
ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಸುವಾಗ ಕೆಲವೊಮ್ಮೆ ಪ್ರಯಾಣಿಕರಿಗೆ ಇದ್ದಕ್ಕಿದ್ದಂತೆ ಹೊಟ್ಟೆ ನೋವು, ಎದೆ ನೋವು, ವಾಂತಿ, ತಲೆಸುತ್ತು ಅಥವಾ ಇತರ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಇಂತಹ ಸಂದರ್ಭದಲ್ಲಿ ಚಲಿಸುತ್ತಿರುವ ರೈಲಿನಲ್ಲಿ ತಕ್ಷಣ ಚಿಕಿತ್ಸೆ ಹೇಗೆ ಪಡೆಯುವುದು ಎಂಬುದೇ ದೊಡ್ಡ ಚಿಂತೆಯಾಗಿರುತ್ತದೆ. ಪ್ರಯಾಣಿಕರ ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರೈಲ್ವೆ ಆನ್‌ಬೋರ್ಡ್ ಮೆಡಿಕಲ್ ಅಸಿಸ್ಟೆನ್ಸ್ ಸೌಲಭ್ಯವನ್ನು ಒದಗಿಸುತ್ತದೆ. ಮಾಹಿತಿ ದೊರೆತ ತಕ್ಷಣ, ರೈಲಿನ ಮಾರ್ಗದಲ್ಲಿರುವ ಮುಂದಿನ ಸಮೀಪದ ಪ್ರಮುಖ ನಿಲ್ದಾಣದಲ್ಲಿ ವೈದ್ಯಕೀಯ ತಂಡ ನಿಮ್ಮ ಕೋಚ್‌ನಲ್ಲಿರುವ ನಿಮ್ಮ ಸೀಟಿನ ಬಳಿಗೇ ಬಂದು ಚಿಕಿತ್ಸೆ ನೀಡುತ್ತಾರೆ.
1. 139 ಸಹಾಯವಾಣಿಗೆ ಕರೆ ಮಾಡಿ:139 ರೈಲ್ವೆಯ ಸಹಾಯವಾಣಿ ಸಂಖ್ಯೆ. ಈ ಸಂಖ್ಯೆಗೆ ಕರೆ ಮಾಡಿ ನಿಮ್ಮ ಭಾಷೆಯನ್ನು ಆಯ್ಕೆ ಮಾಡಿಕೊಂಡು, ವೈದ್ಯಕೀಯ ನೆರವಿಗೆ ಸಂಬಂಧಿಸಿದ ಆಯ್ಕೆಯನ್ನು ಆರಿಸಬಹುದು.
2. TTE ಅಥವಾ ಆನ್‌ಬೋರ್ಡ್ ಸಿಬ್ಬಂದಿಗೆ ತಿಳಿಸಿ: ನಿಮ್ಮ ಕೋಚ್‌ನ TTE, ರೈಲು ಸಿಬ್ಬಂದಿ ಅಥವಾ ಪ್ಯಾಂಟ್ರಿ ಕಾರ್ ಸಿಬ್ಬಂದಿಗೆ ತಕ್ಷಣ ಮಾಹಿತಿ ನೀಡಿ. ಅವರು ರೈಲ್ವೆ ಕಂಟ್ರೋಲ್ ರೂಮ್‌ಗೆ ಮಾಹಿತಿ ನೀಡಿ ವೈದ್ಯಕೀಯ ನೆರವಿನ ವ್ಯವಸ್ಥೆ ಮಾಡಬಹುದು.
3. RailMadad ಆ್ಯಪ್ ಅಥವಾ ವೆಬ್‌ಸೈಟ್ ಬಳಸಿ:ನಿಮ್ಮ ಮೊಬೈಲ್‌ನಲ್ಲಿ RailMadad ಆ್ಯಪ್ ತೆರೆಯಿರಿ ಅಥವಾ ಅದರ ವೆಬ್‌ಸೈಟ್‌ಗೆ ಭೇಟಿ ನೀಡಿ. ಅಲ್ಲಿ Medical Assistance ವಿಭಾಗದ ಮೂಲಕ ನಿಮ್ಮ ಸಮಸ್ಯೆಯನ್ನು ದಾಖಲಿಸಬಹುದು.
4. Xನಲ್ಲಿ ರೈಲ್ವೆಗೆ ಮಾಹಿತಿ ನೀಡಿ:ನಿಮ್ಮ ಸಮಸ್ಯೆ, PNR ಸಂಖ್ಯೆ, ರೈಲು ಸಂಖ್ಯೆ ಮತ್ತು ಸೀಟ್ ಸಂಖ್ಯೆಯ ವಿವರಗಳನ್ನು ನೀಡಿ, ರೈಲ್ವೆಯ ಸಂಬಂಧಿತ ಅಧಿಕೃತ ಖಾತೆಗಳನ್ನು ಅಂದರೆ @RailMinIndia ಮತ್ತು @RailwaySeva ಟ್ಯಾಗ್ ಮಾಡಿ ಪೋಸ್ಟ್ ಮಾಡಬಹುದು.
ಸಹಾಯ ಕೇಳುವಾಗ ಈ ಮಾಹಿತಿಯನ್ನು ನೀಡುವುದು ಮುಖ್ಯ
ವೈದ್ಯಕೀಯ ನೆರವು ಕೇಳುವಾಗ PNR ಸಂಖ್ಯೆ ನೀಡುವುದು ಮುಖ್ಯ. ಇದರಿಂದ ನಿಮ್ಮ ರೈಲಿನ ಪ್ರಸ್ತುತ ಸ್ಥಳ ಮತ್ತು ನಿಮ್ಮ ಸೀಟ್‌ನ ವಿವರಗಳನ್ನು ಗುರುತಿಸಲು ಸಹಾಯವಾಗುತ್ತದೆ. ಇದರ ಜೊತೆಗೆ ರೈಲಿನ ಹೆಸರು ಮತ್ತು ಸಂಖ್ಯೆ, ಕೋಚ್ ಸಂಖ್ಯೆ, ಸೀಟ್ ಅಥವಾ ಬರ್ತ್ ಸಂಖ್ಯೆ ಹಾಗೂ ರೋಗಿಯ ಪ್ರಸ್ತುತ ಆರೋಗ್ಯ ಸ್ಥಿತಿ, ಉದಾಹರಣೆಗೆ ಎದೆ ನೋವು, ತೀವ್ರ ಜ್ವರ, ವಾಂತಿ, ಪ್ರಜ್ಞೆ ತಪ್ಪುವುದು ಅಥವಾ ಗಾಯವಾಗಿರುವುದು ಎಂಬ ಮಾಹಿತಿ ನೀಡಬೇಕು.
ಮಾಹಿತಿ ಸಿಕ್ಕ ತಕ್ಷಣ ಸಕ್ರಿಯವಾಗುತ್ತದೆ ವೈದ್ಯಕೀಯ ತಂಡ
ಅಗತ್ಯವಿದ್ದರೆ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆಯೂ ಇದೆ
ಆನ್‌ಬೋರ್ಡ್ ವೈದ್ಯಕೀಯ ಸೇವೆಗಾಗಿ ರೈಲ್ವೆ ₹100 ನಿಗದಿತ ಕನ್ಸಲ್ಟೇಶನ್ ಶುಲ್ಕ ಪಡೆಯುತ್ತದೆ. ಚಿಕಿತ್ಸೆ ನೀಡಿದ ಬಳಿಕ ಅಧಿಕೃತ ರಸೀದಿ ನೀಡಲಾಗುತ್ತದೆ.
ಪ್ರಥಮ ಚಿಕಿತ್ಸೆಯ ಸಂದರ್ಭದಲ್ಲಿ ನೀಡಲಾಗುವ ಔಷಧಿಗಳು ಉಚಿತವಾಗಿರಬಹುದು. ಆದರೆ ವಿಶೇಷ ಔಷಧಿಗಳ ಅಗತ್ಯವಿದ್ದರೆ ಅದರ ವೆಚ್ಚವನ್ನು ಪ್ರತ್ಯೇಕವಾಗಿ ಪಾವತಿಸಬೇಕಾಗಬಹುದು.
ರೋಗಿಯ ಸ್ಥಿತಿ ಗಂಭೀರವಾಗಿದ್ದು, ರೈಲಿನಲ್ಲೇ ನೀಡಿದ ಚಿಕಿತ್ಸೆಯಿಂದ ಆರೋಗ್ಯ ಸುಧಾರಿಸದಿದ್ದರೆ, ನಿಲ್ದಾಣದಲ್ಲಿ ಸಿದ್ಧವಾಗಿರುವ ಆಂಬ್ಯುಲೆನ್ಸ್ ಮೂಲಕ ಸಮೀಪದ ರೈಲ್ವೆ ಆಸ್ಪತ್ರೆ, ಸರ್ಕಾರಿ ಆಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸುವ ವ್ಯವಸ್ಥೆಯನ್ನೂ ಮಾಡಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.