Cannabis Hangover: ಮನೆಯಲ್ಲೇ ಭಂಗಿಯ ಮತ್ತು ಕಮ್ಮಿ ಮಾಡ್ಕೊಳಿ

By Suvarna News  |  First Published Mar 1, 2022, 5:07 PM IST

ಶಿವರಾತ್ರಿಯಂದು ಭಂಗಿಯ ಪಾನಕದ ಸೇವನೆ ಮಾಡುವ ಪದ್ಧತಿ ಹಲವೆಡೆ ಕಂಡುಬರುತ್ತದೆ. ಭಂಗಿಯ ಸೇವನೆ ಮಾಡಿ ಹ್ಯಾಂಗೋವರ್ ಉಂಟಾಗಿದ್ದರೆ ಮನೆಯಲ್ಲೇ ಕೆಲವು ಪದ್ಧತಿಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದು. 
 


ಮಹಾಶಿವರಾತ್ರಿಯಂದು (Maha Shivaratri) ಶಿವನಿಗೆ ಭಂಗಿ(Cannabis)ಯನ್ನು ಸೇರಿಸಿದ ಪಾನಕದ ನೈವೇದ್ಯ ಮಾಡುವ ಪದ್ಧತಿ ಹಲವೆಡೆ ಇದೆ. ಉತ್ತರ ಭಾರತದಲ್ಲಿ ಈ ಪದ್ಧತಿ ಹೆಚ್ಚು. ಇನ್ನು, ದಕ್ಷಿಣದಲ್ಲೂ ಶಿವರಾತ್ರಿಯ ಜಾಗರಣೆಗೆ ಕೆಲವೆಡೆ ಭಂಗಿಯ ಸೇವನೆ ಮಾಡುವುದೂ ಇದೆ. ಶಿವ ಭಂಗಿ ಪ್ರಿಯ. ಪುರಾಣಗಳ (Purana) ಪ್ರಕಾರ, ಸಮುದ್ರ ಮಥನದ ಸಮಯದಲ್ಲಿ ವಿಷ (Toxic) ಹೊರಬಂದಿತ್ತಲ್ಲ, ಅದನ್ನು ಶಿವ ಸೇವನೆ ಮಾಡಿ ತನ್ನ ಕಂಠದಲ್ಲೇ ನಿಲ್ಲಿಸಿಕೊಂಡಿರುವ ಕಥೆ ಗೊತ್ತೇ ಇದೆ. ಹಾಗೆ ವಿಷವನ್ನು ಕುಡಿದ ಶಿವ ಕೈಲಾಸ ಪರ್ವತದ ಹೋದ. ವಿಷದಿಂದ ದೇಹದ ಉಷ್ಣ ಹೆಚ್ಚಾದಾಗ ಅದನ್ನು ಕಮ್ಮಿ ಮಾಡಿಕೊಳ್ಳಲು ಶಿವ ಭಂಗಿಯ ಸೇವನೆ ಮಾಡಿದ. ಹೀಗಾಗಿ, ಶಿವನಿಗೆ ಭಂಗಿಯ ಸೇವೆ ಸಲ್ಲಿಸಿ ಅದನ್ನು ಪ್ರಸಾದದ ರೂಪದಲ್ಲಿ ಸೇವನೆ ಮಾಡಲಾಗುತ್ತದೆ. 
|
ನೈವೇದ್ಯಕ್ಕೆ ಮಾಡಿದ ಭಂಗಿಯ ಪಾನಕವನ್ನು ಹೆಚ್ಚು ಸೇವನೆ ಮಾಡಿದರೆ ಆಲ್ಕೋಹಾಲ್ ನಂತೆ ಹ್ಯಾಂಗೋವರ್ (Hangover) ಆಗುವುದು ಖಚಿತ. ಆದರೆ, ಆಲ್ಕೋಹಾಲಿಗಿಂತ ಭಂಗಿಯ ಹ್ಯಾಂಗೋವರ್ ಇನ್ನಷ್ಟು ಗಾಢವಾಗಿರುತ್ತದೆ ಹಾಗೂ ಅಪಾಯಕಾರಿ (Dangerous) ಕೂಡ. ಭಂಗಿಯ ಹ್ಯಾಂಗೋವರ್ ನಿಂದ ವಾಕರಿಕೆ (Nausea), ತಲೆನೋವು (Headache) ಹಾಗೂ ಡಿಹೈಡ್ರೇಷನ್ (Dehydration) ಉಂಟಾಗಬಹುದು. ನಿಮಗೂ ಶಿವರಾತ್ರಿಯ ಜಾಗರಣೆ ಪ್ರಯುಕ್ತ ಭಂಗಿಯ ಸೇವನೆ ಮಾಡುವ ಪದ್ಧತಿಯಿದ್ದರೆ ಹ್ಯಾಂಗೋವರ್ ಆಗದಂತೆ ಎಚ್ಚರಿಕೆ ವಹಿಸಿ. ಒಂದೊಮ್ಮೆ ಹ್ಯಾಂಗೋವರ್ ಉಂಟಾದರೆ ಮನೆಯಲ್ಲೇ ಪರಿಹಾರ ಕಂಡುಕೊಳ್ಳಿ.  |

•    ಲಿಂಬೆ ನೀರು (Lemon Water) 
ಭಂಗಿಯ ನಶೆಯನ್ನು ಇಳಿಸಲು ಲಿಂಬೆ ರಸ ಬೆರೆಸಿದ ನೀರನ್ನು ಕುಡಿಯುವುದು ಉತ್ತಮ. ಸಿಟ್ರಸ್ ಭರಿತ ಯಾವುದೇ ಹಣ್ಣುಗಳನ್ನು ತಿನ್ನಬಹುದು. ಇವು ವಿಟಮಿನ್ ಸಿ ಅಂಶವನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುತ್ತದೆ. 
•    ಹರ್ಬಲ್ ಟೀ (Herbal Tea)
ಭಂಗಿಯ ಹ್ಯಾಂಗೋವರ್ ನಿಂದ ಹೊರಬರಲು ಕೆಲವು ಪ್ರಕಾರದ ಹರ್ಬಲ್ ಟೀ ಉಪಯುಕ್ತ. ರೋಸ್ ಟೀ, ಜಾಸ್ಮಿನ್ ಟೀ ಸೇರಿದಂತೆ ಹರ್ಬಲ್ ಟೀ ಸೇವನೆಯಿಂದ ಹ್ಯಾಂಗೋವರ್ ಕಡಿಮೆಯಾಗುತ್ತದೆ. ಇವುಗಳಲ್ಲಿರುವ ಆಂಟಿಆಕ್ಸಿಡಂಟ್ ಗಳಿಂದ ದೇಹಕ್ಕೆ ಹಿತವಾಗುತ್ತದೆ.
•    ನಾರಿನಂಶ ಅಧಿಕವಾಗಿರುವ ಆಹಾರ (Fibre Rich Foods)
ನಾರಿನಂಶ ಹೆಚ್ಚಿರುವ ಆಹಾರದ ಸೇವನೆಯಿಂದ ಹ್ಯಾಂಗೋವರ್ ಕಡಿಮೆಯಾಗುತ್ತದೆ. ಬೀನ್ಸ್, ಜೋಳ, ಸೇಬು, ಒಣಹಣ್ಣುಗಳು, ಬೆಣ್ಣೆಹಣ್ಣು, ಬಾಳೆಹಣ್ಣು, ಕ್ಯಾರೆಟ್, ಧಾನ್ಯಗಳು, ಸೌತೆಕಾಯಿ, ಓಟ್ಸ್ ಮುಂತಾದವುಗಳ ಸೇವನೆ ಉತ್ತಮ. ಇತರೆ ತರಕಾರಿಗಳನ್ನು ಸಹ ಸೇವನೆ ಮಾಡಬಹುದು.

ಬದುಕಿಗೆ ಬೇರೊಂದು ಅರ್ಥ ನೀಡುವ ಮಕ್ಕಳ ಕಾಯಿಲೆಗಳು- Satya Nadella ಹೇಳಿದ್ದೇನು?

•    ಸಾಕಷ್ಟು ನೀರು ಕುಡಿಯಿರಿ (Water Consumption)
ಹ್ಯಾಂಗೋವರ್ ನಿಂದ ದೇಹ ಡಿಹೈಡ್ರೇಟ್ ಆಗುತ್ತದೆ. ಹೆಚ್ಚು ನೀರು ಕುಡಿಯುವುದರಿಂದ ಡಿಹೈಡ್ರೇಷನ್ ಕಮ್ಮಿಯಾಗುತ್ತದೆ. ಡಿಹೈಡ್ರೇಷನ್ ನಿಂದ ಹ್ಯಾಂಗೋವರ್ ಹೆಚ್ಚು ಸಮಯ ಇರುತ್ತದೆ. 
•    ಹೊಟ್ಟೆ ಖಾಲಿ ಬಿಡಬೇಡಿ (Empty Stomach)
ಹ್ಯಾಂಗೋವರ್ ಇರುವಾಗ ಖಾಲಿ ಹೊಟ್ಟೆಯಲ್ಲಿ ಇರಬಾರದು. ಆಹಾರ ಸೇವನೆ ಮಾಡುವುದು ಅತ್ಯಂತ ಅಗತ್ಯ. ಯಾವುದೇ ಸಮಯದಲ್ಲಿ ಹ್ಯಾಂಗೋವರ್ ಆದರೆ ಮೊದಲು ಆಹಾರ ಸೇವನೆ ಮಾಡಬೇಕು. ಖಾಲಿ ಹೊಟ್ಟೆಯಿದ್ದರೆ ಇನ್ನಷ್ಟು ಬಾಧೆ ಖಚಿತ. ಅಕ್ಕಿ, ಗೋಧಿ, ಜೋಳದಿಂದ ಮಾಡಿದ ರೊಟ್ಟಿ, ದೋಸೆಗಳನ್ನು ಸವಿಯಲು ಯಾವುದೇ ತೊಂದರೆಯಿಲ್ಲ. ಇವುಗಳಿಂದ ಭಂಗಿಯ ಹ್ಯಾಂಗೋವರ್ ಕಡಿಮೆಯಾಗುತ್ತದೆ. 

Hair Loss : ತಲೆ ಬೋಳಾಗ್ಬಾರದಂದ್ರೆ ಇದರ ಸೇವನೆ ಕಡಿಮೆ ಮಾಡಿ

•    ಸೀಬೆ ಸೊಪ್ಪಿನ ರಸ (Guava Leaves)
ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ಪೇರಲೆ ಅಥವಾ ಸೀಬೆ ಸೊಪ್ಪಿನ ರಸವನ್ನು ಹ್ಯಾಂಗೋವರ್ ಇರುವಾಗ ಸೇವನೆ ಮಾಡಿದರೆ ತಕ್ಷಣ ಇಳಿಯುತ್ತದೆ. ಅಧಿಕ ಪ್ರಮಾಣದ ರಸ ಬೇಕಾಗುವುದಿಲ್ಲ. ನಾಲ್ಕಾರು ಚಮಚದಷ್ಟು ರಸ ಸೇವನೆ ಮಾಡಿದರೆ ಸಾಕು. ಅರ್ಧ ಗಂಟೆಯ ಬಳಿಕ ಇನ್ನೂ ಹ್ಯಾಂಗೋವರ್ ಕಡಿಮೆ ಆಗಿದ್ದರೆ ಮತ್ತೆ ಕಡಿಯಬಹುದು. ಇದನ್ನು ಯಾವುದೇ ಸಮಯದಲ್ಲಿ ಸೇವಿಸಬಹುದು.   

Tap to resize

Latest Videos

click me!