ತೂಕ ಇಳಿದ್ಮೇಲೆ ಕಾಡುವ ಹಸಿವನ್ನು ನಿಯಂತ್ರಿಸೋದು ಹೇಗೆ?

By Suvarna News  |  First Published Oct 26, 2023, 2:32 PM IST

ಅದೇನೇನೋ ಕಷ್ಟಪಟ್ಟು ತೂಕ ಇಳಿಸಿರ್ತೇವೆ. ತೂಕ ಕಡಿಮೆ ಆಗಿದೆ ಎನ್ನುವ ಖುಷಿ ಜೊತೆ ಮನಸ್ಸು ಬಯಸ್ತಿದೆ ಅಂತ ಅದು ಇದು ತಿನ್ನಲು ಶುರು ಮಾಡ್ತಾವೆ. ಈ ಪೋಸ್ಟ್ ವೇಟ್ ಲಾಸ್ ಹಂಗರ್ ಕಂಟ್ರೋಲ್ ಮಾಡಿಲ್ಲ ಅಂದ್ರೆ ಮುಂದೆ ನಿಮಗೆ ಕಷ್ಟ.
 


ದೇಹದ ತೂಕವನ್ನು ನಿಯಂತ್ರಿಸುವುದು ಇಂದಿನ ಅಗತ್ಯತೆಗಳಲ್ಲಿ ಒಂದಾಗಿದೆ ಎಂದರೆ ತಪ್ಪಾಗದು. ಈಗಿನ ಆಹಾರ ಪದ್ಧತಿ, ಜೀವನಶೈಲಿ ಹಾಗೂ ಒತ್ತಡದ ಜೀವನಕ್ಕೆ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅತೀ ಅವಶ್ಯವಾಗಿದೆ. ವೇಟ್ ಲಾಸ್ ಮಾಡಿಕೊಳ್ಳಲು ಹಲವು ಮಂದಿ ಯೋಗ, ವ್ಯಾಯಾಮ, ಡಯಟ್  ಮುಂತಾದವುಗಳನ್ನು ಮಾಡುತ್ತಾರೆ.

ತೂಕ (Weight) ವನ್ನು ಕಡಿಮೆಮಾಡಿಕೊಳ್ಳುವುದು ಸುಲಭವಲ್ಲ. ಸರಿಯಾದ ಮಾರ್ಗದರ್ಶನವಿಲ್ಲದೇ ತೂಕವನ್ನು ಇಳಿಸಿಕೊಳ್ಳುವುದು ಅಪಾಯಕಾರಿ. ಏಕೆಂದರೆ ಕೆಲವೊಮ್ಮೆ ಇದರಿಂದ ಅನೇಕ ಅಡ್ಡಪರಿಣಾಮಗಳಾಗಬಹುದು. ಹಾಗೆಯೇ ಹೆಚ್ಚು ಹೆಚ್ಚು ವರ್ಕೌಟ್ (Workout)  ಮಾಡೋದ್ರಿಂದ ಜೀವಹಾನಿಯೂ ಆಗಬಹುದು. ತೂಕ ಕಡಿಮೆಯಾದ ನಂತರ ದೇಹದಲ್ಲಿ ಇಂತಹ ಅನೇಕ ರೀತಿಯ ಬದಲಾವಣೆಗಳಾಗುತ್ತವೆ. ಹಾಗಾಗಿ ಕಡಿಮೆಯಾದ ತೂಕವನ್ನು ಕಾಪಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಏಕೆಂದರೆ ತೂಕ ನಷ್ಟವಾಯಿತೆಂದು ಅದರ ಬಗ್ಗೆ ನಿಷ್ಕಾಳಜಿ ತೋರಿಸಿದರೆ ಮತ್ತೆ ತೂಕ ಹೆಚ್ಚಾಗುವ ಸಾಧ್ಯತೆ ಕೂಡ ಇರುತ್ತದೆ.

Tap to resize

Latest Videos

undefined

ವೀರ್ಯದ ಸಂಖ್ಯೆ ಕಡಿಮೆಯಾಗಲು ಇವೆಲ್ಲ ಕಾರಣ ಎನ್ನುತ್ತೆ ಅಧ್ಯಯನ

ತೂಕ ನಷ್ಟವಾದ ನಂತರ ಹೆಚ್ಚು ಹಸಿವಾಗಲು ಕಾರಣವೇನು? :  ತೂಕ ಕಡಿಮೆ ಮಾಡಿಕೊಳ್ಳುವಾಗ ಆಹಾರವನ್ನು ಕಡಿಮೆ ಸೇವಿಸುತ್ತೇವೆ. ದೇಹಕ್ಕೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಆಹಾರ ಸಿಗದೇ ಇದ್ದಾಗ ಹಸಿವು (Hungry) ಹೆಚ್ಚುತ್ತದೆ. ಈ ಸಮಯದಲ್ಲಿ ದೇಹ ಹೆಚ್ಚಿನ ಪ್ರಮಾಣದ ಗ್ರೆಲಿನ್ ಹಾರ್ಮೋನ್ ಬಿಡುಗಡೆ ಮಾಡುತ್ತದೆ. ಈ ಹಾರ್ಮೋನ್ ದೇಹದಲ್ಲಿ ಹೆಚ್ಚಾದಾಗ ವ್ಯಕ್ತಿಗೆ ಹೆಚ್ಚು ಹಸಿವಾಗುತ್ತದೆ. ಆದ್ದರಿಂದಲೇ ದೇಹದ ತೂಕವನ್ನು ಕಡಿಮೆಮಾಡಿಕೊಂಡವರಿಗೆ ಏನಾದರೂ ತಿನ್ನುವ ಆಸೆಯಾಗುತ್ತದೆ. ಅಂತವರಿಗೆ ಹಸಿವನ್ನು ನಿಗ್ರಹಿಸುವುದು ಕೂಡ ಕಷ್ಟವಾಗುತ್ತದೆ ಹಾಗೂ ಆಹಾರ ಸೇವಿಸಿದ ನಂತರವೂ ಹಸಿವಿನ ಅನುಭವವೇ ಆಗುತ್ತದೆ. ಇದನ್ನೇ ಪೋಸ್ಟ್ ವೇಟ್ ಲಾಸ್ ಹಂಗರ್ ಎನ್ನಲಾಗುತ್ತದೆ.

No Bra! ಬ್ರಾ ಧರಿಸೋಕೆ ಇಷ್ಟವಿಲ್ಲದವರು ಈ ವಿಷಯಗಳ ಬಗ್ಗೆ ತಿಳಿದಿರಲೇಬೇಕು!

ದೇಹದ ತೂಕವನ್ನು (Body Weight) ಇಳಿಸಿಕೊಂಡ ನಂತರ ಹಸಿವು ಹೆಚ್ಚುತ್ತದೆ. ಅಂತಹ ಸಂದರ್ಭದಲ್ಲಿ ನಮ್ಮ ಶರೀರಕ್ಕೆ ಹಸಿವನ್ನು ನಿಗ್ರಹಿಸುವ ಶಕ್ತಿಯೂ ಇರುವುದಿಲ್ಲ. ಇದರ ಬದಲಾಗಿ ಶರೀರ ತೂಕ ಮತ್ತು ಫ್ಯಾಟ್ ಅನ್ನು ಕರಗಿಸುವ ವ್ಯವಸ್ಥೆ ಹೆಚ್ಚಿರುತ್ತದೆ. ತೂಕ ಕಡಿಮೆಯಾದ ನಂತರ ಶರೀರದಲ್ಲಿ ಶಕ್ತಿಯ ಕೊರತೆಯೂ ಉಂಟಾಗುತ್ತದೆ. ಇಂತಹ ತೊಂದರೆಗಳಿಂದಾಗಿ ಕೆಲವೊಮ್ಮೆ ಮತ್ತೆ ತೂಕವನ್ನು ಏರಿಸಿಕೊಳ್ಳಬೇಕು ಅಥವಾ ಮೊದಲಿನ ತೂಕವನ್ನು ಪಡೆಯಬೇಕು ಎನಿಸುತ್ತದೆ.

ಪೋಸ್ಟ್ ವೇಟ್ ಲಾಸ್ ಹಂಗರ್ ಅನ್ನು ನಿಯಂತ್ರಿಸೋದು ಹೇಗೆ? :  ತೂಕ ಇಳಿಕೆಯ ನಂತರ ಉಂಟಾಗುವ ಹಸಿವನ್ನು ನಿಯಂತ್ರಿಸಲು ಊಟದ ಸಮಯವನ್ನು ನಿಗದಿಪಡಿಸಿ. ಅದನ್ನು ಪ್ರತಿನಿತ್ಯವೂ ಪಾಲಿಸಬೇಕು. ಹಾಗೆಯೇ ಆಹಾರದಲ್ಲಿ ಪ್ರೊಟೀನ್, ಆರೋಗ್ಯಕರ ಫ್ಯಾಟ್ ಮತ್ತು ಫೈಬರ್ ಇರುವಂತೆ ನೋಡಿಕೊಳ್ಳಬೇಕು. ಹೆಚ್ಚು ಹಸಿವಾದಾಗ ಆರೋಗ್ಯಕರ ಸ್ನ್ಯಾಕ್ಸ್ ಅನ್ನು ಮಾತ್ರ ಸೇವಿಸಬೇಕು. ಹೆಚ್ಚು ಹೆಚ್ಚು ಆಹಾರ ಸೇವನೆಯಿಂದ ದೂರವಿರಲು ಸಣ್ಣ ಪ್ಲೇಟ್ ಗಳಲ್ಲಿ ಆಹಾರವನ್ನು ಸೇವಿಸಿ. ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಫೈಬರ್, ಹಣ್ಣು-ತರಕಾರಿ ಹಾಗೂ ಬೀಜಗಳು ಇರುವಂತೆ ನೋಡಿಕೊಳ್ಳಿ. ಹಸಿವಿನಿಂದ ಉಂಟಾಗುವ ನೋವಿನಿಂದ ದೂರವಿರಲು ಪ್ರೊಟೀನ್ ಯುಕ್ತ ಆಹಾರವನ್ನೇ ಸೇವಿಸಿ. ಹೆಚ್ಚಿನ ಸಮಯ ಹೊಟ್ಟೆ ತುಂಬಿಕೊಂಡು ಇರುವಂತ ಆಹಾರ ಸೇವಿಸಿ. 

ಆಹಾರವನ್ನು ಸೇವಿಸುವಾಗ ನಿಮ್ಮ ಸಂಪೂರ್ಣ ಗಮನ ಆಹಾರದ ಮೇಲೆಯೇ ಇರಲಿ. ದೇಹದಲ್ಲಿ ನೀರಿನ ಕೊರತೆಯಾದಾಗಲೂ ಹಸಿವು ಹೆಚ್ಚುತ್ತದೆ. ಹಾಗಾಗಿ ಹೆಚ್ಚು ಹೆಚ್ಚು ನೀರನ್ನು ಕುಡಿಯಿರಿ. ರಾತ್ರಿ ತಡವಾಗಿ ಮಲಗಿದರೂ ಹಸಿವು ಹೆಚ್ಚುತ್ತದೆ. ಆದ್ದರಿಂದ ರಾತ್ರಿ ತಡವಾಗಿ ನಿದ್ರೆ ಮಾಡುವುದನ್ನು ತಪ್ಪಿಸಿ. ನಿಮ್ಮ ದೇಹದಲ್ಲಿ ಕಾರ್ಬೋಹೈಡ್ರೇಟ್ ಪ್ರಮಾಣ ಸಮತೋಲನದಲ್ಲಿರಲಿ. ಶರೀರಕ್ಕೆ ಅಗತ್ಯವಿರುವಷ್ಟು ಆಹಾರವನ್ನು ಮಾತ್ರ ಕೊಡಿ. ಅದರ ಜೊತೆಗೆ ನಿಯಮಿತವಾದ ವ್ಯಾಯಾಮವನ್ನು ಕೂಡ ರೂಢಿಯಲ್ಲಿಟ್ಟುಕೊಂಡರೆ ಪೋಸ್ಟ್ ವೇಟ್ ಲಾಸ್ ಹಂಗರ್ ನಿಂದ ದೂರವಿರಬಹುದು.
 

click me!