Happy New Year 2022: ವರ್ಷ ಪೂರ್ತಿ ಖುಷಿಯಾಗಿರಲು ಹೀಗೆ ಮಾಡಿ

By Suvarna News  |  First Published Dec 31, 2021, 10:23 PM IST

ಹೊಸ ವರುಷ (New Year) ಬಂದಾಗಲ್ಲೆಲ್ಲಾ ಎಲ್ಲರೂ ಈ ವರುಷ ಪೂರ್ತಿ ಖುಷಿ (Happy)ಯಾಗಿರಲಿ. ಕಹಿ ಸುದ್ದಿ ಕೇಳದಿರುವಂತಾಗಲಿ. ಎಲ್ಲಾ ಕೆಲಸದಲ್ಲೂ ಯಶಸ್ಸು ಸಿಗಲಿ, ಒತ್ತಡ, ಆತಂಕವಿಲ್ಲದ ವರುಷ ನಮ್ಮದಾಗಲಿ ಎಂದುಕೊಳ್ಳುತ್ತಾರೆ. ನಿಮ್ಮ ಹೊಸ ವರುಷ ಟೆನ್ಶನ್ (Tension) ಫ್ರೀಯಾಗಿರಲು ಈ ಟಿಪ್ಸ್ ಫಾಲೋ ಮಾಡಿ ನೋಡಿ.
 


ಹಳೆಯ ವರುಷವೊಂದು ಹೋಗಿ ಮತ್ತೊಂದು ಹೊಸ ವರುಷ ಬರುತ್ತಿದೆ. ಹೊಸ ಹೊಸ ಕನಸುಗಳು, ನಿರೀಕ್ಷೆಗಳು ಸಹ ಗರಿಗೆದರಿ ನಿಂತಿವೆ. ಕೊರೋನಾ ವೈರಸ್, ಲಾಕ್‌ಡೌನ್, ಹಲವು ಸವಾಲುಗಳ ನಡುವೆ ವರ್ಷವೇನೋ ಮುಗಿಯಿತು. ಕಳೆದ ೧೨ ತಿಂಗಳುಗಳಲ್ಲಿ ನಾವು ಅನುಭವಿಸಿದ ದುಃಖ, ಆಘಾತ ಅಥವಾ ಇತರ ಸವಾಲುಗಳನ್ನು ಅಳಿಸಲು ಸಾಧ್ಯವಿಲ್ಲ. ಆದರೆ ನಾವು ಹೊಸ ವರ್ಷಕ್ಕೆ ಕಾಲಿಡುವಾಗ, ನಮ್ಮ ಹೊಸ ದಿನಗಳನ್ನು ಹೆಚ್ಚೆಚ್ಚು ಸುಧಾರಿಸಲು ಸಹಾಯ ಮಾಡುವ ಆರೋಗ್ಯಕರ ಹೊಸ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬಹುದು. ಹಾಗಿದ್ರೆ ವರ್ಷ ಪೂರ್ತಿ ಮಾನಸಿಕ ಆರೋಗ್ಯ ಉತ್ತಮವಾಗಿರಲು ಏನು ಮಾಡಬೇಕು..?

ಗಿಡಗಳನ್ನು ನೆಡಿ
ಹಸಿರು, ಹಸಿರು ಪರಿಸರ ಯಾವತ್ತೂ ಮನಸ್ಸಿಗೆ ಮುದ ನೀಡುತ್ತದೆ. ಹಾಗೆಯೇ ಗಿಡ ನೆಡುವ ಪ್ರಕ್ರಿಯೆ ಒತ್ತಡ, ಆತಂಕವನ್ನು ಕಡಿಮೆ ಮಾಡಿ ಮನಸ್ಸನ್ನು ಖುಷಿಯಾಗಿಡುತ್ತದೆ. ನಿಸರ್ಗ ಮತ್ತು ಸೂರ್ಯನ ಬೆಳಕಿನಲ್ಲಿ ಸಮಯವನ್ನು ಕಳೆಯುವಾಗ ಮಾನಸಿಕ ಆರೋಗ್ಯವು ಪ್ರವರ್ಧಮಾನಕ್ಕೆ ಬರುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಸ್ನಾಯು ಮತ್ತು ದೇಹದ ಸಮನ್ವಯವನ್ನು ಬಲಪಡಿಸುತ್ತದೆ.

Tap to resize

Latest Videos

New Year Resolutions: ಹೊಸವರ್ಷದ ಸಂಕಲ್ಪವನ್ನು ಕಾಪಾಡಿಕೊಳ್ಳುವುದು ಹೇಗೆ?

ಕಾಮಿಡಿ ಚಲನಚಿತ್ರವನ್ನು ವೀಕ್ಷಿಸಿ
ನಿಮಗೆ ಬೇಸರವಾಗಿದ್ದರೆ, ಅದರಿಂದ ಹೊರಬಂದು ಮನಸ್ಸು ಉಲ್ಲಾಸದಾಯಕ ಆಗಬೇಕೆಂದರೆ ಕಾಮಿಡಿ (Comedy) ಸಿನಿಮಾವನ್ನು ವೀಕ್ಷಿಸಿ. ಇದು ಮನಸ್ಸನ್ನು ದುಃಖದ ಛಾಯೆಯಿಂದ ಹೊರ ತಂದು ಉಲ್ಲಸಿತಗೊಳಿಸುತ್ತದೆ. ನಗುವುದು ನಮ್ಮ ಮನಸ್ಸಿನ ಆರೋಗ್ಯ (Health)ದ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರುತ್ತದೆ.

ಕಷ್ಟದಲ್ಲಿರುವವರಿಗೆ ನೆರವಾಗಿ
ಯಾವಾಗಲೂ ಮತ್ತೊಬ್ಬರ ಕುರಿತು ದಯೆಯಿರಲಿ. ಕಷ್ಟದಲ್ಲಿದ್ದವರಿಗೆ ನೆರವಾಗಿ. ಈ ರೀತಿಯ ಉದಾರತೆಯ ಮನೋಭಾವ ನಿಮಗೆ ನಿಮ್ಮ ತೊಂದರೆಗಳನ್ನು ತಿಳಿದುಕೊಳ್ಳಲು, ಸಮಸ್ಯೆಯೆಡೆಗಿನ ನಿಮ್ಮ ದೃಷ್ಟಿಕೋನವನ್ನು ಬದಲಿಸಲು ನೆರವಾಗುತ್ತದೆ. ಮತ್ತೊಬ್ಬರ ಸಮಸ್ಯೆಗೆ ನೆರವಾಗುವುದರ ಮೂಲಕ ನೀವು ನಿಮ್ಮ ಸಮಸ್ಯೆ ಏನೇನೂ ಅಲ್ಲ ಎಂಬುದನ್ನು ಅರಿತುಕೊಳ್ಳುವಿರಿ.

ಸಾಮಾಜಿಕ ಮಾಧ್ಯಮಗಳ ಬಳಕೆ ಕಡಿಮೆ ಮಾಡಿ
ಸಾಮಾಜಿಕ ಮಾಧ್ಯಮ (Social Media)ವನ್ನು ಹೆಚ್ಚು ಕಾಲ ಬಳಸುವವರು ಹೆಚ್ಚು ನಕಾರಾತ್ಮಕ ಭಾವನೆಯನ್ನು ಹೊಂದಿರುತ್ತಾರೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಹೀಗಾಗಿ ಹೆಚ್ಚು ಹೊತ್ತು ಅನಾವಶ್ಯಕವಾಗಿ ಮೊಬೈಲ್ (Mobile) ಬಳಸುವುದನ್ನು ತಪ್ಪಿಸಿ. ನೀವು ಸಂಪೂರ್ಣವಾಗಿ ಆಫ್‌ಲೈನ್‌ನಲ್ಲಿ ಉಳಿಯಲು ಹೆಣಗಾಡುತ್ತಿದ್ದರೆ, ನಿಮ್ಮ ಮನಸ್ಥಿತಿಯನ್ನು ಸುಧಾರಿಸಲು ಸಾಮಾಜಿಕ ಮಾಧ್ಯಮವನ್ನು ಬಳಸುವ ಬದಲು ತಮಾಷೆಯ ವೀಡಿಯೊಗಳನ್ನು ವೀಕ್ಷಿಸಿ.

New Year 2022: ನ್ಯೂ ಇಯರ್ ರೆಸಲ್ಯೂಷನ್ಸ್ ಫೇಲ್ ಆಗೋದು ಯಾಕೆ..?

ಹಾಯಾಗಿ ನಿದ್ದೆ ಮಾಡಿ
ಒತ್ತಡ ಮತ್ತು ಆತಂಕವು ಅತ್ಯಂತ ಕಡಿಮೆ ನಿದ್ದೆ (Sleep)ಗೆ ಇರುವ ಎರಡು ಸಾಮಾನ್ಯ ಕಾರಣಗಳಾಗಿವೆ. ಮಲಗುವ ಮುನ್ನ ಕನಿಷ್ಠ 30 ನಿಮಿಷಗಳ ಕಾಲ ನಿಮ್ಮ ಫೋನ್ ಇಲ್ಲದೆ ವಿಶ್ರಾಂತಿ ಪಡೆಯಿತು. ಇದು ಮನಸ್ಥಿತಿಯನ್ನು ಸುಧಾರಿಸುತ್ತದೆ. ಮಲಗುವ ಮುನ್ನ ಒಳ್ಳೆಯ ಪುಸ್ತಕವನ್ನು ಓದಿ. ಇಷ್ಟವಾದ ಆಹಾರ (Food)ವನ್ನು ಸೇವಿಸಿ. ಪ್ರೀತಿಪಾತ್ರರೊಡನೆ ಚಾಟ್ ಮಾಡಿ ಅಥವಾ ನಿಮ್ಮ ಮನಸ್ಸನ್ನು ಶಾಂತಗೊಳಿಸುವ ಯಾವುದೇ ಚಟುವಟಿಕೆಯನ್ನು ಮಾಡಿ. ಇದರಿಂದ ಉತ್ತಮ ನಿದ್ದೆಯಾಗಿ ಮನಸ್ಸು ಸಹ ಶಾಂತತೆಯಿಂದ ಕೂಡಿರುತ್ತದೆ.

ಧ್ಯಾನ ಮಾಡಿ
ಪ್ರತಿದಿನ 10 ನಿಮಿಷವನ್ನು ಧ್ಯಾನ (Meditation)ಕ್ಕಾಗಿ ಮೀಸಲಿಡಿ. ಅತ್ಯಂತ ಬಿಝಿಯಾಗಿದ್ದ ದಿನಗಳಲ್ಲೂ ಈ ಧ್ಯಾನವನ್ನು ತಪ್ಪಿಸಬೇಡಿ. ಇದು ಮನಸ್ಸಿನ ಆರೋಗ್ಯ ಉತ್ತಮವಾಗಿರಲು ಪ್ರಯೋಜನಕಾರಿಯಾಗಿದೆ. ಕಾಮ್, ಹೆಡ್‌ಸ್ಪೇಸ್‌ನಂತಹ ಅಪ್ಲಿಕೇಶನ್‌ಗಳು ಧ್ಯಾನವನ್ನು ಎಂದಿಗಿಂತಲೂ ಹೆಚ್ಚು ಸುಲಭವಾಗುವಂತೆ ಮಾಡಿದೆ. ಧ್ಯಾನವು ಮನಸ್ಸಿನಲ್ಲಿರುವ ನಕಾರಾತ್ಮಕ ಮನೋಭಾವವನ್ನು ಹೋಗಲಾಡಿಸುತ್ತದೆ. ಇದರಿಂದಾಗಿ ದಿಢೀರ್ ಸಿಟ್ಟು, ಅಳು ಮೊದಲಾದ ಮೂಡ್ ಸ್ವಿಂಗ್ಸ್ ಕಡಿಮೆಯಾಗುತ್ತದೆ..

ಹೆಚ್ಚು ಗ್ರೀನ್ ಟೀ ಕುಡಿಯಿರಿ
ಬೆಳಗ್ಗೆ, ಸಂಜೆ ಚಹಾ (Tea), ಕಾಫಿ ಕುಡಿಯುವುದು ಹಲವರ ಅಭ್ಯಾಸ. ಹೀಗಾಗಿ ಅದನ್ನು ಬಿಟ್ಟು ಬಿಡುವುದು ಅಷ್ಟು ಸುಲಭವಲ್ಲ. ಮಾನಸಿಕ ಆರೋಗ್ಯ ಉತ್ತಮವಾಗಿರಲು ಟೀ, ಕಾಫಿ ಸೇವನೆಯನ್ನು ಕಡಿಮೆ ಆದಷ್ಟು ಮಾಡಿ. ಇದರ ಬದಲು ಗ್ರೀನ್ ಟೀ (Green tea)ಯನ್ನು ಹೆಚ್ಚೆಚ್ಚು ಕುಡಿಯಿರಿ. ಗ್ರೀನ್ ಟೀ ಮನಸ್ಸಿನ ಆತಂಕವನ್ನು ಕಡಿಮೆ ಮಾಡಿ ಮತ್ತು ಮನಸ್ಸನ್ನು ಒಂದೆಡೆ ಕೇಂದ್ರೀಕರಿಸಲು ನೆರವಾಗುತ್ತದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.

ಚಿಕಿತ್ಸಕರೊಂದಿಗೆ ಮಾತನಾಡಿ
ಚಿಕಿತ್ಸಕ (Therapist)ರ ಜತೆ ಮಾತನಾಡಲು ನಿಮಗೆ ಮಾನಸಿಕ ಸಮಸ್ಯೆಯೇ ಇರಬೇಕೆಂದೇನಿಲ್ಲ. ಮನಸ್ಸಿನ ಒತ್ತಡವನ್ನು ಕಳೆದು ನೆಮ್ಮದಿ ದೊರಕಲು ಚಿಕಿತ್ಸಕರ ಜತೆ ಮನಬಿಚ್ಚಿ ಮಾತನಾಡಿ. ಮಾನಸಿಕ ಆರೋಗ್ಯ ತಜ್ಞರು ಒತ್ತಡವನ್ನು ನಿರ್ವಹಿಸಲು ಮತ್ತು ನಿಮ್ಮ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುವ ಸಮಸ್ಯೆಗಳನ್ನು ನಿಭಾಯಿಸಲು ನೆರವಾಗುತ್ತಾರೆ. ಇದು ನಿಮ್ಮ ಜೀವನವನ್ನು ಸುಧಾರಿಸುತ್ತದೆ.

click me!