Exercise Tips: ದಿನಕ್ಕೆ ಜಸ್ಟ್ ಮೂರು ಸೆಕೆಂಡ್ ವ್ಯಾಯಾಮ ಮಾಡಿದರೂ ಸಾಕು !

By Suvarna News  |  First Published Feb 9, 2022, 10:18 PM IST

ಸಣ್ಣಗಾಗ್ಬೇಕು ಅಂತ ಎಲ್ಲರೂ ಬಯಸ್ತಾರೆ. ಆದ್ರೆ ವರ್ಕೌಟ್‌ (Workout) ಮಾಡ್ಬೇಕು ಅನ್ನೋದು ಮಾತ್ರ ಎಲ್ಲರಿಗೂ ತಲೆನೋವು. ಗಂಟೆಗಟ್ಟಲೆ ಯೋಗ (Yoga), ವ್ಯಾಯಾಮ (Exercise) ಮಾಡೋಕೆ ನಿಮ್ಗೂ ಬೇಜಾರಾ. ಹಾಗಿದ್ರೆ ದಿನಕ್ಕೆ ಮೂರು ಸೆಕೆಂಡ್ ಈ ವ್ಯಾಯಾಮ ಮಾಡಿ ಸಾಕು.
 


ದಿನಂಪ್ರತಿ ನಿಯಮಿತವಾಗಿ ವ್ಯಾಯಾಮ (Exercise) ಮಾಡುವುದರಿಂದ ಆರೋಗ್ಯ (Health) ಉತ್ತಮವಾಗಿರುತ್ತದೆ. ಆದರೆ ಪ್ರತಿದಿನ ಅದಕ್ಕೋಸ್ಕಾರನೇ ಗಂಟೆಗಟ್ಟಲೆ ಸಮಯವನ್ನು ಮೀಸಲಿಡಲು ಹಲವರಿಗೆ ಸಾಧ್ಯವಾಗುವುದಿಲ್ಲ. ಹೀಗಿದ್ದಾಗ ಏನು ಮಾಡಬಹುದು ಎಂದು ತಲೆಕೆಡಿಸಿಕೊಳ್ಳುವುವರಿಗೆ ಇಲ್ಲಿದೆ ಉಪಾಯ.ದಿನಕ್ಕೆ ಜಸ್ಟ್ 3 ಸೆಕೆಂಡುಗಳ ಕಾಲ ವ್ಯಾಯಾಮ ಮಾಡುವುದು ಉತ್ತಮ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂಬುದು ಅಧ್ಯಯನಗಳಿಂದ ತಿಳಿದುಬಂದಿದೆ. ಮೂರು ಸೆಕೆಂಡುಗಳಲ್ಲಿ ಏನು ವ್ಯಾಯಾಮ ಮಾಡೋಕೆ ಆಗುತ್ತಪ್ಪಾ ಅನ್ಬೇಡಿ. ಸುಮ್ನೆ ಸ್ಟ್ಯಾಚ್ಯೂ ತರ ಕೂತಿರೋ ಬದಲು ಕೈ, ಕಾಲುಗಳನ್ನು ಅತ್ತಿತ್ತ ಬೀಸುವುದು ಸಹ ವ್ಯಾಯಾಮವೇ ಅಲ್ಲವೇ.

ಇಸಿಯುನ ವೈದ್ಯಕೀಯ ಮತ್ತು ಆರೋಗ್ಯ ವಿಜ್ಞಾನಗಳ ಸ್ಕೂಲ್‌ನ ಪ್ರಮುಖ ಸಂಶೋಧಕ ಪ್ರೊಫೆಸರ್ ಕೆನ್ ನೊಸಾಕಾ ಅವರು, ಸ್ನಾಯುವಿನ ಶಕ್ತಿಯನ್ನು ಸುಧಾರಿಸಲು ಜನರು ಹೆಚ್ಚಿನ ಸಮಯವನ್ನು ವ್ಯಾಯಾಮ ಮಾಡುವ ಅಗತ್ಯವಿಲ್ಲ ಎಂದು ಜಸ್ಟ್ ಮೂರು ಸೆಕೆಂಡುಗಳು ವ್ಯಾಯಾಮ ಮಾಡಿದರೂ ಸಾಕು ಎಂದು ತಿಳಿಸಿದ್ದಾರೆ. ಕೈಯನ್ನು ಹಿಂದಕ್ಕೆ ಬಾಗಿಸಿ ಬೆನ್ನಿಗೆ ತಾಗಿಸುವುದು, ಕಾಲನ್ನು ನೇರವಾಗಿಸಿ ಕುಳಿತುಕೊಳ್ಳುವುದು, ಎದ್ದು ಅತ್ತಿತ್ತ ಓಡಾಡುವುದು ಸಹ ಸಣ್ಣಪುಟ್ಟ ವ್ಯಾಯಾಮಗಳೇ ಅಲ್ಲವೇ. ಇಂಥಹಾ ದೈಹಿಕ ಚಟುವಟಿಕೆಗಳು ಗಂಟೆಗಟ್ಟಲೆ ಸುಮ್ಮನೆ ಕುಳಿತು ಒಂದೇ ಭಂಗಿಯಲ್ಲಿ ಕೆಲಸ ಮಾಡುವ ಮಂದಿಗೆ ರಿಲ್ಯಾಕ್ಸ್ ನೀಡುತ್ತದೆ. ಸ್ನಾಯುಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ.

Tap to resize

Latest Videos

Ankle Strength: ಈ ಎಕ್ಸರ್ಸೈಸ್ ಮಾಡದೆ ವ್ಯಾಯಾಮ ಮುಗಿಸಬೇಡಿ..

ಈ ರೀತಿಯ ವ್ಯಾಯಾಮ ತೂಕ (Weight) ತರಬೇತಿ ಅಥವಾ ಪ್ರತಿರೋಧ ತರಬೇತಿಯು ಸ್ನಾಯುಗಳನ್ನು ನಿರ್ಮಿಸುವುದು, ದೇಹದ ಕೊಬ್ಬನ್ನು ಕಡಿಮೆ ಮಾಡುವುದು, ಮೂಳೆಗಳು ಮತ್ತು ಕೀಲುಗಳನ್ನು ಬಲಪಡಿಸುವುದು ಹೃದಯದ ಆರೋಗ್ಯವನ್ನು ಸುಧಾರಿಸುವುದು ಸೇರಿದಂತೆ ಹಲವು ಪ್ರಯೋಜನಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ. ಎಡಿತ್ ಕೋವನ್ ವಿಶ್ವವಿದ್ಯಾನಿಲಯದ ಹೊಸ ಅಧ್ಯಯನವು ದಿನಕ್ಕೆ ಮೂರು ಸೆಕೆಂಡುಗಳಷ್ಟು ಕಡಿಮೆ ತೂಕವನ್ನು ಎತ್ತುವುದು ಸ್ನಾಯುವಿನ ಬಲದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಕಂಡುಹಿಡಿದಿದೆ.

ಜಪಾನ್‌ನ ನಿಗಾಟಾ ಯೂನಿವರ್ಸಿಟಿ ಆಫ್ ಹೆಲ್ತ್ ಅಂಡ್ ವೆಲ್ಫೇರ್ ಸಂಶೋಧಕರ ಸಹಯೋಗದೊಂದಿಗೆ 39 ಆರೋಗ್ಯವಂತ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ದಿನಕ್ಕೆ ಮೂರು ಸೆಕೆಂಡುಗಳ ಕಾಲ ಗರಿಷ್ಠ ಪ್ರಯತ್ನದಲ್ಲಿ ಒಂದು ಸ್ನಾಯುವಿನ ಸಂಕೋಚನವನ್ನು ನಾಲ್ಕು ವಾರಗಳವರೆಗೆ ವಾರದಲ್ಲಿ ಐದು ದಿನಗಳವರೆಗೆ ನಿರ್ವಹಿಸಿದ್ದಾರೆ.

ಇನ್ನೂ 13 ವಿದ್ಯಾರ್ಥಿಗಳು ಅದೇ ಅವಧಿಯಲ್ಲಿ ಯಾವುದೇ ವ್ಯಾಯಾಮವನ್ನು ಮಾಡಲಿಲ್ಲ ಮತ್ತು ನಾಲ್ಕು ವಾರಗಳ ಮೊದಲು ಮತ್ತು ನಂತರವೂ ಸಹ ಪರೀಕ್ಷೆಗೆ ಒಳಪಡಿಸಲಾಯಿತು. ನಾಲ್ಕು ವಾರಗಳ ನಂತರ ಬೈಸೆಪ್ ಕರ್ಲ್ ಮಾಡಿದ ಗುಂಪಿನಲ್ಲಿ ಸ್ನಾಯುವಿನ ಶಕ್ತಿಯು ಶೇಕಡಾ 10ಕ್ಕಿಂತ ಹೆಚ್ಚಾಯಿತು, ಆದರೆ ಇತರ ಎರಡು ವ್ಯಾಯಾಮ ಗುಂಪುಗಳಿಗೆ ಸ್ನಾಯುವಿನ ಬಲದಲ್ಲಿ ಕಡಿಮೆ ಹೆಚ್ಚಳ ಕಂಡುಬಂದಿದೆ.

Stay Fit: ಜಿಮ್‌ಗೆ ಹೋಗದೆಯೂ ಫಿಟ್ ಆಗಿರ್ಬೋದಾ ? ಏನು ಹೇಳ್ತಾರೆ ಎಕ್ಸ್‌ಪರ್ಟ್ಸ್‌

ಇಸಿಯುನ ವೈದ್ಯಕೀಯ ಮತ್ತು ಆರೋಗ್ಯ ವಿಜ್ಞಾನಗಳ ಸ್ಕೂಲ್‌ನ ಪ್ರಮುಖ ಸಂಶೋಧಕ ಪ್ರೊಫೆಸರ್ ಕೆನ್ ನೊಸಾಕಾ ಅವರು ತಮ್ಮ ಸ್ನಾಯುವಿನ ಶಕ್ತಿಯನ್ನು ಸುಧಾರಿಸಲು ಜನರು ಹೆಚ್ಚಿನ ಸಮಯವನ್ನು ವ್ಯಾಯಾಮ ಮಾಡುವ ಅಗತ್ಯವಿಲ್ಲ ಎಂದು ಫಲಿತಾಂಶಗಳು ತೋರಿಸಿವೆ ಎಂದು ಹೇಳಿದರು.ಅಧ್ಯಯನದ ಫಲಿತಾಂಶಗಳು ಅತ್ಯಲ್ಪ ಪ್ರಮಾಣದ ವ್ಯಾಯಾಮ ಪ್ರಚೋದನೆಯನ್ನು ಸೂಚಿಸುತ್ತದೆ. ನಾಲ್ಕು ವಾರಗಳಲ್ಲಿ 60 ಸೆಕೆಂಡುಗಳುಸ್ನಾಯುವಿನ ಬಲವನ್ನು ಹೆಚ್ಚಿಸಬಹುದು ಎಂದು ಅವರು ಹೇಳಿದರು.

ನೀವು ವ್ಯಾಯಾಮ ಮಾಡಲು ಸಾಕಷ್ಟು ಸಮಯವನ್ನು ಕಳೆಯಬೇಕೆಂದು ಅನೇಕ ಜನರು ಭಾವಿಸುತ್ತಾರೆ. ಆದರೆ ವಾಸ್ತವ ಹಾಗಿಲ್ಲ. ಚಿಕ್ಕದಾದ, ಉತ್ತಮ ಗುಣಮಟ್ಟದ ವ್ಯಾಯಾಮ ಸಹ ದೇಹಕ್ಕೆ ಇನ್ನೂ ಒಳ್ಳೆಯದು ಮತ್ತು ಪ್ರತಿ ಸ್ನಾಯುವಿನ ಆರೋಗ್ಯವನ್ನೂ ಉತ್ತಮವಾಗಿಡುತ್ತದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.

click me!