ಉರಿ, ಕೆಂಪು ಗುಳ್ಳೆ, ತುರಿಕೆಯುಳ್ಳ ಚರ್ಮ ಸಮಸ್ಯೆ ಇದ್ರೆ ಈ ಆಹಾರ ಬೇಡ

By Web DeskFirst Published Oct 31, 2019, 3:09 PM IST
Highlights

ಎಕ್ಸಿಮಾ ಚರ್ಮಸಮಸ್ಯೆ ಆಹಾರದಿಂದ ಬರುವುದಿಲ್ಲವಾದರೂ, ಆಹಾರದ ಕಾರಣದಿಂದಾಗಿ ಸಮಸ್ಯೆ ಹೆಚ್ಚು ಅಥವಾ ಕಡಿಮೆಯಾಗಬಹುದು. ಈ ಸಮಸ್ಯೆ ಇದ್ದರೆ ಯಾವೆಲ್ಲ ಆಹಾರದಿಂದ ದೂರವಿರಬೇಕು ತಿಳಿದುಕೊಳ್ಳಿ. 

ಎಕ್ಸಿಮಾ ಅಥವಾ ಅಟೋಪಿಕ್ ಡರ್ಮಟೈಟಿಸ್ ಚರ್ಮದ ಸಮಸ್ಯೆ ಹಲವರಿಗೆ ಕಾಡುತ್ತದೆ. ಅದರಲ್ಲೂ ಒಣಚರ್ಮದವರಿಗೆ ಚಳಿಗಾಲದಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಗರ್ಭಿಣಿಯರಿಗೆ ಕೂಡಾ ಹಾರ್ಮೋನ್ ಏರುಪೇರಿನಿಂದಾಗಿ ಕಾಣಿಸಿಕೊಳ್ಳಬಹುದು. ಶಿಶುಗಳಲ್ಲಿ, ಮಕ್ಕಳಲ್ಲಿ ಅಟೋಪಿಕ್ ಡರ್ಮಟೈಟಿಸ್ ಕಾಣಿಸಿಕೊಂಡರೆ ಹಲವಾರು ವರ್ಷಗಳ ಕಾಲ ಅದನ್ನು ಎಚ್ಚರಿಕೆಯಿಂದ ನಿಭಾಯಿಸುವ ಅಗತ್ಯವಿದೆ. ಇನ್ನು ಈ ಸಮಸ್ಯೆಗೆ ಅನುವಂಶೀಯತೆ ಕೂಡಾ ಕಾರಣವಾಗಬಹುದು. 

ಚರ್ಮದ ಮೇಲೆ ಎಲ್ಲಾದರೂ ಅತಿಯಾದ ತುರಿಕೆ, ಕೆಂಪಾಗುವುದು, ಅತಿಯಾಗಿ ಒಣಗುವುದು, ಹೊಟ್ಟೇಳುವುದು ಮುಂತಾದ ಲಕ್ಷಣಗಳಿಂದಾಗಿ ಸಮಸ್ಯೆಯು ಬಹಳಷ್ಟು ಕಿರಿಕಿರಿ ಉಂಟು ಮಾಡುತ್ತದೆ. 
ತಿನ್ನುವ ಆಹಾರದಿಂದ ಎಕ್ಸಿಮಾ ಆಗುವುದಿಲ್ಲವಾದರೂ, ಈ ಸಮಸ್ಯೆ ಬಂದ ಮೇಲೆ ಆಹಾರದ ಮೇಲೆ ಗಮನವಿಡಬೇಕಾಗುತ್ತದೆ. ಏಕೆಂದರೆ, ಕೆಲ ಆಹಾರಗಳು ಕಿರಿಕಿರಿ ಹೆಚ್ಚಿಸುತ್ತವೆ. ಸಮಸ್ಯೆಯನ್ನು ಉಲ್ಬಣವಾಗಿಸುತ್ತವೆ. ಹಾಗಾಗಿ, ಎಕ್ಸಿಮಾ ಇರುವವರು ಕೆಲ ಆಹಾರಗಳಿಂದ ದೂರವಿರಬೇಕಾಗುತ್ತದೆ. ಮತ್ತೆ ಕೆಲ ಆಹಾರಗಳು ಸಮಸ್ಯೆಯನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತವೆ. ಈ ಸಮಸ್ಯೆಗೆ ಯಾವುದೇ ಕ್ಯೂರ್ ಇಲ್ಲವಾದರೂ ಆಹಾರ ಹಾಗೂ ಮೆಡಿಕೇಶನ್‌ನಿಂದಾಗಿ ನಿಯಂತ್ರಣದಲ್ಲಿಡಬಹುದು. 

ಸಕ್ಕರೆ ಹೆಚ್ಚಿರುವ ಆಹಾರಗಳು
ಸಕ್ಕರೆಯು ಇನ್ಸುಲಿನ್ ಮಟ್ಟ ಏರುವಂತೆ ಮಾಡುತ್ತದೆ. ಇದರಿಂದ ಇನ್ಫ್ಲಮೇಶನ್ ಆಗುತ್ತದೆ. ತುರಿಕೆ, ಉರಿ, ಬಾತುಕೊಳ್ಳುವುದನ್ನು ನಿಯಂತ್ರಣದಲ್ಲಿಡಲು ಕೇಕ್ಗಲು, ಸೋಡಾ, ಎನರ್ಜಿ ಡ್ರಿಂಕ್ಸ್, ಚಾಕೋಲೇಟ್ಸ್ ಹಾಗೂ ಸ್ವೀಟ್‌ಗಳನ್ನು ದೂರವಿಡಬೇಕು. 

ನಟ್ಸ್
ಬಾದಾಮಿ, ಗೋಡಂಬಿ, ವಾಲ್‌ನಟ್ಸ್ ಮುಂತಾದ ನಟ್ಸ್‌ಗಳನ್ನು ತಿಂದಾಗ ದೇಹದಲ್ಲಿ ಟಿ ಸೆಲ್ಸ್ ಹಾಗೂ ಇಮ್ಯುನೋಗ್ಲೋಬಿನ್ ಇ ಬಿಡುಗಡೆಯಾಗುತ್ತದೆ. ಇವೆರಡೂ ಉರುಯೂತ ಹೆಚ್ಚುವಂತೆ ಮಾಡುವವೇ. ಹಾಗಾಗಿ, ಎಕ್ಸಿಮಾ ಇದ್ದರೆ ನಟ್ಸ್‌ಗಳಿಂದ ದೂರವಿರಿ.

ಮೊಟ್ಟೆಗಳು
ಎಕ್ಸಿಮಾ ಇರುವವರಿಗೆ ಮೊಟ್ಟೆಗಳನ್ನು ಸೇವಿಸುತ್ತಿದ್ದಂತೆಯೇ ಅಲರ್ಜಿ, ತುರಿಕೆ ಹೆಚ್ಚಾಗಬಹುದು. ಸ್ಯಾಚುರೇಟೆಡ್ ಆಹಾರ ಹಾಗೂ ಟ್ರಾನ್ಸ್ ಫ್ಯಾಟ್ಸ್ ಪ್ರೊಸೆಸ್ಡ್ ಆಹಾರ, ಫಾಸ್ಟ್ ಫುಡ್, ಹಾಗೂ ರೆಡ್ ಮೀಟ್, ಬೆಣ್ಣೆ, ಡೈರಿ ಉತ್ಪನ್ನಗಳಲ್ಲಿರುವ ಸ್ಯಾಚುರೇಟೆಡ್ ಫ್ಯಾಟ್ಸ್ ಎಕ್ಸಿಮಾ ಸಮಸ್ಯೆಯನ್ನು ಉಲ್ಬಣಗೊಳಿಸುತ್ತವೆ.

ಹಾಲು
ಹಾಲು ಎಕ್ಸಿಮಾ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಅಲರ್ಜಿಕಾರಕ. ಅದರಲ್ಲೂ ಪುಟ್ಟ ಮಕ್ಕಳಿಗೆ ಹಾಲು ಅಲರ್ಜಿಯಾಗುತ್ತಿದೆಯೇ ಎಂಬುದನ್ನು ಗಮನಿಸುತ್ತಲೇ ಇರಬೇಕು. ಒಂದು ವೇಳೆ ಅವರಿಗೆ ಅಲರ್ಜಿಯಿದ್ದರೆ ಹಾಲಿಗೆ ಬದಲಿ ಆಹಾರ ಅಳವಡಿಸಿಕೊಳ್ಳಬೇಕು.

ಜೇನು ತ್ವಚೆಗೂ ಸಿಹಿ

ಸಿಟ್ರಸ್ ಹಣ್ಣುಗಳು
ಕಿತ್ತಳೆ, ನಿಂಬೆ, ದ್ರಾಕ್ಷಿಹಣ್ಣುಗಳು ಹಾಗೂ ಇತರೆ ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ಇದು ಚರ್ಮದ ಅಂದ ಹೆಚ್ಚಿಸುತ್ತದೆ ಎಂದು ನೀವು ಸಾವಿರ ಲೇಖನಗಳಲ್ಲಿ ಓದಿರಬಹುದು. ಆದರೆ, ಅದೇ ನಂಬಿಕೆಯಿಂದ ಎಕ್ಸಿಮಾ ಗುಣ ಮಾಡಿಕೊಳ್ಳೋಣ ಎಂದು ಇವುಗಳನ್ನೇ ಹೆಚ್ಚಾಗಿ ಸೇವಿಸಿದಿರೋ, ಚಿತ್ರ ಬೇರೆಯೇ ಆಗುತ್ತದೆ. ಇವು ಎಕ್ಸಿಮಾ ಹೆಚ್ಚಿಸಿ ಮತ್ತಷ್ಟು ತುರಿಕೆ, ಗಾಯಗಳಿಗೆ ಕಾರಣವಾಗುತ್ತವೆ.

ಹಾಗಿದ್ದರೆ ಎಕ್ಸಿಮಾ ಇರುವಾಗ ಯಾವ ಆಹಾರಗಳನ್ನು ಸೇವಿಸಬೇಕು?
ಒಮೆಗಾ 3 ಫ್ಯಾಟಿ ಆ್ಯಸಿಡ್ ಹೆಚ್ಚಿರುವ ಆಹಾರಗಳು ಎಕ್ಸಿಮಾ ರೋಗಿಗಳಿಗೆ ಪರಿಣಾಮಕಾರಿ ಆ್ಯಂಟಿ ಇನ್ಫ್ಲಮೇಟರ್ ಆಹಾರಗಳು. ಅಂದರೆ ಸಾಲ್ಮೋನ್ ಫಿಶ್, ಮ್ಯಾಕೆರೆಲ್, ಕಾಡ್ ಲಿವರ್ ಆಯಿಲ್‌ಗಳಲ್ಲಿ ಈ ಒಮೆಗಾ 3 ಫ್ಯಾಟಿ ಆ್ಯಸಿಡ್ ಹೆಚ್ಚಾಗಿರುತ್ತದೆ. ಇನ್ನು ಪ್ರೊಬಯೋಟಿಕ್ ಆಹಾರಗಳಾದ ಮೊಸರು, ಕೆಫಿರ್ ಮುಂತಾದವುಗಳಲ್ಲಿರುವ ಬ್ಯಾಕ್ಟೀರಿಯಾಗಳು ರೋಗ ನಿರೋಧಕ ವ್ಯವಸ್ಥೆ ಬಲಗೊಳಿಸಿ, ಎಕ್ಸಿಮಾ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ. ಇನ್ನು ಸೇಬು, ಪಾಲಕ್, ಬ್ರೋಕೋಲಿ ಕೂಡಾ ಉರಿಯೂತ ವಿರುದ್ಧ ಹೋರಾಡುವ ಫ್ಲೇವನಾಯ್ಡ್ಸ್ ಹೆಚ್ಚಾಗಿ ಹೊಂದಿರುತ್ತವೆ. 

ವದನದ ಕಲೆಗೆ ಸೌಂದರ್ಯ ವರ್ಧಕ

click me!