
ಜೇನುತುಪ್ಪ (Honey) ರುಚಿಗೆ ಮಾತ್ರವಲ್ಲ ಆರೋಗ್ಯ (Health) ಕ್ಕೂ ಬಹಳ ಒಳ್ಳೆಯದು. ಜೇನುತುಪ್ಪವನ್ನು ಸೇವನೆ ಮಾಡುವುದ್ರಿಂದ ದೇಹ (Body) ಕ್ಕೆ ಅನೇಕ ಲಾಭವಿದೆ. ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳು, ವಿಟಮಿನ್‌ಗಳು A, B, C, ಕಬ್ಬಿಣ, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಫಾಸ್ಫರಸ್, ಪೊಟ್ಯಾಸಿಯಮ್, ಸೋಡಿಯಂ ಮುಂತಾದ ಪೋಷಕಾಂಶಗಳು ಲಭ್ಯವಿದೆ. ಅನೇಕರು ಪ್ರತಿ ದಿನ ಜೇನುತುಪ್ಪ ಸೇವನೆ ಮಾಡ್ತಾರೆ. ಬೆಳಿಗ್ಗೆ ಬಿಸಿ ನೀರಿಗೆ ಜೇನುತುಪ್ಪ ಬೆರೆಸಿ ಕುಡಿಯುವವರಿದ್ದಾರೆ. ಆದ್ರೆ ರುಚಿ (Taste) ಹಾಗೂ ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಕಾರಣ ನೀಡಿ, ಮಿತಿಗಿಂತ ಹೆಚ್ಚು ಜೇನುತುಪ್ಪ ಸೇವನೆ ಮಾಡುವುದು ಒಳ್ಳೆಯದಲ್ಲ. ಇಂದು ಜೇನು ತುಪ್ಪವನ್ನು ಯಾರಿ ಸೇವನೆ ಮಾಡ್ಬಾರದು ಎಂಬುದನ್ನು ಹೇಳ್ತೇವೆ.
ಜೇನುತುಪ್ಪದ ಅಡ್ಡಪರಿಣಾಮಗಳು :
ಹಲ್ಲಿನ ಸಮಸ್ಯೆ : ಪ್ರತಿ ದಿನ ಜೇನು ತುಪ್ಪ ಸೇವನೆ ಮಾಡುವವರಿಗೆ ಎಷ್ಟು ಪ್ರಮಾಣದಲ್ಲಿ ಜೇನು ತುಪ್ಪ ತಿನ್ನಬೇಕು ಎಂಬುದು ಗೊತ್ತಿರಬೇಕು. ಹೆಚ್ಚಿನ ಪ್ರಮಾಣದಲ್ಲಿ ಜೇನು ತುಪ್ಪ ಸೇವನೆ ಮಾಡಿದ್ರೆ ಹಲ್ಲಿನ ಸಮಸ್ಯೆ ಶುರುವಾಗುತ್ತದೆ. ಹಲ್ಲು ಮತ್ತು ವಸಡು ಹಾಳಾಗುವ ಅಪಾಯ ಹೆಚ್ಚಾಗಿರುತ್ತದೆ. ಅತಿಯಾಗಿ ಜೇನುತುಪ್ಪ ಸೇವನೆಯನ್ನು ಎಂದಿಗೂ ಮಾಡಬಾರದು. ಹಾಗೆಯೇ ಜೇನು ತುಪ್ಪ ಸೇವನೆ ಮಾಡಿದ ನಂತ್ರ ಸರಿಯಾಗಿ ಬಾಯಿ ತೊಳೆಯುವ, ಹಲ್ಲುಜ್ಜುವ ಅಭ್ಯಾಸ ಬೆಳೆಸಿಕೊಳ್ಳಬೇಕು.
BAD FOR BRAIN: ಮಿದುಳನ್ನು ಕುಗ್ಗಿಸುವ ಕೆಲವು ಅಭ್ಯಾಸಗಳಿಗೆ ಬೈ ಹೇಳಿ
ಜೇನು ತುಪ್ಪದಿಂದ ಈ ರೋಗಿಗಳು ದೂರವಿರಿ : ಜೇನುತುಪ್ಪದಲ್ಲಿ ಕಂಡುಬರುವ ಸಕ್ಕರೆ (Sugar) ಯ ಮುಖ್ಯ ಮೂಲವೆಂದರೆ ಫ್ರಕ್ಟೋಸ್. ಇದನ್ನು ಗಮನದಲ್ಲಿಟ್ಟುಕೊಂಡು ಜೇನು ತುಪ್ಪ ಸೇವನೆ ಮಾಡ್ಬೇಕು. ಕೊಬ್ಬಿನ ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿರುವ ಜನರಿಗೆ ಜೇನು ತುಪ್ಪ ಅಪಾಯಕಾರಿ. ಫ್ರಕ್ಟೋಸ್ ಇತರ ಶಕ್ತಿಯ ಮೂಲಗಳಿಗಿಂತ ವಿಭಿನ್ನವಾಗಿ ಚಯಾಪಚಯಗೊಳ್ಳುತ್ತದೆ. ಫ್ರಕ್ಟೋಸ್ ಯಕೃತ್ತಿನಿಂದ ಚಯಾಪಚಯಗೊಳ್ಳುತ್ತದೆ, ಇದು ಕೊಬ್ಬಿನ ಯಕೃತ್ತು ಹೊಂದಿರುವವರಿಗೆ ಬಹಳಷ್ಟು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹಾಗಾಗಿ ಯಕೃತ್ತಿನ ಸಮಸ್ಯೆ ಹೊಂದಿರುವವರು ಜೇನು ತುಪ್ಪದಿಂದ ಸಂಪೂರ್ಣ ದೂರವಿರಬೇಕು. ಇದ್ರ ಜೊತೆ ಫ್ರಕ್ಟೋಸನ್ನು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡ್ಬೇಕು.
ಅಲರ್ಜಿ (Allergy) ಸಮಸ್ಯೆಗೆ ಜೇನು ತುಪ್ಪದಲ್ಲಿಲ್ಲ ಪರಿಹಾರ : ಜೇನುತುಪ್ಪ ಯಾವುದೇ ಅಲರ್ಜಿ ಸಮಸ್ಯೆಯನ್ನು ಗುಣಪಡಿಸುವ ಶಕ್ತಿ ಹೊಂದಿಲ್ಲ. ಪರಾಗದಿಂದ ಅಲರ್ಜಿ ಇರುವವರು ಜೇನು ತುಪ್ಪದ ಸೇವನೆಯನ್ನು ಅಪ್ಪಿತಪ್ಪಿಯೂ ಮಾಡ್ಬಾರದು. ಇದ್ರಿಂದ ಅಲರ್ಜಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿರುತ್ತದೆ.
ಮಧುಮೇಹ ರೋಗಿಗಳಿ ದೂರವಿರಿ : ಮೊದಲೇ ಹೇಳಿದಂತೆ ಜೇನುತುಪ್ಪವು ಫ್ರಕ್ಟೋಸ್ ನಲ್ಲಿ ಸಮೃದ್ಧವಾಗಿದೆ. ಇದು ಸಕ್ಕರೆಯ ಮುಖ್ಯ ಮೂಲವಾಗಿದೆ. ಮಧುಮೇಹಿಗಳು ಇದನ್ನು ಹೆಚ್ಚು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುವ ಸಾಧ್ಯತೆಯಿರುತ್ತದೆ. ಇದ್ರಿಂದ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಆರೋಗ್ಯವಾಗಿರಬೇಕೆಂದು ಬಯಸುವ ಮಧುಮೇಹಿಗಳು, ಜೇನುತುಪ್ಪದಿಂದ ದೂರವಿರುವುದೇ ಲೇಸು.
Barbie Doll ಬಾರ್ಬಿ ರೀತಿ ಕಾಣಲು 53 ಲಕ್ಷ ರೂ ಖರ್ಚು, ಸಂಬಂಧ ಮುರಿದ ಕುಟುಂಬಸ್ಥರು!
ಜೇನು ತುಪ್ಪ ಸೇವನೆ ವೇಳೆ ಇರಲಿ ಈ ಬಗ್ಗೆ ಗಮನ :
ಮಧುಮೇಹ : ಜೇನುತುಪ್ಪದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿದ್ದು, ಮಧುಮಹಿಗಳು ಅದರಿಂದ ದೂರವಿರಬೇಕು. ಅತಿ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆಯನ್ನು ಸೇವನೆ ಮಾಡಿದ್ರೆ ಟೈಪ್-2 ಡಯಾಬಿಟಿಸ್ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗಬಹುದು.
ಮಕ್ಕಳು : 12 ತಿಂಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಅಪ್ಪಿತಪ್ಪಿಯೂ ಜೇನುತುಪ್ಪವನ್ನು ನೀಡಬಾರದು. ಇದರಿಂದ ಕ್ಲೋಸ್ಟ್ರಿಡಿಯಮ್ ಸೋಂಕಿನ ಅಪಾಯವಿರುತ್ತದೆ. ಒಂದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಜೇನುತುಪ್ಪವನ್ನು ನೀಡಬಹುದು.
ಅಲರ್ಜಿ : ಮೊದಲೇ ಹೇಳಿದಂತೆ ಅಲರ್ಜಿ ಸಮಸ್ಯೆಯಿರುವವರು ಕೂಡ ಜೇನುತುಪ್ಪ ಸೇವನೆ ಮಾಡಬಾರದು. ಜೇನು ತುಪ್ಪವನ್ನು ಪರಾಗದಿಂದ ಮಾಡುತ್ತದೆ. ಹಾಗಾಗಿ ಈ ಅಲರ್ಜಿ ಮತ್ತಷ್ಟು ಹೆಚ್ಚಾಗುತ್ತದೆ. ಹೂವಿನ ಪರಾಗ ಅಲರ್ಜಿ ಎನ್ನುವವರು ಜೇನುತುಪ್ಪದ ರುಚಿ ನೋಡ್ಬೇಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.