ಕೆಲವರು ನೀವು ದಿನಕ್ಕೆ 3 ಲೀಟರ್ ನೀರು ಕುಡಿಯಬೇಕು ಅನ್ನುತ್ತಾರೆ. ಇನ್ನು ಕೆಲವರು ಅನಗತ್ಯವಾಗಿ ನೀರು ಕುಡಿಯಬಾರದು ಅನ್ನುತ್ತಾರೆ. ಯಾವುದು ನಿಜ? ಯಾವುದು ಮಿಥ್? ಬನ್ನಿ ತಿಳಿಯೋಣ.
ದೇಹಕ್ಕೆ ನೀರು ಅತ್ಯಗತ್ಯ. ಆದರೆ ನಾವು ಎಷ್ಟು ನೀರು, ಹೇಗೆ, ಯಾವಾಗ ಕುಡಿಯುತ್ತೇವೆ ಎಂಬ ಬಗ್ಗೆ ಸರಿಯಾದ ಲೆಕ್ಕವಿಡುವುದಿಲ್ಲ. ಹಾಗಿದ್ದರೆ, ಆರೋಗ್ಯವಂತರಾಗಿರಲು ನೀರಿನ ಕುಡಿಯುವಿಕೆಯ ಪ್ರಮಾಣವನ್ನು ಸರಿದೂಗಿಸಿಕೊಂಡು ಹೋಗುವುದು ಹೇಗೆ?
ನೀರು ಕುಡಿಯುವ ಬಗ್ಗೆ ನೀವೇ ನಿರ್ಧರಿಸಿ
undefined
ದೇಹದಲ್ಲಿ ಆದ್ರರ್ತೆ ಉಳಿಯುವಂತೆ ಮಾಡಲು ಸಾಕಷ್ಟು ನೀರು ಕುಡಿಯಬೇಕಾಗುತ್ತದೆ. ಆದರೆ ಅನೇಕರು ತಮಗೆ ಬಾಯಾರಿಕೆ ಆಗುವುದೇ ಇಲ್ಲ ಎನ್ನುತ್ತಾರೆ. ಹೀಗಾಗಿ ನೀರು ಕುಡಿಯಬೇಕು ಎಂದೆನಿಸುವುದಿಲ್ಲ ಎಂಬ ಉತ್ತರ ನೀಡುತ್ತಾರೆ. ಇಂತಹ ಸಮಯದಲ್ಲಿ ನೀವು ನಿಮ್ಮ ಮೂತ್ರದ ಬಣ್ಣವನ್ನು ಗಮನಿಸಿದರೆ ನೀರಿನ ಅಗತ್ಯ ತಿಳಿಯುತ್ತದೆ. ತಿಳಿ ಹಳದಿ ಅಥವಾ ಅದಕ್ಕಿಂತಲೂ ಹೆಚ್ಚಿನ ಬಣ್ಣಕ್ಕೆ ಮೂತ್ರ ತಿರುಗಿದರೆ ನೀವು ಸಾಕಷ್ಟು ನೀರ ಕುಡಿಯಬೇಕು. ಇದು ಎರಡು ಲೀಟರ್, ಮೂರು ಲೀಟರ್ ಹೀಗೆ ಎಷ್ಟೂ ಇರಬಹುದು.
ಸ್ವಾದಿಷ್ಟ ನೀರು ಕುಡಿಯಿರಿ
ನೀರು ಕುಡಿಯುವ ಅಭ್ಯಾಸವಿಲ್ಲದಿದ್ರೆ ಆರಂಭದಲ್ಲಿ ನಾಲಿಗೆ ರುಚಿ ಹೆಚ್ಚಿಸಲು ನಿಂಬೆ ಜ್ಯೂಸ್ ಅಥವಾ ಇನ್ನಿತರ ನೈಸರ್ಗಿಕ ರಸಗಳನ್ನು ಮಿಶ್ರ ಮಾಡಿ ಹೆಚ್ಚು ನೀರು ಕುಡಿಯಿರಿ. ಇದರಿಂದ ದಿನದ ಅಗತ್ಯದ ಪ್ರಮಾಣದ ನೀರು ದೇಹಕ್ಕೆ ಸೇರುತ್ತದೆ. ಇದರಿಂದ ನಿಮಗೆ ಆಯಾ ಸಮಯದಲ್ಲಿ ಜ್ಯೂಸ್ ಕುಡಿಯಬೇಕು ಅನಿಸಲು ಆರಂಭಿಸುತ್ತದೆ. ಈ ವೇಳೆ ನೀರು ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ.
ಸಮಯ ನಿಗದಿಪಡಿಸಿಕೊಳ್ಳಿ
ನೀವು ಸಾಕಷ್ಟು ನೀರು ಕುಡಿಯಬೇಕಿದ್ರೆ ಮೊಬೈಲ್‌ನಲ್ಲಿ ಸಮಯ ನಿಗದಿ ಪಡಿಸಿ. ಒಮ್ಮೆಲೆ ಒಂದು ಲೀಟರ್ ನೀರು ಕುಡಿಯುವುದಕ್ಕಿಂತ ಉತ್ತಮ ಸಮಯ ನಿಗದಿಪಡಿಸಿ ಸ್ವಲ್ಪ ಸ್ವಲ್ಪ ನೀರು ಕುಡಿಯುವುದು. ಇದರಿಂದ ನಿಮಗೆ ಹೆಚ್ಚು ನೀರು ಕುಡಿದಿದ್ದೇವೆ ಎಂಬ ಅನುಭವ ಆಗುವುದಿಲ್ಲ. ಆದರೆ ಗಂಟೆಗೆ ಅರ್ಧ ಲೀಟರ್ ನೀರು ಕುಡಿದರೂ ದಿನಚರಿಯಲ್ಲಿ ನೀವು ಕಡಿಮೆ ಎಂದರೂ 4ರಿಂದ 5 ಲೀಟರ್ ನೀರು ಕುಡಿಯಲು ಸಾಧ್ಯವಾಗುತ್ತದೆ.
ಬಾಟಲಿಗಳ ಮೇಲೆ ಗುರುತು
ಸಮಯ ನಿಗದಿಪಡಿಸಿದಂತೆ ಬಾಟಲಿಗಳ ಮೇಲೆ ಗುರುತಿಟ್ಟುಕೊಂಡು ಸಹ ನೀರು ಕುಡಿಯುವುದು ಸುಲಭ ವಿಧಾನ. ಇಷ್ಟು ಗಂಟೆಯೊಳಗೆ ಬಾಟಲಿ ಮೇಲಿನ ಗುರುತಿರುವಷ್ಟು ನೀರು ಕುಡಿಯುವುದು ಉತ್ತಮ. ಇದರಿಂದ ಕಷ್ಟಪಟ್ಟು ನೀರು ಕುಡಿದ ಅನುಭವ ತಪ್ಪುತ್ತದೆ.
ನಿಮ್ಮ ಮೂಳೆಗಳ ಆರೋಗ್ಯಕ್ಕೂ ಬೇಕು ವಿಟಮಿನ್ ಡಿ
ಸ್ಟ್ರಾ ಬಳಸಿ
ನೀವು ಜ್ಯೂಸ್‌ಗಳನ್ನು ಸ್ಟ್ರಾ ಮೂಲಕ ಕುಡಿದಾಗ ಕಡಿಮೆ ಸಮಯದಲ್ಲಿ ಹೆಚ್ಚು ಕುಡಿಯುತ್ತೀರಿ. ಇದೇ ಉಪಾಯವನ್ನು ನೀರು ಕುಡಿಯುವಾಗ ಬಳಸಿಕೊಳ್ಳಿ. ಮಾರುಕಟ್ಟೆಯಲ್ಲಿ ಸ್ಟ್ರಾ ಇರುವ ಬಾಟಲಿಗಳು ಲಭ್ಯವಿದೆ. ನೀವು ಸ್ಟ್ರಾ ಮೂಲಕ ನೀರು ಕುಡಿಯುವುದರಿಂದ ಅನಾಯಾಸವಾಗಿ ಹೆಚ್ಚು ನೀರು ಕುಡಿಯುತ್ತೀರಿ.
ನೀವು ಕಾಲ ಮೇಲೆ ಕಾಲು ಹಾಕಿ ಕೂರೋದ್ರಿಂದ ಪುರುಷತ್ವಕ್ಕೆ ಹಾನಿಯಾ?
ನೀರಿನಂಶ ಇರುವ ಹಣ್ಣುಗಳ ಸೇವನೆ
ಎಲ್ಲಾ ಸಮಯದಲ್ಲೂ ನೀರು ಕುಡಿಯಲಾಗುವುದಿಲ್ಲ. ಇಂತಹ ವೇಳೆ ಹೆಚ್ಚು ನೀರಿನಂಶ ಇರುವ ಕಲ್ಲಂಗಡಿ ಹಣ್ಣು ಮತ್ತು ಸೌತೆಕಾಯಿಗಳನ್ನು ಹೆಚ್ಚಾಗಿ ಸೇವಿಸಿ. ಇದರಿಂದ ಕೂಡ ದೇಹಕ್ಕೆ ಅಗತ್ಯವಾದ ನೀರಿನಂಶ ಪಡೆಯಬಹುದು. ಹೀಗೆ ಮಾಡುವುದರಿಂದ ದೇಹದ ನಿರ್ಜಲೀಕರಣ ಸಮಸ್ಯೆಯನ್ನು ತಪ್ಪಿಸಿಕೊಳ್ಳಬಹುದು.
ಹೆಚ್ಚು ಕುಡಿದರೆ ಹಾನಿ?
ಅವಶ್ಯಕತೆಗಿಂತಲೂ ಹೆಚ್ಚು ನೀರು ಕುಡಿಯಬಾರದು. ಮಿತಿ ಮೀರಿ ನೀರಿನಂಶ ದೇಹದಲ್ಲಿ ಹೆಚ್ಚಾಗಾದ ದೇಹದಲ್ಲಿ ಉಪ್ಪು ಖನಿಜಗಳ ಪ್ರಮಾಣದಲ್ಲಿ ವ್ಯತ್ಯಾಸ ಉಂಟಾಗುವುದು. ದೇಹದಲ್ಲಿ ನಿರ್ದಿಷ್ಟ ಪ್ರಮಾಣಕ್ಕಿಂತ ಕಡಿಮೆ ಸೋಡಿಯಂ ಪ್ರಮಾಣ ಉಂಟಾದರೆ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುವುದು. ಸೋಡಿಯಂ ನಿಗದಿತ ಪ್ರಮಾಣದಲ್ಲಿ ಇಲ್ಲದೆ ಹೋದರೆ "ಹೈಪೋನಾಟ್ರೀಮಿಯಾ" ಸಮಸ್ಯೆ ಉಂಟಾಗುವುದು. ದೌರ್ಬಲ್ಯ, ಸೆಳೆತ, ಅಧಿಕ ತೂಕಕ್ಕೂ ಕಾರಣವಾಗುವ ಸಾಧ್ಯತೆಗಳು ಹೆಚ್ಚು. ಹೆಚ್ಚುವರಿ ನೀರಿನಂಶವು ಅಧಿಕ ರಕ್ತ ಸಂಚಲನವನ್ನು ಉಂಟುಮಾಡಿ, ಹೃದಯದ ಆರೋಗ್ಯಕ್ಕೆ ತೊಂದರೆ ಉಂಟುಮಾಡುವುದು.