
ಶಿವರಾತ್ರಿ ಹತ್ತಿರ ಬಂದಾಗ ಚಳಿ ಶಿವ ಶಿವಾ ಅನ್ನುತ್ತಾ ಮಾಯವಾಗುತ್ತೆ ಅನ್ನೋ ಮಾತಿದೆ. ಆದರೆ ಈ ಬಾರಿ ಏಕೋ ಚಳಿ ಕಡಿಮೆ ಆಗೋ ಲಕ್ಷಣಗಳು ಕಾಣುತ್ತಿಲ್ಲ. ಸಾಮಾನ್ಯವಾಗಿ ಇಂಥಾ ಶೀತ ವಾತಾವರಣದಿಂದ ಕೀಲುಗಳ ನೋವು ಹೆಚ್ಚಾಗುತ್ತದೆ. ಸಂಧಿವಾತ ರೋಗಿಗಳು ಚಳಿಗಾಲದಲ್ಲಿ ಹೆಚ್ಚಾಗಿ ಈ ಸಮಸ್ಯೆಯಿಂದ ಬಳಲುತ್ತಾರೆ. ಸಂಧಿವಾತ ಉಂಟಾದಾಗ ಕೀಲುಗಳಲ್ಲಿ ನೋವು, ಬಿಗಿತ, ದೌರ್ಬಲ್ಯ, ಕ್ರ್ಯಾಕ್ಲಿಂಗ್ ಶಬ್ದ, ಉಬ್ಬುವುದು ಮತ್ತು ಮೂಳೆಗಳಲ್ಲಿ ಊತ, ಮೊಣಕಾಲುಗಳು ಮತ್ತು ಕೀಲುಗಳಲ್ಲಿ ಸಾಕಷ್ಟು ನೋವು, ನಡೆಯಲು, ಕೂರಲು, ಏಳಲು ತೊಂದರೆ ಹೀಗೆ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.
ಮೊಣಕಾಲು ಬೆಂಬಲಿಸುವ ಕಾರ್ಟಿಲೆಜ್‌ಗೆ ಹಾನಿ ಉಂಟಾದಾಗ ಅಸ್ಥಿಸಂಧಿವಾತ ಸಮಸ್ಯೆ ಉಂಟಾಗುತ್ತದೆ. ಸಂಧಿವಾತ ಸಮಸ್ಯೆಗೆ ಮುಖ್ಯ ಕಾರಣ ಅಂದ್ರೆ ಉರಿಯೂತ ಆಗಿದೆ. ಕರಿದ ಆಹಾರಗಳು, ಸಂಸ್ಕರಿಸಿದ ಮಾಂಸ, ಸಂಸ್ಕರಿಸಿದ ಕಾರ್ಬೋಹೈಡ್ರೇಟ್, ಆಲ್ಕೋಹಾಲ್, ಕೃತಕ (Artificial) ಸಿಹಿಕಾರಕಗಳ ಸೇವನೆ, ಸಸ್ಯಜನ್ಯ ಎಣ್ಣೆಗಳು ಮತ್ತು ಹೆಚ್ಚಿನ ಫ್ರಕ್ಟೋಸ್ ಕಾರ್ನ್ ಸಿರಪ್ ಸೇವನೆ ಮಾಡಿದರೆ ಉರಿಯೂತ( Inflammation) ಹೆಚ್ಚುತ್ತದೆ. ಇದು ಸಂಧಿವಾತ ಸಮಸ್ಯೆ ಹೆಚ್ಚಿಸುತ್ತದೆ. ಆದರೆ ಅದನ್ನು ನಿವಾರಿಸಲು ಇಲ್ಲಿ ಕೆಲವು ಸಲಹೆಗಳಿವೆ.
ತಿಳಿದೋ, ತಿಳಿಯದೆಯೋ ನೀವು ಮಾಡೊ ಈ ಕೆಲಸದಿಂದ ಬೇಗ ಅಜ್ಜಿಯಾಗ್ತೀರಿ
ಸಂಧಿವಾತದ ನೋವನ್ನು ಕಡಿಮೆ ಮಾಡಲು ನಿಮ್ಮನ್ನು ಬೆಚ್ಚಗಾಗಿಸುವುದು ಅತ್ಯಗತ್ಯ. ಚಳಿಗಾಲದ ಆರಂಭದಿಂದಲೇ ಬೆಚ್ಚಗಿನ ಬಟ್ಟೆಗಳನ್ನು ಅವಲಂಬಿಸಬೇಕು. ದೇಹವು ಬೆಚ್ಚಗಾಗಿದ್ದರೆ, ಸಂಧಿವಾತದ ನೋವು ಕಾಣದು. ಚಳಿಗಾಲದಲ್ಲಿ ವಿವಿಧ ದೈಹಿಕ ಚಟುವಟಿಕೆಗಳನ್ನು ಮಾಡುವ ಮೂಲಕ ಸಕ್ರಿಯರಾಗಿರಿ, ನಿಮ್ಮ ದೇಹಕ್ಕೆ ವ್ಯಾಯಾಮ ಅಗತ್ಯವಾಗಿದ್ದು, ಸಂಧಿವಾತದ(Arthritis) ಸಮಸ್ಯೆ ಇರುವವರು ಲಘು ವ್ಯಾಯಾಮದ(Exercise) ಮೊರೆ ಹೋಗುವುದು ಉತ್ತಮ. ಚಳಿಗಾಲದಲ್ಲಿ ಪಾದಗಳಿಗೆ ಸಾಕ್ಸ್ ಮತ್ತು ಕೈಗಳಿಗೆ ಕೈಗವಸುಗಳನ್ನು ಧರಿಸಿ. ದೇಹವು ಬೆಚ್ಚಗಿರುವಾಗ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ರಕ್ತ ಪರಿಚಲನೆ ಉತ್ತಮವಾಗಿದ್ದರೆ, ನೋವು ಸಾಕಷ್ಟು ಕಡಿಮೆಯಾಗುತ್ತದೆ.
ವಿಟಮಿನ್ ಡಿ ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳು, ಮೂಳೆ ಸಾಂದ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನಿಮ್ಮ ಚಳಿಗಾಲದ ಆಹಾರದಲ್ಲಿ ವಿಟಮಿನ್ ಡಿ ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳು ಸಮೃದ್ಧವಾಗಿರುವ ಆಹಾರವನ್ನು ಸೇರಿಸಿ. ಇದು ಕೀಲು ನೋವನ್ನು ಬಹಳವಾಗಿ ಕಡಿಮೆ ಮಾಡುತ್ತದೆ. ತೂಕ ಹೆಚ್ಚಾಗುವುದರಿಂದ ಮೂಳೆಗಳ ಮೇಲೆ ಒತ್ತಡ ಬೀಳುತ್ತದೆ. ಪರಿಣಾಮವಾಗಿ, ನೋವು ತೀವ್ರವಾಗಿ ಹೆಚ್ಚಾಗುತ್ತದೆ. ಹಾಗಾಗಿ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ನಿಯಮಿತ ನಡಿಗೆ ಮತ್ತು ಆರೋಗ್ಯಕರ ಆಹಾರವು ತೂಕವನ್ನು ನಿಯಂತ್ರಣದಲ್ಲಿಡುತ್ತದೆ. ಸಂಧಿವಾತ ನೋವು ಸಮಸ್ಯೆ ನಿವಾರಣೆ ಮಾಡಲು ಅರಿಶಿನ ಪ್ರಯೋಜನ ನೀಡುತ್ತದೆ.
ಇದು ಉರಿಯೂತ ವಿರೋಧಿ ಗುಣಲಕ್ಷಣ ಹೊಂದಿದೆ. ಮೊಣಕಾಲು ನೋವು ಹೋಗಲಾಡಿಸಲು, ಒಂದು ಚಮಚ ಅರಿಶಿನ ಪುಡಿ ಮತ್ತು ಅರ್ಧ ಚಮಚ ಕರಿಮೆಣಸನ್ನು ಎರಡು ಕಪ್ ನೀರಿನಲ್ಲಿ ಕುದಿಸಿ. ತಣ್ಣಗಾಗಿಸಿ ನಂತರ ಸೇವನೆ ಮಾಡಿ.ಮೊಣಕಾಲು ನೋವು ಕಡಿಮೆ ಮಾಡಲು ಶುಂಠಿ ಪ್ರಯೋಜನಕಾರಿ ಆಗಿದೆ ಅಂತಾರೆ ತಜ್ಞರು. ಈ ಉರಿಯೂತ ನಿವಾರಕ ಪದಾರ್ಥವನ್ನು ಖಾದ್ಯಗಳಲ್ಲಿ ಸೇರಿಸುವ ಮೂಲಕ ಸೇವನೆ ಮಾಡಿ. ತುರಿದ ಶುಂಠಿಯನ್ನು ಒಂದು ಕಪ್ ನೀರಿಗೆ ಹಾಕಿ, ಕುದಿಸಿ ನಂತರ ಉಗುರು ಬೆಚ್ಚಗಿನ ನೀರು ಕುಡಿಯಿರಿ. ಮಶ್ರೂಮ್, ರೋಸ್ಮರಿ, ಗ್ಯಾಲಂಗಲ್ ರೂಟ್, ಸ್ಕಲ್ಕ್ಯಾಪ್, ಮೈರ್, ಇತ್ಯಾದಿ ಪದಾರ್ಥಗಳು ಕೀಲು ನೋವು ನಿವಾರಣೆಗೆ ಸಹಕಾರಿ. ಇನ್ನೇನು ಚಳಿಗಾಲ ಮುಗಿಯುತ್ತಾ ಬಂತಲ್ಲ ಅಂತ ನೋವನ್ನು ನಿರ್ಲಕ್ಷಿಸಿದರೆ ಇದರಿಂದ ಸಮಸ್ಯೆ ಹೆಚ್ಚು. ಅದರ ಬದಲು ಒಂದಿಷ್ಟು ಟಿಪ್ಸ್ ಫಾಲೋ ಮಾಡಿದರೆ ನೋವಿಂದ ಪಾರಾಗಿ ಆರಾಮವಾಗಿರಬಹುದು. ದಿನವೂ ಉಲ್ಲಾಸದಿಂದ ಕೂಡಿರುತ್ತದೆ.
Health Tips: ನಕ್ಕರೂ ಮೂತ್ರ ಸೋರಿ ಮುಜುಗರವಾಗ್ತಿದ್ಯಾ? ಹೀಗೆ ಮಾಡಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.