ಫ್ರಿಜ್‌ನಲ್ಲಿಟ್ಟು ಹಳೇ ಫುಡ್ ಎಲ್ಲ ತಿಂದ್ರೆ ಆರೋಗ್ಯ ಕೆಡೋದು ಗ್ಯಾರಂಟಿ

By Suvarna News  |  First Published Aug 25, 2022, 3:23 PM IST

ಫ್ರಿಜ್ ನಲ್ಲಿರುವ ಆಹಾರ ಹಾಳಾಗೋದಿಲ್ಲ. ಹೊರಗಿನ ತಾಪಮಾನಕ್ಕಿಂತ ಫ್ರಿಜ್ ತಾಪಮಾನ ತಣ್ಣಗಿರುತ್ತದೆ. ಹಾಗಾಗಿ ಆಹಾರ ಬೇಗ ಹಾಳಾಗೋದಿಲ್ಲ. ತರಕಾರಿ, ಹಣ್ಣು ಸೇರಿದಂತೆ ಆಹಾರ ಹಾಳಾಗಲ್ಲ ಎನ್ನುವ ಕಾರಣಕ್ಕೆ ಅದನ್ನು ತುಂಬಾ ದಿನ ಫ್ರಿಜ್ ನಲ್ಲಿಟ್ಟು ಸೇವನೆ ಮಾಡೋದು ಸರಿಯಲ್ಲ.
 


ಆಹಾರ ಹಾಳು ಮಾಡ್ಬಾರದು. ಹೆಚ್ಚಾದ ಆಹಾರವನ್ನು ಕಸಕ್ಕೆ ಎಸೆಯಲು ಮನಸ್ಸು ಬರೋದಿಲ್ಲ. ಹಾಗೆ ಹಣ್ಣು, ತರಕಾರಿಗಳನ್ನು ಪ್ರತಿ ದಿನ ಮಾರುಕಟ್ಟೆಯಿಂದ ತರೋದು ಕಷ್ಟ. ಹಾಗಾಗಿ ಈ ಎಲ್ಲ ಆಹಾರ ಸರಿಯಾಗಿರಬೇಕು ಅಂದ್ರೆ ಫಿಜ್ ಬೇಕು. ಹಾಲು, ಮೊಸರಿನಿಂದ ಹಿಡಿದು ತರಕಾರಿಯವರೆಗೆ ಎಲ್ಲವನ್ನೂ ನಾವು ಫ್ರಿಜ್ ನಲ್ಲಿ ಇಡ್ತೇವೆ. ಈ ಫ್ರಿಜ್ ನಮ್ಮ ಕೆಲಸವನ್ನು ಸುಲಭಗೊಳಿಸಿದೆ. ಒಂದು ದಿನ ಆಹಾರ ತಯಾರಿಸಿ ಫ್ರಿಜ್ ನಲ್ಲಿ ಇಟ್ಟರೆ ಸಾಕು. ಎರಡು – ಮೂರು ದಿನ ಅದನ್ನೇ ಬಿಸಿ ಮಾಡಿ ಸೇವನೆ ಮಾಡ್ಬಹುದು. ಕೆಲಸಕ್ಕೆ ಹೋಗುವ ಜನರಿಗೆ ಇದು ಸುಲಭ. ಪ್ರತಿ ದಿನ ಕೆಲಸದ ಒತ್ತಡದ ಮಧ್ಯೆ ಅಡುಗೆ ಮಾಡುವುದು ತಪ್ಪುತ್ತದೆ ನಿಜ. ಆದರೆ ಫ್ರಿಜ್ ನಲ್ಲಿರುವ ಆಹಾರಕ್ಕೂ ಒಂದು ಗಡುವಿದೆ. ಎಲ್ಲ ಆಹಾರವನ್ನು ಮೂರ್ನಾಲ್ಕು ದಿನ ಇಟ್ಟು ಸೇವನೆ ಮಾಡಲು ಸಾಧ್ಯವಿಲ್ಲ. ಹಾಗೆ ಎಲ್ಲ ಆಹಾರವನ್ನು ಒಂದೇ ರೀತಿ ಫ್ರಿಜ್ ನಲ್ಲಿ ಇಡಲೂ ಆಗೋದಿಲ್ಲ. ಫ್ರಿಜ್ ನಲ್ಲಿಟ್ಟ ಆಹಾರವನ್ನು ಎಷ್ಟು ದಿನ ಸೇವಿಸಬಹುದು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.

ಫ್ರಿಜ್ ನಲ್ಲಿಟ್ಟ ಆಹಾರವನ್ನು ಎಷ್ಟು ದಿನ ಸೇವನೆ ಮಾಡೋದು ಸುರಕ್ಷಿತ ಹಾಗೂ ಸಂಗ್ರಹಣೆ ಹೇಗೆ ? :
ನಮ್ಮ ಫ್ರಿಜ್ (Fridge) ನಲ್ಲಿ ಹಸಿ ಮತ್ತು ಬೇಯಿಸಿದ ಆಹಾರವನ್ನು ಒಟ್ಟಿಗೆ ಇಡುತ್ತೇವೆ. ಅಂದರೆ ಯಾವ ಸಾಲಿನಲ್ಲಿ ಹಸಿ ತರಕಾರಿ (Raw Vegetable) ಇಡಲಾಗುತ್ತದೆಯೋ ಅದೇ ಸಾಲಿನಲ್ಲಿ ಬೇಯಿಸಿದ ತರಕಾರಿಯನ್ನೂ ಇಡಲಾಗುತ್ತದೆ. ಆದರೆ ಹೀಗೆ ಮಾಡುವುದರಿಂದ ನಮ್ಮ ಫ್ರಿಜ್ ನಲ್ಲಿ ಬ್ಯಾಕ್ಟೀರಿಯಾ (Bacteria) ಬೆಳೆಯುತ್ತದೆ. ಹಸಿ ಆಹಾರದಲ್ಲಿರುವ ಬ್ಯಾಕ್ಟೀರಿಯಾ ಬೇಯಿಸಿದ ಆಹಾರ ಸೇರುತ್ತದೆ.

Tap to resize

Latest Videos

ಬ್ಯಾಕ್ಟೀರಿಯಾದಿಂದ (Bacteria) ಆಹಾರವನ್ನು ರಕ್ಷಿಸಬೇಕು ಎಂದಾದ್ರೆ ಕಚ್ಚಾ ಮತ್ತು ಬೇಯಿಸಿದ ಆಹಾರವನ್ನು ಪ್ರತ್ಯೇಕ ಸಾಲುಗಳಲ್ಲಿ ಇಡುವುದು ಮತ್ತು ಪ್ರತ್ಯೇಕ ಪಾತ್ರೆಯನ್ನು ಮುಚ್ಚುವುದು ಅವಶ್ಯಕ. ಇದರಿಂದ ಹಸಿ ಆಹಾರದ ಬ್ಯಾಕ್ಟೀರಿಯಾಗಳು ಬೇಯಿಸಿದ ಆಹಾರಕ್ಕೆ ಹೋಗಿ ಅದನ್ನು ಕಲುಷಿತಗೊಳಿಸುವುದಿಲ್ಲ.  

ಪ್ರತಿ ದಿನ ರೊಟ್ಟಿ ಸೇವನೆ ಮಾಡುವವರಿಗೆ ಹಿಟ್ಟು ಸಿದ್ಧಪಡಿಸುವುದು ತಲೆನೋವಿನ ಕೆಲಸ. ಹಾಗೆ ಇದಕ್ಕೆ ಸಮಯ ಹಿಡಿಯುತ್ತದೆ. ಹಾಗಾಗಿ ಜನರು ಒಂದೇ ಬಾರಿ ಹಿಟ್ಟನ್ನು ಕಲಸಿ ಅದನ್ನು ಫ್ರಿಜ್ ನಲ್ಲಿ ಇಡ್ತಾರೆ. ಇದು ತಪ್ಪು. ರೊಟ್ಟಿಗಾಗಿ ಕಲಸಿದ ಹಿಟ್ಟನ್ನು ಎಂದೂ ಫ್ರಿಜ್ ನಲ್ಲಿ ಇಡಬಾರದು. ಅದಕ್ಕೆ ನೀರು ಹಾಕಲಾಗುತ್ತದೆ. ನೀರು ಹಾನಿಕಾರಕ ಕಿರಣಗಳ ಸಂಪರ್ಕಕ್ಕೆ ಬರುತ್ತವೆ. ಅದರಿಂದ ರೊಟ್ಟಿ ತಯಾರಿಸಿದಾಗ ಅದು ಹೊಟ್ಟೆಯಲ್ಲಿ ಅಜೀರ್ಣವನ್ನು ಉಂಟುಮಾಡುತ್ತದೆ.

ಫ್ರಿಜ್‌ನಲ್ಲಿ ಇಟ್ಟಿರುವ ಬೇಯಿಸಿದ ಅನ್ನವನ್ನು ಅತ್ಯಂತ ಸುರಕ್ಷಿತ ಮತ್ತು ದೀರ್ಘಕಾಲೀನ ಆಹಾರವೆಂದು ಪರಿಗಣಿಸುತ್ತೇವೆ. ಆದರೆ ಅನ್ನದ  ಸಂಪೂರ್ಣ ಪೋಷಕಾಂಶ ನಿಮಗೆ ಬೇಕು ಎನ್ನುವುದಾದ್ರೆ ಹಾಗೂ ಅನ್ನ ಸರಿಯಾಗಿ ಜೀರ್ಣವಾಗ್ಬೇಕು ಎನ್ನುವುದಾದ್ರೆ ನೀವು ಕೇವಲ 2 ದಿನ ಮಾತ್ರ ಅನ್ನವನ್ನು ಫ್ರಿಜ್ ನಲ್ಲಿ ಇಡಬಹುದು.  

ಅನ್ನವನ್ನು ಫ್ರಿಜ್ ನಲ್ಲಿಟ್ಟರೆ ಅದನ್ನು ಸೇವಿಸುವ ಕೆಲ ಸಮಯದ ಮೊದಲು ಫ್ರಿಜ್ ನಿಂದ ಹೊರಗೆ ತೆಗೆದಿಡಿ. ಕೋಣೆಯ ಉಷ್ಣಾಂಶದಲ್ಲಿ ಅನ್ನವನ್ನು ಇಡಬೇಕು.  

ಒಂದೇ ವಾರದಲ್ಲಿ ತೂಕ ಇಳಿಸ್ಕೊಳ್ಬೇಕು ಅಂದ್ರೆ ಐಸ್ ಆ್ಯಪಲ್ ತಿನ್ನಿ

ಬೇಳೆಗಳು ತಾಜಾ ಇದ್ದಾಗ ಮಾತ್ರ ಹೆಚ್ಚು ಪೌಷ್ಟಿಕವಾಗಿರುತ್ತದೆ. ಬೇಳೆ ಉಳಿದಿದೆ ಎನ್ನುವ ಕಾರಣಕ್ಕೆ ನಾವು ಅದನ್ನು ಫ್ರಿಜ್ ನಲ್ಲಿ ಇಡ್ತೇವೆ. ಫ್ರಿಜ್ ನಲ್ಲಿ ಇಟ್ಟ ಬೇಳೆಯನ್ನು 2 ದಿನಗಳಲ್ಲಿ ಬಳಸಬೇಕು. ಇಲ್ಲವೆಂದ್ರೆ ಗ್ಯಾಸ್ ಸಮಸ್ಯೆ ನಿಮ್ಮನ್ನು ಕಾಡುತ್ತದೆ. 

ಉಪಾಹಾರಕ್ಕಾಗಿ ಅಥವಾ ಮಧ್ಯಾಹ್ನ ತಿನ್ನಲು ಹಣ್ಣುಗಳನ್ನು ಕತ್ತರಿಸಿ ಉಳಿದ ಹಣ್ಣನ್ನು ಫ್ರಿಜ್ ನಲ್ಲಿ ಇಡ್ತೇವೆ. ಪ್ರತಿ ಹಣ್ಣನ್ನು ತಿನ್ನಲು ಒಂದು ನಿರ್ದಿಷ್ಟ ಸಮಯವಿದೆ. ಅದರ ನಂತರ ಈ ಹಣ್ಣು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಕತ್ತರಿಸಿದ ಹಣ್ಣುಗಳನ್ನು ತುಂಬಾ ಸಮಯ ಫ್ರಿಜ್ ನಲ್ಲಿ ಇಡಬಾರದು. 

ದಿನಾ ಸಕ್ಕರೆ ಸೇರಿಸಿದ ಹಾಲು ಕುಡಿಯೋ ಅಭ್ಯಾಸ ಒಳ್ಳೆಯದಾ ?

ಯಾವ ಸಮಯದಲ್ಲಿ ಯಾವ ಹಣ್ಣನ್ನು ತಿನ್ನಬೇಕು?
ಕತ್ತರಿಸಿದ ಪಪ್ಪಾಯಿಯನ್ನು ಫ್ರಿಜ್ ನಲ್ಲಿಟ್ಟ 6 ಗಂಟೆಗಳ ಒಳಗೆ ಬಳಸಬೇಕು. ಕತ್ತರಿಸಿದ ನಂತರ ಸೇಬನ್ನು ದೀರ್ಘಕಾಲದವರೆಗೆ ಇರಿಸಿದರೆ, ಅದರಲ್ಲಿ ಆಕ್ಸಿಡೀಕರಣವು ಪ್ರಾರಂಭವಾಗುತ್ತದೆ. ಈ ಕಾರಣದಿಂದಾಗಿ, ಅದರ ಮೇಲಿನ ಪದರವು ಕಪ್ಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ.  ಸೇಬು ಹಣ್ಣನ್ನು ಕತ್ತರಿಸಿದ ನಂತರ  ಅದನ್ನು 4 ಗಂಟೆಗಳ ಒಳಗೆ ತಿನ್ನುವುದು ಉತ್ತಮ. ಯಾವುದೇ ಹಣ್ಣನ್ನು ಕತ್ತರಿಸಿದ್ದರೆ  ಅದನ್ನು 6 ರಿಂದ 8 ಗಂಟೆಗಳ ನಂತರ ತಿನ್ನಬಾರದು. ರೆಫ್ರಿಜರೇಟರ್‌ನಲ್ಲಿ ಇರಿಸಲಾದ ಬೇಯಿಸಿದ ತರಕಾರಿಗಳನ್ನು 24 ಗಂಟೆಗಳ ಒಳಗೆ ತಿನ್ನಬೇಕು. 
 

click me!