Shower Care : ಸ್ನಾನ ಆದ್ಮೇಲೆ ಮೈ ಒಣಗಿಸಿಕೊಳ್ಳೋದು ಮುಖ್ಯ… ಯಾಕೆ ಗೊತ್ತಾ?

By Roopa HegdeFirst Published Jul 8, 2024, 5:50 PM IST
Highlights

ಸ್ನಾನ ಮಾಡಿದ ಮೇಲೆ ಒದ್ದೆ ಮೈನಲ್ಲಿ ಬಟ್ಟೆ ಹಾಕಿಕೊಳ್ಳೋರ ಸಂಖ್ಯೆ ಕಡಿಮೆ ಇದ್ರೂ ಪೂರ್ತಿಯಾಗಿ ಮೈ ಒಣಗಿಸಿಕೊಳ್ಳೋರು ಇಲ್ವೇ ಇಲ್ಲ. ಈ ನಿಮ್ಮ ನಿರ್ಲಕ್ಷ್ಯ ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತೆ.
 

ಸ್ನಾನ ಮಾಡಿ ಮುಗಿಯುತ್ತಿದ್ದಂತೆ ನಾವು ಮಾಡುವ ಮೊದಲ ಕೆಲಸ ಟವೆಲ್ ತೆಗೆದುಕೊಂಡು ನಮ್ಮ ದೇಹವನ್ನು ಒಣಗಿಸಿಕೊಳ್ಳೋದು. ಅದೆಷ್ಟೋ ಬಾರಿ ನಾವು ಆತುರದಲ್ಲಿರುತ್ತೇವೆ. ಆಗ ಸ್ನಾನ ಮಾಡಿ, ಬಟ್ಟೆ ಧರಿಸೋಕೆ ಸಮಯ ಇರೋದಿಲ್ಲ. ಅಲ್ಲಿ ಇಲ್ಲಿ ಟವೆಲ್ ಉಜ್ಜಿ, ಮೇಲ್ನೋಟಕ್ಕೆ ದೇಹವನ್ನು ಒಣಗಿಸಿಕೊಂಡು ನಾವು ಬಟ್ಟೆ ಹಾಕಿಕೊಳ್ತೇವೆ. ಅನೇಕರು ಮೈ ಒರೆಸಿಕೊಳ್ಳಲು ಹೆಚ್ಚು ಆದ್ಯತೆ ನೀಡೋದಿಲ್ಲ. ದೇಹ ಹಾಗೆಯೇ ನೀರನ್ನು ಹೀರಿಕೊಳ್ಳುತ್ತೆ ಬಿಡು ಅಂತ ಬಟ್ಟೆ ಧರಿಸಿ ಹೋಗ್ತಾರೆ. ಪ್ರತಿ ದಿನ ನಾವು ಮಾಡುವ ತಪ್ಪುಗಳಲ್ಲಿ ಇದೂ ಒಂದು. 

ಸ್ನಾನ (Bath)ದಿಂದ ಅನೇಕ ರೋಗ (Disease) ಗಳು ವಾಸಿಯಾಗುತ್ತವೆ, ಆದರೆ ಸ್ನಾನದ ನಂತರ ನೀವು ತಪ್ಪು ವಿಧಾನಗಳನ್ನು ಅಳವಡಿಸಿಕೊಂಡರೆ, ನೀವು ಅನಾರೋಗ್ಯಕ್ಕೆ ಒಳಗಾಗಬಹುದು. ಸ್ನಾನದ ನಂತರ ನಿಮ್ಮ ದೇಹವನ್ನು ಸರಿಯಾಗಿ ಒಣಗಿಸಿದರೆ, ದೇಹದಲ್ಲಿ ತೇವಾಂಶವು ಹೆಚ್ಚಾಗುವುದಿಲ್ಲ. ಆರೋಗ್ಯಕರ ಚರ್ಮಕ್ಕಾಗಿ, ಸ್ನಾನದ ನಂತರ ಚರ್ಮವನ್ನು ಒಣಗಿಸಲು ಸರಿಯಾದ ಮಾರ್ಗ ಇಲ್ಲಿದೆ.  

Latest Videos

ಕನ್ಯಾಪೊರೆ ಕಾಂಕ್ರಿಟ್‌ನಿಂದ ಮಾಡಿದ್ದಲ್ಲ, ನಿಮಿರುವಿಕೆ ಅಪಸಾಮಾನ್ಯ ರೋಗವೇ ಅಲ್ಲ!

ಸ್ನಾನ ಮಾಡಿದ ನಂತ್ರ ಇದು ನೆನಪಿರಲಿ : ಸ್ನಾನ ಮಾಡಿದ ಮೇಲೆ ಆತುರಾತುರವಾಗಿ ಬಟ್ಟೆ ಧರಿಸಬೇಡಿ. ನಿಮ್ಮ ದೇಹ ಸಂಪೂರ್ಣ ಡ್ರೈ ಆಗಲು ಬಿಡಿ. ನೀವು ದೇಹದ ಮೇಲ್ಭಾಗವನ್ನು ಮಾತ್ರವಲ್ಲ ಸಂಧಿ ಸಂಧಿಯನ್ನು ಒಣಗಿಸಬೇಕು. ಬೆರಳಿನ ಮಧ್ಯೆ, ಕಂಕಳು ಸೇರಿದಂತೆ ಅನೇಕ ಭಾಗಗಳಿಗೆ ನಾವು ಟವೆಲ್ ಹಾಕೋದಿಲ್ಲ. ಆದ್ರೆ ಈ ಭಾಗದಲ್ಲಿ ತೇವಾವಂಶವಿದ್ದರೆ ಅದು ಬ್ಯಾಕ್ಟೀರಿಯಾ, ಶಿಲೀಂಧ್ರಗಳನ್ನು ಆಹ್ವಾನಿಸುತ್ತದೆ. 

ದೇಹವನ್ನು ಒಣಗಿಸುವ ವೇಳೆ ನೀವು ನಿಮ್ಮ ಚರ್ಮದ ಬಗ್ಗೆ ಗಮನ ಹರಿಸಬೇಕು. ಟವೆಲ್‌ನಿಂದ ನಿಮ್ಮ ದೇಹವನ್ನು ಬಲವಾಗಿ ಉಜ್ಜುವುದು ನಿಮ್ಮ ಚರ್ಮಕ್ಕೆ ಹಾನಿಯುಂಟು ಮಾಡುತ್ತದೆ. ಒಣ ಚರ್ಮವು ಸಿಪ್ಪೆ ಸುಲಿಯಬಹುದು ಮತ್ತು ಒಣ ಚರ್ಮದ ಮೇಲೆ ಕೆಂಪು ದುದ್ದು ಕಾಣಿಸಬಹುದು. ಬಟ್ಟೆ ಧರಿಸುವ ಮೊದಲು ದೇಹ ಡ್ರೈ ಆಗ್ಬೇಕು ಎನ್ನುವ ಕಾರಣಕ್ಕೆ ನೀವ ಆತುರದಲ್ಲಿ ದೇಹವನ್ನು ಉಜ್ಜುವುದು ಸೂಕ್ತವಲ್ಲ. 

ನಿಮ್ಮ ದೇಹದಲ್ಲಿರುವ ನೀರು ಸಂಪೂರ್ಣವಾಗಿ ಒಣಗಿರಬೇಕು ಎನ್ನಲು ಇನ್ನೊಂದು ಕಾರಣ ಟ್ಯಾಪ್ ನೀರು. ಕಠಿಣವಾದ ಟ್ಯಾಪ್ ನೀರು ಚರ್ಮಕ್ಕೆ ಹಾನಿಯನ್ನುಂಟುಮಾಡುತ್ತದೆ. ನೀರಿನಲ್ಲಿರುವ ಲೋಹಗಳು ಸ್ವತಂತ್ರ ರಾಡಿಕಲ್ಗಳಿಗೆ ಅಂಟಿಕೊಳ್ಳುತ್ತವೆ, ಇದು ನಮ್ಮ ಚರ್ಮದಲ್ಲಿನ ಕಾಲಜನ್ ಮೇಲೆ ದಾಳಿ ಮಾಡುತ್ತದೆ. ಇದು ನಿಮ್ಮ ಮುಖದಲ್ಲಿನ ಗೆರೆಗಳು ಮತ್ತು ಮುಚ್ಚಿಹೋಗುವ ರಂಧ್ರಗಳಿಗೆ ಕಾರಣವಾಗಬಹುದು.

ನೀವು ಇದಕ್ಕೆ ಒಳ್ಳೆ ಕ್ವಾಲಿಟಿ ಟವೆಲ್ ಬಳಸಬೇಕು. ನೀವು ಬಳಸುತ್ತಿರುವ ಟವೆಲ್ ನೀರು ಹೀರಿಕೊಳ್ತಿದೆಯೇ ಎಂಬುದನ್ನು ಗಮನಿಸಬೇಕು. ಅನೇಕ ಟವೆಲ್ ನಮ್ಮ ದೇಹದಲ್ಲಿರುವ ನೀರನ್ನು ಹೀರಿಕೊಳ್ಳುವುದಿಲ್ಲ. ಇದ್ರಿಂದ ನೀವು ಎಷ್ಟೇ ಉಜ್ಜಿದ್ರೂ ದೇಹ ಡ್ರೈ ಆಗುವುದಿಲ್ಲ. 

ನೀವು ತಲೆ ಸ್ನಾನ ಮಾಡಿದ್ದರೆ ಸ್ನಾನದ ನಂತರ, ಮೊದಲು ನಿಮ್ಮ ಕೂದಲನ್ನು ಒಣಗಿಸಿ. ಏಕೆಂದರೆ ಕೂದಲಿನಲ್ಲಿ ಸಂಗ್ರಹವಾದ ನೀರು ದೇಹದ ಮೇಲೆ ಬೀಳುತ್ತದೆ. ಇದರಿಂದಾಗಿ ನೀವು ಚರ್ಮವನ್ನು ಒಣಗಿಸಲು ಸಾಧ್ಯವಾಗುವುದಿಲ್ಲ. ಕೂದಲು ಗಾಳಿಯಲ್ಲಿ ಒಣಗಲು ಬಿಡಿ. ಅದಕ್ಕಾಗಿ ನೀವು  ಡ್ರೈಯರ್ ಬಳಸಬೇಡಿ. ಅದರ ನಂತರ ದೇಹವನ್ನು ಟವೆಲ್ ನಿಂದ ಒರೆಸಿ. ಮೇಲಿನಿಂದ ಪ್ರಾರಂಭಿಸಿ ನಿಧಾನವಾಗಿ ಕೆಳಗೆ ಬನ್ನಿ. ಕೂದಲಿರುವ ಜಾಗ ಸಂಪೂರ್ಣ ಡ್ರೈ ಆಗುವಂತೆ ನೀವು ನೋಡಿಕೊಳ್ಳಿ. 

ಪ್ರತಿ ರಾತ್ರಿ ತಡವಾಗಿ ಮಲಗಿದ್ರೆ ಮಾನಸಿಕ ಆರೋಗ್ಯ ಹಾಳು; ಅಧ್ಯಯನ

ಸ್ನಾನದ ನಂತ್ರ ನೀವು ಸ್ನಾನದ ಗೌನ್ ಧರಿಸಬಹುದು. ಅದು ನೀರನ್ನು ಹೀರಿಕೊಳ್ಳುತ್ತದೆ. ನಿಮ್ಮ ಚರ್ಮ ಒಣಗಿದಾಗ  ನೀವು ದೇಹಕ್ಕೆ ಲೋಷನ್ ಹಚ್ಚಿ. ನೀವು ಸ್ನಾನವಾದ ಮೇಲೆ ನಿಮ್ಮ ದೇಹ ತೇವಾಂಶದಿಂದ ಕೂಡಿರುವಾಗ್ಲೇ ಬಟ್ಟೆ ಧರಿಸಿದ್ರೆ ಅಲರ್ಜಿ ಸಮಸ್ಯೆಗೆ ಒಳಗಾಗುತ್ತೀರಿ.  

click me!