ಸದಾ ಎಲ್ಲರ ಕಣ್ಣು ಕುಕ್ಕುವಂತೆ ನಿಮ್ಮ ಸೌಂದರ್ಯ ಇರಬೇಕು, ಎಲ್ರ ಮುಂದೆ ಆಕರ್ಷಕವಾಗಿ ಕಾಣ್ಬೇಕು ಎನ್ನುವ ಹಂಬಲ ನಿಮಗಿದ್ರೆ, ಆರೋಗ್ಯದ ಬಗ್ಗೆಯೂ ನೀವು ಕಾಳಜಿವಹಿಸುವವರಾಗಿದ್ರೆ ಇಲ್ಲೊಂದು ಬೆಸ್ಟ್ ಥೆರಪಿ ಇದೆ. 5 ಸಾವಿರದಿಂದ 10 ಸಾವಿರ ಖರ್ಚು ಮಾಡಿದ್ರೆ ಸಾಕು.
ಸೆಲೆಬ್ರಿಟಿಗಳು ಫಿಟ್ನೆಸ್ ಗೆ ಹೆಚ್ಚು ಮಹತ್ವ ನೀಡ್ತಾರೆ. ವಯಸ್ಸನ್ನು ಮುಚ್ಚಿಡೋದು ಅವರ ಮೊದಲ ಕೆಲಸ ಅಂದ್ರೆ ತಪ್ಪಾಗಲಾರದು. ಅದ್ರಲ್ಲೂ ಸಿನಿಮಾ ತಾರೆಯರು ಸದಾ ಯಂಗ್ ಆಗಿ ಕಾಣೋದು ಅನಿವಾರ್ಯ. ಅದಕ್ಕಾಗಿ ಅವರು ನಾನಾ ಪ್ರಯತ್ನಗಳನ್ನು ನಡೆಸ್ತಾರೆ, ನಟ – ನಟಿಯರು ಬ್ಯೂಟಿಗೆ ಸಂಬಂದಿಸಿದ ಅನೇಕ ಚಿಕಿತ್ಸೆಗೆ ಒಳಗಾಗ್ತಾರೆ. 60ರ ಗಡಿ ದಾಟಿದ್ರೂ ಸುಂದರವಾಗಿ ಕಾಣುವ ಕಲಾವಿದರು ನಮ್ಮಲ್ಲಿದ್ದಾರೆ. ಸದಾ ಯಂಗ್ ಆಂಡ್ ಎನರ್ಜಿಟಿಕ್ ಆಗಿ ಕಾಣುವ ಕಲಾವಿದರ ಪಟ್ಟಿಯಲ್ಲಿ ಬಾಲಿವುಡ್ ಸ್ಟಾರ್ ಅನಿಲ್ ಕಪೂರ್ ಸೇರ್ತಾರೆ. ಅನೀಲ್ ಕಪೂರ್ ಗೆ ಈಗ 66 ವರ್ಷ ವಯಸ್ಸು. ಆದ್ರೂ 45ರ ಆಸುಪಾಸಿನ ಕಲಾವಿದರಂತೆ ಕಾಣ್ತಾರೆ ಅನಿಲ್ ಕಪೂರ್. ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಅನಿಲ್ ಕಪೂರ್ ಬಳಸುವ ಮಾರ್ಗವೆಂದ್ರೆ ಆರೋಗ್ಯಕರ ಜೀವನಶೈಲಿ ಹಾಗೂ ಹೈಪರ್ಬೇರಿಕ್ ಆಕ್ಸಿಜನ್ ಚಿಕಿತ್ಸೆ. ಕೆಲ ದಿನಗಳ ಹಿಂದೆ ಹೈಪರ್ಬೇರಿಕ್ ಆಕ್ಸಿಜನ್ ಚಿಕಿತ್ಸೆ ಪಡೆಯುತ್ತಿದ್ದ ಅನಿಲ್ ಕಪೂರ್ ವಿಡಿಯೋ ಒಂದು ವೈರಲ್ ಆಗಿತ್ತು. ಅನುಪಮ್ ಖೇರ್ ಇದ್ರ ವಿಡಿಯೋ ಹಂಚಿಕೊಂಡಿದ್ದರು. ಅನಿಕ್ ಕಪೂರ್ ಪಡೆಯುವ ಈ ಹೈಪರ್ಬೇರಿಕ್ ಆಕ್ಸಿಜನ್ ಚಿಕಿತ್ಸೆ ಬಗ್ಗೆ ನಾವಿಂದು ನಿಮಗೆ ಮಾಹಿತಿ ನೀಡ್ತೇವೆ.
ಹೈಪರ್ಬೇರಿಕ್ (Hyperbaric) ಆಕ್ಸಿಜನ್ ಚಿಕಿತ್ಸೆ (Treatment) ಅಂದ್ರೇನು? : ಹೈಪರ್ಬೇರಿಕ್ ಆಕ್ಸಿಜನ್ ಫೆರಪಿ ಒಂದು ರೀತಿಯ ವಿಶೇಷ ಚಿಕಿತ್ಸೆಯಾಗಿದೆ. ವಿಶ್ವದಾದ್ಯಂತ ಈ ಚಿಕಿತ್ಸೆ ನೀಡಲಾಗುತ್ತದೆ. ಇದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಆಮ್ಲಜನಕ (Oxygen) ನಮಗೆಷ್ಟು ಇಂಪಾರ್ಟೆಂಟ್ ಅನ್ನೋದು ನಿಮಗೆ ಗೊತ್ತು. ನಮ್ಮ ಪ್ರತಿಯೊಂದು ಅಂಗಕ್ಕೂ ಆಕ್ಸಿಜನ್ ಬೇಕು. ನಮ್ಮೆಲ್ಲ ಅಂಗ ಸರಿಯಾಗಿ ಕೆಲಸ ಮಾಡ್ಬೇಕೆಂದ್ರೆ ಅದಕ್ಕೆ ಸೂಕ್ತ ಆಮ್ಲಜನಕ ಪೂರೈಕೆಯಾಗ್ಬೇಕು. ಹೈಪರ್ಬೇರಿಕ್ ಆಕ್ಸಿಜನ್ ಚಿಕಿತ್ಸೆಯಲ್ಲಿ ವ್ಯಕ್ತಿಯನ್ನು ಒಂದು ಯಂತ್ರದೊಳಗೆ ಮಲಗಿಸಲಾಗುತ್ತದೆ. 60 ರಿಂದ 90 ನಿಮಿಷಗಳ ಕಾಲ ಚೇಂಬರ್ ಯಂತ್ರದಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ಶೇಕಡಾ 100ರಷ್ಟು ಆಮ್ಲಜನಕದೊಂದಿಗೆ ಚೇಂಬರ್ ಒಳಗೆ ಒತ್ತಡವನ್ನು ನೀಡಲಾಗುತ್ತದೆ. ಇದರಿಂದಾಗಿ ಒತ್ತಡ ಹೆಚ್ಚಾಗಿ 10 ರಿಂದ 20 ಪಟ್ಟು ಹೆಚ್ಚು ಆಮ್ಲಜನಕ ಪ್ಲಾಸ್ಮಾದಲ್ಲಿ ಹೋಗುತ್ತದೆ. ಉಸಿರಾಡುವ ಗಾಳಿಯಲ್ಲಿ ಶೇಕಡಾ 21 ರಷ್ಟು ಆಮ್ಲಜನಕ ಮಾತ್ರ ಇರುತ್ತದೆ. ಅದೇ ಈ ಯಂತ್ರದಲ್ಲಿ ಶೇಕಡಾ 200 ರಿಂದ 240ರಷ್ಟು ಆಮ್ಲಜನಕ ಇರುತ್ತದೆ. ಆಮ್ಲಜನಕವು ಜೀವಕೋಶಗಳನ್ನು ತಲುಪಿದ ತಕ್ಷಣ ಜೀವಕೋಶಗಳು ಹೊಸ ಜೀವವನ್ನು ಪಡೆಯಲು ಪ್ರಾರಂಭಿಸುತ್ತವೆ. ಕ್ರೀಡಾಪಟು, ಗಗನಯಾತ್ರಿಗಳಿಗೆ ಇದನ್ನು ನೀಡಲಾಗ್ತಿತ್ತು. ಈಗ ಸಿನಿಮಾ ಕಲಾವಿದರು ಇದನ್ನು ಪಡೆಯುತ್ತಿದ್ದಾರೆ.
undefined
ಫಸ್ಟ್ ಟೈಮ್ ಸೆಕ್ಸ್‌ಗೆ ಸಂಬಂಧಿಸಿದ ಈ ವಿಷಯಗಳನ್ನು ನಂಬಬಹುದಾ?
ಹೈಪರ್ಬೇರಿಕ್ ಆಕ್ಸಿಜನ್ ಚಿಕಿತ್ಸೆ ಲಾಭ :
ಚರ್ಮದ ಸೌಂದರ್ಯ ಹೆಚ್ಚಳ : ಮೊದಲೇ ಹೇಳಿದಂತೆ ಆಮ್ಲಜನಕ ಚರ್ಮದ ಸೌಂದರ್ಯವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಚರ್ಮಕ್ಕೆ ಆಮ್ಲಜನಕ ಸಿಗ್ತಿದ್ದಂತೆ ಚರ್ಮದಲ್ಲಿ ಹೊಸ ಕೋಶಗಳು ರೂಪಗೊಳ್ಳುತ್ತವೆ. ಚರ್ಮ ಟೋನ್ ಆಗಿರುತ್ತದೆ. ಚರ್ಮದ ಸುಕ್ಕು ಕಾಣಿಸುವುದಿಲ್ಲ. ಚರ್ಮ ಹೊಳೆಯುವ ಕಾರಣ ನಿಮ್ಮ ವಯಸ್ಸು ಹೇಳೋದು ಕಷ್ಟ. ವಯಸ್ಸು 40ರ ಗಡಿಯಲ್ಲಿದ್ರೂ ನೀವು 20ರಂತೆ ಕಾಣ್ತೀರಿ.
ಅಪಾಯಕಾರಿ ರೋಗಕ್ಕೆ ಮದ್ದು : ಮಧುಮೇಹ, ಕ್ಯಾನ್ಸರ್, ಪಾರ್ಶ್ಚವಾಯು ಸೇರಿದಂತೆ ಗಂಭೀರ ಖಾಯಿಲೆಗಳನ್ನು ಗುಣಪಡಿಸುವ ಕೆಲಸವನ್ನು ಇದು ಮಾಡುತ್ತದೆ. ನೀವು ಹೈಪರ್ಬೇರಿಕ್ ಆಕ್ಸಿಜನ್ ಚಿಕಿತ್ಸೆ ಪಡೆದ್ರೆ, ನಿಮ್ಮ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕ ಸಿಗುವ ಕಾರಣ ನಿಮ್ಮ ದೇಹ ರೋಗದ ವಿರುದ್ಧ ಹೋರಾಡುವ ಶಕ್ತಿ ಪಡೆಯುತ್ತದೆ.
ಅಸ್ತಮಾ ರೋಗಿಗಳು ಮನೆಯಲ್ಲಿದ್ದಾರಾ? ಹಾಗಿದ್ರೆ ಈ ಗಿಡ ನೆಡಿ
ಊತ ಕಡಿಮೆ ಮಾಡುವ ಶಕ್ತಿ : ನಿಮ್ಮ ದೇಹದಲ್ಲಿ ಊತ ಕಾಣಿಸಿಕೊಂಡಿದ್ದರೆ ಅದ್ರಿಂದ ಮುಕ್ತಿ ಪಡೆಯಲು ನೀವು ಹೈಪರ್ಬೇರಿಕ್ ಆಕ್ಸಿಜನ್ ಚಿಕಿತ್ಸೆ ಪಡೆಯಬಹುದು. ಯಂತ್ರದ ಒತ್ತಡ ನಿಮ್ಮ ಊತ ಕಡಿಮೆ ಮಾಡುತ್ತದೆ. ಇದಲ್ಲದೆ ರಕ್ತದ ಹರಿವನ್ನು ಸುಧಾರಿಸುವ ಕೆಲಸವನ್ನು ಇದು ಮಾಡುತ್ತದೆ.
ಬಿಳಿ ರಕ್ತ ಕಣ ಹೆಚ್ಚಳ : ನೀವು ಹೈಪರ್ಬೇರಿಕ್ ಆಕ್ಸಿಜನ್ ಚಿಕಿತ್ಸೆ ಪಡೆದ್ರೆ ನಿಮ್ಮ ದೇಹದಲ್ಲಿ ಬಿಳಿ ರಕ್ತಕಣ ಹೆಚ್ಚಾಗುತ್ತದೆ. ಇದು ರೋಗದ ವಿರುದ್ಧ ಹೋರಾಡುವ ಶಕ್ತಿಯನ್ನು ದೇಹಕ್ಕೆ ನೀಡುತ್ತದೆ.