ತುಂಬಾ ಹೊತ್ತು ಆಫೀಸಿನಲ್ಲಿ ಕುಳಿತುಕೊಳ್ತೀರಾ? ಮನೆಯಲ್ಲೂ ಅದೇ ರೀತಿಯ ಜೀವನವಾ? ಹಾಗಿದ್ದರೆ ನೀವು ಈ ಐದು ನಿಮಿಷದ ಸೂತ್ರವನ್ನು ಗಮನಿಸಲೇಬೇಕು. ಇದನ್ನು ಆಚರಣೆಗೆ ತಂದರೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು.
95% ಜನರು ದೈಹಿಕ ಚಟುವಟಿಕೆಯ ಕೊರತೆಯಿಂದಾಗಿ ಆರೋಗ್ಯವನ್ನು ಹದಗೆಡಿಸುವ ಅಪಾಯಕ್ಕೆ ಒಡ್ಡಿಕೊಂಡಿದ್ದಾರೆ. ಆಫೀಸಿನಲ್ಲಿ ಮತ್ತು ಮನೆಯಲ್ಲಿಯೂ ವರ್ಕ್ ಫ್ರಂ ಹೋಂ ಮಾಡುತ್ತ ಹೆಚ್ಚು ಸಮಯ ಕುಳಿತುಕೊಳ್ಳುವ ಕಾರಣ ನಾನಾ ರೋಗಗಳು ಅಮರಿಕೊಳ್ಳುತ್ತಿವೆಯಂತೆ. ಜಡ ಜೀವನಶೈಲಿಯು ಡಯಾಬಿಟಿಸ್, ಹೃದಯ ಸಮಸ್ಯೆಯಂತಹ ಕಾಯಿಲೆಗಳಿಗೆ, ಅದರಿಂದ ಮರಣಕ್ಕೆ ಪ್ರಮುಖ ಅಪಾಯಕಾರಿ ಅಂಶಗಳಲ್ಲಿ ಒಂದಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆದ್ದರಿಂದ, ನೀವು ಕುಳಿತುಕೊಳ್ಳುವ ಸಮಯವನ್ನು ಕಡಿಮೆ ಮಾಡುವುದು ಅವಶ್ಯಕ. ಇದನ್ನು ಹೇಗೆ ಮಾಡಬಹುದು? ಕೊಲಂಬಿಯಾ ಯೂನಿವರ್ಸಿಟಿ ಮೆಡಿಕಲ್ ಸೆಂಟರ್ (ನ್ಯೂಯಾರ್ಕ್) ನಲ್ಲಿ ಬಿಹೇವಿಯರಲ್ ಮೆಡಿಸಿನ್ ಪ್ರೊಫೆಸರ್ ಆಗಿರುವ ಕೀತ್ ಡಯಾಜ್, ಈ ಜಡ ಜೀವನಶೈಲಿಯನ್ನು ಮುರಿಯಲು ಉತ್ತಮ ವಿಧಾನವೊಂದನ್ನು ಸೂಚಿಸುತ್ತಾರೆ.
ಅಮೇರಿಕನ್ ಕಾಲೇಜ್ ಆಫ್ ಸ್ಪೋರ್ಟ್ಸ್ ಮೆಡಿಸಿನ್‌ನ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವಿದು: ಸಂಶೋಧನಾ ತಂಡವು 11 ಸ್ವಯಂಸೇವಕರನ್ನು ನೇಮಿಸಿಕೊಂಡಿತು. ಎಂಟು ಗಂಟೆಗಳ ಕಾಲ ಕುರ್ಚಿಯಲ್ಲಿ ಕುಳಿತಿರಲು ಸೂಚಿಸಿತು. ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡಲು, ಅವರ liಫೋನ್‌ಗಳನ್ನು ಓದಲು ಮತ್ತು ಬಳಸಲು ಅವರಿಗೆ ಅವಕಾಶ ನೀಡಲಾಯಿತು. 40ರಿಂದ 60 ವರ್ಷ ವಯಸ್ಸಿನ ಇವರಿಗೆ ಮಧುಮೇಹ ಅಥವಾ ಅಧಿಕ ರಕ್ತದೊತ್ತಡ ಇರಲಿಲ್ಲ. ಅವರು ಐದು ದಿನ ಮುಂದಿನ ಐದು ವಿಧಾನಗಳನ್ನು ಪರೀಕ್ಷಿಸಿದರು: ಮೊದಲನೆಯದಾಗಿ, ಎಂಟು ಗಂಟೆಗಳ ಕಾಲ ವಾಕಿಂಗ್ ಇಲ್ಲ; ನಂತರ ಪ್ರತಿ ಅರ್ಧ ಗಂಟೆಗೆ ಒಂದು ನಿಮಿಷ, ಪ್ರತಿ ಗಂಟೆಗೆ ಒಂದು ನಿಮಿಷ, ಪ್ರತಿ ಅರ್ಧ ಗಂಟೆಗೆ ಐದು ನಿಮಿಷಗಳು ಮತ್ತು ಅಂತಿಮವಾಗಿ ಪ್ರತಿ ಗಂಟೆಗೆ ಐದು ನಿಮಿಷಗಳು.
undefined
ಯಾವುದು ಉತ್ತಮವಾಗಿತ್ತು ಗೊತ್ತೆ?
ಪ್ರತಿ ಅರ್ಧ ಗಂಟೆಗೊಮ್ಮೆ ಕುಳಿತಲ್ಲಿಂದ ಎದ್ದು ಐದು ನಿಮಿಷಗಳ ನಡೆಯುವುದು ನೀವು ಸುದೀರ್ಘ ಕಾಲ ಕುಳಿತುಕೊಳ್ಳುವುದರಿಂದ ಉಂಟಾಗುವ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸುತ್ತದೆ. ಇದು ರಕ್ತದ ಗ್ಲೂಕೋಸ್ ಮತ್ತು ರಕ್ತದೊತ್ತಡ ಎರಡನ್ನೂ ಗಣನೀಯವಾಗಿ ಕಡಿಮೆ ಮಾಡುತ್ತದೆ. ಪ್ರತಿ ಬಾರಿಯೂ ಕಾರ್ಡಿಯೋಮೆಟಾಬಾಲಿಕ್ ಅಪಾಯಕಾರಿ ಅಂಶಗಳು ಕಡಿಮೆಯಾಗುತ್ತವೆ. ಇಡೀ ದಿನ ಕುಳಿತುಕೊಳ್ಳುವುದಕ್ಕೆ ಹೋಲಿಸಿದರೆ ಇದು ರಕ್ತದಲ್ಲಿನ ಸಕ್ಕರೆಯ ಸ್ಪೈಕ್ ಅನ್ನು 58%ರಷ್ಟು ಕಡಿಮೆ ಮಾಡುತ್ತದೆ ಎಂದು ವಿಶ್ವವಿದ್ಯಾಲಯದ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಸಂಶೋಧಕರು ಪರೀಕ್ಷೆಯಲ್ಲಿ ಭಾಗವಹಿಸಿದರ ಮನಸ್ಥಿತಿ, ಆಯಾಸ ಮತ್ತು ಕಾರ್ಯಕ್ಷಮತೆಯ ಮಟ್ಟವನ್ನು ಅಳೆದರು. ಎಲ್ಲಾ ಬಗೆಯ ವಾಕಿಂಗ್ ನಲ್ಲೂ ಆಯಾಸದಲ್ಲಿ ಗಮನಾರ್ಹ ಇಳಿಕೆ ಮತ್ತು ಮನಸ್ಥಿತಿಯಲ್ಲಿ ಸುಧಾರಣೆ ಕಂಡುಬಂತು. ಕೆಲವರು ಎಂಟು ಗಂಟೆ ಕುಳಿತಲ್ಲೇ ಕುಳಿತು ಕೆಲಸ ಮಾಡಿ ಮುಂಜಾನೆ ಅಥವಾ ಸಂಜೆ ಹತ್ತು ಸಾವಿರ ಸ್ಟೆಪ್ಸ್ ನಡೆಯುತ್ತಾರೆ. ತಜ್ಞರ ಪ್ರಕಾರ ಇದೂ ಒಳ್ಳೆಯದೇ. ಆದರೆ, ಇದಕ್ಕಿಂತ ಕುಳಿತಿರುವುದರ ನಡುವೆಯೇ ಗಂಟೆಗೊಮ್ಮೆ ಐದು ನಿಮಿಷ ಅಥವಾ ಅರ್ಧ ಗಂಟೆಗೊಮ್ಮೆ ಐದು ನಿಮಿಷ ಎದ್ದು ನಡೆಯುವುದು ಇನ್ನಷ್ಟು ಉತ್ತಮವಾದುದು.
ಈ ಬೇಸಿಗೆ ಸಾಕಪ್ಪಾ ಸಾಕು; ಬ್ರೇನ್ ಸ್ಟ್ರೋಕ್ ಬಗ್ಗೆ ಹುಷಾರಾಗಿರಿ
ತಜ್ಞರ ಪ್ರಕಾರ ನಿಯಮಿತವಾಗಿ ದಿನಕ್ಕೆ ಕನಿಷ್ಠ ಹತ್ತುಸಾವಿರ ಹೆಜ್ಜೆ ನಡೆಯುವ ಅಭ್ಯಾಸ ಇಟ್ಟುಕೊಂಡವರ ಆರೋಗ್ಯ ಸುಸ್ಥಿರವಾಗಿರುತ್ತದೆ. ನಡೆಯುವ ಅಭ್ಯಾಸವೇ ಇಲ್ಲದ, ದಿನದಲ್ಲಿ ಯಾವ ಬಗೆಯ ವ್ಯಾಯಾಮವನ್ನೂ ಮಾಡದವರಿಗಿಂತ, ಹೀಗೆ ವಾಕಿಂಗ್ ಮಾಡುವವರು ಕನಿಷ್ಟ ಐದು ವರ್ಷ ಹೆಚ್ಚಿಗೆ ಬದುಕುತ್ತಾರೆ ಎಂದು ಸಮೀಕ್ಷೆಗಳು ತಿಳಿಸಿವೆ. ಇದು ಹತ್ತುಸಾವಿರ ಮಂದಿಯ ಮೇಲೆ ಜರ್ಮನಿಯಲ್ಲಿ ನಡೆಸಿದ ಅಧ್ಯಯನ.
ಇದನ್ನು ಹೇಗೆ ಮಾಡಬಹುದು?
- ದಿನವಿಡೀ ಓಡಾಡಲು ಕಾರಣಗಳನ್ನು ಹುಡುಕಿಕೊಳ್ಳಿ.
- ಕುಡಿಯುವ ನೀರನ್ನು ಸೀಟಿನಿಂದ ದೂರವಿಡಿ. ಅದರ ನೆಪದಲ್ಲಿ ಎದ್ದು ಓಡಾಡಿ.
- ಮೆಟ್ಟಿಲುಗಳನ್ನು ಹತ್ತಿ ಇಳಿಯಿರಿ. ಅದು ಇನ್ನಷ್ಟ ಉತ್ತಮ. ಅದು ನಿಮ್ಮ ಹೃದಯದ ಆರೋಗ್ಯಕ್ಕೂ ಒಳ್ಳೆಯದು.
- ಫೋನ್ ಬಂದಾಗ ಎದ್ದು ನಿಂತು ಓಡಾಡುತ್ತಾ ಮಾತನಾಡುವ ಅಭ್ಯಾಸ ಮಾಡಿಕೊಳ್ಳಿ.
- ಮನೆಯಲ್ಲಿ ಆರಾಮ್ ಚೇರ್‌ಗಳನ್ನು ಇಟ್ಟುಕೊಳ್ಳದಿರಿ. ಇದರಲ್ಲಿ ಕುಳಿತರೆ ಏಳಲು ಮನಸ್ಸಾಗುವುದಿಲ್ಲ.
- ವರ್ಕ್ ಫ್ರಂ ಹೋಂ ಮಾಡುವವರಾದರೆ ಹಾಸಿಗೆ ಅಥವಾ ಫೋಮ್ ಬೆಡ್ ಮೇಲೆ ಕುಳಿತುಕೊಳ್ಳಬೇಡಿ.
ಮಧ್ಯಾಹ್ನ 2 ಗಂಟೆ ಬಳಿಕ ನೀವೆಷ್ಟು ಕಾಫಿ, ಟೀ ಕುಡಿತೀರಿ? ಹಾರ್ಟ್ ಆಟ್ಯಾಕ್ ಆಗದಂತೆ ಇರಲಿ ಎಚ್ಚರ!