Dharmendra Pratap Singh: ಎತ್ತರದ ಧರ್ಮೇಂದ್ರ: ಸೊಂಟ ಬಾಗಿತು, ಆರೋಗ್ಯ ಸಮಸ್ಯೆ ಹೆಚ್ಚಿತು!

By Suvarna News  |  First Published Mar 11, 2023, 3:46 PM IST

ಎತ್ತರವಿದ್ದರೆ ಚೆಂದ ಎನ್ನುವ ಭಾವನೆ ಎಲ್ಲರಲ್ಲೂ ಇದೆ. ಅದು ಒಂದು ಮಿತಿ ಮಾತ್ರ. ತೀರ ಎತ್ತರವಿದ್ದರೆ ಸಮಸ್ಯೆಯೇ ಹೆಚ್ಚು. ಅದು ಭಾರತದ ಅತಿ ಎತ್ತರದ ವ್ಯಕ್ತಿ ಎನಿಸಿಕೊಂಡಿರುವ ಧರ್ಮೇಂದ್ರ ಪ್ರತಾಪ್ ಅನುಭವ. 
 


ವ್ಯಕ್ತಿಯ ಉದ್ದ ಹೆಚ್ಚೆಂದರೆ ಎಷ್ಟಿರಬಹುದು? 6 ಅಡಿ ಇದ್ದರೆ ದಕ್ಷಿಣ ಭಾರತದಲ್ಲಿ ಸಾಕಷ್ಟು ಎತ್ತರ ಎಂದು ಭಾವಿಸುತ್ತೇವೆ. ಅದಕ್ಕೂ ಹೆಚ್ಚಿದ್ದರೆ ಎಲ್ಲರ ನಡುವೆ ಸ್ವಲ್ಪ ಎತ್ತರವಾಗಿ ಕಾಣಿಸಬಹುದು. 7 ಅಡಿ ಇದ್ದರಂತೂ ಖಂಡಿತವಾಗಿ ಅದು ಹೆಚ್ಚಿನ ಎತ್ತರವೇ. ಎಲ್ಲರ ನಡುವೆ ಎದ್ದು ಕಾಣುತ್ತಾರೆ. ಆದರೆ, ವಿಶ್ವದ ಅತಿ ಉದ್ದದ ವ್ಯಕ್ತಿಗಳು ಎನಿಸಿಕೊಂಡಿರುವವರು ಇನ್ನೂ ಎತ್ತರ ಇರುತ್ತಾರೆ. ಅವರ ಪೈಕಿ ಭಾರತದ ಧರ್ಮೇಂದ್ರ ಪ್ರತಾಪ್ ಸಿಂಗ್ ಅವರೂ ಒಬ್ಬರು. ಇವರು ಬರೋಬ್ಬರಿ 8 ಅಡಿ 1 ಇಂಚು ಉದ್ದ ಇದ್ದಾರೆ. ಪ್ರಸ್ತುತ ಉತ್ತರ ಪ್ರದೇಶದಲ್ಲಿ ವಾಸವಾಗಿರುವ ಇವರು ಭಾರತದ ಅತಿ ಎತ್ತರದ ವ್ಯಕ್ತಿ ಎನಿಸಿದ್ದಾರೆ. ಹಾಗೂ ಈ ಕಾರಣಕ್ಕಾಗಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಅನ್ನೂ ಸೇರ್ಪಡೆಯಾಗಿದ್ದಾರೆ. ಆದರೆ, ಎತ್ತರದ ವ್ಯಕ್ತಿ ಎನ್ನುವುದು ಹೆಗ್ಗಳಿಕೆಗೆ ಮಾತ್ರ. ಏಕೆಂದರೆ, ಅದರಿಂದ ಸಮಸ್ಯೆಯನ್ನೇ ಹೆಚ್ಚು ಅನುಭವಿಸಿದ್ದಾರೆ. ಅವರಿಗೀಗ ಕೇವಲ 41 ವರ್ಷ. ಆದರೆ, ವೃದ್ಧರಂತೆ ಕಾಣಿಸುತ್ತಾರೆ. ಏಕೆಂದರೆ, ಎತ್ತರದ ವ್ಯಕ್ತಿಗಳು ಅನುಭವಿಸುವ ಹಲವು ಆರೋಗ್ಯ ಸಮಸ್ಯೆಗಳು ಇವರನ್ನೂ ಕಾಡುತ್ತಿವೆ. 

ಧರ್ಮೇಂದ್ರ ಪ್ರತಾಪ್ ಸಿಂಗ್ (Dharmendra Pratap Singh) ಉತ್ತರ ಪ್ರದೇಶದ (Uttar Pradesh) ಪ್ರತಾಪ್ ಗಢ ಜಿಲ್ಲೆಯ ನರ್ಹಾರ್ಪುರ್ ಕಾಸಿಯಾಲಿ ಎನ್ನುವ ಗ್ರಾಮದಲ್ಲಿ (Village) ವಾಸಿಸುತ್ತಾರೆ. ಎತ್ತರದ (Height) ಕಾರಣಕ್ಕೆ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ನಲ್ಲೂ ಇವರ ಹೆಸರಿದೆ. ಹಿಂದೊಮ್ಮೆ ಇವರು ಸಮಾಜವಾದಿ ಪಕ್ಷಕ್ಕೂ ಸೇರ್ಪಡೆಯಾಗಿ ಸುದ್ದಿ ಮಾಡಿದ್ದರು. ಇವರಿಗೆ ಇಬ್ಬರು ಸಹೋದರಿಯರು ಮತ್ತು ಇಬ್ಬರು ಸಹೋದರರಿದ್ದಾರೆ. 

Tap to resize

Latest Videos

undefined

Health Tips : ಮನೆ ಕೆಲಸ ಮಾಡಿದರೆ ಸಾಕು, ಮಹಿಳೆಯರು ಫಿಟ್ ಆಗಿರ್ತಾರೆ ನೋಡಿ

ಎತ್ತರದಿಂದೇನೂ ಪ್ರಯೋಜನವಿಲ್ಲ!: ಒಮ್ಮೆ ಧರ್ಮೇಂದ್ರ ಪ್ರತಾಪ್ ಅವರೇ ಹೇಳಿದಂತೆ, ಹೆಚ್ಚು ಎತ್ತರ ಇರುವುದು ಕೇವಲ ಖ್ಯಾತಿ (Popularity) ಮಾತ್ರ. ಅದರಿಂದ ಏನೂ ಪ್ರಯೋಜನವಿಲ್ಲ. ಅಷ್ಟಕ್ಕೂ ಹೆಚ್ಚು ಎತ್ತರ ಆರೋಗ್ಯಕ್ಕೆ (Health) ಹಿನ್ನಡೆಯನ್ನೇ ಒಡ್ಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು. ಅವರ ಜೀವನದಲ್ಲಿ (Life) ಅದು ನಿಜವಾಗಿದೆ. ಅಷ್ಟೇ ಅಲ್ಲ. ಅವರನ್ನು ಮದುವೆಯಾಗಲು (Marriage) ಯಾರೂ ಇಷ್ಟಪಟ್ಟಿರಲಿಲ್ಲ. ಹಾಗೂ ಎಲ್ಲೂ ಉದ್ಯೋಗವೂ (Job) ದೊರೆತಿರಲಿಲ್ಲ. ಸಾಮಾನ್ಯ ಕಚೇರಿ ಹಾಗೂ ಕಟ್ಟಡದ ಒಳಗೆ ಪ್ರವೇಶಿಸಲು ಅವರು ತೀರ ಬಗ್ಗಬೇಕಾಗುತ್ತದೆ. ಹೀಗಾಗಿ, ಕೆಲಸ ಕೊಡುವವರೇ ಹಿಂದೇಟು ಹಾಕಿದ್ದರಂತೆ. ಧರ್ಮೇಂದ್ರ ಅವರು ಮಾಸ್ಟರ್ ಡಿಗ್ರಿ ಪಡೆದಿದ್ದಾರೆ. 

ಅಪಘಾತದ ಬಳಿಕ ಆರೋಗ್ಯ ಹಾಳಾಯ್ತು: ತಮ್ಮೊಂದಿಗೆ ಫೋಟೊ (Photo)ತೆಗೆಸಿಕೊಳ್ಳುವವರಿಗೆ ಅವರು ಅನುಮತಿ ನೀಡುತ್ತಾರೆ. ಅದಕ್ಕೇನೂ ಅವರಿಗೆ ಬೇಸರವಿಲ್ಲ. 2013ರಲ್ಲಿ ಅವರು ಅಪಘಾತಕ್ಕೆ (Accident) ಒಳಗಾಗಿದ್ದರು. ಆ ಬಳಿಕ ತೀವ್ರ ಸಮಸ್ಯೆಗೆ ತುತ್ತಾಗಿದ್ದಾರೆ. 2019ರಲ್ಲಿ ಹಿಪ್ (Hip) ರಿಪ್ಲೇಸ್ ಮೆಂಟ್ ಕೂಡ ಆಗಿದೆ. ಹೀಗಾಗಿ, ಇಷ್ಟು ಚಿಕ್ಕ ವಯಸ್ಸಿಗೇ ಅವರು ವಯಸ್ಸಾದವಂತೆ ಕಾಣುತ್ತಾರೆ. ಬೆನ್ನು ಬಾಗಿದ್ದು, ಸೊಂಟದಲ್ಲಿ ಬಲವಿಲ್ಲದಂತೆ ಆಗಿದೆ. 

ಬೆಳಗ್ಗೆ ಎದ್ದ ಮೇಲೆ ಮತ್ತೆ ಮಲಗಬೇಕೆನಿಸಿದರೆ, ಈ ರೋಗವಿರಬಹುದು!

ಎತ್ತರದವರ ಆರೋಗ್ಯ ಸೂಕ್ಷ್ಮ: ನಿಮಗೆ ಗೊತ್ತೇ? ತೀರ ಎತ್ತರ ಇರುವವರು ಹಲವು ಆರೋಗ್ಯದ ಸಮಸ್ಯೆಗಳನ್ನು (Problems) ಸಾಮಾನ್ಯವಾಗಿ ಎದುರಿಸುತ್ತಾರೆ. ಅವರಲ್ಲಿ ರಕ್ತದ ಹೆಪ್ಪುಗಟ್ಟುವ (Blood Clot) ಸಮಸ್ಯೆ ಹೆಚ್ಚಿರುತ್ತದೆ. ಹೃದಯದ ಬಡಿತ (Heart Beat) ನಿಯಮಿತವಾಗಿರುವುದಿಲ್ಲ. ನರಗಳಿಗೆ ಸಂಬಂಧಿಸಿದ ಸಮಸ್ಯೆಯಂತೂ ಅತಿ ಸಾಮಾನ್ಯವಾಗಿರುತ್ತದೆ. ಕೈಕಾಲುಗಳಲ್ಲಿ ನರಗಳ (Nerves) ಸಮಸ್ಯೆ ಅಧಿಕವಾಗಿರುತ್ತದೆ. ಹಾಗೆಯೇ, ಬೆನ್ನುಹುರಿ, ಸೊಂಟದ ಭಾಗದಲ್ಲೂ ಮೂಳೆ ಸಮಸ್ಯೆ ಕಂಡುಬರಬಹುದು. ಎತ್ತರ ಇರುವವರಲ್ಲಿ ಕ್ಯಾನ್ಸರ್ ಕೂಡ ಹೆಚ್ಚು ಎಂದು ಲ್ಯಾನ್ಸೆಟ್ ಅಧ್ಯಯನ ಹೇಳಿದೆ. ಆದರೆ, ಒಂದು ಅನುಕೂಲವೆಂದರೆ, ಎತ್ತರದ ಜನರಲ್ಲಿ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಡಿಮೆ ಎಂದು ಹೇಳಲಾಗುತ್ತದೆ. ಇತ್ತೀಚಿನ ಲ್ಯಾನ್ಸೆಟ್ ಅಧ್ಯಯನದ ಪ್ರಕಾರ, ಹೃದಯ ಸಮಸ್ಯೆ ಹಾಗೂ ಮಧುಮೇಹದ ತೊಂದರೆಗಳು ಕಡಿಮೆ. 

click me!