ಕಾಫಿ ಅಡಿಕ್ಷನ್ ಇದ್ಯಾ? ಕಣ್ಣೂ ಹೋಗಬಹುದು ಹುಷಾರು!

By Suvarna NewsFirst Published Aug 1, 2022, 5:25 PM IST
Highlights

ಹಿತಮಿತವಾಗಿದ್ದರೆ ಎಲ್ಲವೂ ಆರೋಗ್ಯಕ್ಕೆ ಒಳ್ಳೆಯದು. ಆಲ್ಕೋಹಾಲ್, ಕಾಫಿ, ಟೀ ಸೇರಿದಂತೆ ಯಾವುದೇ ಪಾನೀಯವನ್ನು ಅತಿಯಾಗಿ ಸೇವನೆ ಮಾಡಿದ್ರೆ ಆಸ್ಪತ್ರೆ ಸೇರಬೇಕಾಗುತ್ತದೆ. ಅದ್ರ ಪರಿಣಾಮ ತಕ್ಷಣ ಕಾಣದೆ ಹೋದ್ರೂ ಜೀವನದಲ್ಲಿ ಒಂದಲ್ಲ ಒಂದು ಸಮಸ್ಯೆ ಎದುರಿಸಬೇಕಾಗುತ್ತದೆ.
 

ಕೆಲವರಿಗೆ ಟೀ ಇಷ್ಟವಾದ್ರೆ ಮತ್ತೆ ಕೆಲವರಿಗೆ ಕಾಫಿ ಇಷ್ಟವಾಗುತ್ತದೆ. ಕೆಲವರಿಗೆ ಕೋಲ್ಡ್ ಡ್ರಿಂಕ್ಸ್ ಇಷ್ಟವಾಗುತ್ತದೆ. ಕೆಲ ದ್ರವ ಆಹಾರ ಆರೋಗ್ಯಕ್ಕೆ ಬಹಳ ಒಳ್ಳೆಯದು. ಮತ್ತೆ ಕೆಲ ದ್ರವ ಪದಾರ್ಥ ಆರೋಗ್ಯವನ್ನು ಹಾಳು ಮಾಡುತ್ತದೆ. ಭಾರತದಲ್ಲಿ ಟೀ ಜೊತೆ ಕಾಫಿ ಪ್ರೇಮಿಗಳ ಸಂಖ್ಯೆ ಹೆಚ್ಚಿದೆ. ಕೆಲವರಿಗೆ ದಿನದಲ್ಲಿ ನಾಲ್ಕೈದು ಬಾರಿ ಕಾಫಿ ಬೇಕು. ಮತ್ತೆ ಕೆಲವರು ಬೆಳಿಗ್ಗೆ ಏಳ್ತಿದ್ದಂತೆ ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವನೆ ಮಾಡಲು ಇಷ್ಟಪಡ್ತಾರೆ. ಒಂದು ಕಪ್ ಸ್ಟ್ರಾಂಗ್ ಕಾಫಿ ಸಿಕ್ಕಿದ್ರೆ ದಿನ ಫುಲ್ ಫ್ರೆಶ್ ಆಗಿರಬಹುದು ಅಂತಾ ಅನೇಕರು ಹೇಳಿದ್ದನ್ನು ನೀವು ಕೇಳಿರಬಹುದು. ರುಚಿಕರ ಹಾಗೂ ಆರೋಗ್ಯಕರ ಕಾಫಿ ಸೇವನೆ ಮಾಡಿದ್ರೆ ಶರೀರಕ್ಕೆ ಶಕ್ತಿ ಬರುತ್ತದೆ. ಸ್ಟ್ಯಾಟಿಸ್ಟಾ ರಿಸರ್ಚ್ ಡಿಪಾರ್ಟ್ಮೆಂಟ್ ನಡೆಸಿದ ಸಂಶೋಧನೆಯ ಪ್ರಕಾರ, 2022 ರ ಆರ್ಥಿಕ ವರ್ಷದಲ್ಲಿ ಭಾರತದಾದ್ಯಂತ ಕಾಫಿ ಬಳಕೆ 1210 ಸಾವಿರ 60 ಕೆ.ಜಿಯಾಗಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಅಧಿಕವಾಗಿದೆ. 2021 ರಲ್ಲಿ ಜಾಗತಿಕ ಕಾಫಿ ಬಳಕೆಯು ಸುಮಾರು 165 ಮಿಲಿಯನ್ 60 ಕೆಜಿಯಷ್ಟಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ. ವರದಿ ಪ್ರಕಾರ, ಕಾಫಿ ಸೇವನೆಯಿಂದ ಕೆಲ ಗಂಭೀರ ಖಾಯಿಲೆ ಟೈಪ್ 2 ಮಧುಮೇಹ, ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಮತ್ತು ಕೆಲವು ಕ್ಯಾನ್ಸರ್‌ ಕಡಿಮೆ ಮಾಡಲು ಸಹಾಯ ಮಾಡಬಹುದು. ಆದರೆ ಹೆಚ್ಚು ಕಾಫಿ ಕುಡಿಯುವುದರಿಂದ ಕಣ್ಣಿನ ದೃಷ್ಟಿ ಕಡಿಮೆಯಾಗಿತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

ರಕ್ತದೊತ್ತಡ (Blood Pressure) ಹೆಚ್ಚಾಗುತ್ತದೆ : ಹೆಚ್ಚು ಕಾಫಿ (Coffee) ಕುಡಿಯುವುದು ಗ್ಲುಕೋಮಾ (Glaucoma) ಗೆ ಕಾರಣವಾಗಬಹುದು. ಆರಂಭದಲ್ಲಿಯೇ ಇದಕ್ಕೆ ಚಿಕಿತ್ಸೆ ಸಿಕ್ಕಿಲ್ಲವೆಂದಾದ್ರೆ ಕಣ್ಣಿನ ದೃಷ್ಟಿ ಹೋಗುತ್ತದೆ. ತಜ್ಞರ ಪ್ರಕಾರ, ಕಾಫಿಯಲ್ಲಿ ಕೆಫೀನ್ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಹಾಗಾಗಿ ದಿನಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಕಾಫಿಯನ್ನು ಸೇವನೆ ಮಾಡಬಾರದು. ದಿನದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ನಿಯಮಿತವಾಗಿ ಕಾಫಿ ಸೇವನೆ ಮಾಡಿದ್ರೆ ಅಂಥವರಿಗೆ ಕಣ್ಣಿನ ಪೊರೆ ಸಮಸ್ಯೆ ಕಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ. ಕೆಫೀನ್ ಹೊಂದಿರುವ ಪಾನೀಯಗಳು ರಕ್ತದೊತ್ತಡವನ್ನು ಹೆಚ್ಚಿಸುತ್ತವೆ ಇದರಿಂದ ಕಣ್ಣಿನ ಒತ್ತಡವೂ ಹೆಚ್ಚುತ್ತದೆ. ಮತ್ತೊಂದೆಡೆ, ಒಬ್ಬರ ಕಣ್ಣುಗಳಲ್ಲಿ ನಿರಂತರ ಒತ್ತಡವಿದ್ದರೆ, ನಂತರ ಕಣ್ಣಿನ ಪೊರೆ ಸಂಭವಿಸುತ್ತದೆ. ಹಾರ್ವರ್ಡ್ ವೈದ್ಯಕೀಯ ಶಾಲೆಯ ಸಂಶೋಧನೆಯ ಪ್ರಕಾರ, ದಿನದಲ್ಲಿ ಮೂರಕ್ಕಿಂತ ಹೆಚ್ಚು ಬಾರಿ ಕಾಫಿ ಸೇವನೆ ಮಾಡೋದ್ರಿಂದ ಎಕ್ಸ್ಫೋಲಿಯೇಶನ್ ಗ್ಲಾಕೋಮಾ ಅಪಾಯ ಹೆಚ್ಚಾಗುತ್ತದೆ. ದೇಹದಲ್ಲಿ ದ್ರವವು ಸಂಗ್ರಹವಾದಾಗ ಮತ್ತು ಆಪ್ಟಿಕ್ ನರಗಳ ಮೇಲೆ ಒತ್ತಡವನ್ನು ಹೆಚ್ಚಿಸಿದಾಗ ಕಣ್ಣಿನ ಪೊರೆ ಉಂಟಾಗುತ್ತದೆ.  ಕಣ್ಣಿನ ಪೊರೆ ಆಗುವುದು ಕೇವಲ ಹೆಚ್ಚು ಕಾಫಿ ಕುಡಿಯುವುದ್ರಿಂದ ಅಂತ ಹೇಳಲು ಸಾಧ್ಯವಿಲ್ಲ. 

Periodsನಲ್ಲಿ ಬೆಂಬಿಡದೇ ಕಾಡುತ್ತಾ ಬೆನ್ನು ನೋವು, ಚಿಂತೆ ಏಕೆ, ಇಲ್ಲಿದೆ ಪರಿಹಾರ

ಸಂಶೋಧನೆಯಲ್ಲಿ ತೊಡಗಿರುವ ಜನರ ಹಿನ್ನಲೆ ಕೂಡ ಇದಕ್ಕೆ ಕಾರಣವಾಗಿತ್ತು. ಕುಟುಂಬಸ್ಥರು ಗ್ಲುಕೋಮಾದ ಇತಿಹಾಸವನ್ನು ಹೊಂದಿದ್ದರು. ಇದು ಭವಿಷ್ಯದಲ್ಲಿ ಕಣ್ಣಿನ ಪೊರೆಗಳನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಹೆಚ್ಚಿಸಿತ್ತು ಎಂದು ತಜ್ಞರು ಹೇಳಿದ್ದಾರೆ. ವಾರದಲ್ಲಿ ಒಂದು ದಿನ ಕಾಫಿ ಕುಡಿಯುವವರನ್ನು ಈ ಸಂಶೋಧನೆಯಲ್ಲಿ ಸೇರಿಸಿರಲಿಲ್ಲ. ದಿನಕ್ಕೆ ಮೂರು ಬಾರಿಗಿಂತ ಹೆಚ್ಚು ಸಮಯ ಕಾಫಿ ಕುಡಿಯುವವರು ಅಧ್ಯಯನದಲ್ಲಿ ಪಾಲ್ಗೊಂಡಿದ್ದರು. 

ಹೇಗೂ ಮಳೆಗಾಲ, ಸ್ನಾನ ಸ್ಕಿಪ್ ಮಾಡಿದರೆ ನಡೆಯುತ್ತೆ ಅಂದ್ಕೋಬೇಡಿ!

ಕಾಫಿಯಲ್ಲಿ ಇರುವ ಕೆಫೇನ್ ಪ್ರಮಾಣ ಬೇರೆ ಬೇರೆಯಾಗಿರುತ್ತದೆ. ಕೆಲವೊಮ್ಮೆ ಒಂದು ಕಪ್ ಕಾಫಿಯಲ್ಲಿ 50ಎಂಜಿ ಕೆಫೇನ್ ಇರುತ್ತದೆ. ಕೆಲ ಕಫ್ ನಲ್ಲಿ 400 ಎಂಜಿ ಕೆಫೇನ್ ಇರುತ್ತದೆ. ಒಂದು ಕಪ್ ನಲ್ಲಿ 100ಎಂಜಿ ಕೆಫೇನ್ ಇದೆ ಅಂದ್ರೂ ದಿನಕ್ಕೆ ನಾಲ್ಕು ಕಪ್ ಕಾಫಿ ಸೇವನೆ ಮಾಡಿದ್ರೆ 400 ಎಂಜಿ ಕೆಫೇನ್ ದೇಹ ಸೇರುತ್ತದೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಎನ್ನುತ್ತಾರೆ ತಜ್ಞರು. 

click me!