ಮಲಗುವಾಗ ಸಾಮಾನ್ಯವಾಗಿ ತಲೆಯ ಕೆಳಗೆ ದಿಂಬನ್ನು ಇಟ್ಟುಕೊಳ್ಳುವುದು ಸಾಮಾನ್ಯ. ಆದರೆ ಇನ್ನು ಕೆಲವರು ಕಾಲಿನ ಕೆಳಗೆ ದಿಂಬನ್ನು ಇಟ್ಟು ಮಲಗುತ್ತಾರೆ. ಈ ರೀತಿ ಮಾಡೋದ್ರಿಂದ ಆರೋಗ್ಯಕ್ಕೇನು ಪ್ರಯೋಜನ. ಇಲ್ಲಿದೆ ಕೆಲವೊಂದು ಮಾಹಿತಿ.
ಸಾಮಾನ್ಯವಾಗಿ ಎಲ್ಲರೂ ಮಲಗುವಾಗ ತಲೆಯ ಕೆಳಗೆ ತಲೆದಿಂಬನ್ನು ಇಟ್ಟುಕೊಳ್ಳುತ್ತಾರೆ. ದಿಂಬನ್ನು ತಲೆಯ ಕೆಳಗೆ ಇಟ್ಟುಕೊಳ್ಳುವುದು ಹಲವಾರು ಪ್ರಯೋಜನಗಳನ್ನು ಹೊಂದಿದೆ. ಹಾಗೆಯೇ ಕಾಲಿನ ಕೆಳಗೆ ಪಿಲ್ಲೋ ಇಟ್ಟುಕೊಳ್ಳೋದ್ರಿಂದಾನೂ ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ. ಕೆಲವೊಬ್ಬರು ಕಾಲು ಊತದ ಸಮಸ್ಯೆ ಕಂಡು ಬಂದಾಗ, ಕಾಲು ನೋವು ಬಂದಾಗ ಕಾಲುಗಳ ಕೆಳಗೆ ದಿಂಬನ್ನು ಇಟ್ಟುಕೊಂಡು ಮಲಗುತ್ತಾರೆ. ಆದರೆ ಇದಲ್ಲದೆ ಸಾಮಾನ್ಯ ದಿನಗಳಲ್ಲೂ ನಿಮ್ಮ ಪಾದದ ಕೆಳಗೆ ದಿಂಬನ್ನು ಇಟ್ಟುಕೊಂಡು ಮಲಗುವುದು ನಿಮಗೆ ನಿರಾಳವಾಗಿರುವುದಲ್ಲದೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಕಾಲುಗಳ ಕೆಳಗೆ ದಿಂಬನ್ನು ಇಟ್ಟುಕೊಂಡು ಮಲಗುವುದರಿಂದ ಸಿಗುವ ಪ್ರಯೋಜನಗಳು
ಪಾದದ ಕೆಳಗೆ ದಿಂಬು (Pillow) ಇಟ್ಟು ಮಲಗುವ ಅಭ್ಯಾಸ (Habit) ಬೆನ್ನು ನೋವನ್ನು ಕಡಿಮೆ ಮಾಡುತ್ತದೆ, ಇದು ನಿದ್ರೆ (Sleep)ಯಲ್ಲಿ ಉಸಿರುಕಟ್ಟಿಕೊಳ್ಳುವ ಸಾಧ್ಯತೆಯನ್ನು ಇಲ್ಲವಾಗಿಸುತ್ತದೆ. ಈ ರೀತಿ ಪಿಲ್ಲೋ ಇಟ್ಟು ಮಲಗುವ ಅಭ್ಯಾಸ ರಕ್ತ ಪರಿಚಲನೆ ಸುಧಾರಿಸುತ್ತದೆ. ನಿಮ್ಮ ಕಾಲುಗಳ ಕೆಳಗೆ ದಿಂಬನ್ನು ಇಡುವುದರಿಂದ ಸ್ವಲ್ಪ ಎತ್ತರವು ವೆನಾ ಕ್ಯಾವಾ ಮೂಲಕ ರಕ್ತದ ಹರಿವನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ, ಇದು ಹೃದಯ ಮತ್ತು ಬೆನ್ನಿಗೆ ರಕ್ತವನ್ನು ಸಾಗಿಸುವ ಪ್ರಮುಖ ರಕ್ತನಾಳವಾಗಿದೆ.
Good Sleeping Position: ಕತ್ತು, ಭುಜದ ನೋವಾ? ಯಾವ ಭಂಗಿಯಲ್ಲಿ ಮಲಗ್ತೀರಿ?
ಪಾದಗಳ ಊತ ಕಡಿಮೆಯಾಗುತ್ತದೆ: ಕಾಲುಗಳ ಕೆಳಗೆ ದಿಂಬನ್ನು ಇಟ್ಟುಕೊಂಡು ಮಲಗುವುದರಿಂದ ವ್ಯಕ್ತಿಯ ದೇಹದ ಮೇಲಿನ ಹೊರೆ ಬಹಳ ಮಟ್ಟಿಗೆ ಕಡಿಮೆಯಾಗುತ್ತದೆ. ಇದರರ್ಥ ಇಡೀ ದೇಹವು (Body) ತೂಕವನ್ನು ಸಮಾನವಾಗಿ ತೆಗೆದುಕೊಳ್ಳುತ್ತದೆ. ಹೀಗೆ ಮಲಗುವುದರಿಂದ ಪಾದಗಳ ಊತವೂ ಕಡಿಮೆಯಾಗುತ್ತದೆ. ಸೊಂಟದ ಮೇಲಿನ ಭಾರವನ್ನು ಕಡಿಮೆ ಮಾಡುತ್ತದೆ. ಇದು ಬೆನ್ನು ನೋವಿ (Backpain)ನಿಂದ ಪರಿಹಾರವನ್ನು ನೀಡುತ್ತದೆ.
ರಕ್ತ ಪರಿಚಲನೆ ಸರಿಯಾಗುತ್ತದೆ: ಪಾದಗಳಿಗೆ ರಕ್ತ ಸಂಚಾರ (Blood circulation) ಚೆನ್ನಾಗಿ ಆಗಬೇಕು. ಇದು ಸಂಭವಿಸದಿದ್ದರೆ, ಪಾದಗಳು ನೋವುಂಟುಮಾಡುತ್ತವೆ. ಇದು ಉರಿಯೂತವನ್ನು ಸಹ ಉಂಟುಮಾಡುತ್ತದೆ. ಆದರೆ ಪಾದದ ಕೆಳಗೆ ದಿಂಬನ್ನು ಇಟ್ಟರೆ ರಕ್ತ ಸಂಚಾರ ಸರಿಯಾಗಿ ಆಗುತ್ತದೆ. ಇದು ಪಾದಗಳ ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ. ಹಾಗಾಗಿಯೇ ಇಂತಹ ಸಮಸ್ಯೆ ಇರುವವರು ದಿನವೂ ಕಾಲಿನ ಕೆಳಗೆ ದಿಂಬನ್ನು ಇಟ್ಟುಕೊಂಡು ಮಲಗಬೇಕು. ಇದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.
ಒಂದು ಕಾಲನ್ನು ಕಂಬಳಿಯಿಂದ ಹೊರಗಿಟ್ಟು ಮಲಗಿದ್ರೆ ಸೊಂಪಾಗಿ ನಿದ್ರೆ ಬರುತ್ತಾ?
ಕುತ್ತಿಗೆಯ ಮೇಲೆ ಒತ್ತಡ ಬೀಳುವುದಿಲ್ಲ: ಪಾದದ ಕೆಳಗೆ ದಿಂಬು ಇಟ್ಟುಕೊಂಡು ಮಲಗುವುದು ಒಳ್ಳೆಯದು, ಆದರೆ ತಲೆಯ ಕೆಳಗೆ ದಿಂಬನ್ನು ಬಳಸುವುದು ಅಷ್ಟು ಒಳ್ಳೆಯದಲ್ಲ. ತಲೆಯ ಕೆಳಗೆ ಕುತ್ತಿಗೆಯ (Neck) ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಇದು ಬೆಳಗ್ಗೆ ಏಳುವಾಗ ಕೆಲವೊಬ್ಬರಲ್ಲಿ ಕುತ್ತಿಗೆ ನೋವಿಗೂ ಕಾರಣವಾಗುತ್ತದೆ. ಸರಿಯಾದ ದಿಂಬನ್ನು ಬಳಸದಿದ್ದರೆ ಬೆನ್ನು ನೋವು ಕೂಡ ಬರುತ್ತದೆ.
ಮೊಡವೆ ಸಮಸ್ಯೆ ಕಾಡಲ್ಲ: ದಿಂಬಿನ ಮೇಲೆ ಒಂದು ಬದಿಯಲ್ಲಿ ಮಲಗುವುದರಿಂದ ಮುಖದ ಚರ್ಮಕ್ಕೆ ಹಾನಿಯಾಗುತ್ತದೆ. ಎಣ್ಣೆ, ಜಿಡ್ಡು, ಕೊಳೆ ಸೇರಿದ ದಿಂಬಿಗೆ ಮುಖ ಒರೆಸುವುದರಿಂದ ಇದು ಮೊಡವೆಗೆ ಕಾರಣವಾಗುತ್ತದೆ. ಮಾತ್ರವಲ್ಲ ಕೂದಲು ಸಹ ಹಾನಿಗೊಳಗಾಗುತ್ತದೆ. ಆದರೆ ಕಾಲಿನ ಕೆಳಗೆ ದಿಂಬು ಇಡುವುದರಿಂದ ಈ ಯಾವುದೇ ಸಮಸ್ಯೆ ಕಾಡುವುದಿಲ್ಲ. ಹೀಗಾಗಿ ಇನ್ಮುಂದೆ ತಲೆ ಕೆಳಗೆ ದಿಂಬಿಟ್ಟು ಮಲಗುವ ಬದಲಿಗೆ ಕಾಲಿನ ಕೆಳಗೆ ದಿಂಬಿಟ್ಟು ಮಲಗುವ ಅಭ್ಯಾಸ ರೂಢಿಸಿಕೊಳ್ಳಿ.