ಒಳ್ಳೆಯ ಆರೋಗ್ಯ ನಿಮ್ಮದಾಗಬೇಕೆಂದರೆ ಬೆಣ್ಣಿ ತಿನ್ನಿ

By Suvarna NewsFirst Published Jul 7, 2022, 6:39 PM IST
Highlights

ಸಾಫ್ಟ್ ನೈಸ್ ಟೆಕ್ಸಚರ್(Texture), ನೋಡಲು ಚೆಂದ, ತಿಂದರೆ ಬಲು ಆನಂದ. ಕೈನಲ್ಲಿ, ಬಾಯಲ್ಲಿಟ್ಟರೆ ಸಾಕು ಕರಗಿ(Melt) ನೀರಾಗುವ ಬೆಣ್ಣೆ(Butter) ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಕೃಷ್ಣನೂ(Lord Krishna) ಸಹ ಬೆಣ್ಣೆಯನ್ನು ಕದ್ದು ಮುಚ್ಚಿ ತಿನ್ನುತ್ತಿದ್ದ. ದೋಸೆ(Dosa), ರೊಟ್ಟಿ(Roti) ಜೊತೆ ಬೆಣ್ಣೆ ತಿಂದರೆ ಅದರ ರುಚಿ(Taste) ಮತ್ತಷ್ಟು ಇಮ್ಮಡಿಗೊಳ್ಳುತ್ತದೆ. ಬೆಣ್ಣೆ ಸೇವನೆಯಿಂದ ಕೊಬ್ಬು(Fat) ಹೆಚ್ಚಾಗುತ್ತದೆ ಎಂಬ ತಪ್ಪು ತಿಳುವಳಿಕೆ ಹೊಂದಿದ್ದಾರೆ. ಸರಿಯಾದ ಪ್ರಮಾಣದಲ್ಲಿ ಸರಿಯಾದ ರೀತಿಯಲ್ಲಿ ಸೇವಿಸಿದರೆ ಆರೋಗ್ಯ ವೃದ್ಧಿಸುತ್ತದೆ. ಅದು ಹೇಗೆ ಇಲ್ಲಿದೆ ಮಾಹಿತಿ.

ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಬೆಣ್ಣೆ(Butter) ಎಂದರೆ ಬಲು ಪ್ರೀತಿ. ಪುಟ್ಟ ಮಕ್ಕಳಿಗೆ ದಿನವೂ ಬೆಣ್ಣೆ ಕೊಡುವುದರಿಂದ ಮೂಳೆ(Bone) ಗಟ್ಟಿಯಾಗುತ್ತಲ್ಲದೆ, ಅವರ ಬೆಳವಣಿಗೆಗೂ ಸಹಕಾರಿಯಾಗಿದೆ. ಬೆಣ್ಣೆಯಿಂದ ಮಾಡಿದ ತಿಂಡಿಗಳೂ ಸಹ ಅಷ್ಟು ರುಚಿಯಾಗಿರುತ್ತದೆ. ಒಂದು ಸ್ಪೂನ್ ಬೆಣ್ಣೆ ತಿಂದರೆ ಮತ್ತೆ ಬೇಕು ಎನಿಸುತ್ತದೆ. ಆರೋಗ್ಯ ವೃದ್ಧಿಗೆ ಸಹಕಾರಿಯಾಗಿರುವ ಈ ಬೆಣ್ಣೆ, ಅತಿಯಾಗಿ ಸೇವಿಸಿದರೂ ಒಳ್ಳೆಯದಲ್ಲ. ಪ್ರತೀ ದಿನ(Daily) ಬೆಣ್ಣೆ ತಿನ್ನುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನವಿದೆ ಇಲ್ಲಿದೆ ಮಾಹಿತಿ.

ಬೆಣ್ಣೆಯಲ್ಲಿ ವಿಟಮಿನ್(Vitamin), ಖನಿಜಾಂಶ(Minarals), ಆಂಟಿ ಆಕ್ಸಿಡೆಂಟ್(Antioxident), ಉತ್ತಮ ಕೊಬ್ಬಿನಾಂಶವಿದ್ದು(Cholesterol), ಹೃದಯ ಸಂಬAಧಿ ಕಾಯಿಲೆ(Heart Disease), ಕಣ್ಣಿನ ದೃಷ್ಟಿ(Eyesight), ಹಾರ್ಮೋನ್‌ಗಳ ಸಮತೋಲನ(Harmon Balance), ಮೂಳೆ ಬಲಿಷ್ಠಗೊಳಿಸುವ(Strong Bone) ಗುಣವಿದೆ. 
ಮಾರುಕಟ್ಟೆ ಕಳಪೆ ಬೆಣ್ಣೆ ಸಿಗುತ್ತವೆ. ಇದರಲ್ಲಿ ಟ್ರಾನ್ಸ್ ಕೊಬ್ಬುಗಳು ಮತ್ತು ಬಣ್ಣಗಳಿಂದ(Color) ತುಂಬಿರುತ್ತವೆ. ಮಾರ್ಕೆಟಿಂಗ್ ಹಕ್ಕುಗಳ ಹೊರತಾಗಿಯೂ ಆರೋಗ್ಯಕ್ಕೆ ಪ್ರಯೋಜನ ನೀಡುವುದಿಲ್ಲ. ಏಕೆಂದರೆ ಇದರಲ್ಲಿ ಬೇಡದ ಅನೇಕ ಅಂಶಗಳನ್ನು ಹಾಕಿರುತ್ತಾರೆ. ಇವು ಆರೋಗ್ಯಕ್ಕೆ(Health) ಕುತ್ತು ತರುತ್ತವೆ. ಹಾಗಾಗಿ ಸಾವಯವ(Organic), ನೈಸರ್ಗಿಕ(Natural) ಬೆಣ್ಣೆಯನ್ನು ಆರಿಸುವುದು ಒಳ್ಳೆಯದು. ಮನೆಯಲ್ಲೇ ಹಾಲಿನ ಕೆನೆ ತೆಗೆದು ಅದರಿಂದ ಬೆಣ್ಣೆ ಮಾಡುವುದು ಇನ್ನೂ ಒಳ್ಳೆಯದು. ಉಪ್ಪು ಸಹಿತ ಅಥವಾ ರಹಿತ ಬಯಸಿದಲ್ಲಿ ನೀವು ಶುದ್ಧವಾದ, ಹಸುವಿನ ಹಾಲಿನಿಂದ ಮಾಡಿದ ಹೆಚ್ಚು ಪೌಷ್ಟಿಕಾಂಶದ ವಸ್ತುವಿನ ಪ್ರಯೋಜನಗಳನ್ನು ಪಡೆಯುತ್ತೀರಿ. 

Latest Videos

ಇದನ್ನೂ ಓದಿ: Butter vs Cheese: ಬೆಣ್ಣೆ ಅಥವಾ ಚೀಸ್, ಆರೋಗ್ಯಕ್ಕೆ ಯಾವುದು ಉತ್ತಮ

ಬೆಣ್ಣೆ ಸೇವಿಸುವುದರಿಂದ ಆರೋಗ್ಯದ ಮೇಲಾಗುವ ಪ್ರಯೋಜನಗಳು
1. ಒಂದು ಅಧ್ಯಯನದ(Studies) ಪ್ರಕಾರ ನಿಯಮಿತವಾದ ಬೆಣ್ಣೆಯನ್ನು ಮಿತವಾಗಿ ಸೇವಿಸುವುದಿಂದ ಶೇ.69ರಷ್ಟು ಹೃದಯ ಸಂಬAಧಿ ಕಾಯಿಲೆಗಳನ್ನು(Heart Diseases) ಕಡಿಮೆ ಮಾಡುತ್ತದೆ ಎಂದು ತಿಳಿದುಬಂದಿದೆ. ಏಕೆಂದರೆ ಇದರಲ್ಲಿ ಉತ್ತಮವಾದ ವಿಟಮಿನ್ ಕೆ(Vitamin K) ಅಂಶ ಹೆಚ್ಚಿನ ಪ್ರಮಾಣದಲ್ಲಿದ್ದು, ಅಪಧಮನಿಯ ಕ್ಯಾಲ್ಸಿಫಿಕೇಶನ್ ಅನ್ನು ತಡೆಯಲು ಸಹಾಯ ಮಾಡುತ್ತದೆ. ಇದು ಹೃದಯಾಘಾತ(Heart Attack), ಪಾರ್ಶ್ವವಾಯು(Stroke) ಮತ್ತು ಗಟ್ಟಿಯಾದ ಅಪಧಮನಿಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
2. ಬೆಣ್ಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೀರಿಕೊಳ್ಳುವ ವಿಟಮನಿನ್ ಎ(Vitamin A) ಇದೆ. ಇದು ಹಾರ್ಮೋನ್‌ಗಳನ್ನು(Harmon) ನಿಯಂತ್ರಿಸಲು ಮತ್ತು ಆರೋಗ್ಯಕರ ಥೈರಾಯ್ಡ್(Thyroid) ಕಾರ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. 100 ಗ್ರಾಂ ಬೆಣ್ಣೆಯನ್ನು ದಿನವೂ ಸೇವಿಸಿದರೆ ಶೇ. 49ರಷ್ಟು ವಿಟಮಿನ್ ಎ ಅನ್ನು ಪೂರೈಸುತ್ತದೆ ಎಂದು ಅಧ್ಯಯನದಿಂದ ತಿಳಿದಿದೆ. 
3. ಲೌರಿಕ್ ಆಸಿಡ್ ಎಂಬುದು ಉತ್ತಮವಾದ ಆಂಟಿ ಫಂಗಲ್(Anti Fungal) ಕಾಂಪೌಡ್. ಇದು ಬೆಣ್ಣೆಯಲ್ಲಿ ಹೇರಳವಾಗಿ ಕಾಣಸಿಗುತ್ತದೆ. ಇದು ಫಂಗಲ್ ಇನ್ಫೆಕ್ಷನ್(Fungal Infection) ಆಗುವುದನ್ನು ತಡೆಯುತ್ತದಲ್ಲದೆ, ಕ್ಯಾಂಡಿಡಾ(Candid) ಬೆಳವಣಿಗೆಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. 
4. ಶುದ್ಧ ಬೆಣ್ಣೆಯಲ್ಲಿ ಸೆಲೆನಿಯಂ(Selenium) ಅತ್ಯುತ್ತಮ ಮೂಲವಾಗಿದೆ. ಇದು ಪುರುಷರು(Male) ಹಾಗೂ ಮಹಿಳೆಯರಿಗೆ(Female) ಬೇಕಾದ ಖನಿಜಾಂಶದ(Minerals) ಫಲವತ್ತತೆತನ್ನು ಹೆಚ್ಚಿಸುತ್ತದೆ. ಹೆಚ್ಚು ಬೆಣ್ಣೆ ತಿನ್ನುವುದರಿಂದ ಕುಟುಂಬವನ್ನು ಪ್ರಾರಂಭಿಸುವ ಸಾಧ್ಯತೆಗಳನ್ನು ಸುಧಾರಿಸುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. 
5. ಬೆಣ್ಣೆ ಸೇವನೆಯಿಂದ ರಾತ್ರಿ ಕುರುಡುತನ(Night Blindness) ಮತ್ತು ಮ್ಯಾಕ್ಯುಲರ್ ಡಿಜನರೇಶನ್(Macular Degeneration) ಅನ್ನು ತಡೆಯುತ್ತದೆ. ಏಕೆಂದರೆ ಇದರಲ್ಲಿ ಹೀರಿಕೊಳ್ಳುವ ಗುಣವಿರುವ ವಿಟಮಿನ್ ಎ ಹೇರಳವಾಗಿದೆ. ಇದು ಆರೋಗ್ಯಕರ ಕಣ್ಣುಗಳನ್ನು(Healthy Eye) ಕಾಪಾಡಿಕೊಳ್ಳು ಸಹಕರಿಸುತ್ತದೆ.
6. ಶೀತ(Cold) ಮತ್ತು ಜ್ವರವನ್ನು(Fever) ಎದುರಿಸಲು ಗರಿಷ್ಠ ಶಕ್ತಿಯನ್ನು(Energy) ಬೆಣ್ಣೆ ಸೇವನೆಯಿಂದ ಪಡೆಯಬಹುದು. ಅಷ್ಟೇ ಅಲ್ಲದೆ ರೋಗ ನಿರೋಧಕ ಶಕ್ತಿ(Immunity Power) ಹೆಚ್ಚಿಸುವ ಒಮೆಗಾ 3(Omega 3) ಕೊಬ್ಬಿನಾಮ್ಲವನ್ನು ಇದು ಪೂರೈಸುತ್ತದೆ. 

ಇದನ್ನೂ ಓದಿ: Kitchen Tips: ಚಳಿಗಾಲದಲ್ಲಿ ಕೆನೆಯಿಂದ ತುಪ್ಪ ತೆಗೆಯೋದು ಹೇಗೆ?

7. ಬೆಣ್ಣೆಯಲ್ಲಿ ಕ್ಯಾಲ್ಶಿಯಂ(Calcium) ಮತ್ತು ವಿಟಮಿನ್ ಡಿ(Vitamin D) ಅಂಶಗಳು ಹೇರಳವಾಗಿದೆ. ಇದು ದೇಹದಲ್ಲಿನ ಮೂಳೆಗಳನ್ನು(Bone) ಬಲಿಷ್ಠಗೊಳಿಸಲು(Strong) ಸಹಕರಿಸುತ್ತದೆ. ವಿಟಮಿನ್ ಡಿ(Vitamin D) ಕ್ಯಾಲ್ಶಿಯಂ ಹೀರಿಕೊಳ್ಳಲು ಉತ್ತೇಜಿಸುತ್ತದಲ್ಲದೆ, ಮೂಳೆಯನ್ನು ಸರಿಪಡಿಸುವ ಹಾಗೂ ಬಲಿಷ್ಠಗೊಳಿಸಲು ಸಹಕರಿಸುತ್ತದೆ.
8. ಸಂಯೋಜಿತ ಲಿನೋಲಿಯಿಕ್ ಆಸಿಡ್(ಸಿಎಲ್‌ಎ)(Conjugated linoleic acid (CLA) ಅಂಶವು ಬೆಣ್ಣೆಯಲ್ಲಿದೆ. ಇದು ಕ್ಯಾನ್ಸರ್(Cancer) ಅನ್ನು ತಡೆಗಟ್ಟುತ್ತದೆ. ಸಿಎಲ್‌ಎ ರೋಗನಿರೋಧಕ ಶಕ್ತಿಯನ್ನು(Immunity Power) ಹೆಚ್ಚಿಸಲು ಮತ್ತು ದೇಹದಲ್ಲಿನ ವಿಷತ್ವವನ್ನು(Toxins) ತೊಡೆದುಹಾಕಲು ಸಹಾಯ ಮಾಡುತ್ತದೆ. ಇದು ಕ್ಯಾನ್ಸರ್ ಕೋಶಗಳ(Cancer Cells) ಬೆಳವಣಿಗೆಯ ವಿರುದ್ಧ ಹೋರಾಡುವ ಗುಣವಿದೆ ಎಂದು ತಿಳಿದುಬಂದಿದೆ.
9. ಬೆಣ್ಣೆಯಲ್ಲಿ ವಿಟಮಿನ್ ಎ, ಇ,ಡಿ ಮತ್ತು ಕೆ(Vitamin A E D K), ಕ್ಯಾಲ್ಶಿಯಂ(Calcium), ಸೆಲೆನಿಯಂ(Selenium), ರೋಮಿಯಂ, ತಾಮ್ರ(Copper), ಮ್ಯಾಂಗನೀಸ್(Manganese) ಹೆಚ್ಚಿನ ಪ್ರಮಾಣದಲ್ಲಿದೆ. ದಿನವೂ ಬೆಣ್ಣೆ ಸೇವಿಸುವುದರಿಂದ ದೇಹದ ಪ್ರತೀ ವ್ಯವಸ್ಥೆಗಳು ಉತ್ತಮವಾಗಿರುವಂತೆ ನೋಡಿಕೊಳ್ಳುತ್ತದೆ.

click me!