
Skin Alergy: ಬೇಸಿಗೆಯಲ್ಲಿ ಚರ್ಮದ ತುರಿಕೆ ಸಾಮಾನ್ಯವಾಗಿರುತ್ತದೆ. ಅತೀಯಾದ ಸೆಕೆಯಿಂದಾಗಿ ಕುತ್ತಿಗೆ, ಬೆನ್ನು, ಕೈಗಳಲ್ಲಿ ಸಣ್ಣ ಗುಳ್ಳೆಗಳು ಕಾಣಿಸಿಕೊಂಡು ನಂತರ ಕಡಿತ ಶುರುವಾಗುತ್ತದೆ. ಈ ತುರಿಕೆ ನಿವಾರಣೆಗೆ ಮನೆಯಲ್ಲಿಯೇ ಮಾಡಬಹುದಾದ ಮನೆಮದ್ದುಗಳ ಬಗ್ಗೆ ಇಲ್ಲಿದೆ ಮಾಹಿತಿ.
ಅಲೋವೇರಾ ಜೆಲ್(Aloe vera gel): ಅಲೋವೇರಾ ಅಥವಾ ನೋಳಿರಸ ಲೋಳೆರಸ ಎಂದೆಲ್ಲಾ ಕರೆಯಲ್ಪಡುವ ಅಲೋವೇರಾ ಜೆಲ್‌ನಲ್ಲಿ ಕಲೋಸಿನ್, ಅಸೆಮಾನನ್‌ನಂತಹ ಸಂಯುಕ್ತಗಳಿವೆ. ಇವು ಉರಿಯೂತ ನಿವಾರಕ ಗುಣಗಳನ್ನು ಹೊಂದಿವೆ. ಇದು ಚರ್ಮಕ್ಕೆ ತೇವಾಂಶ ನೀಡಲು ಮತ್ತು ತುರಿಕೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತುರಿಕೆ ಮತ್ತು ಉರಿಗೆ, ದಿನಕ್ಕೆ ಎರಡು-ಮೂರು ಬಾರಿ ಈ ಅಲೋವೇರಾ ಜೆಲ್ ಅನ್ನು ಬಳಸಿ.
ಕೋಲ್ಡ್ ಕಂಪ್ರೆಸ್(cold compress)
ತುರಿಕೆ ಮತ್ತು ಊತಕ್ಕೆ ಕೋಲ್ಡ್ ಕಂಪ್ರೆಸ್ ಪರಿಹಾರ ನೀಡುತ್ತದೆ. ಒದ್ದೆ ಬಟ್ಟೆ ಅಥವಾ ಐಸ್ ಪ್ಯಾಕ್ ಅನ್ನು ಟವೆಲ್‌ನಲ್ಲಿ ಸುತ್ತಿ 20 ನಿಮಿಷ ಮಸಾಜ್ ಮಾಡಿ.
ಅಡುಗೆ ಸೋಡಾ(Baking soda)
ಬೇಕಿಂಗ್ ಸೋಡಾ ಚರ್ಮದ pH ಸಮತೋಲನಗೊಳಿಸುತ್ತದೆ ಮತ್ತು ಉರಿಯೂತ ನಿವಾರಕ, ಆಂಟಿಸೆಪ್ಟಿಕ್ ಗುಣಗಳನ್ನು ಹೊಂದಿದೆ. ಇದು ತುರಿಕೆ ನಿವಾರಿಸುತ್ತದೆ. ಸ್ವಲ್ಪ ಬೇಕಿಂಗ್ ಸೋಡಾವನ್ನು ನೀರಿನಲ್ಲಿ ಬೆರೆಸಿ ಪೇಸ್ಟ್ ಮಾಡಿ. 10 ನಿಮಿಷ ಚರ್ಮದ ಮೇಲೆ ಹಚ್ಚಿ ನಂತರ ತೊಳೆಯಿರಿ.
ಬೇವಿನ ಎಲೆ(Neem leaves)
ಬೇವಿನ ಎಲೆಗಳು ಸೋಂಕು ತಡೆಯಲು ಮತ್ತು ಊತ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ. ತಣ್ಣಗಾದ ನಂತರ ಸ್ನಾನ ಮಾಡಿ. ಅಥವಾ ಆ ನೀರಿನಲ್ಲಿ ಹತ್ತಿ ಬಟ್ಟೆಯನ್ನು ಅದ್ದಿ ಅದರಿಂದ ತುರಿಕೆ ಇರುವ ಜಾಗದಲ್ಲಿ ಒರೆಸಿ.
ಮುಲ್ತಾನಿ ಮಿಟ್ಟಿ(Multani mitti)
ಚರ್ಮದ ತುರಿಕೆಗೆ ಮುಲ್ತಾನಿ ಮಿಟ್ಟಿ ಪರಿಣಾಮಕಾರಿ. ಇದನ್ನು ನೀರಿನಲ್ಲಿ ಬೆರೆಸಿ ಪೇಸ್ಟ್ ಮಾಡಿ ತುರಿಕೆ ಇರುವ ಜಾಗಕ್ಕೆ ಹಚ್ಚಿ. ಒಣಗಿದ ನಂತರ ತೊಳೆಯಿರಿ.
ಸೌತೆಕಾಯಿ(Cucumber)
ಸೌತೆಕಾಯಿಯಲ್ಲಿ ನೀರಿನಂಶ ಹೆಚ್ಚಿರುವುದಲ್ಲದೆ, ವಿಟಮಿನ್ ಸಿ ಕೂಡ ಹೇರಳವಾಗಿದೆ. ಇದು ಚರ್ಮಕ್ಕೆ ತೇವಾಂಶ ನೀಡುತ್ತದೆ ಮತ್ತು ತಂಪು ನೀಡುತ್ತದೆ. ತುರಿಕೆ ಇರುವ ಜಾಗಕ್ಕೆ ಸೌತೆಕಾಯಿ ಹೋಳುಗಳನ್ನು ಇಡಿ ಅಥವಾ ಹತ್ತಿ ಪ್ಯಾಡ್ ಬಳಸಿ ಸೌತೆಕಾಯಿ ರಸ ಹಚ್ಚಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.