ಅಮೆರಿಕಾದಲ್ಲಿ ಅಚ್ಚರಿಯ ಘಟನೆಯೊಂದಿಗೆ ನಡೆದಿದೆ. 56 ವರ್ಷದ ಮಗನಿಗೆ ಆತನ ತಾಯಿಯೇ ಬಾಡಿಗೆ ಅಮ್ಮನಾದ ಘಟನೆ ನಡೆದಿದೆ. ಅಜ್ಜಿಯ ಹೊಟ್ಟೆಯಲ್ಲಿ ಮೊಮ್ಮಗಳು ಹುಟ್ಟಿದ ಬಹುಶಃ ವಿಶ್ವದ ಅಪರೂಪದ ವಿದ್ಯಮಾನ ಇದಾಗಿದೆ.
ನವದೆಹಲಿ (ನ.5): ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಬಾಡಿಗೆ ತಾಯ್ತನದ ಹಲವಾರು ಕಥೆಗಳಿವೆ. ಪ್ರಪಂಚದಲ್ಲಿ ಇತ್ತೀಚೆಗೆ ಇಂಥ ವಿಚಾರಗಳು ಸಾಕಷ್ಟು ನಡೆಯುತ್ತಿದೆ. ಆದರೆ, ಅಮೆರಿಕಾದ ಹನ್ನಾಹ್ ಪ್ರದೇಶದಲ್ಲಿ ಸೊಸೆಯ ಮಗುವಿಗೆ ಅತ್ತೆಯೇ ಬಾಡಿಗೆ ತಾಯಿನಾದ ಅಪರೂಪದ ಘಟನೆ ನಡೆದಿದೆ. 56 ವರ್ಷದ ನ್ಯಾನ್ಸಿ ಹ್ವಾಕ್‌ನ ಪುತ್ರ ಹಾಗೂ ಸೊಸೆಗೆ ಐದನೇ ಮಗು ಬೇಕು ಎನ್ನುವ ಆಸೆ ಇತ್ತು. ಅದಕ್ಕಾಗಿ ಬಾಡಿಗೆ ತಾಯ್ತನವನ್ನು ಅವರು ಆಯ್ಕೆ ಮಾಡಿಕೊಂಡಿದ್ದರು. ಆದರೆ, 5ನೇ ಮಗುವಿನ ಬಾಡಿಗೆ ತಾಯಿಯಾಗಿದ್ದು ಬೇರೆ ಯಾರೂ ಅಲ್ಲ. ಸ್ವತಃ ನ್ಯಾನ್ಸಿ ಹ್ವಾಕ್ . ಅದರಂತೆ ಅಜ್ಜಿಯೇ ಮಗುವಿಗೆ ಬಾಡಿಗೆ ತಾಯಿಯಾಗಿದ್ದಾಳೆ. ಕಳೆದ ಫೆಬ್ರವರಿ 11 ರಂದು ನ್ಯಾನ್ಸಿ ಹ್ವಾಕ್ ಮೊಮ್ಮಗಳಿಗೆ ಜನ್ಮವನ್ನೂ ನೀಡಿದ್ದಾರೆ. ಈ ಮಗುವಿಗೆ ಹನ್ನಾ ಕ್ಯಾಮ್ ಹ್ವಾಕ್ ಎಂದು ಹೆಸರು ಇಡಲಾಗಿದೆ. ನ್ಯಾನ್ಸಿ ಹ್ವಾಕ್ ಅವರ ಸೊಸೆ ಕ್ಯಾಂಬ್ರಿಯಾ ಗರ್ಭಕಂಠದ ಸಮಸ್ಯೆಗೆ ಒಳಗಾದ ಕಾರಣ (ಗರ್ಭಕೋಶವನ್ನು ತೆಗೆಯುವ ಶಸ್ತ್ರಚಿಕಿತ್ಸೆ) ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದುಕೊಳ್ಳುವ ನಿರ್ಧಾರವನ್ನು ಮಾಡಬೇಕಾಗಿತ್ತು.
undefined
9 ಗಂಟೆಗಳ ಕಾಲ ಹೆರಿಗೆ ನೋವಿನಿಂದ ಬಳಸಿದ ನ್ಯಾನ್ಸಿ: ಮೊಮ್ಮಗಳು ಹನ್ನಾಗೆ ಜನ್ಮ ನೀಡುವ ಮುನ್ನ ಉಟಾಹ್ ಟೆಕ್ ವಿವಿಯಲ್ಲಿ ಕೆಲಸ ಮಾಡುವ ನ್ಯಾನ್ಸಿ ಹ್ವಾಕ್‌ಗೆ 9 ಗಂಟೆಗಳ ಕಾಲ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಡಾ. ರಸ್ಸೆಲ್ ಫಾಲ್ಕ್ ಪ್ರಕಾರ, ಮಹಿಳೆ ತನ್ನ ಮೊಮ್ಮಗಳಿಗೆ ಜನ್ಮ ನೀಡುವುದು ಅಚ್ಚರಿಯ ವಿಚಾರವಾಗಿತ್ತು. ಕೇವಲ ವಯಸ್ಸು ಮಾತ್ರವಲ್ಲ. ಆಕೆಯ ಆರೋಗ್ಯದ ವಿಚಾರವಾಗಿಯೂ ಗಮನ ನೀಡಬೇಕಿತ್ತು. ಆದರೆ, ಆಕೆ ಸಂಪೂರ್ಣವಾಗಿ ಆರೋಗ್ಯವಾಗಿದ್ದರು. ಮಗುವನ್ನು ಜೋಪಾನವಾಗಿ ಕಾಪಾಡಿಕೊಂಡಿದ್ದರು. ಅಲ್ಲದೆ, 56 ವರ್ಷದ ನ್ಯಾನ್ಸಿ ಮಗುವಿಗೆ ಜನ್ಮ ನೀಡಲು ದೈಹಿಕವಾಗಿಯೂ ಸದೃಢರಾಗಿದ್ದರು ಎಂದಿದ್ದಾರೆ.
ನ್ಯಾನ್ಸಿ ಹಾಕ್ ಅವರಿಗೆ ಮಗ ಜೆಫ್ ಹಾಕ್ ಹಾಗೂ ಸೊಸೆ ಕ್ಯಾಂಬ್ರಿಯಾಗೆ ಬಾಡಿಗೆಗೆ ಸೇವೆ ಸಲ್ಲಿಸುವ ಆಯ್ಕೆಯನ್ನು ನೀಡಿದಾಗ, ಅವರು ಅದನ್ನು ಸಾಧ್ಯತೆಯಾಗಿ ತೆಗೆದುಕೊಳ್ಳಲಿಲ್ಲ. ಇದು ನಮ್ಮ ಕುಟುಂಬ ವೃದ್ಧಿಗಾಗಿ ಮಾಡಿದ ಕೆಲಸ ಎಂದುಕೊಂಡು ಬಾಡಿಗೆ ತಾಯಿಯಾಗಲು ಒಪ್ಪಿಕೊಂಡಿದ್ದರು. ವೆಬ್ ಡೆವಲಪರ್ ಆಗಿರುವ ಜೆಫ್ ಹಾಕ್, ಇಡೀ ಅನುಭವವನ್ನು "ಒಂದು ಸುಂದರ ಕ್ಷಣ" ಎಂದು ಕರೆದಿದ್ದಾರೆ. ನನ್ನ ತಾಯಿ ಮಗುವಿಗೆ ಜನ್ಮ ನೀಡುವ ಕ್ಷಣವನ್ನು ಎಷ್ಟು ಜನ ನೋಡಲು ಸಾಧ್ಯ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಬಾಡಿಗೆ ತಾಯಿ ಪ್ರಕರಣದಲ್ಲಿ ನಟಿ ನಯತನಾರಾ ದಂಪತಿಗೆ ಕ್ಲೀನ್ ಚಿಟ್, ಆಸ್ಪತ್ರೆಗೆ ಎದುರಾಯ್ತು ಸಂಕಷ್ಟ!
56ನೇ ವರ್ಷದಲ್ಲಿ ಮೊಮ್ಮಗಳಿಗೆ ತಾಯಿಯಾಗಿರುವ ನ್ಯಾನ್ಸಿ ಹಾಕ್ ವಿಶೇಷವಾದ ಅನುಭವವನ್ನು ಎದುರಿಸುತ್ತಿದ್ದಾರೆ. ಆದರೆ, ಮಗುವನ್ನು ಆಕೆ ತಮ್ಮೊಂದಿಗೆ ಮನೆಗೆ ತರುತ್ತಿಲ್ಲ ಎಂದು ಅವರ ಪತಿ ತಿಳಿಸಿದ್ದಾರೆ. ಆಕೆಯಲ್ಲೀಗ ಅತೀವವಾದ ಖುಷಿ ಇದೆ. ಅದರೊಂದಿಗೆ ಮಗುವಿನಿಂದ ಬೇರ್ಪಟ್ಟ ದುಃಖವೂ ಇದೆ ಎಂದು ಹೇಳಿದ್ದಾರೆ. ಮಗುವಿನ ಅಜ್ಜಿಗೆ ಗೌರವಾರ್ಥವಾಗಿ, ಚಿಕ್ಕ ಹುಡುಗಿಗೆ ಹನ್ನಾ ಎಂದು ನಾಮಕರಣ ಮಾಡಲಾಗಿದೆ. ಉತಾಹ್ ಟೆಕ್ ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡುವ ನ್ಯಾನ್ಸಿ ಹ್ವಾಕ್, ಯಾವುದೇ ಪರೀಕ್ಷೆಯಿಲ್ಲದೆಯೇ ಮಗು ಹೆಣ್ಣು ಎನ್ನುವ ಅಚಲ ವಿಶ್ವಾಸ ಹೊಂದಿದ್ದರು.
6 ವರ್ಷದ ಹಿಂದೆಯೇ ಮದುವೆ ರಿಜಿಸ್ಟರ್ ಆಗಿತ್ತು, ಬಾಡಿಗೆ ತಾಯಿ ನಮ್ಮ ಸಂಬಂಧಿ- ನಯನತಾರಾ ಸ್ಪಷ್ಟನೆ
ನ್ಯಾನ್ಸಿಯ ಸೊಸೆ ಕ್ಯಾಂಬ್ರಿಯಾ, ಅತ್ತೆಗೆ ಧನ್ಯವಾದ ಹೇಳಲು ಮಗಳಿಗೆ ಹನ್ನಾ ಎಂದು ಹೆಸರಿಸಿದ್ದಾಗಿ ತಿಳಿಸಿದ್ದಾರೆ. ನ್ಯಾನ್ಸಿ ಹಾಗೂ ಹನ್ನಾ ಎನ್ನುವುದರ ಅರ್ಥ ಒಂದೇ ಆಗಿದೆ, ಹಾಗಾಗಿ ಇದೇ ಹೆಸರನ್ನು ಇಟ್ಟಿದ್ದೇವೆ ಎಂದರು. ನನ್ನ ಮಗಳು ಅತ್ತೆಯ ಹೊಟ್ಟೆಯಲ್ಲಿದ್ದಾಗ ಅವರಿಗೆ ಒಂದು ಕನಸು ಬಿದ್ದಿತ್ತು. ನಡುರಾತ್ರಿಯಲ್ಲಿ ಅವರು ಭಯಭೀತರಾಗಿ ಎದ್ದಾಗ ತಾವು, 'ನನ್ನ ಹೆಸರು ಹನ್ನಾ' ಎನ್ನುವ ಮಾತನ್ನು ಕೇಳಿದ್ದಾಗಿ ಹೇಳಿದ್ದರು. ಹಾಗಾಗಿ ನನ್ನ ಮಗಳಿಗೆ ಅದೇ ಹೆಸರನ್ನು ಇಟ್ಟಿದ್ದೇವೆ ಎನ್ನುತ್ತಾರೆ ಕ್ಯಾಂಬ್ರಿಯಾ.