ಕಣ್ಣು ನಮ್ಮ ದೇಹದ ಪ್ರಮುಖ ಅಂಗ. ಹಾಗೆಯೇ ನಮ್ಮನ್ನು ಆಕರ್ಷಿಸುವ ಅಂಗ ಕೂಡ ಹೌದು. ಕಣ್ಣಿನ ಅಂದ ಹಾಳಾದ್ರೆ ಮುಖದ ಅಂದ ಹಾಳಾಗುತ್ತದೆ. ಕಣ್ಣಿನ ಕೆಳಗೆ ಕಾಣುವು ಪಿಗ್ಮೆಂಟೇಶನ್ ಗೆ ಮನೆ ಮದ್ದಿದೆ.
ಮಹಿಳೆಯರ ಸೌಂದರ್ಯಕ್ಕೆ ಪಿಗ್ಮೆಂಟೇಶನ್ ಒಂದು ದೊಡ್ಡ ಅಡ್ಡಿ. ಹೇಳದೆ ಕೇಳದೆ ಬರುವ ಅತಿಥಿ ಈ ಪಿಗ್ಮೆಂಟೇಶನ್. ಕೆನ್ನೆ, ಮೂಗು, ಕಣ್ಣಿನ ಕೆಳಭಾಗದಲ್ಲಿ ಎಲ್ಲಾದ್ರೂ ಇದು ಕಾಣಿಸಿಕೊಳ್ಳುತ್ತದೆ. ಈ ಪಿಗ್ಮೆಂಟೇಶನ್ ಒಮ್ಮೆ ಬಂದ್ರೆ ಮತ್ತೆ ಹೋಗೋದು ಬಹಳ ಕಷ್ಟ. ಚರ್ಮದಲ್ಲಿ ಮೆಲಿನನ್ ಹೆಚ್ಚಾದಾಗ ಈ ಕಲೆಗಳು ಕಾಣಿಸಿಕೊಳ್ಳಲು ಶುರುವಾಗುತ್ತವೆ. ನಿಮ್ಮ ಕಣ್ಣಿನ ಕೆಳಗೆ ನಸುಕಂದು ಬಣ್ಣದ ಮಚ್ಚೆಗಳು ಮೂಡಿದ್ದು, ಅವು ನಿಮ್ಮ ಅಂದವನ್ನು ಹಾಳು ಮಾಡಿದ್ದರೆ ಚಿಂತಿಸುವ ಅಗತ್ಯವಿಲ್ಲ. ಮನೆ ಮದ್ದು ಬಳಸು ಮೂಲಕ ಸುಲಭವಾಗಿ ಈ ಪಿಗ್ಮೆಂಟೇಶನ್ ಸಮಸ್ಯೆಯಿಂದ ಹೊರ ಬರಬಹುದು.
ಕಣ್ಣಿ (Eye) ನ ಭಾಗ ಯಾವಾಗ್ಲೂ ಆಕರ್ಷಕವಾಗಿರಬೇಕು. ಆದ್ರೆ ಈ ಕಲೆಗಳು ಮುಖ ವಯಸ್ಸಾದಂತೆ ಕಾಣಲು ಕಾರಣವಾಗುತ್ತವೆ. ಕಣ್ಣಿನ ಹೊಳಪಿಗೆ ಅಡ್ಡಿಯಾಗುತ್ತದೆ. ತೆಂಗಿನ ಎಣ್ಣೆ (Coconut Oil) ಆರೋಗ್ಯ ಮತ್ತು ಸೌಂದರ್ಯ (Beauty) ಎರಡಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಚರ್ಮ (Skin) ದ ಮೇಲಿನ ನಸುಕಂದು ಮಚ್ಚೆಗಳನ್ನು ತೆಗೆದುಹಾಕಲು ತೆಂಗಿನ ಎಣ್ಣೆ ಬಳಸಬಹುದು. ನಿಮ್ಮ ಕಣ್ಣಿನ ಕೆಳಗೆ ಕಲೆಯಿದ್ರೆ ಕೆಲ ವಿಧಾನದ ಮೂಲಕ ತೆಂಗಿನ ಎಣ್ಣೆಯನ್ನು ಬಳಸಿ ಪಿಗ್ಮೆಂಟೇಶನ್ ಕಲೆಯನ್ನು ಕಡಿಮೆ ಮಾಡಬಹುದು.
ಕೊಬ್ಬು ಹೆಚ್ಚಿರೋರಿಗೆ ಈ ಆ್ಯಪಲ್ ವಿನೆಗರ್ ಬೆಸ್ಟ್ ಮೆಡಿಸನ್!
undefined
ಕಣ್ಣಿನ ಪಿಗ್ಮೆಂಟೇಶನ್ (Pigmentation) ಗೆ ತೆಂಗಿನ ಎಣ್ಣೆ ಚಿಕಿತ್ಸೆ :
ತೆಂಗಿನ ಎಣ್ಣೆ ಮತ್ತು ಬಾದಾಮಿ ಎಣ್ಣೆ : ಅರ್ಧ ಚಮಚ ತೆಂಗಿನ ಎಣ್ಣೆ ಮತ್ತು ಅರ್ಧ ಚಮಚ ಬಾದಾಮಿ ಎಣ್ಣೆ ಇದಕ್ಕೆ ಬೇಕಾಗುತ್ತದೆ. ತೆಂಗಿನೆಣ್ಣೆ ಮತ್ತು ಬಾದಾಮಿ ಎಣ್ಣೆಯನ್ನು ಮಿಕ್ಸ್ ಮಾಡಿ ಅದನ್ನು ಕಣ್ಣಿಗೆ ಹಚ್ಚಬೇಕು. ಐದು ನಿಮಿಷಗಳ ಕಾಲ ಬೆರಳುಗಳ ಸಹಾಯದಿಂದ ಕಣ್ಣುಗಳ ಕೆಳಗೆ ಮಸಾಜ್ ಮಾಡಬೇಕು. ಪ್ರತಿ ರಾತ್ರಿ ಮಲಗುವ ಮುನ್ನ ಹೀಗೆ ಮಾಡಿದರೆ ನಸುಕಂದು ಮಚ್ಚೆಗಳು ಕಡಿಮೆಯಾಗುತ್ತದೆ. ಬಾದಾಮಿ ಎಣ್ಣೆ ವಯಸ್ಸನ್ನು ಮುಚ್ಚಿಡುವ ಗುಣ ಹೊಂದಿದೆ.
ತೆಂಗಿನ ಎಣ್ಣೆ ಮತ್ತು ಅಲೋವೆರಾ ಜೆಲ್ : ಒಂದು ಚಮಚ ತೆಂಗಿನ ಎಣ್ಣೆ ಮತ್ತು ಒಂದು ಚಮಚ ಅಲೋವೆರಾ ಜೆಲ್ ತೆಗೆದುಕೊಳ್ಳಿ. ಅಲೋವೆರಾ ಜೆಲ್ ಅನ್ನು ತೆಂಗಿನ ಎಣ್ಣೆಯಲ್ಲಿ ಬೆರೆಸಿ ಕಣ್ಣಿನ ಸುತ್ತ ಹಚ್ಚಿಕೊಳ್ಳಿ. ರಾತ್ರಿಯಿಡಿ ಎಣ್ಣೆಯನ್ನು ಹಾಗೆಯೇ ಬಿಡಿ. ಅಲೋವೆರಾ ಜೆಲ್ ಚರ್ಮವನ್ನು ಬಿಗಿಗೊಳಿಸುತ್ತದೆ ಮತ್ತು ಚರ್ಮದ ಮೇಲಿನ ಕಲೆಗಳನ್ನು ಹಗುರಗೊಳಿಸುತ್ತದೆ. ಇದು ನಿಮ್ಮ ಕಣ್ಣಿನ ಕಪ್ಪು ವರ್ತುಲಗಳನ್ನು ಸಹ ಕಡಿಮೆ ಮಾಡುತ್ತದೆ.
Morning Sunlight: ಬೆಳಗ್ಗಿನ ಬಿಸಿಲಿಗೆ ಒಡ್ಡಿಕೊಳ್ಳುವುದರಿಂದ ಮೆದುಳು ಚುರುಕಾಗುತ್ತೆ
ತೆಂಗಿನ ಎಣ್ಣೆ ಮತ್ತು ಹಸಿ ಹಾಲು : ಅರ್ಥ ಚಮಚ ತೆಂಗಿನ ಎಣ್ಣೆ ಮತ್ತು ಅರ್ಧ ಚಮಚ ಹಸಿ ಹಾಲು. ತೆಂಗಿನ ಎಣ್ಣೆ ಮತ್ತು ಹಸಿ ಹಾಲನ್ನು ಸರಿಯಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಕಣ್ಣುಗಳ ಕೆಳಗೆ ಮಸಾಜ್ ಮಾಡಿ. ಸ್ವಲ್ಪ ಸಮಯದ ನಂತರ ಶುದ್ಧ ನೀರಿನಿಂದ ಕಣ್ಣುಗಳನ್ನು ಸ್ವಚ್ಛಗೊಳಿಸಿ. ಇದರ ನಂತರ ಕಣ್ಣಿನ ಕೆಳಗೆ ಕೆನೆ ಹಚ್ಚಿ ರಾತ್ರಿಯಿಡಿ ಹಾಗೆ ಬಿಡಿ. ಇದನ್ನು ಪ್ರತಿದಿನ ಮಾಡಬೇಕು. ಇದು ನಿಮ್ಮ ಕಣ್ಣುಗಳ ಕೆಳಗೆ ನಸುಕಂದು ಮಚ್ಚೆಗಳು ಮಾಯವಾಗುವುದಲ್ಲದೆ ಕಣ್ಣಿನ ಕೆಳಭಾಗ ಹೊಳಪು ಪಡೆಯುತ್ತದೆ. ತೆಂಗಿನ ಎಣ್ಣೆಯಲ್ಲಿ ಪ್ರೋಟೀನ್ ಇದೆ. ತೆಂಗಿನೆಣ್ಣೆಯು ತ್ವಚೆಯ ಮೇಲಿರುವ ಸತ್ತ ಚರ್ಮದ ಕೋಶಗಳನ್ನು ಸಹ ತೆಗೆದುಹಾಕುತ್ತದೆ. ತೆಂಗಿನ ಎಣ್ಣೆ ಚರ್ಮದಲ್ಲಿನ ತೇವಾಂಶದ ಕೊರತೆಯನ್ನು ನೀಗಿಸುತ್ತದೆ. ಇದು ಚರ್ಮಕ್ಕೆ ಹೊಳಪು ನೀಡುತ್ತದೆ. ಇದಲ್ಲದೆ ತೆಂಗಿನೆಣ್ಣೆ ಉತ್ತಮ ಮೇಕಪ್ ರಿಮೂವರ್ ಆಗಿದೆ. ತೆಂಗಿನ ಎಣ್ಣೆಯು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ಚರ್ಮದ ಉರಿಯೂತವನ್ನು ಕಡಿಮೆ ಮಾಡುತ್ತದೆ.