
ಹೃದಯರಕ್ತನಾಳದ ಕಾಯಿಲೆ (ಸಿವಿಡಿ)ಯು ಬಹಳ ಮಂದಿಯನ್ನು ಕಾಡುತ್ತಿರುವ ಸಮಸ್ಯೆಯಾಗಿದೆ. ಪ್ರತಿವರ್ಷ ವಿಶ್ವಾದ್ಯಂತ ಸುಮಾರು 1.8 ಕೋಟಿ ಮಂದಿ ಇದರಿಂದ ಪ್ರಾಣ ಕಳೆದುಕೊಳ್ಳುತ್ತಾರೆ. ಇದರಲ್ಲಿ ಸುಮಾರು ಐದನೇ ಒಂದು ಭಾಗದ ಮರಣ ಭಾರತದಲ್ಲಿ ನಡೆಯುತ್ತದೆ. ಇದೀಗ ಈ ಸಮಸ್ಯೆಗೆ ಆನುಂಶಿಕ ಅಂಶಗಳೂ ಕಾರಣವಾಗಬಹುದು ಎಂದು ತಜ್ಞರು ತಿಳಿಸುತ್ತಿದ್ದಾರೆ. ಆ ಆನುವಂಶಿಯ ಸಮಸ್ಯೆಯನ್ನು ಎಲಿವೇಟೆಡ್ ಲಿಪೊಪ್ರೋಟೀನ್(ಎ) ಅಥವಾ ಎಲ್‌ಪಿ(ಎ) ಎಂದು ಕರೆಯಲಾಗುತ್ತದೆ.
ವಿಶ್ವ ಹೃದಯ ದಿನಕ್ಕೆ (29 ಸೆಪ್ಟೆಂಬರ್) ಮುಂಚಿತವಾಗಿ ಈ ಕುರಿತು ಚರ್ಚಿಸಲು ಗ್ಲೋಬಲ್ ಹಾರ್ಟ್ ಹಬ್ ಮತ್ತು ನೊವಾರ್ಟಿಸ್ ಸಂಸ್ಥೆಯು ‘ಲಿಟಲ್ (ಎ) ವಿತ್ ಬಿಗ್ ಕಾನ್ಸೀಕ್ವೆನ್ಸಸ್’ ಎಂಬ ವೆಬಿನಾರ್ ಆಯೋಜಿಸಿತ್ತು. ಈ ವೆಬಿನಾರ್‌ನಲ್ಲಿ ಅಂತರರಾಷ್ಟ್ರೀಯ ಮಟ್ಟದ ವೈದ್ಯಕೀಯ ತಜ್ಞರು ಎಲಿವೇಟೆಡ್ ಎಲ್‌ಪಿ(ಎ) ಅನ್ನು ಗಂಭೀರವಾದ, ಕಡಿಮೆ ಗಮನಹರಿಸಲ್ಪಟ್ಟ ಆನುವಂಶಿಕ ಸಮಸ್ಯೆ ಎಂದು ತಿಳಿಸಿದ್ದಾರೆ. ಯಾಕೆಂದರೆ ಈ ಸಮಸ್ಯೆಯು ಹೃದಯಾಘಾತ ಅಥವಾ ಪಾರ್ಶ್ವವಾಯುವಿನಂತಹ ಹೃದಯರಕ್ತನಾಳದ ಕಾಯಿಲೆ ಉಂಟಾಗುವ ಅಪಾಯವನ್ನು ಗಣನೀಯವಾಗಿ ಹೆಚ್ಚಿಸುತ್ತದೆ.
ಭಾರತದ ಜನಸಂಖ್ಯೆಯ ಸುಮಾರು ಶೇ.25ರಷ್ಟು ಜನರು ಈ ಎಲಿವೇಟೆಡ್ ಲಿಪೊಪ್ರೋಟೀನ್(ಎ) ಅಥವಾ ಎಲ್‌ಪಿ(ಎ) ಹೊಂದಿದ್ದಾರೆ ಎಂದು ಅಂದಾಜಿಸಲಾಗಿದೆ. ಆದರೆ ಈ ಸಮಸ್ಯೆಯು ಪರೀಕ್ಷಿಸಲ್ಪಡುವುದು ಬಹಳ ಕಡಿಮೆ ಮತ್ತು ಹೃದಯದ ಆರೋಗ್ಯ ಪಾಲನೆ ವಿಚಾರದಲ್ಲಿ ಈ ಅಂಶವನ್ನು ಬಹುತೇಕ ನಿರ್ಲಕ್ಷಿಸಲಾಗುತ್ತದೆ.
ಏಷಿಯಾ ಪೆಸಿಫಿಕ್ ಮತ್ತು ಮಧ್ಯಪ್ರಾಚ್ಯ ಪ್ರದೇಶಗಳಲ್ಲಿ ಮೂರರಲ್ಲಿ ಇಬ್ಬರು (66%) ನಿಯಮಿತವಾದ ಹೃದಯ ತಪಾಸಣೆಗಳನ್ನು ಮಾಡುವುದಿಲ್ಲ. ಅದರಲ್ಲೂ ಸುಮಾರು ಅರ್ಧದಷ್ಟು ಜನರು (45%) ಹೃದಯ ಕಾಯಿಲೆಯ ಅಪಾಯಕ್ಕೆ ಆನುವಂಶಿಕ ಕಾರಣ ಇರಬಹುದು ಎಂದೇ ತಿಳಿದಿಲ್ಲ ಎಂದು ನೊವಾರ್ಟಿಸ್ ನಡೆಸಿದ ಇತ್ತೀಚಿನ ಸಮೀಕ್ಷಾ ವರದಿಯು ತಿಳಿಸಿದೆ. ಎಲ್‌ಪಿ(ಎ) ಕುರಿತು ಜಾಗೃತಿ ಕಡಿಮೆ ಇದೆ. ಈ ಸಮೀಕ್ಷೆಯಲ್ಲಿ ಉತ್ತರಿಸಿದ ಕೇವಲ ಶೇ.22 ಮಂದಿ ಮಾತ್ರ ಇದಕ್ಕೆ ಬಯೋಮಾರ್ಕರ್ ಪರೀಕ್ಷೆ ನಡೆಸುವ ಕುರಿತು ತಿಳಿದಿದ್ದಾರೆ ಮತ್ತು ಕೇವಲ ಶೇ.7ರಷ್ಟು ಜನರು ಮಾತ್ರ ಈ ಪರೀಕ್ಷೆ ತೆಗೆದುಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಅಪೋಲೋ ಹಾಸ್ಪಿಟಲ್ಸ್ ಭಾರತದ ಕಾರ್ಡಿಯಾಲಜಿ ವಿಭಾಗದ ನಿರ್ದೇಶಕರಾದ ಡಾ. ಎ. ಶ್ರೀನಿವಾಸ್ ಕುಮಾರ್ ಅವರು, ‘ಹೃದಯರಕ್ತನಾಳದ ಕಾಯಿಲೆ ಭಾರತದಲ್ಲಿ ಹೆಚ್ಚು ಮರಣಕ್ಕೆ ಕಾರಣವಾಗುವ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಹೀಗಾಗಿ ಎಲಿವೇಟೆಡ್ ಎಲ್‌ಪಿ(ಎ)ಯಂತಹ ಅಪಾಯಕಾರಕಗಳ ಕುರಿತು ಜಾಗೃತಿ ಹೆಚ್ಚಾಗಿರಬೇಕಾದುದು ಅವಶ್ಯವಾಗಿದೆ. ದಕ್ಷಿಣ ಏಷಿಯನ್ನರು ಸಾಮಾನ್ಯವಾಗಿ ಸೂಕ್ಷ್ಮವಾಗಿರುತ್ತಾರೆ. ವಾಸ್ತವವಾಗಿ, ಭಾರತದ ಶೇ.34ರಷ್ಟು ತೀವ್ರವಾದ ಕೊರೋನರಿ ಸಿಂಡ್ರೋಮ್ ರೋಗಿಗಳು ಜಾಸ್ತಿ ಎಲ್‌ಪಿ(ಎ) ಹೊಂದಿದ್ದಾರೆ.8 ಈ ಅಂಶವು ಡಯಾಬಿಟೀಸ್, ಸ್ಥೂಲಕಾಯ ಮತ್ತು ರಕ್ತದೊತ್ತಡದಂತಹ ಸಮಸ್ಯೆಗಳ ಜೊತೆ ಸೇರಿಕೊಂಡರೆ ಹೃದಯಾಘಾತ ಅಥವಾ ಪಾರ್ಶ್ವವಾಯು ಸಂಭವವು ಗಣನೀಯವಾಗಿ ಹೆಚ್ಚಾಗುತ್ತದೆ. ಎಲ್‌ಪಿ(ಎ) ಪರೀಕ್ಷೆ ನಡೆಸುವುದು ಜಾಸ್ತಿ ಅಪಾಯ ಹೊಂದಿರುವ ಜನರನ್ನು ಮೊದಲೇ ಗುರುತಿಸಲು ಮತ್ತು ಸಂಭಾವ್ಯ ಹೃದಯದ ಅಪಾಯಗಳನ್ನು ತಡೆಗಟ್ಟಲು ಅತ್ಯಗತ್ಯವಾಗಿದೆ’ ಎಂದು ಹೇಳಿದರು.
ಹಾರ್ಟ್ ಹೆಲ್ತ್ ಇಂಡಿಯಾ ಫೌಂಡೇಶನ್ ನ ಸಂಸ್ಥಾಪಕರಾದ ರಾಮ್ ಖಂಡೇಲ್‌ವಾಲ್ ಅವರು, ನೊವಾರ್ಟಿಸ್ ಇಂಡಿಯಾದ ಕಂಟ್ರಿ ಪ್ರೆಸಿಡೆಂಟ್ & ಮ್ಯಾನೇಜಿಂಗ್ ಡೈರೆಕ್ಟರ್ ಅಮಿತಾಭ್ ದುಬೆ, ಅಪೋಲೋ ಹಾಸ್ಪಿಟಲ್ಸ್ ನ ಡಾ. ಎ. ಶ್ರೀನಿವಾಸ್ ಕುಮಾರ್ ಮತ್ತು ಗಚಾನ್ ಯೂನಿವರ್ಸಿಟಿಯ ಗಿಲ್ ಮೆಡಿಕಲ್ ಸೆಂಟರ್ ನ ಪ್ರೊ. ಯಂಗ್‌ವೂ ಜಾಂಗ್, ಯೂನಿವರ್ಸಿಟಿ ಆಫ್ ವೆಸ್ಟರ್ನ್ ಆಸ್ಟ್ರೇಲಿಯಾದ ಕಾರ್ಡಿಯೋ- ಮೆಟಾಬಾಲಿಕ್ ಮೆಡಿಸಿನ್ ತಜ್ಞರಾದ ಪ್ರೊ. ಜೆರಾಲ್ಡ್ ವಾಟ್ಸ್, ಎಫ್ಎಚ್ ಯೂರೋಪ್ ಫೌಂಡೇಶನ್ (ಎಫ್ಎಚ್ಇಎಫ್) ನ ಎಲ್‌ಪಿ(ಎ) ಇಂಟರ್ ನ್ಯಾಷನಲ್ ಟಾಸ್ಕ್ ಫೋರ್ಸ್ ನ ಸೀನಿಯರ್ ಪಾಲಿಸಿ ಅಡ್ವೈಸರ್/ಪ್ರಾಜೆಕ್ಟ್ ಲೀಡ್ ನಿಕೋಲಾ ಬೆಡ್ಲಿಂಗ್ಟನ್, ಎಫ್ಎಚ್ ಯೂರೋಪ್ ಫೌಂಡೇಶನ್ (ಎಫ್ಎಚ್ಇಎಫ್) ನ ಎಲ್‌ಪಿ(ಎ) ಇಂಟರ್ ನ್ಯಾಷನಲ್ ಟಾಸ್ಕ್ ಫೋರ್ಸ್ ನ ಮೊನಾಶ್ ಯೂನಿವರ್ಸಿಟಿಯ ಹೆಲ್ತ್ ಎಕನಾಮಿಕ್ಸ್ ಪ್ರೊಫೆಸರ್ ಪ್ರೊ. ಝಾನ್‌ಫಿನಾ ಅಡೆಮಿ ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.