕ ಸಮಸ್ಯೆಯಾಗಿಬಿಟ್ಟಿದೆ. ಹೀಗಾಗಿ ಎಲ್ಲರೂ ಜಿಮ್ (Gym), ಯೋಗ, ಧ್ಯಾನ ಎಂದು ಹಲವು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಕಷ್ಟಪಟ್ಟು ವರ್ಕೌಟ್ ಮಾಡೋದೇನೋ ಸರಿ. ಆದರೆ, ಅದನ್ನು ಸರಿಯಾದ ರೀತಿಯಲ್ಲಿ ಮಾಡಿದಾಗ ಮಾತ್ರ ಪ್ರಯೋಜನ ಸಿಗಲು ಸಾಧ್ಯ. ಇಲ್ಲದಿದ್ದರೆ ಪ್ರಾಣಾಪಾಯವಾಗುವ ಸಾಧ್ಯತೆಯೂ ಇದೆ. ಹೀಗಾಗಿ  ಆರೋಗ್ಯವಾಗಿರಲು ಎಷ್ಟು ವರ್ಕೌಟ್ (Workout) ಮಾಡಬೇಕು ಮತ್ತು ಎಷ್ಟು ಹೆಚ್ಚು ವರ್ಕ್‌ ಔಟ್ ಮಾಡಿದ್ರೆ ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತೆ ಅನ್ನೋದನ್ನು ಮೊದ್ಲು ತಿಳ್ಕೊಬೇಕು. 

ನಿಯಮಿತವಾಗಿ ವರ್ಕ್‌ಔಟ್ ಮಾಡುತ್ತಿದ್ದ ಅದೆಷ್ಟೋ ಮಂದಿ ದಿಢೀರ್ ಕಾಯಿಲೆಯಿಂದ, ಹೃದಯಾಘಾತ (Heartattack)ದಿಂದ ಮೃತಪಟ್ಟಿದ್ದಾರೆ. ಹೀಗಾಗಿ ಜಿಮ್‌ ಮಾಡೋರೆಲ್ಲರೂ ಆರೋಗ್ಯವಾಗಿರೋದಿಲ್ಲ ಎಂಬುದು ಎಲ್ಲರೂ ತಿಳಿದುಕೊಂಡಿರುವ ಸತ್ಯ. ಅದರಲ್ಲೂ ಸ್ಪೆಷಲ್‌ ನ್ಯೂಟ್ರಿಷಿಯನ್ಸ್, ಜಿಮ್ ಟ್ರೈನರ್ ಇರೋ ಸಿನಿರಂಗದವರೇ ಹೆಚ್ಚು ಮೃತಪಟ್ಟಿದ್ದಾರೆ. ಹೀಗಾಗಿ ಇವತ್ತಿನ ಯುವಕ-ಯುವತಿಯರು ಎಷ್ಟು ಪ್ರಮಾಣದಲ್ಲಿ ಜಿಮ್ ಮಾಡಬಹುದು, ಮಾಡಬಾರದು ಎಂಬುದನ್ನು ತಿಳಿದುಕೊಳ್ಳುವುದು ಒಳ್ಳೆಯದು.

Exercise Tips: ಸಂಧಿನೋವಿದ್ಯಾ ? ವ್ಯಾಯಾಮ ಮಾಡುವಾಗ ಈ ತಪ್ಪು ಮಾಡ್ಲೇಬೇಡಿ

ಅತಿಯಾದ ವರ್ಕ್‌ಔಟ್ ಆರೋಗ್ಯಕ್ಕೇ ಅಪಾಯ !
ವರ್ಕೌಟ್ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ಸಮಸ್ಯೆಯಿಂದ ದೂರವಿರಬಹುದು ಅನ್ತಾರೆ ವೈದ್ಯರು. ಆದ್ರೆ ಅತಿಯಾದರೆ ಯಾವುದೂ ಒಳ್ಳೆಯದಲ್ಲ ಎಂಬಂತೆ ವರ್ಕೌಟ್ ಹೆಚ್ಚು ಮಾಡೋದು ಸಹ ಒಳ್ಳೆಯದಲ್ಲ. ಪ್ರತಿದಿನ ಒಂದೂವರೆ ಗಂಟೆಗಳ ಕಾಲ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಬೇಕು. ಜೊತೆಗೆ ಸಮತೋಲನದ ಆಹಾರ ಸ್ವೀಕಾರ ಮಾಡಬೇಕು. ಇದರಿಂದ ಹೃದಯದ ಸ್ನಾಯುಗಳನ್ನು ಬಲಪಡಿಸಿ, ಹೃದಯದ ರಕ್ತನಾಳದ ರೋಗಗಳನ್ನು ದೂರ ಮಾಡಬಹುದು ಎಂಬುವುದು ವೈದ್ಯರ ಅಭಿಪ್ರಾಯ.

ಅತಿಯಾಗಿ ವರ್ಕೌಟ್ ಮಾಡಿದರೆ ದೇಹದಂಡನೆ ಉಂಟಾಗಿ ಹೃದಯದ ಸಮಸ್ಯೆಗಳು ಎದುರಾಗುತ್ತದೆ. ಇದರಿಂದ ಅಸ್ವಸ್ಥತೆ ಉಂಟಾಗಿ ಸಾವು ಎದುರಾಗುತ್ತದೆ ಎನ್ನುತ್ತದೆ ಅಧ್ಯಯನ. ಯುಎಸ್ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಕೇರ್ ಅಧ್ಯಯನದ ಪ್ರಕಾರ, ಅತಿಯಾದ ವರ್ಕೌಟ್ ಮಾಡುವುದರಿಂದ ಹೃದಯ ಸ್ತಂಭನ ಅಥವಾ ಹಠಾತ್ ಹೃದಯಾಘಾತವಾಗಿ ಸಾವು ಬರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

Easy Exercise: ಬಾತ್ ಟವೆಲ್ ಬಳಸಿಯೂ ವ್ಯಾಯಾಮ ಮಾಡ್ಬೋದು

ಅತಿಯಾಗಿ ವರ್ಕ್‌ಔಟ್ ಮಾಡುತ್ತಿದ್ದೀರಿ ಅನ್ನೋ ಲಕ್ಷಣಗಳು
- ಅದೇ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಾಗದಿರುವುದು
- ದೀರ್ಘಾವಧಿಯ ವಿಶ್ರಾಂತಿ ಬೇಕೆನಿಸುವುದು
- ಸುಸ್ತಾದ ಅನುಭವ
- ಖಿನ್ನತೆಗೆ ಒಳಗಾಗುವುದು
- ಮನಸ್ಥಿತಿ ಬದಲಾವಣೆ ಅಥವಾ ಕಿರಿಕಿರಿಯ ಅನುಭವ
- ಮಲಗಲು ತೊಂದರೆಯಾಗುವುದು
- ನೋಯುತ್ತಿರುವ ಸ್ನಾಯುಗಳು ಅಥವಾ ಭಾರವಾದ ಕೈಕಾಲುಗಳ ಭಾವನೆ

ವ್ಯಾಯಾಮ ಮಾಡುವಾಗ ಮೇಲೆ ಹೇಳಿದ ಯಾವುದೇ ಸಮಸ್ಯೆ ಕಂಡು ಬಂದರೂ ತಕ್ಷಣವೇ ತಜ್ಞರನ್ನು ಸಂಪರ್ಕಿಸಿ

ಸಮತೋಲನದ ವ್ಯಾಯಾಮ ಮಾಡಿ ಸಾಕು
ತುಂಬಾ ಸಣ್ಣಗಾಗ್ಬೇಕು, ಚೆನ್ನಾಗಿರೋ ಬಾಡಿ ಬೇಕು ಎಂದು ಬೇಕಾಬಿಟ್ಟಿ ಜಿಮ್‌ನಲ್ಲಿ ಸಮಯ ಕಳೆಯೋರು ಇಂಥಾ ವಿಚಾರಗಳನ್ನೆಲ್ಲಾ ತಿಳ್ಕೋಬೇಕು. ಸಮತೋಲನದ ವ್ಯಾಯಾಮ ಹಾಗೂ ಆಹಾರ ಸೇವನೆಯಿಂದ ಸ್ವಾಸ್ಥ್ಯ ಆರೋಗ್ಯ ಕಾಪಾಡಿಕೊಳ್ಳಬಹುದು. ಇನ್ನು ಹೃದಯ ಸಮಸ್ಯೆಗಳಿಗೆ ಬಹಳ ಕಾರಣಗಳು ಇದ್ದರೂ, ಒಬ್ಬ ಪ್ರತಿನಿತ್ಯ ವ್ಯಾಯಾಮ ಮಾಡುವ ವ್ಯಕ್ತಿಗೆ ಸ್ಟ್ರೆಸ್ ನಿಂದ, ಸರಿಯಾದ ರಿಕವರಿ ಟೈಮ್ ಕೊಡದ ಪ್ರತಿದಿನದ ವರ್ಕ್ ಔಟ್ ನಿಂದ, ಬೇಕಾದಷ್ಟು ನಿದ್ದೆ ಇಲ್ಲದೇ ಇರುವುದರಿಂದ, ಆಹಾರದಲ್ಲಿ ದೀರ್ಘಕಾಲದ ವ್ಯತ್ಯಾಸದಿಂದ, ಲೋ ಫ್ಯಾಟ್ ಡಯಟ್ ನಿಂದ ಸರಿಯಾದ ಮೆಟಬಾಲಿಸಮ್ ಗೆ ಬೇಕಾದ ಅಂಶಗಳು ಸಿಗದೇ ಹೋಗುವುದರಿಂದ ಹೃದಯ ಸಂಬಂಧಿ ಸಮಸ್ಯೆ ಉಂಟಾಗಬಹುದು.

ಇನ್ನು ವೇಟ್ ಟ್ರೈನಿಂಗ್ ಮತ್ತು ಸ್ಟ್ರೆಂತನಿಂಗ್ ಮೊದಲಾದವು ಇದು ಮಸಲ್ ಹಚ್ಚಿಸಿ, ದೇಹದಲ್ಲಿನ ಕೊಬ್ಬನ್ನು ಕರಗಿಸುವುದರ ಮೂಲಕ ದೇಹದ ವಯಸ್ಸನ್ನು ಹಿಡಿತದಲ್ಲಿರಿಸಲು ಸಹಾಯ ಮಾಡುತ್ತೆ. ಡಂಬೆಲ್ಸ್, ಕೆಟಲ್ ಬೆಲ್ ಗಳು, ಬ್ಯಾಂಡ್ ಗಳು ಹೀಗೆ ಮುಂತಾದ ಸಾಧನಗಳನ್ನು ಬಳಸಿ ಮಾಡುವಂತದ್ದು. ಇದಕ್ಕೆ ನುರಿತ ಟ್ರೈನರ್ ಗಳ ಅವಶ್ಯಕತೆ ಇರುತ್ತೆ. ಸ್ವಲ್ಪ ಹೆಚ್ಚು ಕಡಿಮೆಯಾಗುವ ಸಣ್ಣ ತಪ್ಪುಗಳು ಪ್ರಾಣಾಪಾಯಕ್ಕೆ ಕಾರಣವಾಗಬಹುದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಹಿಳೆಯರೇ ಎಚ್ಚರ.. ದೇಹ ತೋರಿಸುವ ಈ ಲಕ್ಷಣಗಳು ಕ್ಯಾನ್ಸರ್‌ನ ಆರಂಭಿಕ ಸೂಚನೆಗಳು!
ಒಂದು ಗ್ಲಾಸ್ ನೀರಿನ ಜೊತೆ ಇದನ್ನ ಬೆರೆಸಿದ್ರೆ ಅದೆಷ್ಟೋ ಸಮಸ್ಯೆ ನಿವಾರಣೆಯಾಗುತ್ತೆ