ಹೃದಯಾಘಾತ: ನಿಮ್ಮ ಜೀವ ಉಳಿಸ್ಬಹುದು ಗೋಲ್ಡನ್ ಅವರ್

Published : Jul 09, 2025, 12:34 PM IST
low blood pressure heart attack risk truth and prevention tips

ಸಾರಾಂಶ

ಈಗಿನ ದಿನಗಳಲ್ಲಿ ಹೃದಯಾಘಾತ ಹೆಚ್ಚಾಗ್ತಿದ್ರೂ ಜನರು ಎದೆ ನೋವನ್ನು ನಿರ್ಲಕ್ಷ್ಯ ಮಾಡ್ತಿದ್ದಾರೆ. ನಮ್ಮ ದೇಹ ಅಪಾಯಕ್ಕೆ ಮುನ್ನ ನಮಗೆ ಮುನ್ಸೂಚನೆ ನೀಡುತ್ತದೆ. ಅದನ್ನು ಗಮನಿಸಿ ಗೋಲ್ಡನ್ ಅವರ್ ನಲ್ಲಿ ಚಿಕಿತ್ಸೆ ಪಡೆದ್ರೆ ಸಾವಿನಿಂದ ತಪ್ಪಿಸಿಕೊಳ್ಬಹುದು. 

ಈಗ ಹೋಗುತ್ತೆ, ನಾಳೆ ಹೋಗುತ್ತೆ ಅಂತ ಬಿಡೋ ವಿಷ್ಯ ಅಲ್ವೇ ಅಲ್ಲ ಹೃದಯ (heart) ಸಮಸ್ಯೆ. ಇದನ್ನು ಬಹಳ ಗಂಭೀರವಾಗಿ ಪರಿಗಣಿಸೋದು ಮಾತ್ರವಲ್ಲ ತಕ್ಷಣ ಕ್ರಮಕೈಗೊಳ್ಬೇಕು. ನೀವು ಲೇಟ್ ಮಾಡಿದಷ್ಟು ಸಾವಿಗೆ ಹತ್ತಿರವಾಗ್ತಾ ಹೋಗ್ತಿರಿ. ಹೃದಯಾಘಾತ ಎಂದು ಕರೆಯಲ್ಪಡುವ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ ಗೆ ತಕ್ಷಣದ ಗಮನ ಅಗತ್ಯ. ಹೃದಯಕ್ಕೆ ರಕ್ತದ ಹರಿವು ಗಮನಾರ್ಹವಾಗಿ ಕಡಿಮೆಯಾದಾಗ ಅಥವಾ ನಿರ್ಬಂಧಿಸಲ್ಪಟ್ಟಾಗ, ಹೃದಯ ಸ್ನಾಯುವಿಗೆ ಆಮ್ಲಜನಕ ಮತ್ತು ಪೋಷಕಾಂಶ ಸಿಗೋದಿಲ್ಲ. ಈ ಸಮಯದಲ್ಲಿ ತುರ್ತು ಚಿಕಿತ್ಸೆ ಅಗತ್ಯವಾಗುತ್ತದೆ. ಇಲ್ಲಿ ಗೋಲ್ಡನ್ ಅವರ್ ಮುಖ್ಯ ಪಾತ್ರವಹಿಸುತ್ತದೆ.

ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ (Myocardial infarction) ಎಂದ್ರೇನು? : ಹೃದಯ, ದಣಿಯದೆ ನಿರಂತರ ಕೆಲಸ ಮಾಡುವ ಅಂಗ. ದೇಹದ ಅಂಗಾಂಶಗಳಿಗೆ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಪೂರೈಸಲು ರಕ್ತವನ್ನು ನಿರಂತರವಾಗಿ ಪಂಪ್ ಮಾಡುತ್ತದೆ. ರಕ್ತ ಹೆಪ್ಪುಗಟ್ಟಿ, ಹೃದಯ ಸ್ನಾಯುವಿಗೆ ರಕ್ತವನ್ನು ತಲುಪಿಸುವ ಜವಾಬ್ದಾರಿಯುತ ನಾಳವಾದ ಪರಿಧಮನಿಯ ಅಪಧಮನಿಗೆ ಅಡ್ಡಿ ಮಾಡುತ್ತದೆ. ಆಗ ಹೃದಯಾಘಾತ ಸಂಭವಿಸುತ್ತದೆ.

ಹೃದಯಾಘಾತದ ಲಕ್ಷಣಗಳು : ಹೃದಯಾಘಾತದ ಲಕ್ಷಣ ಆರಂಭಿಕ ಪತ್ತೆ ಮತ್ತು ಸಕಾಲಿಕ ಚಿಕಿತ್ಸೆ ಪ್ರಾರಂಭಿಸಲು ನಿರ್ಣಾಯಕ ಪಾತ್ರವಹಿಸುತ್ತದೆ. ಎದೆ ನೋವು ಹೃದಯಾಘಾತದ ಸಾಮಾನ್ಯ ಲಕ್ಷಣವಾಗಿದ್ದರೂ ಇನ್ನೂ ಅನೇಕ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಎದೆ ನೋವು : ಎದೆಯಲ್ಲಿ ಒತ್ತಡ, ಹಿಸುಕಿದ ಅನುಭವ, ಹೊಟ್ಟೆ ತುಂಬಿದ ಅಥವಾ ಅಸ್ವಸ್ಥತೆ ಭಾವನೆ ಆಗುತ್ತದೆ.

ಉಸಿರಾಟದ ತೊಂದರೆ : ವಿಶ್ರಾಂತಿ ಪಡೆಯುತ್ತಿರುವಾಗ್ಲೂ ಸರಿಯಾಗಿ ಉಸಿರಾಡಲು ಸಾಧ್ಯವಾಗುವುದಿಲ್ಲ.

ಶೀತ ಬೆವರು: ಚಳಿಯ ವಾತಾವರಣದಲ್ಲೂ ಅತಿಯಾದ ಬೆವರು.

ಜೀರ್ಣಾಂಗ ಸಮಸ್ಯೆ: ವಾಕರಿಕೆ ಅಥವಾ ವಾಂತಿಯೊಂದಿಗೆ ಅನಾರೋಗ್ಯದ ಭಾವನೆ.

ದೇಹದ ಈ ಭಾಗಗಳಲ್ಲಿ ನೋವು : ತೋಳುಗಳು, ಕುತ್ತಿಗೆ, ದವಡೆ ಅಥವಾ ಬೆನ್ನಿನಲ್ಲಿ ನೋವು.

ತಲೆತಿರುಗುವಿಕೆ: ತಲೆ ಸುತ್ತಿದ ಅನುಭವ, ಮೂರ್ಛೆ ಹೋಗುವುದು.

ಆಯಾಸ: ಅಸಾಮಾನ್ಯ ಆಯಾಸ ಅಥವಾ ದೌರ್ಬಲ್ಯ.

ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಮಹಿಳೆ ಹಾಗೂ ಪುರುಷನ ಮಧ್ಯೆ ಲಕ್ಷಣದಲ್ಲಿ ಕೆಲವೊಂದು ವ್ಯತ್ಯಾಸವಿದೆ. ಮೇಲಿನ ಯಾವುದೇ ಲಕ್ಷಣ ನಿಮಗೆ ಅಥವಾ ನಿಮ್ಮವರಿಗೆ ಕಾಣಿಸಿಕೊಂಡಾಗ ತುರ್ತು ಸೇವೆಗಳಿಗೆ ಕರೆ ಮಾಡಿ, ತಕ್ಷಣ ವೈದ್ಯಕೀಯ ಸೇವೆ ಪಡೆಯುವುದು ಸೂಕ್ತ.

ಗೋಲ್ಡನ್ ಅವರ್ ಎಂದರೇನು? : ಹೃದಯಾಘಾತದ ನಂತ್ರ ನಿರ್ಣಾಯಕ ಮೊದಲ 60 ನಿಮಿಷಗಳನ್ನು ಗೋಲ್ಡನ್ ಅವರ್ ಎನ್ನಲಾಗುತ್ತದೆ. ಈ ನಿರ್ಣಾಯಕ ಅವಧಿಯಲ್ಲಿ, ಹೃದಯದ ಸಮಸ್ಯೆಯನ್ನು ಕಡಿಮೆ ಮಾಡುವ ಮೂಲಕ ಬದುಕುಳಿಯುವ ಸಾಧ್ಯತೆ ಹೆಚ್ಚಿಸಲು ತ್ವರಿತ ವೈದ್ಯಕೀಯ ಚಿಕಿತ್ಸೆ ಅತ್ಯಗತ್ಯ. ಚಿಕಿತ್ಸೆಯಿಲ್ಲದೆ ಕಳೆಯುವ ಪ್ರತಿ ನಿಮಿಷ, ಸ್ನಾಯುಗಳನ್ನು ಮತ್ತಷ್ಟು ದುರ್ಬಲಗೊಳಿಸುತ್ತದೆ. ಇದ್ರಿಂದ ರೋಗಿ ಬದುಕುಳಿಯುವ ಸಾಧ್ಯತೆ ಕಡಿಮೆಯಾಗ್ತಾ ಹೋಗುತ್ತದೆ. ಗೋಲ್ಡನ್ ಅವರ್, ತ್ವರಿತ ರೋಗನಿರ್ಣಯ ಮತ್ತು ಚಿಕಿತ್ಸೆಯ ಮಹತ್ವವನ್ನು ಒತ್ತಿಹೇಳುತ್ತದೆ. ತುರ್ತು ಸೇವೆಗಳಿಗೆ ಕರೆ ಮಾಡಿದಾಗ, ತರಬೇತಿ ಪಡೆದ ವೃತ್ತಿಪರರು ಪರಿಸ್ಥಿತಿ ನಿರ್ಣಯಿಸುತ್ತಾರೆ. ಜೀವ ಉಳಿಸುವ ಪ್ರಯತ್ನ ಶುರು ಮಾಡ್ತಾರೆ. ರಕ್ತದಲ್ಲಿ ಆಮ್ಲಜನಕದ ಮಟ್ಟವನ್ನು ಹೆಚ್ಚಿಸುವ ಪ್ರಯತ್ನ, ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯಲು ಮತ್ತು ರಕ್ತದ ಹರಿವನ್ನು ಸುಧಾರಿಸಲು ಔಷಧಿ ನೀಡುವುದು, ಹೃದಯಾಘಾತವನ್ನು ದೃಢೀಕರಿಸಲು ಮತ್ತು ಹೃದಯ ಹಾನಿಯ ಪ್ರಮಾಣವನ್ನು ನಿರ್ಣಯಿಸಲು ಎಲೆಕ್ಟ್ರೋಕಾರ್ಡಿಯೋಗ್ರಾಮ್ (ECG) ಮಾಡುವುದು ಹಾಗೂ ಹೃದಯ ಆರೈಕೆ ಸೌಲಭ್ಯಗಳನ್ನು ಹೊಂದಿರುವ ಸಾರಿಗೆ ಮೂಲಕ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುವುದು ಇದ್ರಲ್ಲಿ ಸೇರಿದೆ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾತ್ರಿ ಮಲಗುವ ಮುನ್ನ ನೀರು ಕುಡಿಯುತ್ತೀರಾ?, ಈ ವಿಷಯಗಳನ್ನು ನೀವು ತಿಳಿದಿರಲೇಬೇಕು
ಕೊಲೊನ್ ಕ್ಯಾನ್ಸರ್.. 30 ವರ್ಷದ ನಂತ್ರ ಈ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ