ಬೊಜ್ಜು.. ಈಗ ದೊಡ್ಡ ತಲೆನೋವಾಗಿದೆ. ಬೊಜ್ಜಿನಿಂದ ಅನೇಕ ಆರೋಗ್ಯ ಸಮಸ್ಯೆ ಶುರುವಾಗ್ತಿದೆ. ಇದ್ರಿಂದ ಮುಕ್ತಿ ಪಡೆಯಬೇಕೆಂದ್ರೆ ಆಹಾರ ಪದ್ಧತಿ ಬದಲಾಗಬೇಕು. ಕೆಲ ಆಹಾರ ನಿಮ್ಮ ತೂಕವನ್ನು ಬೇಗ ಕಡಿಮೆ ಮಾಡಲು ಸಹಾಯ ಮಾಡುತ್ತೆ. ಅದ್ಯಾವುದು ಅಂತಾ ನಾವು ಹೇಳ್ತೇವೆ.
`ಏರುತ್ತಿರುವ ತೂಕ’ ಸದ್ಯ ಎಲ್ಲರ ಸಮಸ್ಯೆ. ಒಂದೇ ಸಮನೆ ತೂಕ ಹೆಚ್ಚಾಗ್ತಿದೆ ಏನು ಮಾಡೋದು ಗೊತ್ತಾಗ್ತಿಲ್ಲ ಎನ್ನುವವರೇ ಹೆಚ್ಚು. ಕೊರೊನಾ, ಲಾಕ್ ಡೌನ್, ವರ್ಕ್ ಫ್ರಂ ಹೋಮ್ ಸೇರಿದಂತೆ ಅನೇಕ ಕಾರಣಕ್ಕೆ ಮನೆಯಲ್ಲಿ ಬಂಧಿಯಾದ ಜನರು ದೈಹಿಕ ಚಟುವಟಿಕೆ ಕಡಿಮೆ ಮಾಡಿದ್ದರು. ವಾಕಿಂಗ್, ಜಿಮ್, ವ್ಯಾಯಾಮ ಕಡಿಮೆಯಾಗಿತ್ತು. ಕುಳಿತಲ್ಲೆ ಕೆಲಸ ಹಾಗೂ ಫಾಸ್ಟ್ ಫುಡ್ ಸೇವನೆ ಜೊತೆ ಮಾನಸಿಕ ಒತ್ತಡ ತೂಕ ಹೆಚ್ಚಾಗಲು ಕಾರಣವಾಗಿದೆ. ಒಮ್ಮೆ ತೂಕ ಏರಿದ್ರೆ ಅದನ್ನು ಇಳಿಸೋದು ಸುಲಭವಲ್ಲ. ಎಷ್ಟೇ ಕಸರತ್ತು ಮಾಡಿದ್ರೂ ತೂಕ ಮಾತ್ರ ಕಡಿಮೆಯಾಗೋದಿಲ್ಲ. ಕಟ್ಟುನಿಟ್ಟಾದ ಆಹಾರ ಕ್ರಮದ ಜೊತೆಗೆ ವ್ಯಾಯಾಮ ಬಹಳ ಮುಖ್ಯವಾಗುತ್ತದೆ. ಆದ್ರೆ ನಾವಿಂದು ಸುಲಭವಾಗಿ ತೂಕ ಕಡಿಮೆ ಮಾಡಬಲ್ಲ ಡಿಶ್ ಒಂದರ ಬಗ್ಗೆ ಹೇಳ್ತೇವೆ. ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿ ನೀವಿದ್ದರೆ ನಿಮ್ಮ ಡಯೆಟ್ ನಲ್ಲಿ ಇದನ್ನೂ ಸೇರಿಸಿಕೊಳ್ಳಿ.
ತೂಕ ಇಳಿಸಿಕೊಳ್ಳಲು ಸೇವಿಸಿ ಸತ್ತೂ ಹಿಟ್ಟಿನ ರೊಟ್ಟಿ : ಮೊದಲು ಸತ್ತೂ ಹಿಟ್ಟು ಅಂದ್ರೇನು ಎಂಬುದನ್ನು ತಿಳಿಯೋಣ : ಕುಟ್ಟಿದ ದ್ವಿದಳ ಧಾನ್ಯಗಳು ಮತ್ತು ಧಾನ್ಯಗಳ ಮಿಶ್ರಣವೇ ಸತ್ತೂ ಹಿಟ್ಟು. ಹೆಚ್ಚಾಗಿ ಬಾರ್ಲಿ ಅಥವಾ ಕಡಲೆ ಬೇಳೆಯನ್ನು ಒಣಗಿಸಿ ಹುರಿದು ಸತ್ತೂವನ್ನು ತಯಾರಿಸಲಾಗುತ್ತದೆ. ಒಡಿಶಾದಲ್ಲಿ ಸತ್ತೂ ಹಿಟ್ಟನ್ನು ಗೋಡಂಬಿ, ಬಾದಾಮಿ, ರಾಗಿ, ಬಾರ್ಲಿ ಮತ್ತು ಕಡಲೆಹಿಟ್ಟನ್ನು ಹುರಿದು ತಯಾರಿಸಲಾಗುತ್ತದೆ. ಬಿಹಾರ, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದು ಸಸ್ಯ-ಆಧಾರಿತ ಪ್ರೋಟೀನ್‌ಗಳ ಅತ್ಯುತ್ತಮ ಮೂಲಗಳಲ್ಲಿ ಒಂದಾಗಿದೆ.
ಸತ್ತೂವಿನಲ್ಲಿ ಕಂಡುಬರುವ ಪೋಷಕಾಂಶಗಳು : ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾದ ಸತ್ತೂವಿನಲ್ಲಿ ಪ್ರೋಟೀನ್, ಫೈಬರ್, ಪೊಟ್ಯಾಸಿಯಮ್, ಕಬ್ಬಿಣ, ಮೆಗ್ನೀಸಿಯಮ್ ಮತ್ತು ಸೋಡಿಯಂನಂತಹ ಪ್ರಮುಖ ಪೋಷಕಾಂಶಗಳು ಕಂಡುಬರುತ್ತವೆ. ಸತ್ತೂ ರೊಟ್ಟಿ ತಿನ್ನುವುದರಿಂದ ದೇಹವು ತಂಪಾಗುತ್ತದೆ. ಇದರಿಂದಾಗಿ ಜೀರ್ಣಕ್ರಿಯೆ ಸುಲಭವಾಗುತ್ತದೆ. ಪ್ರತಿದಿನ ಸತ್ತು ರೊಟ್ಟಿಯನ್ನು ಸೇವಿಸಿದರೆ ಹೊಟ್ಟೆಯ ಕೊಬ್ಬನ್ನು ಸುಲಭವಾಗಿ ಕರಗಿಸಬಹುದು. ಇದು ವಾಯು ಸಮಸ್ಯೆಯನ್ನು ಹೋಗಲಾಡಿಸುತ್ತದೆ.
ಸತ್ತೂ ನಾರಿನಂಶದಿಂದ ಸಮೃದ್ಧವಾಗಿದೆ. ಇದನ್ನು ಯಾವುದೇ ವಯಸ್ಸಿನ ಜನರು, ಮಕ್ಕಳು, ವೃದ್ಧರು ಸೇವನೆ ಮಾಡಬಹುದು. ಅಧ್ಯಯನಗಳ ಪ್ರಕಾರ, ಫೈಬರ್, ಮಲಬದ್ಧತೆ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಇದು ವೇಗವಾಗಿ ಏರಿಸುವುದಿಲ್ಲ. ಹಾಗಾಗಿ ಮಧುಮೇಹಿಗಳು ಕೂಡ ಇದನ್ನು ಸುಲಭವಾಗಿ ಸೇವನೆ ಮಾಡಬಹುದು ಎನ್ನುತ್ತಾರೆ ತಜ್ಞರು. ಸುತ್ತೂ ಸೂಪರ್‌ಫುಡ್‌ನಂತೆ ದೇಹವನ್ನು ಫಿಟ್ ಆಗಿ ಇರಿಸಿಕೊಳ್ಳಲು ಮತ್ತು ದಿನವಿಡೀ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಪಿತ್ತಜನಕಾಂಗವನ್ನು ಬಲಪಡಿಸಲು ಕೂಡ ಇದು ಪ್ರಯೋಜನಕಾರಿ.
ಮೀನು -ಹಾಲು ಜೊತೆಯಾಗಿ ಸೇವಿಸೋದು ನಿಜವಾಗ್ಲೂ ಅಪಾಯಕಾರಿಯೇ?
ಸತ್ತೂ ರೊಟ್ಟಿ ತಯಾರಿಸುವುದು ಹೇಗೆ? : ಸತ್ತೂ ರೊಟ್ಟಿ ತಯಾರಿಸುವುದು ಅಷ್ಟು ಕಷ್ಟವಲ್ಲ.
ಸತ್ತೂ ರೊಟ್ಟಿಗೆ ಬೇಕಾಗುವ ಪದಾರ್ಥಗಳು : ಇದಕ್ಕೆ 2 ಬಟ್ಟಲು ಗೋಧಿ ಹಿಟ್ಟು, 1 ಬಟ್ಟಲು ಸತ್ತೂ ಹಿಟ್ಟು, 1 ಸಣ್ಣದಾಗಿ ಹೆಚ್ಚಿದ ಈರುಳ್ಳಿ, 1 ಚಮಚ ಸಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ, 1 ಚಮಚ ಸಣ್ಣದಾಗಿ ಹೆಚ್ಚಿದ ಶುಂಠಿ, 1 ಚಮಚ ಸಾಸಿವೆ ಎಣ್ಣೆ, 2 ಸಣ್ಣದಾಗಿ ಕತ್ತರಿಸಿದ ಹಸಿರು ಮೆಣಸಿನಕಾಯಿ, ಸ್ವಲ್ಪ ನುಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಗೂ ರುಚಿಕೆ ತಕ್ಕಷ್ಟು ಉಪ್ಪಿನ ಅವಶ್ಯಕತೆಯಿದೆ.
ಬಫೆಯಲ್ಲಿ ಹೆಚ್ಚು ತಿನ್ಬೇಕು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ
ಸತ್ತೂ ರೊಟ್ಟಿಯನ್ನು ತಯಾರಿಸಲು, ಮೊದಲು ಹಿಟ್ಟನ್ನು ರೊಟ್ಟಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ನಂತರ ಎಲ್ಲಾ ಇತರ ಪದಾರ್ಥಗಳನ್ನು ಮಿಶ್ರಣ ಮಾಡಿ ಸ್ಟಫಿಂಗ್ ಸಿದ್ಧಪಡಿಸಬೇಕು. ಹಿಟ್ಟನ್ನು ಉಂಡೆ ಮಾಡಿ, ಸಣ್ಣಗೆ ಲಟ್ಟಿಸಿ, ಅದಕ್ಕೆ ಸ್ಟಪ್ಪಿಂಗ್ ಹಾಕಿ, ನಂತ್ರ ದೊಡ್ಡದಾಗಿ ಲಟ್ಟಿಸಿ ಬೇಯಿಸಬೇಕು. ರೊಟ್ಟಿ ಸ್ವಲ್ಪ ಊದಿಕೊಳ್ಳುತ್ತದೆ. ಬೇಕಾದಲ್ಲಿ ತುಪ್ಪವನ್ನು ಹಾಕಿ ಬೇಯಿಸಬಹುದು.