ಏನೇ ಮಾಡಿದ್ರೂ ಕೆಮ್ಮು,ಶೀತ ವಾಸಿಯಾಗ್ತಿಲ್ವಾ? ಖ್ಯಾತ ವೈದ್ಯ ಡಾ.ಕಾರ್ತಿಕ್​ ಹೇಳಿರೋ ಈ ಕಷಾಯ ಮಾಡಿ ನೋಡಿ

Published : Feb 08, 2025, 01:00 PM ISTUpdated : Feb 08, 2025, 01:06 PM IST
ಏನೇ ಮಾಡಿದ್ರೂ ಕೆಮ್ಮು,ಶೀತ ವಾಸಿಯಾಗ್ತಿಲ್ವಾ? ಖ್ಯಾತ ವೈದ್ಯ ಡಾ.ಕಾರ್ತಿಕ್​ ಹೇಳಿರೋ ಈ ಕಷಾಯ ಮಾಡಿ ನೋಡಿ

ಸಾರಾಂಶ

ಹವಾಮಾನ ವೈಪರೀತ್ಯದಿಂದ ಕೆಮ್ಮು, ಗಂಟಲು ನೋವು ಸಾಮಾನ್ಯ. ಡಾ. ಕಾರ್ತಿಕ್, ಮನೆಮದ್ದಿನ ಕಷಾಯಕ್ಕೆ ಸಲಹೆ ನೀಡಿದ್ದಾರೆ. ಅರಿಶಿಣ, ಏಲಕ್ಕಿ, ಲವಂಗ, ಕರಿಮೆಣಸು, ಕಲ್ಲುಸಕ್ಕರೆ, ಹಾಲು ಬಳಸಿ ಕಷಾಯ ತಯಾರಿಸಿ ಕುಡಿಯುವುದರಿಂದ ಕೆಮ್ಮು ನಿವಾರಣೆಯಾಗುತ್ತದೆ.

ಈಗಂತೂ ಎಲ್ಲೆಲ್ಲೂ ಕೆಮ್ಮು, ಗಂಟಲನೋವು, ಶೀತದ ಬಾಧೆಯೇ  ಶುರುವಾಗಿದೆ. ಹವಾಮಾನ್ಯ ವೈಪರೀತ್ಯದಿಂದಾಗಿ ಚಿಕ್ಕಪುಟ್ಟ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ. ಅದರಲ್ಲಿಯೂ ಕೆಮ್ಮು ಶುರುವಾದರಂತೂ ಮುಗಿದೇ ಹೋಯ್ತು. ರಾತ್ರಿಯೀಡಿ ನರಕ ಯಾತನೆ. ಯಾವುದೇ ಕಾಫ್​ ಸಿರಪ್​ ತೆಗೆದುಕೊಂಡರೂ ಪ್ರಯೋಜನ ಆಗುವುದಿಲ್ಲ. ಇಂಥ ಸಿರಪ್​ಗಳಿಂದ ಒಂದೋ ಉಷ್ಣ ಹೆಚ್ಚಾಗಿ ಮತ್ತೊಂದು ರೀತಿಯಲ್ಲಿ ಕೆಮ್ಮು ಜೋರಾಗುತ್ತದೆ. ಆದ್ದರಿಂದ ಮನೆಯಲ್ಲಿ ಸುಲಭದ ಔಷಧ ತಯಾರಿಸಿಕೊಂಡು ಇಂಥ ಚಿಕ್ಕಪುಟ್ಟ ಅನಾರೋಗ್ಯದ ಸಮಸ್ಯೆಯಿಂದ ಹೇಗೆ  ಮುಕ್ತರಾಗಬಹುದು ಎನ್ನುವ ಮಾಹಿತಿ ನೀಡಿದ್ದಾರೆ. ಡಾ.ಕಾರ್ತಿಕ್​.  

ಅಷ್ಟಕ್ಕೂ, ಕೆಮ್ಮು ಎನ್ನುವುದು ಮಾಮೂಲಾಗಿ ಎಲ್ಲರಿಗೂ ಕಾಡುವ ಸಮಸ್ಯೆ. ಮಳೆ, ಚಳಿ, ಬಿಸಿಲು ಕಾಲ ಯಾವುದೇ ಇರಲಿ, ಸ್ವಲ್ಪವೇ ಹವಾಮಾನ ವೈಪರೀತ್ಯವಾದರೂ ಮೊದಲಿಗೆ ಕಾಡುವುದು ಗಂಟಲಿನ ಕಿಚ್​ಕಿಚ್​, ಅದರ ಹಿಂದೆ ಬರುವುದು ಗಂಟಲು ನೋವು, ಶೀತ ಜೊತೆಗೆ ಕೆಮ್ಮು. ಮೆಡಿಕಲ್​ ಷಾಪ್​ಗಳಲ್ಲಿ ಕೂಡಲೇ ಹೋಗಿ ಕೆಮ್ಮಿನ ಸಿರಪ್ ತಂದು ಕುಡಿಯುವುದು ಮಾಮೂಲು. ಆದರೆ ಈ ಸಿರಪ್​ಗಳಲ್ಲಿ ಹಲವು ಎಷ್ಟು ವಿಷಕಾರಿಯಾಗಿವೆ ಎನ್ನುವುದು ಇದಾಗಲೇ ಸಾಬೀತಾಗಿದೆ. ಅದರಲ್ಲಿಯೂ ಚಿಕ್ಕ ಮಕ್ಕಳಿಗೆ ಇಂಥ ಸಿರಪ್​ಗಳು ಕೊಟ್ಟರೆ ಭಾರಿ ಡೇಂಜರ್​. ಇಂಥ ಸಮಯದಲ್ಲಿ, ಮನೆಯಲ್ಲಿಯೇ ತಯಾರು ಮಾಡುವ ಕಷಾಯದ ಕುರಿತು ಮಾಹಿತಿ ನೀಡಿದ್ದಾರೆ ಡಾ. ಕಾರ್ತಿಕ್​.

ಲವಂಗ, ಮೊಸ್ರು ಇದ್ರೆ ಸಾಕು... ಜಿರಳೆ ನಿಮ್​ ಮನೆಯೊಳಗೆ ಸುಳಿಯಲ್ಲ... ಇಲ್ಲಿದೆ ನೋಡಿ ಸುಲಭದ ಟಿಪ್ಸ್​

ಇವರು ತಯಾರಿರುವ ಕೆಮ್ಮಿನ ಕಷಾಯಕ್ಕೆ ಬೇಕಾಗಿರುವ ಸಾಮಗ್ರಿಗಳು: ​ 
ಕಾಲು ಚಮಚ ಅರಿಶಿಣ,
ಕಾಲು ಚಮಚ ಏಲಕ್ಕಿ ಪುಡಿ,
ಎಂಟು ಲವಂಗ,
ಕಾಲು ಚಮಚ ಕರಿ ಮೆಣಸು,
ಒಂದು ಚಮಚ ಕೆಂಪು ಕಲ್ಲು ಸಕ್ಕರೆ,
20 ಮಿಲಿ ಲೀಟರ್​ ಹಾಲು,

ಮಾಡುವ ವಿಧಾನ: ಕುಟ್ಟಾಣಿಯಲ್ಲಿ ಸ್ವಲ್ಪ ಸ್ವಲ್ಪ ಹಾಕಿ ಕುಟ್ಟಿ ಪುಡಿಮಾಡಿಕೊಳ್ಳಬೇಕು. ಕಫ, ಗಂಟಲಲ್ಲಿ ಕಿಚ್​ ಕಿಚ್​, ಕೆಮ್ಮು 
ಸ್ವಲ್ಪ ನೀರನ್ನು ಹಾಕಿ ಸ್ವಲ್ಪ ಕುದಿ ಬರುವವರೆ ಇಡಬೇಕು. ಕುದಿದ ಬಂದ ಮೇಲೆ ಅದಕ್ಕೆ ಸ್ವಲ್ಪ ಹಾಲು ಹಾಕಬೇಕು. ಅದಕ್ಕೆ ಕುಟ್ಟಿದ್ದ ಪುಡಿಗಳ ಮಿಶ್ರಣವನ್ನು ಹಾಕಬೇಕು. ಇದು ಉಕ್ಕಿಬಿಡುತ್ತದೆ. ಇದೇ ಕಾರಣಕ್ಕೆ ಸ್ಟಿರ್ ಮಾಡುತ್ತಾ ಇರಬೇಕು. ಹಾಲು ಸ್ವಲ್ಪ ಕುದಿ ಬರುತ್ತಿರುವಾಗಲೇ ಇದನ್ನು ಹಾಕಬೇಕು. ಇದಕ್ಕೆ ಸ್ವಲ್ಪ ಕಲ್ಲಸಕ್ಕರೆ ಹಾಕಬೇಕು. ಡಯಾಬೀಟಿಸ್​ ಇದ್ದರೆ ಹಾಗೆಯೇ ಕುಡಿಯಬಹುದು. ಇಷ್ಟು ಮಾಡಿದರೆ ಕಷಾಯ ರೆಡಿ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ಮಲಗುವ ಮುನ್ನ ನೀರು ಕುಡಿಯುತ್ತೀರಾ?, ಈ ವಿಷಯಗಳನ್ನು ನೀವು ತಿಳಿದಿರಲೇಬೇಕು
ಕೊಲೊನ್ ಕ್ಯಾನ್ಸರ್.. 30 ವರ್ಷದ ನಂತ್ರ ಈ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ