ಮಕ್ಕಳಾಗದೇ ಇರೋದಕ್ಕೆ ಟೈಟ್​ ಜೀನ್ಸ್​ ಪ್ಯಾಂಟೂ ಕಾರಣನಾ? ಶಾಕಿಂಗ್​ ವಿಷ್ಯ ರಿವೀಲ್​ ಮಾಡಿದ ಖ್ಯಾತ ವೈದ್ಯ

Published : Aug 15, 2025, 05:08 PM IST
Jeans

ಸಾರಾಂಶ

ಮಕ್ಕಳಾಗದೇ ಇರೋದಕ್ಕೆ ಟೈಟ್​ ಜೀನ್ಸ್​ ಪ್ಯಾಂಟೂ ಕಾರಣನಾ? ಶಾಕಿಂಗ್​ ವಿಷ್ಯ ರಿವೀಲ್​ ಮಾಡಿದ ಖ್ಯಾತ ವೈದ್ಯ ಡಾ.ಸಿ.ಎ ಕಿಶೋರ್​ 

ಮಗು ಆಗುವುದು ಎಂದರೆ ಪುರುಷ ಮತ್ತು ಮಹಿಳೆ ಇಬ್ಬರಿಗೂ ಅದೊಂದು ರೀತಿಯ ಹೊಸ ಅನುಭವ. ಅಪ್ಪ-ಅಮ್ಮನ ಸ್ಥಾನಕ್ಕೆ ಪ್ರಮೋಷನ್​ ಆಗುವುದು, ಮುಗ್ಧ ಕಂದಮ್ಮನ ಮುಖ ನೋಡಿ ನೋವನ್ನೆಲ್ಲಾ ಮರೆಯುವುದು, ಅದರ ಲಾಲನೆ- ಪಾಲನೆಯಲ್ಲಿ ತೊಡುಗುವುದು... ಹೀಗೆ ಮಗುವೊಂದರಿಂದ ಇಡೀ ಜೀವನವೇ ಬದಲಾಗಿ ಹೋಗುತ್ತದೆ. ಆದರೆ, ಇಂದು ಅದೆಷ್ಟೋ ಕಾರಣಕ್ಕೆ ಕೆಲವರಿಗೆ ಮಕ್ಕಳಾಗದೇ ಇರಬಹುದು. ಕೆಲವರಿಗೆ ಬೇಡ ಬೇಡ ಎಂದರೂ ಮನೆ ತುಂಬ ಮಕ್ಕಳು ಆದರೆ, ಒಂದೇ ಒಂದು ಮಗುವಿಗೆ ಆಸೆ ಪಡುವವರಿಗೆ ಮಕ್ಕಳ ಭಾಗ್ಯ ಸಿಗದೇ ಹೋಗಬಹುದು. ಇದಕ್ಕೆ ಹಲವಾರು ಕಾರಣಗಳು ಇರಬಹುದು.

ಪುರುಷರು ಮತ್ತು ಮಹಿಳೆಯರಿಬ್ಬರೂ ಇದಕ್ಕೆ ಕಾರಣಕರ್ತರಾಗಬಹುದು. ಪುರುಷರಲ್ಲಿ ವೀರ್ಯಾಣುಗಳ ಕೊರತೆ, ಕಡಿಮೆ ಚಲನಶೀಲತೆ ಅಥವಾ ಗುಣಮಟ್ಟದ ಸಮಸ್ಯೆಗಳು ಕಾರಣವಾಗಬಹುದು. ಮಹಿಳೆಯರಲ್ಲಿ ಅಂಡಾಶಯದ ಸಮಸ್ಯೆಗಳು, ಫಾಲೋಪಿಯನ್ ಟ್ಯೂಬ್‌ಗಳಲ್ಲಿನ ಅಡಚಣೆ ಅಥವಾ ಗರ್ಭಾಶಯದ ಸಮಸ್ಯೆಗಳು ಕಾರಣವಾಗಬಹುದು. ಇಷ್ಟೇ ಅಲ್ಲದೇ, ಪುರುಷರಲ್ಲಿ ಬಂಜೆತನ ಉಂಟಾಗಲು ವೀರ್ಯಾಣುಗಳ ಸಂಖ್ಯೆ ಕಡಿಮೆ ಇರುವುದು ಅಥವಾ ಚಲನಶೀಲತೆ ಇಲ್ಲದಿರುವುದು, ವೀರ್ಯಾಣುಗಳ ಗುಣಮಟ್ಟದ ಸಮಸ್ಯೆಗಳು, ಅನುವಂಶಿಕ ಸಮಸ್ಯೆಗಳು, ಮಾನಸಿಕ ಒತ್ತಡ ಮತ್ತು ಜೀವನಶೈಲಿ ಕಾರಣವಾಗಿರಬಹುದು.

ಇನ್ನು ಮಹಿಳೆಯರಲ್ಲಿ ಬಂಜೆತನದ ಬಗ್ಗೆ ಹೇಳುವುದಾದರೆ, ಅಂಡಾಶಯದ ಸಮಸ್ಯೆಗಳು ಅರ್ಥಾತ್​ ಪಿಸಿಓಡಿಯಂಥ ಸಮಸ್ಯೆ, ಫಾಲೋಪಿಯನ್ ಟ್ಯೂಬ್‌ಗಳಲ್ಲಿನ ಅಡಚಣೆ ಗರ್ಭಾಶಯದ ಸಮಸ್ಯೆಗಳು, ಅಂಡೋತ್ಪತ್ತಿ ಸಮಸ್ಯೆಗಳು, ಹಾರ್ಮೋನುಗಳ ಅಸಮತೋಲನ ಇರಬಹುದು. ಇಷ್ಟೇ ಅಲ್ಲದೇ ಗಂಡು ಮತ್ತು ಹೆಣ್ಣಿನಲ್ಲಿ ಲೈಂಗಿಕವಾಗಿ ಹರಡುವ ಸೋಂಕುಗಳು, ದೀರ್ಘಕಾಲದ ಕಾಯಿಲೆಗಳು, ಕೆಲವು ಔಷಧಿಗಳ ಬಳಕೆ, ಧೂಮಪಾನ, ಮದ್ಯಪಾನ, ಬೊಜ್ಜು ಸಮಸ್ಯೆ ಎಲ್ಲವೂ ಇರಬಹುದು.

ಆದರೆ, ಇವೆಲ್ಲ ಸರಿಯಿದ್ದರೂ ಮಕ್ಕಳಾಗುವುದಕ್ಕೆ ಸಮಸ್ಯೆ ಆಗುತ್ತಿರುವುದಕ್ಕೆ ಸದಾ ಪುರುಷ ಅಥವಾ ಸ್ತ್ರೀ ಧರಿಸುವ ಟೈಟ್​ ಜೀನ್ಸ್​ ಪ್ಯಾಂಟ್​ ಕೂಡ ಕಾರಣ ಆಗಿರಬಹುದು ಎನ್ನುವ ಶಾಕಿಂಗ್​ ವಿಷ್ಯವನ್ನು ರಿವೀಲ್​ ಮಾಡಿದ್ದಾರೆ ಡಾ.ಸಿ.ಎ. ಕಿಶೋರ್​. ಕೆಲವು ಪ್ರದೇಶಗಳಲ್ಲಿ ಇರುವ ಸಂಪ್ರದಾಯದ ಉಡುಗೆ ಹೋಗಿ ಈಗ ಎಲ್ಲೆಲ್ಲೂ ಟೈಟ್​ ಜೀನ್ಸ್​ ಪ್ಯಾಂಟ್​ ಬಂದಿರೋ ಕಾರಣ ಹೇಗೆ ಅದು ಗುಪ್ತಾಂಗದ ಮೇಲೆ ಪ್ರಭಾವ ಬೀರುತ್ತದೆ ಎಂಬ ಬಗ್ಗೆ ಲೈಫ್​ ಆ್ಯಟ್​ ನೇಚರ್​ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ. ಪ್ರತಿಯೊಬ್ಬರ ಗುಪ್ತಾಂಗಕ್ಕೆ ಉಸಿರಾಡಲು ಜಾಗ ಬೇಕು. ಅವು ಕೂಡ ಉಸಿರಾಡುತ್ತಿದ್ದರೆ, ಪ್ರಕೃತಿ ಸಹಜವಾಗಿ ಏನಾಗಬೇಕೋ ಅದು ಆಗುತ್ತದೆ. ಆದರೆ ಉಸಿರಾಡದಂತೆ, ಸದಾ ಟೈಟ್​ ಆಗಿ ಜೀನ್ಸ್​ ಧರಿಸುತ್ತಿದ್ದರೆ ಉಸಿರಾಡಲು ಜಾಗವಿಲ್ಲದೇ ಮಕ್ಕಳಾಗುವುದಕ್ಕೆ ಸಮಸ್ಯೆ ಆಗಬಹುದು ಎಂದಿದ್ದಾರೆ. ಯಾವಾಗದರೊಮ್ಮೆ ಅಥವಾ ತೀರಾ ಅವಶ್ಯಕವಿದ್ದಾಗ ಧರಿಸಿದರೆ ತಪ್ಪಲ್ಲ. ಆದರೆ ಸದಾ ಬೇಕಿರಲಿ, ಬೇಡದೇ ಇರಲಿ ಟೈಟ್​ ಜೀನ್ಸ್​ ಧರಿಸಿದರೆ ಈ ಸಮಸ್ಯೆ ಉಂಟಾಗಬಹುದು ಎಂದಿದ್ದಾರೆ ಅವರು.

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇಂಥವರನ್ನು ಮದುವೆ ಆದ್ರೆ ಆರೋಗ್ಯವಾಗಿ ಹುಟ್ಟಲ್ಲ ಮಕ್ಕಳು, ಕಾಡುತ್ತೆ ನಾನಾ ಖಾಯಿಲೆ
ಚಳಿಗಾಲದಲ್ಲಿಯೇ ಕಿವಿ ನೋವು, ತುರಿಕೆ, ಸೋಂಕಿನ ಸಮಸ್ಯೆ ಕಾಡುವುದೇಕೆ.. ಈ ಸಮಯದಲ್ಲಿ ನಾವೇನು ಮಾಡಬೇಕು?