Latest Videos

ಜಾತಕ ತೋರಿಸೋದಕ್ಕಿಂತ, ಮದುವೆಗೂ ಮುಂಚೆ ಈ 2 ಮೆಡಿಕಲ್ ಟೆಸ್ಟ್ ಮಾಡಿಸಿ!

By Suchethana DFirst Published Jun 17, 2024, 5:10 PM IST
Highlights

ಮದುವೆ ಸಂದರ್ಭದಲ್ಲಿ ಜಾತಕ ಹೊಂದಾಣಿಕೆ ಮಾಡುವಂತೆ, ಹುಡುಗನಿಗೆ ಈ ಟೆಸ್ಟ್​ ಮಾಡಿಸಿ ಭವಿಷ್ಯ ಖಾತರಿಪಡಿಸಿಕೊಳ್ಳಿ ಎಂದ ಖ್ಯಾತ ವೈದ್ಯರಿಂದ ಹೀಗೊಂದು ಸಲಹೆ
 

ಮದುವೆಯ ಸಂದರ್ಭದಲ್ಲಿ ನಕ್ಷತ್ರ, ರಾಶಿ, ಗೋತ್ರ ಇತ್ಯಾದಿಗಳನ್ನು ಒಳಗೊಂಡಿರುವ ಕುಂಡಲಿ, ಜಾತಕ ಎಲ್ಲವನ್ನೂ ನೋಡುವುದು ಮಾಮೂಲು. ಮದುವೆಯೆನ್ನುವುದು ಒಂದು ಪವಿತ್ರ ಬಂಧನವಾಗಿರುವ ಹಿನ್ನೆಲೆಯಲ್ಲಿ ಗಂಡು ಮತ್ತು ಹೆಣ್ಣು ಒಟ್ಟಾಗಿ ನೂರ್ಕಾಲ ಚೆನ್ನಾಗಿ ಬಾಳಲಿ ಎಂದು ತಲೆ ತಲಾಂತರಗಳಿಂದ ಇವುಗಳನ್ನು ನೋಡಿ ಮದುವೆ ಮಾಡಿಸುವುದು ಇದೆ. ಆದರೆ ಇಂದು ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತ ಇಲ್ಲವೇ ಇನ್ನಿತರ ಕಾರಣಗಳಿಂದಾಗಿ ಸಾವು ಸಂಭವಿಸುವುದು ಅವ್ಯಾಹತವಾಗಿ ನಡೆದಿದೆ. ಅದರಲ್ಲಿ ಗಂಡು ಮಕ್ಕಳು ಯುವಾವಸ್ಥೆಯಲ್ಲಿಯೇ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದರಲ್ಲಿ ಹಲವರಿಗೆ ಲಿವರ್​ (ಯಕೃತ್ತು) ಸಮಸ್ಯೆ ಆಗುವುದು ಇದೆ. ಇದು ಹೃದಯಾಘಾತಕ್ಕೂ ಕಾರಣವಾಗಬಲ್ಲುದು. ಕುಂಡಲಿಯನ್ನು ನೋಡುವಾಗ ಹುಡುಗನಿಗೆ ಅಲ್ಪಾಯುಷ್ಯ ಇದೆ ಎನ್ನುವುದನ್ನು ಕೆಲವರು ಹೇಳುವುದು ಉಂಟು. ಆದರೆ ಅವೆಲ್ಲವುಗಳಿಗಿಂತಲೂ ಮುಖ್ಯವಾಗಿ ಗಂಡುಮಕ್ಕಳ ಯಕೃತ್ತು ಯಾವ ಸ್ಥಿತಿಯಲ್ಲಿದೆ ಎನ್ನುವುದನ್ನು ತಿಳಿಯಲು ಮದುವೆಯ ಸಂದರ್ಭದಲ್ಲಿ ಇದೊಂದು ಟೆಸ್ಟ್​  ಮಾಡಿಸಿ ನೋಡಿ ಎಂದು ಸಲಹೆ ಇತ್ತಿದ್ದಾರೆ ಖ್ಯಾತ ವೈದ್ಯರಾಗಿರುವ ಡಾ.ಶಿವ ಶರಿನ್​. 

ಯೂಟ್ಯೂಬ್​ ಚಾನೆಲ್​ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಯಕೃತ್ತು ಹಾಳಾಗಲು ಅದರಲ್ಲಿಯೂ ಯುವಕರಲ್ಲಿ ಇದು ಹಾಳಾಗಲು ಕಾರಣವನ್ನು ಹೇಳುತ್ತಲೇ ಅವರು ಮದುವೆಯ ಸಂದರ್ಭದಲ್ಲಿ  ಈ ಒಂದು ಟೆಸ್ಟ್ ಮಾಡಿಸಿ ನೋಡಿದರೆ ಒಳ್ಳೆಯದು ಎನ್ನುವ ಸಲಹೆ ಇತ್ತಿದ್ದಾರೆ. ಸಾಮಾನ್ಯವಾಗಿ ಯಕೃತ್ತು ಹಾಳಾಗಲು ಹಲವಾರು ಕಾರಣಗಳು ಇದ್ದರೂ ಕುಡಿಯುವ ಚಟ ಅಗತ್ಯಕ್ಕಿಂತ ಹೆಚ್ಚಾಗಿರುವುದು ಬಹುದೊಡ್ಡ ಕಾರಣ ಎನ್ನುವುದು ವೈದ್ಯರ ಮಾತು. ಆದ್ದರಿಂದ ನೂರೆಂಟು ಪರೀಕ್ಷೆ ಮಾಡಿಸಿರುವ ಬದಲು ಇದೊಂದು ಪರೀಕ್ಷೆ  ಮೊದಲು ಮಾಡಿಸಿ ಭವಿಷ್ಯ ಕಾಪಾಡಿಕೊಳ್ಳಿ ಎಂದು ಹೇಳಿದ್ದಾರೆ.

ಹಾಸಿಗೆಯಲ್ಲಿ ಸುಖ ಕೊಡೋದು ಹೇಗೆ? ಲೈಂಗಿಕ ರಾಯಭಾರಿಯಾಗಿ ಟಿಪ್ಸ್​ ಹೇಳಿದ ರಣವೀರ್​ ಸಿಂಗ್

ಬಾಲಿವುಡ್​ ನಟಿ ಟ್ವಿಂಕಲ್​ ಖನ್ನಾ, ಅಕ್ಷಯ್​ ಕುಮಾರ್​ ಅವರನ್ನು ಮದುವೆಯಾಗುವಾಗ 56 ಪರೀಕ್ಷೆ ಮಾಡಿಸಿದರಂತೆ. ಆದರೆ ನೀವು ಇದೊಂದು ಪರೀಕ್ಷೆ ಮಾಡಿಸಿ ಎಂದಿದ್ದಾರೆ ವೈದ್ಯರು ಅದೇ SGPT ಪರೀಕ್ಷೆ, ಪುರುಷರ ಯಕೃತ್ತಿನ ಭವಿಷ್ಯ, ಆರೋಗ್ಯವನ್ನು ಈ ಪರೀಕ್ಷೆ ಹೇಳುತ್ತದೆ ಎಂದಿದ್ದಾರೆ ಅವರು. 20-25 ರೂಪಾಯಿಗಳಲ್ಲಿ ಈ ಪರೀಕ್ಷೆಯನ್ನು ಮಾಡಿಸಲಾಗುತ್ತಿದೆ. SGPT ಎಂದರೆ  ಸೀರಮ್ ಗ್ಲುಟಾಮಿಕ್ ಪೈರುವಿಕ್ ಟ್ರಾನ್ಸ್ಮಿನೇಸ್. ಇದು ಯಕೃತ್ತಿನ ಸ್ಥಿತಿಯನ್ನು ಅಳೆಯುವ ಪರೀಕ್ಷೆಯಾಗಿದೆ. SGPT ಪರೀಕ್ಷೆಯು ಯಕೃತ್ತಿನ ಕಿಣ್ವವಾದ  ರಕ್ತದ ಮಟ್ಟವನ್ನು ಇದು ವಿಶ್ಲೇಷಿಸುತ್ತದೆ.  ರಕ್ತದ ಸೀರಮ್‌ನಲ್ಲಿ ಎಸ್‌ಜಿಪಿಟಿ ಬಳಸಿ ಅಳೆಯಲಾಗುತ್ತದೆ ಎಂದು ಮಾಹಿತಿಯನ್ನು ಅವರು ನೀಡಿದ್ದಾರೆ. 
 
ಇದಕ್ಕೆ ಉದಾಹರಣ ಕೊಟ್ಟಿರುವ ವೈದ್ಯರ ಮಾತಿನಲ್ಲಿಯೇ ಹೇಳುವುದಾದರೆ... 'SGPTಯ ಸಾಮಾನ್ಯ ವ್ಯಾಲ್ಯೂ 30 ಇರಬೇಕು. 25 ವರ್ಷದ ಯುವಕನೊಬ್ಬನಿಗೆ ಇದರ ವ್ಯಾಲ್ಯೂ 80 ಆಗಿದೆ ಎಂದಿಟ್ಟುಕೊಳ್ಳೋಣ. ಆತ ತನ್ನ 25ನೇ ವಯಸ್ಸಿನಲ್ಲಿ ಜಿಮ್​ಗೆ ಹೋಗುತ್ತಿರುತ್ತಾನೆ, ಫಿಟ್​ ಆ್ಯಂಡ್​ ಫೈನ್ ಆಗಿರುತ್ತಾನೆ. ನೋಡಲು ಯಾವುದೇ ಆರೋಗ್ಯ ಸಮಸ್ಯೆ ಇದ್ದಂತೆ ಕಾಣಿಸುವುದಿಲ್ಲ. ಆದರೆ SGPT ಪರೀಕ್ಷೆ ಮಾಡಿಸಿದಾಗ ಅದರ ವ್ಯಾಲ್ಯೂ 80 ಬಂದರೆ, ಸಾಮಾನ್ಯ ವ್ಯಾಲ್ಯೂಗಿಂತ 50 ಹೆಚ್ಚಾಗಿ ಇರುತ್ತದೆ ಅಂದಾಯ್ತು. ಇಂಥ ಸಮಯದಲ್ಲಿ  ಅವನ 36ನೇ ವಯಸ್ಸಿನಲ್ಲಿ ಇದು ಏಳು ಪಟ್ಟು ಹೆಚ್ಚಾಗಿ ಹೃದಯ ಸಂಬಂಧಿ ಸಮಸ್ಯೆ ಉಂಟಾಗುತ್ತದೆ. ದೇಹದಲ್ಲಿ ಉರಿಯೂತ ಹೆಚ್ಚಾಗಿ ಜೀವಕ್ಕೆ ಅಪಾಯ ಬರಬಹುದು' ಎಂದಿದ್ದಾರೆ.   ಆದ್ದರಿಂದ ಇದೊಂದು ಪರೀಕ್ಷೆ ಮಾಡಿಸಿದರೆ ಆರೋಗ್ಯದ ಗುಟ್ಟು ತಿಳಿಯಬಹುದು ಎನ್ನುವುದು ವೈದ್ಯರ ಸಲಹೆ. 

ತೂಕ ಇಳಿಸಲು ತಣ್ಣೀರಿನ ಶವರ್​ ಬಾತ್​: ಹೇಗೆ? ಏಕೆ? ಫಿಟ್​ನೆಸ್​ ತಜ್ಞೆ ಶ್ವೇತಾ ಸುಲಭದ ಟಿಪ್ಸ್​

click me!