Food Tips : ಕಾಫಿ ಹೀರುವ ಮೊದಲು ಈ ಆಹಾರ ಸೇವಿಸ್ಬೇಡಿ

Published : May 17, 2022, 11:57 AM IST
Food Tips : ಕಾಫಿ ಹೀರುವ ಮೊದಲು ಈ ಆಹಾರ ಸೇವಿಸ್ಬೇಡಿ

ಸಾರಾಂಶ

ಜೋರಾಗಿ ಮಳೆ ಹೊಯ್ತಿರುವಾಗ ಕೈನಲ್ಲಿ ಕಾಫಿ ಕಪ್ ಹಿಡಿದು, ಬಜ್ಜಿ ತಿನ್ನುತ್ತಿದ್ದರೆ ಅದ್ರ ಮಜವೇ ಬೇರೆ ಎನ್ನುವವರಿದ್ದಾರೆ. ಕಾಫಿ ಪ್ರೇಮಿಗಳು ದಿನದಲ್ಲಿ ಅನೇಕ ಬಾರಿ ಕಾಫಿ ಸೇವನೆ ಮಾಡ್ತಾರೆ. ಆದ್ರೆ ಕಾಫಿ ಕುಡಿಯುವ ಮೊದಲು ಕೆಲವೊಂದು ಸಂಗತಿ ತಿಳಿದಿರಬೇಕು.  

ಕಾಫಿ (Coffee) ಅಂದ್ರೆ ಅನೇಕರಿಗೆ ಬಹಳ ಇಷ್ಟ. ಬೆಳಿಗ್ಗೆ (Morning )ಎದ್ದ ತಕ್ಷಣ ಕಾಫಿ ಇಲ್ಲವೆಂದ್ರೆ ದಿನ ಶುರುವಾಗೋದಿಲ್ಲ ಎನ್ನುವವರಿದ್ದಾರೆ. ರಾತ್ರಿ (Night) ಮಲಗುವವರೆಗೂ ಐದಾರು ಬಾರಿ ಕಾಫಿ ಕುಡಿಯುವವರನ್ನು ನೀವು ನೋಡ್ಬಹುದು. ಕಾಫಿ ಅಭ್ಯಾಸ (Practice) ವಾದ್ರೆ ಅದನ್ನು ಬಿಡೋದು ಕಷ್ಟ. ಕಾಫಿಯಲ್ಲಿ ಕೆಫೀನ್ (Caffeine) ಅಂಶವಿದೆ. ಕಾಫಿ ಮನಸ್ಸನ್ನು ಉಲ್ಲಾಸಗೊಳಿಸುವುದಲ್ಲದೆ ಮೂಡ್ ಫ್ರೆಶ್ (Mood Fresh) ಮಾಡುತ್ತದೆ. ಕಾಫಿ ಮೆದುಳ (brain)ನ್ನು ಸಕ್ರಿಯಗೊಳಿಸುತ್ತದೆ. ಕೆಲಸ (Work) ಮಾಡಲು ಉತ್ಸಾಹ (Excitement) ನೀಡುತ್ತದೆ. ಕಾಫಿ ಸೇವನೆ ಬಗ್ಗೆ ಅನೇಕ ಸಂಶೋಧನೆ (Research) ಗಳು ನಡೆದಿವೆ. ಹಿತವಾಗಿ ಕಾಫಿ ಸೇವನೆ ಮಾಡಿದ್ರೆ ಆರೋಗ್ಯ (Health)ಕ್ಕೆ ಒಳ್ಳೆಯದು. ಮಿತಿ ಮೀರಿದ ಕಾಫಿ ಅನಾರೋಗ್ಯ (Illness)ಕ್ಕೆ ಕಾರಣವಾಗುತ್ತದೆ. ಕೆಲ ಆಹಾರ (Food) ವನ್ನು ಕಾಫಿ ಜೊತೆ ಸೇವನೆ ಮಾಡ್ಬಾರದು. ಕಾಫಿ ಜೊತೆ ಕೆಲ ಆಹಾರವನ್ನು ಸೇವನೆ ಮಾಡಿದ್ರೆ ಆರೋಗ್ಯ ಹದಗೆಡುತ್ತದೆ.  ಕಾಫಿ ಸೇವನೆ ಮಾಡುವ ಒಂದು ಗಂಟೆ ಮೊದಲು ಅಪ್ಪಿತಪ್ಪಿಯೂ ಕೆಲ ಆಹಾರವನ್ನು ಸೇವನೆ ಮಾಡ್ಬಾರದು. ಇಂದು ಕಾಫಿಗಿಂತ ಮೊದಲು ಯಾವ ಆಹಾರವನ್ನು ಸೇವಿಸಬಾರದು ಎಂಬುದನ್ನು ನಾವಿಂದು ಹೇಳ್ತೇವೆ. 

ಕಾಫಿ ಸೇವನೆಗೂ ಮುನ್ನ ಈ ಆಹಾರ ಸೇವನೆ ಮಾಡ್ಬೇಡಿ

ಕ್ಯಾಲ್ಸಿಯಂ (Calcium ) ಭರಿತ ಆಹಾರ ಸೇವನೆಯಿಂದ ದೂರವಿರಿ : ಕಾಫಿ ಸೇವಿಸುವ ಮೊದಲು, ನೀವು ಕ್ಯಾಲ್ಸಿಯಂ ಭರಿತ ಆಹಾರದಿಂದ ದೂರವಿರಬೇಕು. ವಾಸ್ತವವಾಗಿ, ಕಾಫಿಯಲ್ಲಿರುವ ಕೆಫೀನ್‌,ಕ್ಯಾಲ್ಸಿಯಂ ಹೀರಿಕೊಳ್ಳುವುದಿಲ್ಲ. ಇದಲ್ಲದೆ ಕಾಫಿ ಸೇವನೆಗಿಂತ ಮೊದಲು ನೀವು ಕ್ಯಾಲ್ಸಿಯಂ ಆಹಾರ ಸೇವನೆ ಮಾಡಿದ್ರೆ ಈ ಕ್ಯಾಲ್ಸಿಯಂ ಮೂತ್ರ (Urine) ದ ಮೂಲಕ ಹೊರಹೋಗುತ್ತದೆ. ಇಂಥ ಸಂದರ್ಭದಲ್ಲಿ ಕಾಲ್ಸಿಯಂ ಆಹಾರ ಸೇವನೆ ಮಾಡಿಯೂ ಪ್ರಯೋಜನವಿಲ್ಲ.  ನಿಮ್ಮ ದೇಹ ಇದ್ರಿಂದ ಯಾವುದೇ ಪ್ರಯೋಜನ ಪಡೆಯುವುದಿಲ್ಲ. ಹಾಗಾಗಿ ಕಾಫಿಗೆ ಮೊದಲು ನೀವು ಕ್ಯಾಲ್ಸಿಯಂ ಆಹಾರ ಸೇವನೆ ಮಾಡ್ಬೇಡಿ.

ಅತಿಯಾದ ಸ್ಮಾರ್ಟ್‌ಫೋನ್ ಬಳಕೆಯಿಂದ ಆತ್ಮಹತ್ಯೆ ಯೋಚನೆ ಹೆಚ್ಚಳ: ಅಧ್ಯಯನ

ಎಣ್ಣೆಯುಕ್ತ ಆಹಾರ (Oily Food) ದಿಂದ ದೂರವಿರಿ : ಕಾಫಿ ಕುಡಿಯುವ ಮೊದಲು ಎಣ್ಣೆಯುಕ್ತ ಆಹಾರವನ್ನು ಸೇವಿಸಬಾರದು. ಸಾಮಾನ್ಯವಾಗಿ ಕಾಫಿ ಜೊತೆ ಎಣ್ಣೆಯಲ್ಲಿ ಕರಿದ  ಆಹಾರ, ಬಿಸಿ ಬಿಸಿ ಬಜ್ಜಿ, ಬೋಂಡಾವನ್ನು ನೀಡಲಾಗುತ್ತದೆ. ಕಾಫಿ ಜೊತೆ ಕರಿದ ಆಹಾರ ಸೇವನೆ ಮಾಡಿದ್ರೆ ಗ್ಯಾಸ್ ಸಮಸ್ಯೆ ಎದುರಾಗುತ್ತದೆ. ಗ್ಯಾಸ್ ಸಮಸ್ಯೆಯಿರುವವರು ಅಪ್ಪಿತಪ್ಪಿಯೂ ಕಾಫಿ ಜೊತೆ ಕರಿದ ಆಹಾರವನ್ನು ಸೇವನೆ ಮಾಡ್ಬೇಡಿ. ಹಾಗೆ ಕಾಫಿ ಸೇವನೆಗೆ ಒಂದು ಗಂಟೆ ಮೊದಲು ನೀವು ಕರಿದ ಆಹಾರ ತಿನ್ಬೇಡಿ,

ಸತು (Zinc) ಭರಿತ ಆಹಾರದಿಂದ ದೂರವಿರಿ : ಸತು ಹೊಂದಿರುವ ಆಹಾರವನ್ನು ಕೂಡ ಕಾಫಿ ಮೊದಲು ಹಾಗೂ ಕಾಫಿ ಜೊತೆ ಸೇವಿಸಬಾರದು. ಏಕೆಂದರೆ, ನೀವು ಕಾಫಿ ಕುಡಿದ ತಕ್ಷಣ, ನಿಮ್ಮ ದೇಹವು ಸತು ಹೊಂದಿರುವ ವಸ್ತುಗಳನ್ನು ಹೊರಹಾಕುತ್ತದೆ. ಇದು ನಿಮ್ಮ ದೇಹಕ್ಕೆ ಹಾನಿಯಾಗಬಹುದು. ಹಾಗಾಗಿ ಸತುವಿನಿಂದ ಕೂಡಿದ ಯಾವುದೇ ಆಹಾರವನ್ನು ಕಾಫಿಗೆ ಮೊದಲು ಸೇವನೆ ಮಾಡಲು ಹೋಗ್ಬೇಡಿ.

WORLD HYPERTENSION DAY 2022: ಅಧಿಕ ರಕ್ತದೊತ್ತಡ ನಿಯಂತ್ರಿಸುವುದು ಹೇಗೆ ?

ಕಬ್ಬಿಣಾಂಶ (Iron) ವಿರುವ ಆಹಾರವನ್ನು ಸೇವಿಸಬೇಡಿ : ಕಾಫಿ ಕುಡಿಯುವ ಮೊದಲು ಕಬ್ಬಿಣದ ಅಂಶವಿರುವ ಆಹಾರವನ್ನು ಸೇವಿಸಬೇಡಿ. ಏಕೆಂದರೆ ಇದು ನಿಮ್ಮ ಆರೋಗ್ಯವನ್ನು ಹದಗೆಡಿಸುತ್ತದೆ. ಕಬ್ಬಿಣಾಂಶವಿರುವ ಅವರೆಕಾಳು (Peas), ನಟ್ಸ್,ಕಡಲೆಗಳನ್ನು ತಿನ್ನಬಾರದು. ಇದಲ್ಲದೆ ಕಾಫಿಗಿಂತ ಮೊದಲು ಹಾಗೂ ಕಾಫಿ ಜೊತೆ ವಿಟಮಿನ್-ಡಿ ಆಹಾರದಿಂದಲೂ ನೀವು ದೂರವಿರಬೇಕು. ಕಾಫಿ ಜೊತೆ ಈ ವಿಟಮಿನ್ ಆಹಾರವನ್ನು ಸೇವಿಸಿದರೆ, ನಿಮ್ಮ ದೇಹವು ಸಂಪೂರ್ಣ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ.   

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಔಷಧವಾಗಿ ಆಹಾರ: ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಬಗ್ಗೆ ನೀವು ಈ ವಿಷಯ ಅಗತ್ಯವಾಗಿ ತಿಳ್ಕೊಳ್ಳಲೇಬೇಕು!
NIMHANS MindNote app: ಮಾನಸಿಕ ಆರೋಗ್ಯಕ್ಕೆ ನಿಮ್ಹಾನ್ಸ್ ಮೈಂಡ್‌ ನೋಟ್‌ ಆ್ಯಪ್: ಈಗ ಕನ್ನಡದಲ್ಲಿ!