World Hypertension Day 2022: ಅಧಿಕ ರಕ್ತದೊತ್ತಡ ನಿಯಂತ್ರಿಸುವುದು ಹೇಗೆ ?

By Suvarna News  |  First Published May 17, 2022, 9:10 AM IST

ಪ್ರತಿ ವರ್ಷ ಮೇ 17ರಂದು ಜಗತ್ತಿನಾದ್ಯಂತ ವಿಶ್ವ ಹೈಪರ್ ಟೆನ್ಶನ್ ದಿನ (World Hypertension Day)ವನ್ನು ಆಚರಿಸಲಾಗುತ್ತದೆ. ಅಧಿಕ ರಕ್ತದೊತ್ತಡ  ಉಂಟಾಗಲು ಪ್ರಮುಖ ಕಾರಣ ಹೈಪರ್ ಟೆನ್ಶನ್. ಅಧಿಕ ರಕ್ತದೊತ್ತಡವನ್ನು ಪತ್ತೆ ಮಾಡುವುದು ಹೇಗೆ ? ಯಾವ ವಯಸ್ಸಿನಲ್ಲಿ (Age) ಸಮಸ್ಯೆ (Problem) ಕಾಣಿಸಿಕೊಳ್ಳುತ್ತದೆ ? ಇದನ್ನು ನಿಯಂತ್ರಣ ಮಾಡುವುದು ಹೇಗೆ ತಿಳಿದುಕೊಳ್ಳೋಣ.


ಅಧಿಕ ರಕ್ತದೊತ್ತಡ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರಲ್ಲಿ ಕಾಣಿಸಿಕೊಳ್ಳುತ್ತಿದೆ. ಬದಲಾದ ಜೀವನಶೈಲಿ, ಒತ್ತಡದ ಜೀವನ, ಆಹಾರ ಸರಿಯಾಗಿ ಸೇವನೆ ಮಾಡದೆ ಇರುವುದು, ಆಲ್ಕೋಹಾಲ್‌ (Alcohol0, ಧೂಮಪಾನದ (Smoking) ಅಭ್ಯಾಸ ಸೇರಿದಂತೆ ಹಲವು ಕಾರಣಗಳಿಂದ ಹೈಪರ್‌ಟೆನ್ಷನ್‌ (Hypertension) ಕಾಣಿಸಿಕೊಳ್ಳುತ್ತಿದೆ. 140/90 ಗಿಂತ ರಕ್ತದೊತ್ತಡವು ಹೆಚ್ಚು ಇದ್ದರೆ ಅದನ್ನು ಅಧಿಕ ರಕ್ತದೊತ್ತಡ ಎಂದು ಹೇಳಲಾಗುತ್ತದೆ. ಹೃದಯ ಸಂಬಂಧಿತ ಕಾಯಿಲೆ ಪಾರ್ಶ್ವವಾಯು, ಮೂತ್ರಪಿಂಡ ವೈಫಲ್ಯಗಳಂತಹಾ ಸಮಸ್ಯೆಗೆ ಅಧಿಕ ರಕ್ತದೊತ್ತಡ ಪ್ರಮುಖ ಕಾರಣವಾಗಿದೆ. ಹೀಗಾಗ ರಕ್ತದೊತ್ತಡ ನಿಯಂತ್ರಣಕ್ಕೆ  ತರದಿದ್ದಲ್ಲಿ ಆರೋಗ್ಯಕ್ಕೆ (Health) ಸಂಬಂಧಿಸಿದ ಇತರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 

ಅಧಿಕ ರಕ್ತದೊತ್ತಡವನ್ನು ಪತ್ತೆ ಮಾಡುವುದು ಹೇಗೆ ?
ಕೆಲವು ರೋಗಿಗಳಲ್ಲಿ ಅತಿ ರಕ್ತದೊತ್ತಡವಿದ್ದರೆ ಎದೆ ನೋವು, ತಲೆತಿರುಗುವಿಕೆ, ಕಣ್ಣು ಮಂಜಾಗುವಿಕೆ ಮುಂತಾದ ಸೂಚನೆಗಳಲ್ಲಿ ಕಂಡುಬರಬಹುದು. ಅಂತಹ ಸಂದರ್ಭಗಳಲ್ಲಿ ವೈದ್ಯರ ಬಳಿ ಹೋಗಿ ತಪಾಸಣೆ ಮಾಡಿಕೊಳ್ಳಬೇಕು. ಅಧಿಕ ರಕ್ತದೊತ್ತಡದ ಮುನ್ಸೂಚನೆಗಳಿದ್ದರೆ ರೋಗಿಗಳಿಗೆ ಕೆಲವೊಮ್ಮೆ ವೈದ್ಯರು ಇಸಿಜಿ, carotid Doppler, ಮೂತ್ರಪಿಂಡದ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಕಣ್ಣಿನ ಪರೀಕ್ಷೆಯ ಮೂಲಕ ಪತ್ತೆ ಮಾಡುತ್ತಾರೆ.

Tap to resize

Latest Videos

ಮಧುಮೇಹ, ಬಿ.ಪಿ.ಗೆ ಮುನ್ನೆಚ್ಚರಿಕೆಯೇ ಮದ್ದು!

ಯಾವ ವಯಸ್ಸಿನಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ ?
ಸಾಮಾನ್ಯವಾಗಿ 45 ವರ್ಷದ ನಂತರ ಅಧಿಕ ರಕ್ತದೊತ್ತಡದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದರೆ ಈಗ ಜೀವನಶೈಲಿ (Lifestyle) ಬದಲಾಗಿದೆ. ಸದಾ ಒತ್ತಡದ ಬದುಕು, ಅನಿಯಮಿತ ಆಹಾರಗಳ (Food) ಸೇವನೆ, ಧೂಮಪಾನದ ಅಭ್ಯಾಸ, ಮಾನಸಿಕ ಒತ್ತಡ ಜೊತೆಗೆ ಸರಿಯಾಗಿ ನಿದ್ದೆ ಮಾಡದೇ ಇರುವುದರಿಂದ 20 ರಿಂದ 40 ವರ್ಷದವರಿಗೂ ರಕ್ತದೊತ್ತಡ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.

ಅತಿಯಾದ ಮದ್ಯಪಾನ, ಧೂಮಪಾನ ಮಾಡುವವರಲ್ಲಿ ಅಧಿಕ ರಕ್ತದೊತ್ತಡದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅತಿಯಾದ ತೂಕ, ಬೊಜ್ಜು ತುಂಬಿದ್ದರೆ ಅತಿಯಾದ ರಕ್ತದೊತ್ತಡ ಕಾಣಿಸಿಕೊಳ್ಳುವ ಸಂಭವ ಹೆಚ್ಚಾಗಿರುತ್ತದೆ. ಹೆಚ್ಚು ನೋವಿನ ಮಾತ್ರೆಗಳನ್ನು ತೆಗೆದುಕೊಳ್ಳುವವರಿಗೆ, ಸ್ಟಿರಾಯಿಡ್‌ ಬಳಕೆ ಮಾಡುವವರಲ್ಲಿಯೂ ಅಧಿಕ ರಕ್ತದೊತ್ತಡದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೆಚ್ಚು ಜಂಕ್‌ ಫುಡ್‌, ಎಣ್ಣೆ ಪದಾರ್ಥಗಳ ಸೇವನೆ, ಸದಾ ಒತ್ತಡದಲ್ಲಿ ಇರುವವರಿಗೂ ಈ ಅಧಿಕ ರಕ್ತದೊತ್ತಡ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಅಧಿಕ ರಕ್ತದೊತ್ತಡ ನಿಯಂತ್ರಣ ಹೇಗೆ ?
ವಯಸ್ಸಾದಂತೆ ಅಧಿಕ ರಕ್ತದೊತ್ತಡದ ಸಮಸ್ಯೆ ಸಾಮಾನ್ಯ. ಒಂದು ವೇಳೆ 30 ಅಥವಾ 40 ನೇ ವರ್ಷದಲ್ಲಿಯೇ ರಕ್ತದೊತ್ತಡ ಕಾಣಿಸಿಕೊಂಡಿದ್ದರೆ 50 ವರ್ಷದ ನಂತರ ಅದು ಅಧಿಕ ರಕ್ತದೊತ್ತಡಕ್ಕೆ ದೂಡಬಹುದು. ಆರಂಭದಲ್ಲಿ ಯಾವುದೇ ಗಂಭೀರ ಲಕ್ಷಣಗಳು ತೋರದೆ ವಯಸ್ಸಾದಂತೆ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹೀಗಾಗಿ ಅರಂಭಿಕ ಲಕ್ಷಣಗಳಲ್ಲೇ ಸರಿಯಾದ ಚಿಕಿತ್ಸೆ ಆರಂಭಿಸಿ. 50 ವರ್ಷದ ನಂತರವಂತೂ ಆಗಾಗ ತಪಾಸಣೆ ಹಾಗೂ ಔಷಧಗಳನ್ನು ಪಡೆಯುವುದು ಅಗತ್ಯವಾಗಿರುತ್ತದೆ.

Health Tips: ಒತ್ತಡ ಮತ್ತು ಹೃದಯಾಘಾತಕ್ಕೆ ಸಂಬಂಧವಿದ್ಯಾ ?

ಹೃದಯ (Heart) ರಕ್ತನಾಳಗಳಿಗೆ ಸಂಬಂಧಿಸಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಟೊಮೆಟೋ ಸೇವನೆ ಒಳ್ಳೆಯದು ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಬಿಪಿ ಕಡಿಮೆ ಮಾಡಿಕೊಳ್ಳಲು ಸಹ ಟೊಮೆಟೋ ಸೇವನೆ ಉತ್ತಮ ಮಾರ್ಗ. ಇದಲ್ಲದೆ ಮನಸ್ಸಿಗೆ ಹೆಚ್ಚು ಒತ್ತಡ ಹಾಕಿಕೊಳ್ಳುವುದನ್ನು ಬಿಟ್ಟು ಬಿಡಬೇಕು. ಯೋಗ, ಧ್ಯಾನ ಮಾಡುವ ಅಭ್ಯಾಸ ಒಳ್ಳೆಯದು. ಆದರೂ 
ಅಧಿಕ ರಕ್ತದೊತ್ತಡದ ಸಮಸ್ಯೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುವ ಕಾರಣ ನೇರವಾಗಿ  ವೈದ್ಯರ ಬಳಿ ಸಲಹೆ ಪಡೆದುಕೊಳ್ಳುವುದು ಉತ್ತಮ 

ಜೀವನಶೈಲಿ ಹೇಗಿರಬೇಕು ?

-ಎಲ್ಲಾ ರೀತಿಯ ಆಹಾರ ಸೇರಿಸಿ ದಿನಕ್ಕೆ ಕೇವಲ ಒಂದು ಸ್ಪೂನ್‌ನಷ್ಟು ಉಪ್ಪನ್ನು ಮಾತ್ರ ಸೇವಿಸಿ

-ಸಂಸ್ಕರಿತ ಆಹಾರ ಸೇವನೆಯನ್ನು ನಿಯಂತ್ರಿಸಿ, ಹಣ್ಣು, ತರಕಾರಿ, ಧಾನ್ಯಗಳನ್ನು ಹೆಚ್ಚು ತಿನ್ನಿ 

-ತೂಕ ನಿರ್ವಹಿಸಿ. ದೈಹಿಕ ವ್ಯಾಯಾಮ ಮಾಡಿ. ಅಧಿಕ ತೂಕದ ಸಮಸ್ಯೆಯಿದ್ದಾಗ ಆರೋಗ್ಯ ಕಾಪಾಡಿಕೊಳ್ಳುವುದು ಕಷ್ಟವಾಗುತ್ತದೆ. 

-ಅಲ್ಕೋಹಾಲ್‌, ಧೂಮಪಾನ ಸೇವನೆಯಿಂದ ದೂರವಿರಿ

-ಸಾಕಷ್ಟು ಪ್ರಮಾಣದಲ್ಲಿ ನಿದ್ದೆ ಮಾಡಿ.ನಿಯಮಿತವಾಗಿ ಧ್ಯಾನ, ಯೋಗ ಮಾಡುವುದನ್ನು ಮರೆಯದಿರಿ.

click me!