ಮನುಷ್ಯ ನಿದ್ದೆಯೇ ಮಾಡದೆ ಎಷ್ಟು ದಿನ ಬದುಕಬಹುದು ಗೊತ್ತಾ?

By Suvarna News  |  First Published Jun 26, 2022, 12:34 PM IST

ಮಾನವನಿಗೆ ಊಟ ನೀರು ಗಾಳಿ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದುದು ನಿದ್ದೆ. ಮಾನವ ದೇಹದ ಪ್ರತಿಯೊಂದು ಭಾಗವು ಅದರದ್ದೇ ಆದ ಮಹತ್ವವನ್ನು ಹೊಂದಿದೆ. ಬದುಕಲು ಆಮ್ಲಜನಕ, ಆಹಾರ ಮತ್ತು ನೀರು ಎಷ್ಟು ಅಗತ್ಯವೋ ಹಾಗೆಯೇ ನಿದ್ರೆಯ ಮಹತ್ವವನ್ನು ನಿರ್ಲಕ್ಷಿಸಲಾಗುವುದಿಲ್ಲ. 


ಮಾನವನಿಗೆ ಊಟ ನೀರು ಗಾಳಿ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದುದು ನಿದ್ದೆ. ಮಾನವ ದೇಹದ ಪ್ರತಿಯೊಂದು ಭಾಗವು ಅದರದ್ದೇ ಆದ ಮಹತ್ವವನ್ನು ಹೊಂದಿದೆ. ಬದುಕಲು ಆಮ್ಲಜನಕ, ಆಹಾರ ಮತ್ತು ನೀರು ಎಷ್ಟು ಅಗತ್ಯವೋ ಹಾಗೆಯೇ ನಿದ್ರೆಯ ಮಹತ್ವವನ್ನು ನಿರ್ಲಕ್ಷಿಸಲಾಗುವುದಿಲ್ಲ. ಇದನ್ನು ವಿಜ್ಞಾನಿಗಳು ತಮ್ಮ ಅಧ್ಯಯನಗಳಲ್ಲಿ ಪದೇ ಪದೇ ಒತ್ತಿ ಹೇಳಿದ್ದಾರೆ. ಮನುಷ್ಯನ ದೇಹಕ್ಕೆ ಅಗತ್ಯವಾಗಿ ಬೇಕಾದ ಶಕ್ತಿಯನ್ನು ತುಂಬಲು ಅಗತ್ಯವಾದ ಸಮಯ ನಿದ್ದೆ. ರಾತ್ರಿ ಮಲಗಿದವರು ಮರುದಿನ ಬೆಳಗ್ಗೆ  ಎದ್ದಾಗ ಒಂದು ರೀತಿಯ ಸಾಮಾಧಾನ ತಾಜಾತನವನ್ನು ಅನುಭವಿಸುತ್ತಾರೆ. ಆದರೆ ನಿದ್ದೆಗೆಡುವುದು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಒಬ್ಬ ವ್ಯಕ್ತಿಯು ಸರಿಯಾಗಿ ನಿದ್ರೆ ಮಾಡದಿದ್ದರೆ ಕೆಲವು ಆಘಾತಕಾರಿ ನಕಾರಾತ್ಮಕ ಫಲಿತಾಂಶಗಳು ದೇಹದ ಮೇಲಾಗುವ ಸಾಧ್ಯತೆಗಳಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. 

ಸಾಮಾನ್ಯವಾಗಿ, ಒಬ್ಬ ವ್ಯಕ್ತಿಯು 8 ಗಂಟೆಗಳವರೆಗೆ ನಿದ್ರಿಸುತ್ತಾನೆ, ಆದರೆ ಒಬ್ಬ ವ್ಯಕ್ತಿಯು ನಿದ್ರೆಯೇ ಮಾಡದಿದ್ದರೆ ಹೇಗಿರಬಹುದು. ಅವನ ದೇಹವು ಹೇಗೆ ಅದರ ಪರಿಣಾಮವನ್ನು ಎದುರಿಸಬಹುದು ಎಂಬ ಬಗ್ಗೆ ಎಲ್ಲರಿಗೂ ಕುತೂಹಲವಿದೆ. ನಾವು ತಿನ್ನದೆ, ಕುಡಿಯದೆ ಇದ್ದರೆ ದೇಹ ಎಷ್ಟು ದಿನ ಉಳಿಯುವುದಿಲ್ಲವೋ, ನಿದ್ದೆಯೂ ಅದೇ ರೀತಿ. ಆದ್ದರಿಂದ ಮಲಗುವುದು, ತಿನ್ನುವುದು ಮತ್ತು ಕುಡಿಯುವುದು ಜೀವನದ ಅಗತ್ಯ ಚಟುವಟಿಕೆಗಳು ಅದನ್ನು ಸರಿಯಾಗಿ ನಡೆಸಲೇಬೇಕು.

Tap to resize

Latest Videos

Beauty Sleep: ಕಣ್ತುಂಬಾ ನಿದ್ದೆ ಮಾಡೋಕೆ ಇವಿಷ್ಟನ್ನು ತಿನ್ನಿ, ಮತ್ತಷ್ಟು ಚೆಂದ ಕಾಣ್ತೀರಿ
 

ದೈನಂದಿನ ಚಟುವಟಿಕೆಗಳಿಂದಾಗಿ ನಿದ್ರೆಯ ಪ್ರಮಾಣ ಮತ್ತು ಗುಣಮಟ್ಟವು ಕಡಿಮೆಯಾದಾಗ, ಅದು ವ್ಯಕ್ತಿಯ ಆರೋಗ್ಯವನ್ನು ಹದಗೆಡಿಸುತ್ತದೆ. ನೀವು ಕ್ರಮೇಣ ನಿದ್ರಾಹೀನತೆಯನ್ನು ಸಹ ಅನುಭವಿಸಬಹುದು. ಇದು ಸಾಮಾನ್ಯ ನಿದ್ರೆಯ ಅನಾರೋಗ್ಯ ಸ್ಥಿತಿಯಾಗಿದೆ. ಆದರೆ ಒಬ್ಬ ವ್ಯಕ್ತಿಯು ಸತತ ಹನ್ನೊಂದು ದಿನಗಳವರೆಗೆ ಮಲಗದಿದ್ದರೆ, ಆತ ಸಾಯಬಹುದು ಎಂಬುದು ಈಗ ಸಂಶೋಧನೆಯಿಂದ ತಿಳಿದು ಬಂದ ಸತ್ಯ. ಒಬ್ಬ ವ್ಯಕ್ತಿಯು ನಿದ್ರೆಯಿಲ್ಲದೆ ಕೇವಲ 11 ದಿನಗಳವರೆಗೆ ಮಾತ್ರ ಬದುಕಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ. 

ಅಬ್ಬಬ್ಬಾ..ದಿಂಬಿನ ಬೆಲೆ ಭರ್ತಿ 45 ಲಕ್ಷ ರೂ; ವಿಶ್ವದ ದುಬಾರಿ ಪಿಲ್ಲೋದಲ್ಲಿ ಅಂಥದ್ದೇನಿದೆ ?
 

ಹಾರ್ವರ್ಡ್ ನಡೆಸಿದ ಅಧ್ಯಯನದ ಪ್ರಕಾರ, ನಿದ್ರಾಹೀನತೆಯು ಕರುಳು ಮತ್ತು ಮೆದುಳಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ ದೇಹಕ್ಕೆ ಕೆಲವು ವ್ಯವಸ್ಥಿತ ಹಾನಿಗಳಿಂದ ಸಾವು ಸಂಭವಿಸಬಹುದು. ಒಬ್ಬ ವ್ಯಕ್ತಿಯು ತನ್ನ ಜೀವನದ ಮೂರನೇ ಒಂದು ಭಾಗವನ್ನು ನಿದ್ರೆಯಲ್ಲಿ ಕಳೆಯುತ್ತಾನೆ. ಇದಲ್ಲದೆ, ನಾವು ಸಂತೋಷದಿಂದ ಮತ್ತು ಉತ್ಸಾಹದಿಂದ ಇದ್ದಾಗ ನಾವು ಎಷ್ಟು ಪ್ರಯತ್ನಿಸಿದರೂ ನಿದ್ರೆ ಮಾಡಲು ಸಾಧ್ಯವಿಲ್ಲ ಎಂಬುದನ್ನು ನಾವೆಲ್ಲರೂ ಗಮನಿಸಿದ್ದೇವೆ. ಅದರ ಜೊತೆಗೆ ಸುಮಾರು 30% ಜನರು ದಿನಕ್ಕೆ ಏಳು ಗಂಟೆಗಳ ಕಾಲ ಸತತವಾಗಿ ಮಲಗಿದರೆ, ಅವರು ಶೀತವನ್ನು ಅನುಭವಿಸುವ ಸಾಧ್ಯತೆಯಿದೆ ಎಂದು ಸಂಶೋಧನೆಯು ಬಹಿರಂಗಪಡಿಸಿದೆ.

ಒಟ್ಟಿನಲ್ಲಿ ನಿದ್ದೆ ಇಲ್ಲದೇ ಬದುಕಲಾಗದು ಎಂಬುದಂತು ಸತ್ಯ.

click me!