ದೀರ್ಘಕಾಲ ಆರೋಗ್ಯವಾಗಿರಲು ವ್ಯಾಯಾಮ ಒಂದೇ ಸಾಲದು, ರಾತ್ರಿಯ ಊಟ ಹೀಗಿರಲಿ

Ravi Janekal   | ANI
Published : Nov 18, 2026, 09:44 PM IST
Late Night Dinner

ಸಾರಾಂಶ

ದೀರ್ಘಕಾಲ ಆರೋಗ್ಯವಾಗಿರಲು ಕೇವಲ ವ್ಯಾಯಾಮ ಸಾಲದು, ಸರಿಯಾದ ಸಮಯಕ್ಕೆ ಮತ್ತು ಸರಿಯಾದ ಪ್ರಮಾಣದಲ್ಲಿ ರಾತ್ರಿಯ ಊಟ ಮಾಡುವುದು ಅತ್ಯಗತ್ಯ. ರಾತ್ರಿ ಊಟವು ಹಗುರ, ಜೀರ್ಣವಾಗುವಂತಿರಬೇಕು ಮತ್ತು ಹಸಿ ತರಕಾರಿ, ಸಲಾಡ್, ಬೇಳೆಗಳನ್ನು ಒಳಗೊಂಡಿರಬೇಕು.

ಊಟ ಬಲ್ಲವನಿಗೆ ರೋಗವಿಲ್ಲ' ಎಂಬ ಮಾತಿದೆ. ಪ್ರತಿಯೊಬ್ಬರೂ ಹೆಚ್ಚು ಕಾಲ ಬದುಕಲು, ದೀರ್ಘಕಾಲದವರೆಗೆ ಯಾವುದೇ ಕಾಯಿಲೆಗಳಿಲ್ಲದೆ ಆರೋಗ್ಯವಾಗಿರಲು ಬಯಸುತ್ತಾರೆ. ಅದಕ್ಕಾಗಿಯೇ ಪ್ರತಿನಿತ್ಯ ವ್ಯಾಯಾಮ, ಯೋಗ, ಡಯೆಟ್ ಮಾಡುತ್ತಾರೆ. ಆದರೆ ಆರೋಗ್ಯವಾಗಿರಲು ಇಷ್ಟು ಸಾಕಾಗುವುದಿಲ್ಲ. ಬದಲಿಗೆ ಪ್ರತಿ ದಿನ ನಾವು ಎಷ್ಟು ತಿನ್ನುತ್ತೇವೆ, ಏನು ತಿನ್ನುತ್ತಿದ್ದೇವೆ ಎಂಬುದರ ಮೇಲೆ ನಮ್ಮ ಆರೋಗ್ಯ ನಿಂತಿದೆ.

ಬಹುತೇಕರಲ್ಲಿ ಒಂದು ತಪ್ಪು ಕಲ್ಪನೆಯಿದೆ ಹೆಚ್ಚೆಚ್ಚು ತಿಂದಷ್ಟು ಗಟ್ಟಿಮುಟ್ಟಾಗಿ ಆರೋಗ್ಯವಾಗಿರ್ತಾರೆ ಎಂದುಕೊಳ್ಳುವುದು. ಆದರೆ ಯಾವುದನ್ನು ತಿನ್ನುತ್ತೀರಿ? ಎಷ್ಟು ಪ್ರಮಾಣ? ಯಾವ ಸಮಯ? ಕೆಲವರು ಬೆಳಗ್ಗೆ ನಿತ್ಯ ವ್ಯಾಯಾಮ ಮಾಡ್ತಾರೆ, ಊಟ ಎಲ್ಲವೂ ಸರಿಯಿರುತ್ತದೆ. ಆದ್ರೆ ರಾತ್ರಿ ಸಮಯದಲ್ಲಿ ಮದ್ಯಪಾನ ಜೊತೆಗೆ ಜಂಕ್‌ಫುಡ್, ತಡರಾತ್ರಿ ಯಥೇಚ್ಛ ಊಟ ಮಾಡುವ ಅಭ್ಯಾಸವಿರುತ್ತದೆ ಎಂದರೆ ಮುಂಜಾನೆಯ ವ್ಯಾಯಾಮಾ ಮಾಡಿದ್ರೂ ರಾತ್ರಿಯ ಈ ಕೆಟ್ಟ ಅಭ್ಯಾಸದಿಂದ ದೀರ್ಘಕಾಲದವರೆಗೆ ಆರೋಗ್ಯವಾಗಿರಲು ಅಸಾಧ್ಯ.

ಹಾಗಾದ್ರೆ ಆರೋಗ್ಯವಾಗಿರಲು ರಾತ್ರಿ ಊಟ ಹೇಗಿರಬೇಕು?

ಆರೋಗ್ಯವಾಗಿರಲು ಪ್ರತಿದಿನ ತಿನ್ನುವ ಆಹಾರದ ಮೇಲೆ ಗಮನಹರಿಸಬೇಕು. ತಜ್ಞರು ಹೇಳುವ ಪ್ರಕಾರ ಅದರಲ್ಲೂ ನೀವು ರಾತ್ರಿಯ ಊಟಕ್ಕೆ ವಿಶೇಷ ಗಮನ ನೀಡಬೇಕು. ಏಕೆಂದರೆ ರಾತ್ರಿಯಲ್ಲಿ ಆರೋಗ್ಯಕರ ಆಹಾರ ಸೇವಿಸುವುದರಿಂದ ಮಾತ್ರ ನಿಮ್ಮ ದೇಹ ಉತ್ತಮ ನಿದ್ರೆ, ವಿಶ್ರಾಂತಿ ಪಡೆಯಲು ಸಾಧ್ಯ. ರಾತ್ರಿಯ ಊಟ ಹಗುರವಾಗಿ ಸುಲಭವಾಗಿ ಜೀರ್ಣವಾಗುವಂತೆ ಇರುವುದು ತುಂಬಾ ಮುಖ್ಯ. ರಾತ್ರಿ ಊಟ ಹೀಗಿರಲಿ;

ರಾತ್ರಿ ಊಟದಲ್ಲಿ ಹಸಿ ತರಕಾರಿ ಇರಲಿ

ಕುಂಬಳಕಾಯಿ, ಕುಂಬಳಕಾಯಿ, ಪಾಲಕ್, ಬೆಂಡೆಕಾಯಿ, ಬೀನ್ಸ್, ಎಲೆಕೋಸು ಮುಂತಾದ ಹಸಿರು ಸೊಪ್ಪು, ತರಕಾರಿಗಳು ರಾತ್ರಿಯ ಊಟದಲ್ಲಿರಲಿ. ಏಕೆಂದರೆ ತರಕಾರಿ, ಹಸಿರು ಸೊಪ್ಪು ಹೊಟ್ಟೆ ಅಥವಾ ಜೀರ್ಣಾಂಗ ವ್ಯವಸ್ಥೆಗೆ ಒಳ್ಳೆಯದು, ಸುಲಭವಾಗಿ ಜೀರ್ಣವಾಗುತ್ತವೆ, ಆದರೆ ಎಣ್ಣೆಯುಕ್ತ ತಿಂಡಿ, ಮಸಾಲೆ ಕಡಿಮೆ ಇರುವಂತೆ ನೋಡಿಕೊಳ್ಳಿ. ರಾತ್ರಿ ವೇಳೆ ಊಟದ ಜೊತೆಗೆ ಕರಿದ ತಿಂಡಿ, ಚಿಪ್ಸ್,, ಭಜಿ, ಬೋಂಡಾ ತಿನ್ನುವ ಅಭ್ಯಾಸ ಕೆಲವರಲ್ಲಿ ಇರುತ್ತದೆ. ಇಂಥ ಅಭ್ಯಾಸ ದೀರ್ಘಕಾಲದ ಆರೋಗ್ಯಕ್ಕೆ ಒಳ್ಳೆಯದಲ್ಲ.

ಚಪಾತಿ ಜೊತೆಗೆ ಗಟ್ಟಿ ಬೇಳೆ

ರಾತ್ರಿ ಒಂದು ಬಟ್ಟಲು ಕ್ರೀಮಿಯಾಗಿರುವ ಬಿಸಿ ಬಿಸಿ ಬೇಳೆ, ಎರಡು ರೊಟ್ಟಿ ಅಥವಾ ಚಪಾತಿ ತಿನ್ನುವುದು ಕೂಡ ಒಳ್ಳೆಯದು. ಇದು ದೇಹಕ್ಕೆ ಶಕ್ತಿ ತುಂಬುತ್ತದೆ. ಅಲ್ಲದೆ ಯಾವಾಗ ಹೊಟ್ಟೆ ತುಂಬಿರುವಂತೆ ನೋಡಿಕೊಳ್ಳುತ್ತದೆ. ಇದರಿಂದ ಯೆಥೇಚ್ಛವಾಗಿ ತಿನ್ನುವುದನ್ನ ತಪ್ಪಿಸುತ್ತದೆ. ಬೇಳೆ ಬೇಡ ಬೇರೆ ಏನಾದ್ರೂ ತಿನ್ನಬೇಕು ಅನಿಸಿದರೆ ಪನೀರ್ ಅಥವಾ ಸೋಯಾಬೀನ್ ತಿನ್ನಬಹುದು. ಆದ್ರೆ ಹೆಚ್ಚಾಗಬಾರದು.

ರಾತ್ರಿ ಊಟಕ್ಕೆ ಸಲಾಡ್ ಉತ್ತಮ

ರಾತ್ರಿ ಊಟ ಮಾಡುವಾಗ ಜೊತೆಗೆ ಸ್ವಲ್ಪ ತರಕಾರಿ, ಹಣ್ಣು ಮಿಶ್ರಿತ ಸಲಾಡ್ ಇದ್ರೆ ಇದಕ್ಕಿಂತ ಉತ್ತಮ ಊಟ ಮತ್ತೊಂದಿಲ್ಲ. ಸಲಾಡ್ ಎಂದರೆ ಬೇರೆ ಏನೂ ಕಲ್ಪಿಸಿಕೊಳ್ಳಬೇಡಿ. ಮನೆಯಲ್ಲಿನ ಸೌತೆಕಾಯಿ, ಟೊಮೆಟೊ, ಕ್ಯಾರೆಟ್, ಬೀಟ್ರೂಟ್ ನಂತಹ ತರಕಾರಿ ಹಸಿಯಾಗಿಯೇ ಊಟದ ಜೊತೆಗೆ ತಿನ್ನುವುದು. ಇದರಿಂದ ಬೇಗನೇ ಹೊಟ್ಟೆ ತುಂಬಿದಂತಾಗುತ್ತದೆ. ಸರಿಯಾದ ಪ್ರಮಾಣದಲ್ಲಿ ತಿನ್ನಿ. ಇನ್ನೊಂದು ರಾತ್ರಿ ಊಟದ ವೇಳೆ ಒಂದು ನಿಂಬೆ ಹಣ್ಣು ಸೇರಿಸಿಕೊಳ್ಳಿ ಆರೋಗ್ಯಕ್ಕೆ ಉತ್ತಮ.

ಒಂದು ವೇಳೆ ರಾತ್ರಿ ಕಡಿಮೆ ಊಟ ಮಾಡಿದ್ದಕ್ಕೆ ತಡರಾತ್ರಿ ಹಸಿವು ಆದರೆ ಮತ್ತೆ ಅನ್ನ ಚಪಾತಿ ಬಡಿಸಿಕೊಂಡು ತಿನ್ನಬೇಡಿ. ಅದರ ಬದಲು ಸೇಬು, ಪಪ್ಪಾಯಿ ಅಥವಾ ಪೇರಲದಂತಹ ಹಣ್ಣುಗಳನ್ನು ತಿನ್ನಬಹುದು. ಆದರೆ ಊಟದ ಮಾಡಿದ ತಕ್ಷಣ ಹೆಚ್ಚು ಹಣ್ಣುಗಳನ್ನು ತಿನ್ನುವ ಅಭ್ಯಾಸ ಬೇಡ ಊಟಕ್ಕೆ ಅರ್ಧ ತಾಸು ಮೊದಲು ಅಥವಾ ಊಟ ಮಾಡಿದ ಅರ್ಧತಾಸು ನಂತರ ಸೇವಿಸುವುದು ಒಳ್ಳೆಯದು.

ರಾತ್ರಿ ಊಟದ ವೇಳೆ ಈ ತಪ್ಪು ಮಾಡಬೇಡಿ

ರಾತ್ರಿ ಊಟದ ಬದಲು ಪಿಜ್ಜಾ, ಬರ್ಗರ್, ಕರಿದ ತಿಂಡಿ ತಿನ್ನುವ ಅಭ್ಯಾಸ ಕೆಲವರಲ್ಲಿರುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ರಾತ್ರಿ ಊಟದ ವೇಳೆ ಹುರಿದ ಪದಾರ್ಥ, ಫಾಸ್ಟ್ ಫುಡ್, ಸ್ವೀಟ್, ಊಟದ ಜೊತೆಗೆ ಥಂಬ್ಸ್ ಅಪ್, ಕೋಲಾದಂತಹ ತಂಪು ಪಾನೀಯಗಳನ್ನ ಕುಡಿಯುವುದು ತಪ್ಪಿಸಿ. ಇವು ನಾಲಗೆಗೆ ರುಚಿ ಎನಿಸಿದರೂ ನಿಮ್ಮ ಹೊಟ್ಟೆಗೆ ತುಂಬಾ ಕಷ್ಟಕೊಡುವ ಆಹಾರಗಳು. ಪ್ರತಿದಿನ ರಾತ್ರಿ ಇಂಥ ಆಹಾರ ತಿನ್ನುವುದರಿಂದ ನಿಮ್ಮ ನಿದ್ರೆಗೂ ಭಂಗ, ಆರೋಗ್ಯವೂ ಹಾಳು. ಹೀಗಾಗಿ ಇವುಗಳನ್ನು ರಾತ್ರಿವೇಳೆ ತಿನ್ನಲೇಬೇಡಿ, ಬದಲಾಗಿ ಮನೆಯಲ್ಲೇ ತಯಾರಿಸಿದ ಫ್ರೆಶ್ ಆಗಿರುವ ಬಿಸಿಬಿಸಿಯಾದ ಆರೋಗ್ಯಕರವಾಗಿ ಊಟ ಒಳ್ಳೆದು. ಊಟದ ಬಳಿಕ ತಕ್ಷಣ ಮಲಗುವುದು ತಪ್ಪಿಸಿ. ಸುಮಾು ಇಪ್ಪತ್ತು ಮೂವತ್ತು ನಿಮಿಷ, ಮನೆಯಂಗಳದಲ್ಲಿ ವಾಕಿಂಗ್ ಮಾಡಿ ನಂತರ ಮಲಗುವ ಅಭ್ಯಾಸ ರೂಢಿಸಿಕೊಳ್ಳಿ.

ಈ ಅಭ್ಯಾಸಗಳನ್ನೂ ಬದಲಾಯಿಸಿ..

ನೀವು ಆರೋಗ್ಯವಾಗಿರಬೇಕು ಎಂಬ ಆಸೆಯಿದ್ದರೆ ಕೇವಲ ರಾತ್ರಿ ಊಟದ ಸರಿಯಿದ್ದರೆ ಸಾಲದು, ಸಮಯಕ್ಕೆ ಸರಿಯಾಗಿ ತಿನ್ನುವ ಅಭ್ಯಾಸ ರೂಡಿಸಿಕೊಳ್ಳಿ. ಬೆಳಗ್ಗೆ ತಿನ್ನವುದು ಮಧ್ಯಾಹ್ನಕ್ಕೆ, ಮಧ್ಯಾಹ್ನದ ಊಟ ಸಂಜೆಗೆ, ರಾತ್ರಿಯ ಊಟ ಮಧ್ಯರಾತ್ರಿಗೆ ಈ ರೀತಿ ಮನಸಿಗೆ ಬಂದ ಸಮಯಕ್ಕೆ ಊಟ ಮಾಡುವ ಅಭ್ಯಾಸ ಒಳ್ಳೆಯದಲ್ಲ. ಸರಿಯಾದ ಸಮಯಕ್ಕೆ ಊಟ ಮಾಡುವುದು ರೂಢಿಸಿಕೊಳ್ಳಿ. ಇದರಿಂದ ಸರಿಯಾದ ಸಮಯಕ್ಕೆ ಊಟ, ಮತ್ತು ಪ್ರೋಟೀನ್ ಭರಿತ ಆಹಾರ ಸೇವನೆಯಿಂದ ದೀರ್ಘಕಾಲ ಆರೋಗ್ಯದಿಂದಿರಲು ಸಾಧ್ಯ ಎನ್ನುತ್ತಾರೆ ತಜ್ಞರು

ಗಮನಿಸಿ: ಈ ಲೇಖನದಲ್ಲಿ ತಿಳಿಸಲಾದ ಮಾಹಿತಿ, ವಿವಿಧ ಆರೋಗ್ಯ ನಿಯತಕಾಲಿಕೆಗಳಲ್ಲಿ ತಜ್ಞರು ಹಂಚಿಕೊಂಡಿರುವ ಮಾಹಿತಿಯನ್ನಾಧರಿಸಿದೆ. ಇದು ಕೇವಲ ಪ್ರಾಥಮಿಕ ಮಾಹಿತಿಗಾಗಿ ಹೊರತು ವೃತ್ತಿಪರ ವೈದ್ಯಕೀಯ ಸಲಹೆಯಾಗಲಿ, ರೋಗ್ಯನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಲ್ಲ. ನಿಮಗೆ ಯಾವುದೇ ಆರೋಗ್ಯ ಸಮಸ್ಯೆಗಳಿದ್ದಲ್ಲಿ, ಡಯೆಟ್ ಮಾಡಲು ಬಯಸಿದ್ದಲ್ಲಿ ವೈದ್ಯರ ಸಲಹೆ ಪಡೆದು ಮುಂದುವರಿಯಿರಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದಿನಾ ಹಾಲು ಕುಡಿದರೂ ಈ ವಿಚಾರ ಬಹುತೇಕರಿಗೆ ಗೊತ್ತಿಲ್ಲ.. ಹಸು vs ಎಮ್ಮೆ ಹಾಲಿನಲ್ಲಿ ಯಾವುದು ಬೆಸ್ಟ್?
ಹಾಸಿಗೆಯಲ್ಲಿ ತಿಗಣೆ ಕಾಟವನ್ನು ಇಗ್ನೋರ್ ಮಾಡ್ಬೇಡಿ… ಗಂಭೀರ ಕಾಯಿಲೆ ಬರಬಹುದು ಜೋಕೆ!