ಉತ್ತಮ ಲೈಂಗಿಕ ಜೀವನ ಮತ್ತು ಸಂತಾನೋತ್ಪತ್ತಿ ಸಾಮರ್ಥ್ಯ ನಿಮ್ಮದಾಗಬೇಕಾದರೆ ಪ್ಲಾಸ್ಟಿಕ್ ಪದಾರ್ಥಗಳಲ್ಲಿರುವ ಆಹಾರಗಳನ್ನು ಸೇವಿಸುವುದನ್ನು ಕೈಬಿಡಿ.
ಮನೆಗೆ ಸ್ವಿಗ್ಗಿಯ ಮೂಲಕವೋ ಜೊಮ್ಯಾಟೋ ಮೂಲಕವೋ ರೋಟಿ, ಕುಲ್ಚಾ, ಪನೀರ್ ಬಟರ್ ಮಸಾಲಾ ತರಿಸುತ್ತೀರಿ. ಅದನ್ನು ಪ್ಲಾಸ್ಟಿಕ್ ಅಥವಾ ಅಲ್ಯಮುನಿಯಂ ಫಾಯಿಲ್‌ನಲ್ಲಿ ಸುತ್ತಿ ತಂದು ಕೊಡುತ್ತಾನೆ. ದಾರಿ ಬದಿಯ ಯಾವುದೋ ಹೋಟೆಲ್‌ನಿಂದ ಇಡ್ಲಿ ಚಟ್ನಿ ಸಾಂಬಾರ್ ಕಟ್ಟಿಕೊಂಡು ಮನೆಗೆ ಹೋಗಿ ಸೇವಿಸುತ್ತೀರಿ. ಅವನೂ ಅದನ್ನು ಪ್ಲಾಸ್ಟಿಕ್‌ನಲ್ಲಿ ತುಂಬಿಸಿ ಕೊಡುತ್ತಾನೆ. ರುಚಿಯಾಗಿಯೇ ಇರುತ್ತದೆ, ಅದಕ್ಕೇನೂ ಸಮಸ್ಯೆಯಿಲ್ಲ. ಆದರೆ ಪ್ರತಿದಿನ ಹೀಗೆ ಪ್ಲಾಸ್ಟಿಕ್‌ನಲ್ಲಿ ಆಹಾರ ತಂದು ಸೇವಿಸುತ್ತೀರಾ?
ಇದಲ್ಲದೇ ಪ್ಯಾಕ್ಡ್ ಪೂಡ್ ಸೇವಿಸುವ ಅಭ್ಯಾಸವೂ ನಿಮಗಿದೆಯಾ? ಅಂದರೆ ಪ್ಲಾಸ್ಟಿಕ್ ರ್ಯಾಪರ್‌ಗಳಲ್ಲಿ ತುಂಬಿಸಿಡುವ ಚಿಪ್ಸ್, ಕುರುಕುರೆ, ಮತ್ತಿತರ ಪದಾರ್ಥಗಳು. ಇವನ್ನೂ ದಿನಾ ತಿಂತೀರಾ? ಹಾಗಾದ್ರೆ ನಿಮ್ಮ ಪುರುಷತ್ವಕ್ಕೆ ಧಕ್ಕೆ ಬಂದಿತೆಂದೇ ಅರ್ಥ.
ಇದು ನಿಜ. ಬಹುದಿನಗಳ ಅಧ್ಯಯನದ ಬಳಿಕ ವಿಜ್ಞಾನಿಗಳು ಕಂಡುಕೊಂಡ ಸಂಗತಿ ಇದು. ಟೋಕಿಯೋ ವಿಶ್ವವಿದ್ಯಾಲಯದ ತಜ್ಞರು ಮೈಕ್ರೋಪ್ಲಾಸ್ಟಿಕ್ ಅಂಶಗಳಿಂದ ಮನುಷ್ಯನ ದೇಹದ ಮೇಲಾಗುವ ಪರಿಣಾಮಗಳನ್ನು ಅಧ್ಯಯನ ಮಾಡಿದ್ದಾರೆ. ಇವುಗಳಿಂದ ಕರುಳು, ಜಠರ, ಕಿಡ್ನಿಗಳ ಮೇಲಾಗುವ ದುಷ್ಪರಿಣಾಮವನ್ನು ಒತ್ತಿ ಹೇಳಿದ್ದಾರೆ. ಜೊತೆಗೇ ಅವರು ಹೇಳಿರುವ ಮಾತೆಂದರೆ- ಆಹಾರದ ಜೊತೆಗೆ ನಮ್ಮ ಕಣ್ಣಿಗೆ ಕಾಣದ ಸೂಕ್ಷ್ಮ ಮೈಕ್ರೋಪ್ಲಾಸ್ಟಿಕ್ ಅಂಶಗಳು ಹೊಟ್ಟೆಗೆ ಹೋಗುವುದಲ್ಲದೆ ನಮ್ಮ ಲೈಂಗಿಕ ಸಾಮರ್ಥ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.
ಪುರುಷರಲ್ಲಿ ಅವರು ವೀರ್ಯ ನಾಶಕ್ಕೆ ಕಾರಣವಾಗುತ್ತವೆ. ಅಂದರೆ ವೃಷಣದಲ್ಲಿರುವ ವೀರ್ಯದ ಉತ್ಪತ್ತಿಯ ಗ್ಲಾಂಡ್‌ಗಳಲ್ಲಿ ಇವು ಸೇರಿಕೊಂಡು ವೀರ್ಯದ ಚಲನೆ ಕುಂಠಿತವಾಗುವ ಹಾಗೆ ಮಾಡುತ್ತವೆ. ಮೈಕ್ರೋಪ್ಲಾಸ್ಟಿಕ್‌ಗಳು ನ್ಯೂರೋಎಂಡೋಕ್ರೈನ್ ವ್ಯವಸ್ಥೆಯನ್ನು ಅಡ್ಡಿಪಡಿಸಬಹುದು. ಇದು ಲೈಂಗಿಕ ಹಾರ್ಮೋನ್ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ಅವು ಪುರುಷರಲ್ಲಿ ರಕ್ತ-ವೃಷಣ ತಡೆಗೋಡೆಗೆ ಅಡ್ಡಿಪಡಿಸಬಹುದು. ಇದು ವೀರ್ಯ ಉತ್ಪಾದನೆಯನ್ನು ದುರ್ಬಲಗೊಳಿಸುತ್ತದೆ.
ಇನ್ನು ಮಹಿಳೆಯರಲ್ಲಿ, ಈ ಮೈಕ್ರೊಪ್ಲಾಸ್ಟಿಕ್‌ಗಳು ಅಂಡಾಶಯದ ಕ್ಷೀಣತೆ ಮತ್ತು ಎಂಡೊಮೆಟ್ರಿಯಲ್ ಹೈಪರ್‌ಪ್ಲಾಸಿಯಾವನ್ನು ಉಂಟುಮಾಡಬಹುದು. ಅಂದರೆ ಅಂಡಾಶಯದಲ್ಲಿ ಉತ್ಪತ್ತಿಯಾಗುವ ಅಂಡಗಳು ಸರಿಯಾಗಿ ಆಗದಂತೆ ದುಷ್ಪರಿಣಾಮ ಬೀರಬಹುದು. ಇದರಿಂದ ಅಂಡಗಳು ವಿಕಲವಾಗಿ ಉಂಟಾಗಬಹುದು. ವೀರ್ಯದ ಜೊತೆ ಸೇರಿ ಫಲಿತವೇ ಆಗಲಿಕ್ಕಿಲ್ಲ ಅಥವಾ ಫಲಿತವಾದರೂ, ವಿಕಲಾಂಗ ಮಗು ಹುಟ್ಟಬಹುದು.
ಬೇಯಿಸಿದ ಮೊಟ್ಟೆ ದಿನವೂ ತಿನ್ನುವುದರಿಂದ ಹೀಗೂ ಆಗುತ್ತೆ ಎಚ್ಚರ!
ಪ್ಲಾಸ್ಟಿಕ್‌ನಲ್ಲಿರುವ ಥಾಲೇಟ್‌ಗಳು, ಬಿಸ್ಫೆನಾಲ್ ಎ (ಬಿಪಿಎ) ಮತ್ತು ಇತರ ಅಂತಃಸ್ರಾವಕ-ಅಡಚಣೆಯ ರಾಸಾಯನಿಕಗಳು (ಇಡಿಸಿ) ನಿಮ್ಮ ದೇಹದ ಹಾರ್ಮೋನ್ ಉತ್ಪಾದನೆ ಮತ್ತು ಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಬಹುದು. ಈ ರಾಸಾಯನಿಕಗಳು ಪ್ಲಾಸ್ಟಿಕ್‌ಗಳು, ಸೌಂದರ್ಯವರ್ಧಕಗಳು, ವೈಯಕ್ತಿಕ ಆರೈಕೆ ಉತ್ಪನ್ನಗಳು ಮತ್ತು ರೂಮ್ ಫ್ರೆಶ್‌ನರ್‌ಗಳಲ್ಲಿ ಕಂಡುಬರುತ್ತವೆ.
ಸಾಮಾನ್ಯವಾಗಿ ಪರಿಸರದಲ್ಲಿ ಕಡಿಮೆ ಮಟ್ಟದಲ್ಲಿದ್ದರೂ ಸಹ, ಜನರು ಪ್ರತಿದಿನ ಅನೇಕ EDC ಗಳಿಗೆ ಒಡ್ಡಿಕೊಳ್ಳುತ್ತಾರೆ. ಒಬ್ಬ ವ್ಯಕ್ತಿಯು ಹೆಚ್ಚು ಪ್ಲಾಸ್ಟಿಕ್ ಸಂಯುಕ್ತಗಳು ಮತ್ತು EDC ಗಳಿಗೆ ಒಡ್ಡಿಕೊಂಡಷ್ಟೂ ಅವನ ದೇಹ ಮತ್ತು ಸಂತಾನೋತ್ಪತ್ತಿಯ ಮೇಲೆ ಹೆಚ್ಚಿನ ಸಂಭಾವ್ಯ ಪರಿಣಾಮ ಬೀರುತ್ತದೆ. ಅಂದರೆ ಅವನಲ್ಲಿ ಲೈಂಗಿಕ ಉತ್ಪಾದನೆಯ ಸಾಮರ್ಥ್ಯ ಸೊರಗುತ್ತದೆ. ಮಹಿಳೆಯರಲ್ಲೂ ಇದೇ ಆಗುತ್ತದೆ.
ಫ್ರಿಡ್ಜ್‌ನಲ್ಲಿ ಬಹಳ ಕಾಲ ಹಣ್ಣು, ತರಕಾರಿ ತಾಜಾ ಆಗಿರಿಸುವುದು ಹೇಗೆ?