10 ವರ್ಷ ಚಿಕ್ಕವರಾಗಿ ಕಾಣ್ಬೇಕೆಂದ್ರೆ ವಾರಕ್ಕೊಮ್ಮೆ ಊಟ ಬಿಡಿ

By Suvarna NewsFirst Published Sep 20, 2022, 4:06 PM IST
Highlights

ಉಪವಾಸ ದೇವರಿಗೆ ಮಾತ್ರ ಸೀಮಿತ ಎಂದುಕೊಂಡವರಿದ್ದಾರೆ. ದೇವರನ್ನು ನಂಬದ ಜನರು ಉಪವಾಸ ಮಾಡುವ ಸಹವಾಸಕ್ಕೆ ಹೋಗುವುದಿಲ್ಲ. ಆದ್ರೆ ಇದು ತಪ್ಪು ತಿಳುವಳಿಕೆ. ಉಪವಾಸದಿಂದ ಅನೇಕ ಪ್ರಯೋಜನವಿದೆ. 
 

ಹೊಳೆಯುವ ಚರ್ಮ ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಸುಕ್ಕಾಗದ ಚರ್ಮ ನಿಮ್ಮ ವಯಸ್ಸನ್ನು ಮುಚ್ಚಿಡುತ್ತದೆ. ಇದೇ ಕಾರಣಕ್ಕೆ ಜನರು ಮುಖದ ಸೌಂದರ್ಯಕ್ಕೆ ಹೆಚ್ಚಿನ ಬೆಲೆ ನೀಡ್ತಾರೆ. ನೀವು ಸುಂದರವಾಗಿ ಕಾಣಲು ಎಷ್ಟೇ ಮೇಕಪ್ ಮಾಡಿ ಇಲ್ಲವೆ ಕಾಸ್ಮೆಟಿಕ್ ಸರ್ಜರಿಗಳನ್ನು ಮಾಡಿಸಿಕೊಳ್ಳಿ ಅದ್ರಿಂದ ಪ್ರಯೋಜನವಿಲ್ಲ. ಸೌಂದರ್ಯ ಹೆಚ್ಚಾಗ್ಬೇಕೆಂದ್ರೆ ದೇಹದ ಆರೋಗ್ಯ ಚೆನ್ನಾಗಿರಬೇಕು. ದೇಹ ಹಾಗೂ ಮನಸ್ಸು ಎರಡೂ ಆರೋಗ್ಯವಾಗಿದ್ದರೆ ಅಟೋಮೆಟಿಕ್ ಆಗಿ ನಿಮ್ಮ ಸೌಂದರ್ಯ ಹೆಚ್ಚಾಗುತ್ತದೆ. ನಮ್ಮ ಆರೋಗ್ಯ ಕಡೆಗಣಿಸಿದ್ರೆ ಅದು ನಮ್ಮ ಮುಖದ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತದೆ. ಚರ್ಮದ ಆರೋಗ್ಯ ನಾವು ಏನು ತಿನ್ನುತ್ತೇವೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ನಾವು ಸೇವಿಸುವ ಆಹಾರ, ಚಯಾಪಚಯವನ್ನು ನಮ್ಮ ಸೌಂದರ್ಯ ಅವಲಂಬಿಸಿದೆ. ಆರೋಗ್ಯಕ್ಕಾಗಿ ಅನೇಕರು ಉಪವಾಸ ಮಾಡ್ತಾರೆ. ಈ ಉಪವಾಸದಿಂದ ನಮ್ಮ ಸೌಂದರ್ಯ ವೃದ್ಧಿಯಾಗುತ್ತ ಇಲ್ಲ ಆರೋಗ್ಯ ಹದಗೆಡುತ್ತಾ ಎಂಬುದನ್ನು ನಾವಿಂದು ಹೇಳ್ತೇವೆ. 

ಉಪವಾಸ (Fasting) ಮತ್ತು ಆರೋಗ್ಯ (Health) : ವಾರಕ್ಕೊಮ್ಮೆ ಉಪವಾಸ ಮಾಡುವುದು ಆರೋಗ್ಯಕ್ಕೆ (Health) ಬಹಳ ಒಳ್ಳೆಯದು. ಉಪವಾಸ ಉತ್ತಮ ಆರೋಗ್ಯ ಹಾಗೂ ಸೌಂದರ್ಯ  (Beauty) ದ ಜೊತೆ ಸಂಬಂಧ ಹೊಂದಿದೆ. ಉಪವಾಸದಿಂದ ಆರೋಗ್ಯ ವೃದ್ಧಿಸುತ್ತದೆ. ಚಯಾಪಚಯವನ್ನು ಸರಳಗೊಳಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು (Immunity Power) ಹೆಚ್ಚಿಸುತ್ತದೆ. ಉತ್ಕರ್ಷಣ ನಿರೋಧಕವನ್ನು ಹೆಚ್ಚಿಸುವ ಮೂಲಕ ಚರ್ಮದ ಆರೋಗ್ಯ ಕಾಪಾಡುತ್ತದೆ. ಚರ್ಮದ ವಯಸ್ಸನ್ನು ಮುಚ್ಚಿಡಲು ಉಪವಾಸ ಸಹಕಾರಿ. ಶರೀರವನ್ನು ಶುದ್ಧೀಕರಿಸಲು ಉಪವಾಸವು ಉತ್ತಮ ಮಾರ್ಗವಾಗಿದೆ. ಇದು ಆಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಪ್ರಯೋಜನಗಳನ್ನು ಹೊಂದಿದೆ.

ಉಪವಾಸ ಮಾಡುವುದು ಹೇಗೆ? : ಯಾವ ರೀತಿ ಉಪವಾಸ ಮಾಡ್ಬೇಕು ಎಂಬುದು ನಿಮ್ಮ ಆರೋಗ್ಯವನ್ನು ಅವಲಂಬಿಸಿದೆ. ಮಾನಸಿಕ ಶಕ್ತಿ (Mental Power) ಮತ್ತು ಇಚ್ಛಾಶಕ್ತಿ (Will Power), ಹೊಟ್ಟೆಯ ಸಾಮರ್ಥ್ಯ ಎಲ್ಲವನ್ನೂ ಗಮನಿಸಿ ಉಪವಾಸ ಯಾವುದು ಮಾಡ್ಬೇಕು ಎಂಬುದನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು. 

ಉಪವಾಸದಲ್ಲಿ ಎಷ್ಟು ವಿಧವಿದೆ? : 
ಡ್ರೈ ಫಾಸ್ಟಿಂಗ್ :
ಇದರಲ್ಲಿ ನೀರು ಮತ್ತು ಆಹಾರವನ್ನು ಸ್ವಲ್ಪ ಪ್ರಮಾಣದಲ್ಲಿ ಸೇವನೆ ಮಾಡಲಾಗುತ್ತದೆ. ಕಫದ ಸಮಸ್ಯೆಯಿರುವ ಜನರಿಗೆ ಇದು ಹೆಚ್ಚು ಪ್ರಯೋಜನಕಾರಿಯಾಗಿದೆ.
ನಿರ್ಜಲ ಉಪವಾಸ :  ಆಹಾರ ಅಥವಾ ನೀರು ಸೇವನೆ ಮಾಡದೆ ಮಾಡುವ ಉಪವಾಸ ಇದಾಗಿದೆ.
ಆಹಾರ ತ್ಯಜಿಸುವ ಉಪವಾಸ :  ದಿನದಲ್ಲಿ ಒಂದು ಅಥವಾ ಎರಡು ಬಾರಿ ಮಾತ್ರ ಊಟ ಮಾಡುವುದು. ಬೆಳಗ್ಗಿನ ಉಪಹಾರ ಅಥವಾ ರಾತ್ರಿ ಊಟವನ್ನು ತ್ಯಜಿಸುವುದು. 
ಮಧ್ಯಂತರ ಉಪವಾಸ (Interim Fasting) : 16 ಗಂಟೆಗಳ ಉಪವಾಸ ಮಾಡಿ ನಂತರ  ಊಟ ಮಾಡಿ ಮತ್ತೆ 16 ಗಂಟೆ ಉಪವಾಸ ಮಾಡುವುದು ಅಥವಾ ತಜ್ಞರ ಸಲಹೆಯಂತೆ ಉಪವಾಸ ಮಾಡುವುದು.  
ನೀರಿನ ಉಪವಾಸ (Water Fasting): ದಿನವಿಡೀ ನೀರನ್ನು ಮಾತ್ರ ಸೇವನೆ ಮಾಡಿ ಮಾಡುವ ಉಪವಾಸ. 
ಜ್ಯೂಸ್ ಉಪವಾಸ (Juice Fasting): ದಿನವಿಡೀ ಹಣ್ಣಿನ ರಸವನ್ನು ಕುಡಿದು ಮಾಡುವ ಉಪವಾಸ. 
ಹಣ್ಣಿನ ಉಪವಾಸ (Fruit Fasting): ದಿನವಿಡೀ ಹಣ್ಣುಗಳನ್ನು ಮಾತ್ರ ಸೇವಿಸಿ ಉಪವಾಸ ಮಾಡುವುದು.
ತರಕಾರಿ ಉಪವಾಸ : ಇಡೀ ದಿನ ತರಕಾರಿ ಸೇವನೆ ಮಾಡುವುದು.  

ಯಾವಾಗ್ಲೂ ಪಿಜ್ಜಾ, ಬರ್ಗರ್ ತಿನ್ತಿರ್ಬೇಕು ಅಂತನಿಸುವುದು ಯಾಕೆ?

ಚಾಕೊಲೇಟ್ ಉಪವಾಸ : ಚಾಕೊಲೇಟ್ ನಲ್ಲಿ ಉತ್ಕರ್ಷಣ ನಿರೋಧಕವಿದೆ.  ಕಬ್ಬಿಣ ಸಮೃದ್ಧವಾಗಿದೆ. ಕೆಲವರು ಇಡೀ ದಿನ ಚಾಕೊಲೇಟ್ ಸೇವನೆ ಮಾಡುತ್ತಾರೆ. ಉಳಿದ ಯಾವುದೇ ಆಹಾರ ಸೇವನೆ ಮಾಡುವುದಿಲ್ಲ.  

ಉಪವಾಸದ ಪ್ರಯೋಜನ :  ಉಪವಾಸದ ಕುರಿತು ಬಹಳಷ್ಟು ಸಂಶೋಧನೆ  ಮಾಡಲಾಗಿದೆ. ಉಪವಾಸ ಕ್ಯಾನ್ಸರ್ ರೋಗಿಗಳಿಗೆ ಅದ್ಭುತವಾಗಿದೆ ಎಂದು ನಂಬಲಾಗಿದೆ. ಬೊಜ್ಜು ಮತ್ತು ಹಾರ್ಮೋನ್ ಅಸಮತೋಲನಕ್ಕೆ ಚಿಕಿತ್ಸೆ ನೀಡಲು ಇದು ಉತ್ತಮ ಮಾರ್ಗವಾಗಿದೆ.  

ಮಲಗೋ ಮೊದ್ಲು ಈ ಅಭ್ಯಾಸ ರೂಢಿಸಿಕೊಳ್ಳಿ, ಆರೋಗ್ಯ ಸರಿ ಹೋಗೇ ಹೋಗುತ್ತೆ

ಉಪವಾಸದಿಂದ ಸಾಕಷ್ಟು ಪ್ರಯೋಜನವಿದ್ದರೂ ಅದನ್ನು ಪ್ರಾರಂಭಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಹಾಗೆಯೇ ನಿಮಗೆ ಯಾವುದು ಅನುಕೂಲಕರ ಎಂಬುದನ್ನು ವೈದ್ಯರಿಂದ ತಿಳಿದು ನಂತ್ರ ಉಪವಾಸ ಮಾಡಿ. 

click me!