ವೃದ್ಧಾಪ್ಯದಲ್ಲಿ ಮದ್ಯಪಾನ ಮಾಡಿದ್ರೆ ಹಲ್ಲೆಲ್ಲಾ ಉದುರಿ ಹೋಗುತ್ತೆ!

By Suvarna News  |  First Published Jul 24, 2022, 10:08 AM IST

ಹಲ್ಲಿನ ಆರೋಗ್ಯ ಚೆನ್ನಾಗಿರಬೇಕು ಅಂತ ಯಾರು ತಾನೇ ಬಯಸುವುದಿಲ್ಲ ಹೇಳಿ. ಆದ್ರೆ ವಯಸ್ಸಾಗುತ್ತಾ ಹೋದಂತೆ ಹಲ್ಲು ಬಲಹೀನವಾಗುತ್ತಾ ಹೋಗುತ್ತದೆ. ಇದಕ್ಕೇನು ಕಾರಣ ?


ವಯಸ್ಸಾದಂತೆ ದೇಹವು ದೈಹಿಕವಾಗಿ ಹಲವಾರು ಬದಲಾವಣೆಗಳಿಗೆ ಒಳಗಾಗುತ್ತದೆ. ದೇಹದಲ್ಲಿ ಶಕ್ತಿಯು ಕ್ಷೀಣಿಸಲು ಆರಂಭವಾಗುತ್ತದೆ. ಆಗಾಗ ಸುಸ್ತಾದ ಅನುಭವವಾಗುತ್ತದೆ. ವಯಸ್ಸಾದಂತೆ ದೇಹವು ಒಣಗುತ್ತದೆ ಮತ್ತು ಪ್ರತಿಯೊಂದು ಅಂಗದ ಚಟುವಟಿಕೆಯು ನಿಧಾನಗೊಳ್ಳಲು ಪ್ರಾರಂಭಿಸುತ್ತದೆ. ಹಾಗೆಯೇ ವಯಸ್ಸಾದಂತೆ ಹಲ್ಲಿನ ಆರೋಗ್ಯವೂ ಹಾಳಾಗುತ್ತಾ ಬರುತ್ತದೆ. ದೇಹದ ಜೀವಕೋಶಗಳ ನವೀಕರಣ, ದುರ್ಬಲ ಮೂಳೆಗಳು ಮತ್ತು ದುರ್ಬಲವಾದ ಪ್ರತಿರಕ್ಷಣಾ ವ್ಯವಸ್ಥೆಯು ಸೋಂಕುಗಳು ಸುಲಭವಾಗಿ ಹರಡುವಂತೆ ಮಾಡುತ್ತದೆ. ಕಾಯಿಲೆಳು ಬಂದರೂ ಬೇಗನೇ ಗುಣವಾಗುವುದಿಲ್ಲ ಈ ಬದಲಾವಣೆಗಳು ಬಾಯಿಯಲ್ಲಿರುವ ಅಂಗಾಂಶ ಮತ್ತು ಮೂಳೆಯ ಮೇಲೆ ಪರಿಣಾಮ ಬೀರುತ್ತವೆ, ಇದು ನಂತರದ ವರ್ಷಗಳಲ್ಲಿ ಬಾಯಿಯ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಅದು ಹೇಗೆ ಎಂಬುದನ್ನು ತಿಳಿಯೋಣ. 

ಒಸಡಿನ ಸಮಸ್ಯೆಗಳು: ವಯಸ್ಸಾದಂತೆ, ಒಸಡುಗಳು ಹಲ್ಲಿನ ಅಂಗಾಂಶವನ್ನು ಬಹಿರಂಗಪಡಿಸುವುದರೊಂದಿಗೆ ಶಕ್ತಿಯನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತವೆ. ಇದು ಬ್ಯಾಕ್ಟೀರಿಯಾವು ಹಲ್ಲು (Teeth) ಮತ್ತು ಒಸಡುಗಳಿಗೆ ಸೋಂಕು ತಗುಲುವಂತೆ ಮಾಡುತ್ತದೆ ಮತ್ತು ಕೊಳೆಯುವಿಕೆಯನ್ನು ಉಂಟು ಮಾಡುತ್ತದೆ. ಪ್ಲೇಕ್ ಮತ್ತು ಟಾರ್ಟರ್ ನಿರ್ಮಾಣವಾದಾಗ ಜಿಂಗೈವಿಟಿಸ್ ಮತ್ತು ಪಿರಿಯಾಂಟೈಟಿಸ್ ಸಂಭವಿಸುತ್ತದೆ ಮತ್ತು ಸಮಯಕ್ಕೆ ಚಿಕಿತ್ಸೆ (Treatment) ನೀಡದಿದ್ದರೆ ಹಲ್ಲುಗಳ ನಷ್ಟಕ್ಕೆ ಕಾರಣವಾಗಬಹುದು.

Tap to resize

Latest Videos

ಎಷ್ಟು ದಿನಗಳಿಗೊಮ್ಮೆ ಹಲ್ಲುಜ್ಜುವ ಬ್ರಷ್‌ ಬದಲಾಯಿಸ್ಬೇಕು?

ದಂತ ಕುಳಿಗಳು: ಹಲ್ಲಿನಲ್ಲಿ ಕುಳಿಗಳು ಉಂಟಾಗುವುದು ತುಂಬಾ ಸಾಮಾನ್ಯವಾಗಿದೆ ಮತ್ತು ಎಲ್ಲಾ ವಯಸ್ಸಿನಲ್ಲಿಯೂ ಇದು ಸಂಭವಿಸುತ್ತವೆ. ಆದರೆ ವೃದ್ಧಾಪ್ಯದಲ್ಲಿ ಹೆಚ್ಚು ತೀವ್ರವಾಗಿರುತ್ತವೆ. ನಿಮ್ಮ ಬಾಯಿಯಲ್ಲಿರುವ ಬ್ಯಾಕ್ಟೀರಿಯಾವು ಸಕ್ಕರೆಯನ್ನು ಆಮ್ಲವಾಗಿ ಪರಿವರ್ತಿಸಿದಾಗ, ಅದು ಹಲ್ಲಿನ ದಂತಕವಚವನ್ನು ಕರಗಿಸಿ ಕುಳಿಗಳಿಗೆ ಕಾರಣವಾಗುತ್ತದೆ.

ಬಾಯಿಯ ಕ್ಯಾನ್ಸರ್: ಇದು 45 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಾದವರಲ್ಲಿ ಸಾಮಾನ್ಯವಾಗಿದೆ ಮತ್ತು ಪುರುಷರಲ್ಲಿ ಮಹಿಳೆ (Woman)ಯರಿಗಿಂತ ಎರಡು ಪಟ್ಟು ಸಾಮಾನ್ಯವಾಗಿದೆ. ಬಾಯಿಯ ಕ್ಯಾನ್ಸರ್‌ಗೆ ಮುಖ್ಯ ಕಾರಣವೆಂದರೆ ಧೂಮಪಾನ ಮತ್ತು ತಂಬಾಕಿನ ಇತರ ಬಳಕೆಗಳು. ಧೂಮಪಾನ ಮತ್ತು ಇತರ ರೀತಿಯ ತಂಬಾಕು ಸೇವನೆಯು ಬಾಯಿಯ ಕ್ಯಾನ್ಸರ್‌ಗೆ ಸಾಮಾನ್ಯ ಕಾರಣಗಳಾಗಿವೆ. ತಂಬಾಕು ಸೇವನೆಯೊಂದಿಗೆ ಅತಿಯಾಗಿ ಅಲ್ಕೋಹಾಲ್ ಸೇವನೆಯು ಬಾಯಿಯ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.

ಒಣ ಬಾಯಿ: ಜೊಲ್ಲು ಒಣಗಲು ಪ್ರಾರಂಭವಾಗುವ ವೃದ್ಧಾಪ್ಯದಲ್ಲಿ ಒಣ ಬಾಯಿ ಸಂಭವಿಸುತ್ತದೆ. ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಲಾಲಾರಸವು ಬಹಳ ಮುಖ್ಯವಾಗಿದೆ. ಏಕೆಂದರೆ ಇದು ಹಲ್ಲುಗಳನ್ನು ಕೊಳೆಯದಂತೆ ರಕ್ಷಿಸುತ್ತದೆ.  ಒಸಡುಗಳು ಆರೋಗ್ಯಕರವಾಗಿ ಮತ್ತು ರೋಗ ಮುಕ್ತವಾಗಿರಲು ಸಹಾಯ ಮಾಡುತ್ತದೆ. ನಿಮ್ಮ ಬಾಯಿಯಲ್ಲಿರುವ ಲಾಲಾರಸ ಗ್ರಂಥಿಗಳು ಸಾಕಷ್ಟು ಲಾಲಾರಸವನ್ನು ಉತ್ಪಾದಿಸದಿದ್ದಾಗ, ಅದು ಆಹಾರವನ್ನು ಅಗಿಯುವ ಮತ್ತು ನುಂಗುವ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಹುಣ್ಣುಗಳನ್ನು ಉಂಟುಮಾಡುತ್ತದೆ.

ದಿನಕ್ಕೆರಡು ಬಾರಿ ಹಲ್ಲುಜ್ಜುವ ಅಭ್ಯಾಸದಿಂದ ಹೆಚ್ಚುತ್ತೆ ಆಯಸ್ಸು

ಹಲ್ಲಿನ ಸಮಸ್ಯೆಗಳಿಗೆ ಕಾರಣವೇನು?
ಹಲ್ಲಿನ ಸಮಸ್ಯೆಗಳಿಗೆ ಕಾರಣವಾಗುವ ವಿವಿಧ ಅಂಶಗಳಿವೆ. ಅದರಲ್ಲಿ ಮುಖ್ಯವಾದುದು ಬಾಯಿಯ ನೈರ್ಮಲ್ಯ (Clean). ಸರಿಯಾಗಿ ಬಾಯಿ ತೊಳೆಯದೇ ಇರುವುದರಿಂದ ಹಲ್ಲಿನ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆಹಾರ ತಿಂದ ಮೇಲೆ ಬಾಯಿ ತೊಳೆಯದೆ ಇರುವುದು, ಹಲ್ಲುಜ್ಜದೇ ಇರುವುದು ಹಲ್ಲಿಗೆ ಸಂಬಂಧಿತ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಸರಿಯಾಗಿ ಹಲ್ಲಿನ ಆರೈಕೆ ಮಾಡದೇ ಇರುವುದರಿಂದಲೂ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಧೂಮಪಾನ ಮತ್ತು ಮದ್ಯಪಾನ, ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆಯಿಂದಲೂ ವಯಸ್ಸಾಗುತ್ತಾ ಹೋದಂತೆ ಹಲ್ಲಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. 

click me!