ಫಿಟ್ ಆಗಿರ್ಬೇಕಾ? ಕಸರತ್ತು ಮಾಡೋದೇನೂ ಬೇಡ, ಬೆಳಗ್ಗೆ ಎದ್ದು ಇಷ್ಟು ಮಾಡಿ ಸಾಕು!

By Suvarna News  |  First Published Sep 27, 2022, 4:27 PM IST

ವಯಸ್ಸು 35 ಆಗುತ್ತಿದ್ದಂತೆ, ಸೊಂಟದಲ್ಲಿ ಸಣ್ಣದೊಂದು ಟಯರ್ ಕಾಣಿಸಿಕೊಳ್ಳುತ್ತೆ. ಅಯ್ಯೋ ದಪ್ಪಗಾಗುತ್ತಿದ್ದೇನೆ ಎಂದು ಹೊಳೆಯುವಷ್ಟರಲ್ಲಿಯೇ ಎಲ್ಲಾ ಬಟ್ಟೆಗಳೂ ಟೈಟ್ ಆಗಿರುತ್ತವೆ. ಆಮೇಲೆ ಶುರುವಾಗುತ್ತೆ ನೋಡಿ ಜಿಮ್, ಯೋಗ, ವಾಕಿಂಗ್....ಆದರೆ ಏನು ಮಾಡಿದರೂ ತೂಕ ಮಾತ್ರ ಇಳಿಯೋಲ್ಲ. ಬದಲಾಗಿ ಫಿಟ್ ಆಗಿರಬೇಕು ಅಂದ್ರೆ ದೇಹ, ಮನಸ್ಸಿಗೆ ಸ್ವಲ್ಪ ಕಸರತ್ತು ಬೇಕು. ಅದಕ್ಕೇನು ಮಾಡಬೇಕು? 


ಬೆಳಗ್ಗೆ ಹೇಗಿರುತ್ತೆ ಎನ್ನುವುದರ ಮೇಲೆ ನಮ್ಮ ಇಡೀ ದಿನ ಡಿಪೆಂಡ್ ಆಗಿರುತ್ತೆ. ಅಯ್ಯೋ ಏಳಬೇಕಲ್ಲಪ್ಪ ಅಂತ ಒಲ್ಲದ ಮನಸ್ಸಿನಿಂದ ಎದ್ದರೆ, ದಿನ ಪೂರ್ತಿ ಅದೇ ಮೂಡಲ್ಲಿರುತ್ತೇವೆ. ಖುಷಿಯಿಂದ ಹಾಸಿಗೆಯಿಂದ ಎದ್ದು ಕೆಲವು ಒಳ್ಳೆ ಅಭ್ಯಾಸಗಳನ್ನು ರೂಢಿಸಿಕೊಂಡರೆ ಒತ್ತಡ ದೂರುವಾಗುವುದು ಮಾತ್ರವಲ್ಲ, ಜೀರ್ಣ ವ್ಯವಸ್ಥೆಯನ್ನು (Digestive System) ಸುಧಾರಿಸುತ್ತದೆ. ಚೆನ್ನಾಗಿ ನಿದ್ರೆಯಾಗುವಂತೆ ಮಾಡುತ್ತದೆ. ದೇಹ, ಮನಸ್ಸೂ ಆರೋಗ್ಯವಾಗಿರುತ್ತದೆ. ಅಷ್ಟಕ್ಕೂ ಏನೇನು ಮಾಡಬೇಕು ಅಂತ ನಾವು ಹೇಳುತ್ತೇವೆ ಕೇಳಿ, 

ಚೆನ್ನಾಗಿ ನೀರು ಕುಡಿಯಿರಿ (Drink Plenty of water)
ದೇಹ ಎಲ್ಲಾ ಸಮಯದಲ್ಲೂ ಕೆಲಸ ಮಾಡುತ್ತಿರುತ್ತದೆ. ಮಲಗಿದಾಗಲೂ ಸಹ. ಆದರೆ, ಎದ್ದ ಕೂಡಲೇ ಎಲ್ಲಿಯೋ ನಿಶ್ಯಕ್ತಿ (Weakness) ಕಾಡಿದ ಅನುಭವವಾಗುತ್ತದೆ. ಅದಕ್ಕೆ ರೀಚಾರ್ಜ್ ಮಾಡೋದು ಅನಿವಾರ್ಯ. ಅದಕ್ಕೆ ಬೆಳಗ್ಗೆ ದೇವಹನ್ನು ಡೀ ಹೈಡ್ರೇಟ್ (Dehydrate) ಮಾಡಿಕೊಳ್ಳುವುದು ಉತ್ತಮ ಅಭ್ಯಾಸ. ಉಗುರು ಬೆಚ್ಚಿಗಿನ (Warm Water) ನೀರು ಕುಡಿದರೆ ದೇಹ ರೀ ಚಾರ್ಜ್ ಆಗೋದು ಮಾತ್ರವಲ್ಲ, ಉಳಿದ ಎಲ್ಲ ಕಾರ್ಯಗಳೂ ಸುಲಲಿತವಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ. ಈ ಅಭ್ಯಾಸ ದೇಹದ ವಿಷ ವಸ್ತುಗಳು ಹೊ ಹೋಗುವಂತೆ ಮಾಡುತ್ತದೆ. ಹೊಟ್ಟೆ ಸಮಸ್ಯೆ, ನಿರ್ಜಲೀಕರಣಕ್ಕೆ ಕಾರಣವಾಗುವುದಿಲ್ಲ. ದೇಹವನ್ನು ಒಳಗಿನಿಂದ ಆರೋಗ್ಯವಾಗಿರಿಸುತ್ತದೆ. 

Tap to resize

Latest Videos

ತಿಂಡಿ ಚೆನ್ನಾಗಿ ತಿನ್ನಿ (Have proper Breakfast)
ಬ್ರಂಚ್ ಅಂತ ಹೇಳಿ ಬೆಳಗ್ಗಿನ ಉಪಾಹಾರ ಹಾಗೂ ಮಧ್ಯಾಹ್ನ ಊಟವನ್ನು ಒಟ್ಟಿಗೇ ಸೇವಿಸುವವರಿದ್ದಾರೆ. ಆದರೆ, ಇದು ಆರೋಗ್ಯಕ್ಕೆ ಒಳ್ಳೇಯದಲ್ಲ. ಜೀರ್ಣ ಕ್ರಿಯೆಯನ್ನು ಸ್ಲೋ ಮಾಡುತ್ತದೆ. ಆಗ ಇತರೆ ಕಾರ್ಯಗಳು ಸ್ಲೋ ಆಗ್ತಾ ಹೋಗುತ್ತೆ. ಅದಕ್ಕೆ ಬೆಳಗ್ಗೆ ಎದ್ದ ಒಂದೆರಡು ಗಂಟೆಯಲ್ಲಿಯೇ ಚೆನ್ನಾಗಿ ತಿಂಡಿ (Breakfast) ತಿನ್ನಿ. ಪೋಷಕಾಂಶಗಳಿರುವ ಆಹಾರ ಸೇವಿಸಿ. ಆರೋಗ್ಯಕರ ಆಹಾರವನ್ನು ಪ್ರಿಫರ್ ಮಾಡಿ. 

ಅನಿಲ್ ಕಪೂರ್ ಸೆಕ್ಸ್ ಬಗ್ಗೆ ಮಾತನಾಡಿದ್ದೇ ಮಾತನಾಡಿದ್ದು, ಫಿಟ್‍ನೆಸ್ ಸೀಕ್ರೆಟ್ಸ್ ಬಗ್ಗೆ ಗುಸು ಗುಸು

ಚಟುವಿಟಿಕೆಯಿಂದ ಇರಿ: 
ಎದ್ದ ಕೂಡಲೇ ಓಡಿ, ನೆಗೆಯಿರಿ ಅಂತ ಅರ್ಥವಲ್ಲ. ಹಾಸಿಗೆಯಿಂದ ಎದ್ದ ಮೇಲೆ ಮತ್ತೆ ಹಾಸಿಗೆ ಮೇಲೆ ಹೋಗಬೇಡಿ. ಮಾರ್ನಿಂಗ್ ಕೆಲಸಗಳನ್ನು ಸರಿಯಾಗಿ ಮಾಡಿ ಮುಗಿಸಿ. ದೈಹಿಕ ಚಟುವಟಿಕೆಯೊಂದಿಗೆ ದಿನ ಆರಂಭಿಸಿ. ಎಂಡಾರ್ಫಿನ್ ಹಾರ್ಮೋನ್ ಉತ್ಪಾದಿಸುತ್ತದೆ ಇದೆ. ಹ್ಯಾಪಿ ಹಾರ್ಮೋನ್ (Happy Harmone) ಎಂದೂ ಕರೆಯುವ ಇದು ಮನಸ್ಥಿತಿಯನ್ನು ಉತ್ತಮವಾಗಿರಿಸುತ್ತದೆ. ದಿನ ಪೂರ್ತಿ ಆ ಖುಷಿ ಉಳಿಯುವಂತೆ ನೋಡಿಕೊಳ್ಳುತ್ತದೆ. 
 
ನಿಂಬೆ-ಶುಂಠಿ ಗ್ರೀನ್ ಟೀ( Lemon -ginger green tea)
ದೇಹಕ್ಕೆ ರೆಸ್ಟ್ ಸಿಕ್ಕಿರುತ್ತೆ. ಆ್ಯಕ್ಟಿವ್ ಆಗಬೇಕು. ಅದಕ್ಕೆ ಬೇಕಾದ ಎನರ್ಜಿ (Energy) ನೀಡಲು ನೀರು ಕುಡಿಯುವ ಜೊತೆಗೆ ನಿಂಬೆ, ಶುಂಠಿ ಗ್ರೀನ್ ಟೀ ಕುಡಿಯಿರಿ. ಇದ ಪ್ರಬಲ ಉತ್ಕರ್ಷಣ ನಿರೋಧಕವಾಗಿದ್ದು, ಇದು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಕೊಬ್ಬನ್ನು ವೇಗವಾಗಿ ಕಡಿಮೆ ಮಾಡುತ್ತದೆ. ಸಹಜವಾಗಿಯೇ ನಿಮ್ಮ ತೂಕ ಕಡಿಮೆಯಾಗಲು ಇದು ಅನುಕೂಲ. ಅಲ್ಲದೇ ಅಜೀರ್ಣ ಮತ್ತು ಗ್ಯಾಸ್ (Gastric) ಸಮಸ್ಯೆಗೂ ಇದು ಬೆಸ್ಟ್ ಮದ್ದು. ಅದರ ಜೊತೆಗೆ ನಿಂಬೆಯು ದೇಹಕ್ಕೆ ವಿಟಮಿನ್ ಸಿ ನೀಡುತ್ತದೆ. ಸತತ ಮೂರು ದಿನಗಳ ಕಾಲ ಈ ಗ್ರೀನ್ ಚಹವನ್ನು ಕುಡಿಯುವುದರಿಂದ ನಿಮ್ಮೊಳಗೆ ಉತ್ತಮ ಬದಲಾವಣೆಯನ್ನು ಅನುಭವಿಸುವಂತೆ ಮಾಡುತ್ತದೆ.

PM Narendra modi@72: ಪ್ರಧಾನಿಯವರ ಫಿಟ್ ನೆಸ್ ರಹಸ್ಯ ಈ 5 ದೇಸಿ ಆಹಾರದಲ್ಲಿ ಅಡಗಿದೆ!

ಪುಸ್ತಕ ಓದಿ (Read books):
ಈಗ ಎಲ್ಲರೂ ಕರಾಗ್ರೆ ವಸತೇ ಲಕ್ಷ್ಮಿ ಹೇಳಲು ಕೈ ನೋಡಿ ಕೊಳ್ಳುವ ಬದಲು, ಮೊಬೈಲ್ ನೋಡುವ ಅಭ್ಯಾಸ ಮಾಡಿಕೊಂಡಿದ್ದಾರೆ. ಇದು ಕಣ್ಣಿನ ಮೇಲೆ ಪರಿಣಾಮ ಬೀರುವುದಲ್ಲದೇ, ಅಲ್ಲಿ ಕಾಣುವ ಯಾವುದೋ ನೋಟಿಫಿಕೇಷನ್ ಮನಸ್ಸಿನ ಮೇಲೆ ಸಹಜವಾಗಿ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಅದರ ಬದಲಾಗಿ ಮೊದಲು ದೇವಹ ಧ್ಯಾನ (Meditation) ಮಾಡಿ, ಫ್ರೆಶ್ ಆಗಿ. ನಂತರ ದಿನ ಪತ್ರಿಕ ಹಾಗೂ ಕೆಲವು ನಿಯತಕಾಲಿಕೆಗಳ ಮೇಲೆ ಕಣ್ಣು ಆಡಿಸಿ. ಒಳ್ಳೇಯದನ್ನು ಓದಿ. ಒಳ್ಳೇಯದನ್ನೇ ಕೇಳಿ. ಆಗ ಸಕರಾತ್ಮಕ ಎನರ್ಜಿ ನಿಮ್ಮಲ್ಲಿಯೇ ಸೃಷ್ಟಿಯಾಗುತ್ತದೆ. ದಿನಾ ಪೂರ್ತಿ ಇದು ನಿಮ್ಮನ್ನು ಆ್ಯಕ್ಟಿವ್ ಆಗಿರುವಂತೆ ನೋಡಿಕೊಳ್ಳುತ್ತದೆ. ಇದೊಂದು ರೀತಿ ಥೆರಪಿ ರೀತಿ ಕೆಲಸ ಮಾಡುತ್ತದೆ. 

click me!