ಹುಟ್ಟಿನಿಂದಲೇ ಬರುವ ಹೃದ್ರೋಗ ಸಮಸ್ಯೆಗಳು ಮಕ್ಕಳಲ್ಲಿ ಇತ್ತೀಚೆಗೆ ಹೆಚ್ಚಾಗ್ತಿದೆ. ಇಷ್ಟು ದಿನ ವಯಸ್ಕರಲ್ಲಿ ಹೆಚ್ಚು ಹೃದಯ ಸಂಬಂಧಿ ಸಮಸ್ಯೆಗಳು ಕಂಡು ಬರ್ತಿತ್ತು. ಆದರೆ ಈಗ ಸಣ್ಣ ಮಕ್ಕಳಿಗೂ ಹೃದಯ ಸಮಸ್ಯೆಗಳು ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ.
ವರದಿ: ಮಾರುತೇಶ್ ಹುಣಸನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಮಾ.24): ಹುಟ್ಟಿನಿಂದಲೇ ಬರುವ ಹೃದ್ರೋಗ ಸಮಸ್ಯೆಗಳು (Heart Problems) ಮಕ್ಕಳಲ್ಲಿ (Childrens) ಇತ್ತೀಚೆಗೆ ಹೆಚ್ಚಾಗ್ತಿದೆ. ಇಷ್ಟು ದಿನ ವಯಸ್ಕರಲ್ಲಿ ಹೆಚ್ಚು ಹೃದಯ ಸಂಬಂಧಿ ಸಮಸ್ಯೆಗಳು ಕಂಡು ಬರ್ತಿತ್ತು. ಆದರೆ ಈಗ ಸಣ್ಣ ಮಕ್ಕಳಿಗೂ ಹೃದಯ ಸಮಸ್ಯೆಗಳು ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ಈ ಆತಂಕಕಾರಿ ಮಾಹಿತಿಯನ್ನು ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಸಿಎನ್ ಮಂಜುನಾಥ್ (DR CN Manjunath) ತಿಳಿಸಿದ್ದಾರೆ. ಮಕ್ಕಳ ಜನನದ ಜೊತೆಗೆ ಕಾಣಿಸಿಕೊಳ್ಳುವ ಹೃದ್ರೋಗಗಳಿಗೆ ಕಾಂಜನೈಟಲ್ ಹಾರ್ಟ್ ಡಿಸೀಸ್ ಎಂದು ಕರೆಲಾಗುತ್ತದೆ. ಪ್ರತಿ 1 ಸಾವಿರ ಮಕ್ಕಳಲ್ಲಿ 5 ರಿಂದ 6 ಮಕ್ಕಳಿಗೆ ಹೃದಯ ಸಂಬಂಧಿ ಸಮಸ್ಯೆ ಪತ್ತೆಯಾಗುತ್ತಿದೆ.
ಕೆಲ ಮಕ್ಕಳ ಹೃದಯದಲ್ಲಿ ರಂಧ್ರ ಕಂಡುಬಂದಾಗ, ಶುದ್ಧ, ಅಶುದ್ಧ ರಕ್ತ ಮಿಕ್ಸ್ ಆಗಿ ದೇಹ ನೀಲಿಗಟ್ಟುತ್ತದೆ. ಆಗಷ್ಟೆ ಹುಟ್ಟಿದ ಮಗು ದೇಹ ನೀಲಿ ಗಟ್ಟಿದರೆ ಅದಕ್ಕೆ ಹೃದಯ ಸಂಬಂಧಿ ಕಾಯಿಲೆ ಇರುವ ಸಾಧ್ಯತೆ ಹೆಚ್ಚಿರುತ್ತದೆ. ತಾಯಿ ಗರ್ಭಿಣಿಯಾಗಿದ್ದಾಗ ಬೆಳವಣಿಗೆ ದೋಷಗಳದಾಗ ಹೃದಯದಲ್ಲಿ ರಂಧ್ರಗಳು ಬರುತ್ತದೆ. ಪದೇ ಪದೇ ಜ್ವರ, ಕೆಮ್ಮು, ನ್ಯೂಮೋನಿಯಾ ಕಾಡಿದರೆ ವೈದ್ಯರ ಬಳಿ ತೋರಿಸುವುದು ಒಳಿತು. ಪದೇ ಪದೇ ಮಕ್ಕಳು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರೆ ಒಂದು ಎಕೋ ಕಾರ್ಡಿಯೋಗ್ರಾಂ ಮಾಡಿಸಿ ಎಂದು ಡಾ. ಮಂಜುನಾಥ್ ಸಲಹೆ ನೀಡಿದರು.
Childrens Mental Health : ದೊಡ್ಡ ಧ್ವನಿಯಲ್ಲಿ ಕಥೆ ಹೇಳಿದ್ರೆ ಮಕ್ಕಳ ಒತ್ತಡ ಕಡಿಮೆಯಾಗುತ್ತಂತೆ
ಜಯದೇವ ಆಸ್ಪತ್ರೆಯಲ್ಲಿ ಮಕ್ಕಳಿಗಾಗಿ ಹೊಸ ಬ್ಲಾಕ್: ಮಕ್ಕಳಲ್ಲಿ ಹೆಚ್ಚು ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗ್ತಿರೋದ್ರಿಂದ ಮಕ್ಕಳ ಚಿಕಿತ್ಸೆಗಾಗಿ ಕಂಡಬರುತ್ತಿರೋದ್ರಿಂದ ಜಯದೇವ ಆವರಣದಲ್ಲಿ ಇನ್ಫೋಸಿಸ್‌ನಿಂದ ನಿರ್ಮಿಸಲಾಗಿರುವ ಆಸ್ಪತ್ರೆಯಲ್ಲಿ ಮಕ್ಕಳ ಯುನಿಟ್ ಕೂಡ ಪ್ರಾರಂಭಿಸಲಾಗ್ತಿದೆ. ಭಾರತದಲ್ಲಿ ಹುಟ್ಟಿನಿಂದ ಬರುವ ಹೃದಯ ದೋಷಗಳಿಗೆ ಪ್ರತೀ ವರ್ಷ 2 ಲಕ್ಷದ 40 ಸಾವಿರ ಮಕ್ಕಳು ತುತ್ತಾಗ್ತಿದ್ದಾರೆ. ಹೀಗಾಗಿ ಪ್ರತೀ ವರ್ಷದ ಫೆಬ್ರುವರಿ ತಿಂಗಳಲ್ಲಿ ಈ ವಿಚಾರದ ಬಗ್ಗೆ ಅರಿವು ಮೂಡಿಸುವ ಅಭಿಯಾನ ಮಾಡಲಾಗತ್ತೆ. ಆರಂಭದಲ್ಲಿ ಸಮಸ್ಯೆ ಗುರುತಿಸಿದರೆ ಚಿಕಿತ್ಸೆ ನೀಡಬಹುದು.
NCEE survey: ಲಾಕ್‌ಡೌನ್ ನಂತರ ಮೂಲಭೂತ ಕೌಶಲ್ಯ ಕಳೆದುಕೊಂಡ ಮಕ್ಕಳು!
ಈ ಸಮಸ್ಯೆಯಲ್ಲೂ ಕೂಡ ಎರಡು ವಿಧಗಳಿಗೆ, ಸಣ್ಣ ಸಮಸ್ಯೆಗಳಾದರೆ ಚಿಕಿತ್ಸೆ ನೀಡಿ ಗುಣಪಡಿಸಬಹುದು, ಸ್ವಲ್ಪ ತೀವ್ರ ಸಮಸ್ಯೆಗಳಿದ್ದರೆ ಚಿಕಿತ್ಸೆ ಕಷ್ಟ. ಅಲ್ಲದೇ ಮದ್ಯಮ ವರ್ಗ, ಬಡ ವರ್ಗದ ಜನರಿಗೆ ಈ ಚಿಕಿತ್ಸೆ ಮರೀಚಿಕೆಯೂ ಹೌದು. ರಾಜ್ಯದಲ್ಲೂ ಕೂಡ ಸಾವಿರ ಮಕ್ಕಳು ಜನಿಸಿದ್ರೆ ಅದರಲ್ಲಿ 10 ಮಕ್ಕಳು ಈ ಹೃದಯ ಸಮಸ್ಯೆ ಇಂದ ಬಳಲುತ್ತಿದೆ. ಈ ಮೊದಲು ಕೂಡ ಈ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಇರಲಿಲ್ಲ. ಈಗ ಜಾಗೃತಿ ಮೂಡಿಸುವ ಕೆಲಸ ಆಗ್ತಿದೆ. ಹೀಗಾಗಿ ಪೋಷಕರು ಎಚ್ಚರಿಕೆ ವಹಿಸುವುದು ಸೂಕ್ತ. ಮಕ್ಕಳ ಬೆಳವಣಿಗೆ ಆಗದಿದ್ದರೆ, ಲವಲವಿಕೆ ಇಂದ ಮಕ್ಕಳು ಇಲ್ಲದಿರಯವಿಕೆ, ತೂಕ ಕಡಿಮೆ ಆಗುವುದು, ಈ ರೀತಿ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷ್ಯ ಮಾಡಬಾರದು.