ಕೂದಲು ಚೆನ್ನಾಗಿ ದಟ್ಟವಾಗಿ ಬೆಳೆಯಬೇಕು, ಸದೃಢವಾಗಿರಬೇಕು ಎನ್ನುವ ಆಸೆ ಯಾರಿಗಿರುವುದಿಲ್ಲ? ಅದಕ್ಕಾಗಿ ಏನೆಲ್ಲ ಪ್ರಯತ್ನಿಸಿದರೂ ಕೆಲವೊಮ್ಮೆ ಸಾಧ್ಯವಾಗುವುದಿಲ್ಲ. ಆದರೆ, ಬೇಸರ ಪಡಬೇಡಿ. ಈ ಮಾರ್ಗೋಪಾಯಗಳನ್ನು ಅನುಸರಿಸಿದರೆ ಕೂದಲು ಖಂಡಿತ ವೇಗವಾಗಿ ಬೆಳೆಯುತ್ತದೆ.
ಕೂದಲಿನ ಆರೋಗ್ಯ ಚೆನ್ನಾಗಿರಬೇಕು, ಕೂದಲು ದಟ್ಟವಾಗಿ ಸದೃಢವಾಗಿ ಬೆಳೆಯಬೇಕು ಎಂದು ಏನೆಲ್ಲ ಪ್ರಯತ್ನ ಪಟ್ಟಿದ್ದೀರಾ? ಆದರೂ ಸಾಧ್ಯವಾಗಲಿಲ್ಲವೇ? ಬೇಸರ ಬೇಡ. ಏಕೆಂದರೆ, ನಾವು ಇಲ್ಲಿ ಕೊಡುತ್ತಿರೋ ಟಿಪ್ಸ್ ಅನುಸರಿಸಿದ್ರೆ ನಿಮ್ಮ ಕೂದಲು ಖಂಡಿತವಾಗಿಯೂ ದಟ್ಟವಾಗಿ, ವೇಗವಾಗಿ ಬೆಳೆಯುತ್ತದೆ. ನಿಮಗೆ ತಿಳಿದಿದೆಯೇ? ನಮ್ಮ ಕೂದಲು ವರ್ಷಕ್ಕೆ ಸರಿಸುಮಾರು ಆರು ಇಂಚಿನಷ್ಟು ಉದ್ದ ಬೆಳೆಯಬಲ್ಲದು. ಅಂದರೆ, ತಿಂಗಳಿಗೆ ಅರ್ಧ ಇಂಚಿನಷ್ಟು ಬೆಳೆಯುತ್ತದೆ. ಆದರೆ, ವಯಸ್ಸಾದಂತೆ ಈ ವೇಗ ಕ್ಷೀಣಿಸುತ್ತದೆ. ಹಾಗೆಯೇ, ಕೂದಲು ವೇಗವಾಗಿ ಬೆಳೆಯಲು ಕೆಲವು ಅಂಶಗಳೂ ಕಾರಣವಾಗಿರುತ್ತವೆ. ಅವುಗಳನ್ನು ಪಾಲನೆ ಮಾಡುವುದು ಕೂದಲಿನ ಆರೋಗ್ಯಕ್ಕೂ ಒಳ್ಳೆಯದು. ಕೂದಲು ವೇಗವಾಗಿ ಚೆನ್ನಾಗಿ ಬೆಳೆಯುವಲ್ಲಿ ಹಲವು ಅಡೆತಡೆಗಳಿರಬಹುದು. ಆನುವಂಶಿಕ, ಹಾರ್ಮೋನ್ ಏರಿಳಿತ, ಸೂಕ್ತ ಪೌಷ್ಟಿಕತೆಯ ಕೊರತೆಗಳು ಕಾರಣವಾಗಿರಬಹುದು. ಅವುಗಳನ್ನು ಅರಿತು ಸರಿಪಡಿಸಿಕೊಳ್ಳಬೇಕು. ಕೂದಲಿನ ಆರೋಗ್ಯಕ್ಕೆ ವಿಟಮಿನ್ ಸಿ, ಪ್ರೊಟೀನ್, ವಿಟಮಿನ್ ಬಿ, ಫ್ಯಾಟಿ ಆಸಿಡ್ ಮತ್ತು ಆಂಟಿ ಆಕ್ಸಿಡಂಟ್ ಗಳು ಅಗತ್ಯವಾಗಿರುತ್ತವೆ. ಇವು ಲಭ್ಯವಾಗದೆ ಹೋದರೂ ಕೂದಲು ವೇಗವಾಗಿ ಬೆಳೆಯುವುದಿಲ್ಲ. ಕೆಲವು ಔಷಧಿಗಳು ಕೂದಲ ಬೆಳವಣಿಗೆಗೆ ಅಡ್ಡಿ ತರುತ್ತವೆ. ಇನ್ನು, ಖಿನ್ನತೆ, ಆತಂಕ, ಏಕಾಏಕಿ ತೂಕ ಇಳಿಕೆ, ರೋಗ ಇನ್ನಿತರ ಕಾರಣಗಳೂ ಇರಬಹುದು. ಹೀಗಾಗಿ, ಕಾರಣಗಳನ್ನು ಗುರುತಿಸಿಕೊಂಡು ಚಿಕಿತ್ಸೆ ಪಡೆಯಬೇಕು. ಜತೆಗೆ, ಕೂದಲು ವೇಗವಾಗಿ ಬೆಳೆಯುವಂತೆ ಮಾಡಲು ಹೀಗ್ಮಾಡಿ.
ಮಳೆಯಲ್ಲಿ ತುರಿಸೋ ತಲೆಗೆ ಇಲ್ಲಿದೆ ಪರಿಹಾರ
• ಕೂದಲನ್ನು (Hair) ಬಿಸಿಗಾಳಿಗೆ (Heat) ಒಡ್ಡಿ ಒಣಗಿಸಬೇಡಿ. ಇದರಿಂದ ಕೂದಲ ಆರೋಗ್ಯಕ್ಕೆ (Health) ಧಕ್ಕೆಯಾಗುತ್ತದೆ. ಆಗ ಕೂದಲು ವೇಗವಾಗಿ ಬೆಳೆಯುವುದಿಲ್ಲ. ನೈಸರ್ಗಿಕವಾಗಿಯೇ ಒಣಗಿಸಿಕೊಳ್ಳುವ ವಿಧಾನ ಸೂಕ್ತ. ಕೃತಕವಾಗಿ ಒಣಗಿಸುವುದರಿಂದ ಕೂದಲಿನಲ್ಲಿ ಬೊಬ್ಬೆಗಳು (Bubbles) ಎದ್ದು ಬೆಳವಣಿಗೆಗೆ (Grow) ಹಾನಿಯಾಗುತ್ತದೆ.
• ಕೂದಲಿಗೆ ಬ್ಲೋಔಟ್, ಸುರುಳಿ(Curl)ಯಾಗಿಸಲು, ನೇರ (Straight) ಮಾಡಲು ವಿವಿಧ ಸಲಕರಣೆಗಳನ್ನು ಪದೇ ಪದೆ ಬಳಸಬೇಡಿ.
• ಒದ್ದೆಯಾದ ಕೂದಲು (Wet Hair) ಸಿಕ್ಕಾಪಟ್ಟೆ ಎಲಾಸ್ಟಿಕ್ (Elastic) ಗುಣ ಹೊಂದಿರುತ್ತದೆ. ಒದ್ದೆ ಕೂದಲನ್ನು ಬಾಚಿದರೆ ಕೂದಲಿನ ಎಳೆಗಳಿಗೆ ಧಕ್ಕೆಯಾಗುತ್ತದೆ. ಫಾಲಿಕಲ್ (Follicle) ನಾಶವಾಗುತ್ತವೆ.
• ಸೂಕ್ತ ಕಂಡಿಷನರ್ (Conditioner) ಬಳಕೆ ಕಡ್ಡಾಯ.
• ಕೂದಲಿಗೆ ಬಣ್ಣ (Color) ಹಾಕುವ ಮುನ್ನ ಯೋಚಿಸಿ. ಇದರಿಂದ ಕೂದಲು ದುರ್ಬಲವಾಗುತ್ತದೆ. ಚೆನ್ನಾಗಿ, ವೇಗವಾಗಿ ಬೆಳೆಯುವುದಿಲ್ಲ.
• ದಿನದಲ್ಲಿ ಅಲ್ಪ ಪ್ರಮಾಣದ ಕೆಫೀನ್ (Caffeine) ಬಳಕೆ ಮಾಡಿ. ನಿಮಗೆ ಗೊತ್ತೇ? ಕೆಫೀನ್ ಅಂಶ ದೊರೆತರೆ ಕೂದಲು ವೇಗವಾಗಿ ಬೆಳೆಯಬಲ್ಲದು.
• ನಿಯಮಿತವಾಗಿ ಮೂರ್ನಾಲ್ಕು ತಿಂಗಳಿಗೆ ಒಮ್ಮೆ ಕೂದಲಿನ ತುದಿಯನ್ನು ಕತ್ತರಿಸಿ (Trim). ಇದರಿಂದ ಕೂದಲ ಬೆಳವಣಿಗೆಗೆ ವೇಗ ದೊರೆಯುತ್ತದೆ. ಒಡೆದ ತುದಿಯಿದ್ದರೆ ಕೂದಲು ಬೆಳೆಯುವುದಿಲ್ಲ.
• ಒತ್ತಡ (Stress) ಕಡಿಮೆ ಮಾಡಿಕೊಳ್ಳಿ. ದೀರ್ಘಕಾಲದ ಅಧಿಕ ಒತ್ತಡದಿಂದಲೂ ಕೂದಲು ಚೆನ್ನಾಗಿ, ವೇಗವಾಗಿ ಬೆಳವಣಿಗೆ ಆಗುವುದಿಲ್ಲ.
• ಕೂದಲಿಗೆ ಸೂಕ್ತ ಆರೈಕೆ ಮಾಡಿ. ಕಾಲಕಾಲಕ್ಕೆ ಅನುಗುಣವಾಗಿ ಕೂದಲನ್ನು ಆರೈಕೆ ಮಾಡಬೇಕು. ಕೂದಲು ತುಂಬ ಎಣ್ಣೆ(Oily)ಯಾಗಿಯೂ, ತುಂಬ ಒಣಗಿದಂತೆಯೂ (Dry) ಆಗಿರಬಾರದು, ಹಾಗೆ ನೋಡಿಕೊಳ್ಳಿ. ಸಾಮಾನ್ಯ ಕೂದಲಿಗೆ ವಾರಕ್ಕೆ ಎರಡು ಬಾರಿ ಸ್ನಾನ ಸಾಕೇ ಸಾಕು. ಅದಕ್ಕಿಂತ ಹೆಚ್ಚು ಬಾರಿ ತಲೆಸ್ನಾನ ಮಾಡುವುದರಿಂದ ಕೂದಲು ದುರ್ಬಲವಾಗುತ್ತದೆ. ನಿಯಮಿತವಾಗಿ ತಲೆಯ ಮಸಾಜ್ ಮಾಡಿ.
• ಕೂದಲಿಗೆ ಬಳಸುವ ಜೆಲ್, ಶಾಂಪೂ, ಎಣ್ಣೆಗಳ ಬಗ್ಗೆ ಎಚ್ಚರಿಕೆ ವಹಿಸಿ.
ರಿವರ್ಸ್ ಹೇರ್ ವಾಶಿಂಗ್ ಅಂದ್ರೇನು?
• ಮಳೆ ಕೂದಲಿಗೆ ತಾಗದಂತೆ ನೋಡಿಕೊಳ್ಳಿ. ಹತ್ತಿಯ ಬದಲು ಸ್ಯಾಟಿನ್ ಅಥವಾ ರೇಷ್ಮೆಯ (Silk) ಮೇಲುವಸ್ತ್ರವನ್ನು ಹಗುರವಾಗಿ ತಲೆಗೆ ಸುತ್ತಿಕೊಳ್ಳಿ.
• ಆಹಾರದಲ್ಲಿ ಪ್ರೊಟೀನ್ ಇರಲಿ. ಕ್ಯಾಲರಿ (calorie) ಕೊರತೆಯಾಗದಂತೆ ನೋಡಿಕೊಳ್ಳಿ. ಅಧಿಕ ಆಲ್ಕೋಹಾಲ್ ಸೇವನೆ ಬೇಡ, ಧೂಮಪಾನವೂ ಕೂದಲಿಗೆ ಹಾನಿಕರ.