ಈಗಿನ ದಿನಗಳಲ್ಲಿ ತೂಕ ಇಳಿಕೆ ಸಾಂಕ್ರಾಮಿಕ ರೋಗವಾಗಿದೆ. ಒಂದು ಕೆಜಿ ಹೆಚ್ಚಾದ್ರೂ ಟೆನ್ಷನ್ ಶುರುವಾಗುತ್ತದೆ. ಕಲಾವಿದರಂತೆ ಫಿಟ್ ಆಗಿರಬೇಕು ಎನ್ನುವ ಕಾರಣಕ್ಕೆ ಉಪವಾಸವಿದ್ದು ತೂಕ ಇಳಿಸಿಕೊಳ್ಳುವ ತೆಳ್ಳಗಿನ ಮನುಷ್ಯರೇನು ಆರೋಗ್ಯವಾಗಿರ್ತಾರೆ ಅಂದ್ಕೊಂಡ್ರಾ?
ಸ್ವಲ್ಪ ದಪ್ಪಗೆ ಕಾಣಿಸಿದ್ರೆ ಸಾಕು, ಫಿಟ್ನೆಸ್ ಕ್ಲಾಸ್ ಬಗ್ಗೆ ಜಾಹೀರಾತು ನೀಡುವ ವ್ಯಕ್ತಿಗಳು ಬಂದು ಕರಪತ್ರ ನೀಡಿ ಹೋಗ್ತಾರೆ. ತೂಕ ಇಳಿಸಿಕೊಳ್ಬೇಕೆ ನಮ್ಮನ್ನು ಸಂಪರ್ಕಿಸಿ ಎನ್ನುವ ಜಾಹೀರಾತು ನಮ್ಮ ಕೈ ಸೇರುತ್ತದೆ. ಈಗಿನ ದಿನಗಳಲ್ಲಿ ತೆಳ್ಳಗಿರುವ ವ್ಯಕ್ತಿ ಫಿಟ್ ಆಂಡ್ ಫೈನ್ ಆಗಿದ್ದಾನೆ ಎಂದರ್ಥ. ಅದೇ ಸ್ವಲ್ಪ ದಪ್ಪಗಿರುವ ವ್ಯಕ್ತಿ, ಆಲಸಿ, ಅನಾರೋಗ್ಯಪೀಡಿತ, ಆತನಿಂದ ಏನೂ ಸಾಧ್ಯವಿಲ್ಲ ಎನ್ನುವಂತೆ ನೋಡ್ತಾರೆ. ಶೇಕಡಾ 60ರಷ್ಟು ಮಹಿಳೆಯರು ಈ ತೂಕ ನಮ್ಮ ಜೀವನದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ದಪ್ಪಗಿರುವವರು ಸದಾ ತೂಕ (Weight) ಇಳಿಕೆ ಬಗ್ಗೆ ಆಲೋಚನೆ ಮಾಡ್ತಿರುತ್ತಾರೆ. ಸಮಾಜ (Society) ಏನೆನ್ನುತ್ತದೆ ಎಂಬ ಬಗ್ಗೆ ಚಿಂತಿಸುತ್ತಿರುತ್ತಾರೆ. ಅವರ ತೂಕ ಅವರಿಗೆ ಯಾವುದೇ ರೀತಿಯ ಸಮಸ್ಯೆ ನೀಡಿರೋದಿಲ್ಲ. ದಿನನಿತ್ಯದ ಕೆಲಸದಲ್ಲಿ ಚೂಟಿಯಾಗಿರುವ ಅವರು ಎಂಥ ಕೆಲಸ ಬಂದ್ರೂ ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ. ಆದ್ರೆ ಸಮಾಜ ಅವರನ್ನು ನೋಡುವ ದೃಷ್ಟಿ ಅವರ ನೆಮ್ಮದಿ ಕೆಡಿಸಿರುತ್ತದೆ. ಸ್ವಲ್ಪ ದಪ್ಪಗಿದ್ದೀರಿ ಎಂದರೆ ನೀವು ಅನಾರೋಗ್ಯ (Illness) ಕರ ಎಂದು ಅರ್ಥವಲ್ಲ ಎಂದು ಸಂಶೋಧನೆ ಹೇಳುತ್ತದೆ. ಫಿಟ್ನೆಸ್ (Fitness) ದೇಹದ ಸಕಾರಾತ್ಮಕತೆಗೆ ಸಂಬಂಧಿಸಿದೆ. ನಿಮ್ಮ ದೇಹದ ಬಗ್ಗೆ ನೀವು ಧನಾತ್ಮಕವಾಗಿ ಯೋಚಿಸಿದರೆ, ನೀವು ಫಿಟ್ ಆಗಿದ್ದೀರಿ ಎಂದರ್ಥ.
undefined
90 ಕೆಜಿಯಿಂದ 60 ಕೆಜಿಗೆ ತೂಕ ಇಳಿಸಿಕೊಂಡ Sonakshi Sinha ಫಿಟ್ನೆಸ್ ಟಿಪ್ಸ್ ಇವು!
ದಪ್ಪಗಿರುವವರು ಕೂಡ ಫಿಟ್ ಆಗಿರಬಹುದು : ಪ್ರತಿಯೊಬ್ಬರೂ ಭಿನ್ನ ದೇಹದ ಆಕಾರವನ್ನು ಹೊಂದಿರುತ್ತಾರೆ. ಕೆಟ್ಟ ಜೀವನಶೈಲಿ, ವ್ಯಾಯಾಮದ ಕೊರತೆ, ಸೋಮಾರಿತನದಿಂದ ಅವರ ತೂಕ ಹೆಚ್ಚಾಗಿರಬೇಕೆಂದೇನಿಲ್ಲ. ತೂಕ ಏರಿಕೆಗೆ ಇನ್ನೂ ಅನೇಕ ಕಾರಣವಿರುತ್ತದೆ. ಕೆಲವರು ಹುಟ್ಟಿದಾಗಿನಿಂದಲೇ ಹೆಚ್ಚು ತೂಕ ಹೊಂದಿರುತ್ತಾರೆ. ಆದ್ರೆ ದೈಹಿಕವಾಗಿಯೂ ಅವರು ಆಕ್ಟಿವ್ ಆಗಿರುತ್ತಾರೆ.
ಫಿಟ್ನೆಸ್ ಮಾನದಂಡ ಯಾವುದು? : ರ್ಯಾಂಪ್ ಮೇಲೆ ವಾಕ್ ಮಾಡುವ ಹುಡುಗ – ಹುಡುಗಿಯರು ತುಂಬಾ ಸಣ್ಣಗಿರ್ತಾರೆ. ಕೆಲವೊಮ್ಮೆ ಅವರು ಏನೂ ತಿಂದಿಲ್ವೇನೋ ಎನ್ನುವಂತ ಶರೀರಿ ಹೊಂದಿರುತ್ತಾರೆ. ಎದೆ, ಬೆನ್ನು ಎರಡೂ ಸೇರಿದಂತೆ ಕಾಣುತ್ತದೆ. ಇವರಂತೆ ಎಲ್ಲರೂ ಆಗಲು ಸಾಧ್ಯವಿಲ್ಲ. ಅದು ಪ್ರತಿಯೊಬ್ಬರ ಮಾನದಂಡವಾಗಬಾರದು. ಝಿರೋ ಫಿಗರ್ ಹೆಸರಿನಲ್ಲಿ ನೀವು ಆಹಾರ ಬಿಟ್ಟರೆ ಅನಾರೋಗ್ಯಕ್ಕೆ ಒಳಗಾಗ್ತೀರಿ. ಅನೇಕ ತೆಳ್ಳಗಿರುವ ವ್ಯಕ್ತಿಗಳು ಅನಾರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ.
ಫಿಟ್ನೆಸ್‌ಗಾಗಿ ಸ್ನಾಯುಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯ. ಸ್ಲಿಮ್ ಆಗಿರುವ ವ್ಯಕ್ತಿ ಮತ್ತು ಯುವ ಜನತೆ ಯಾವಾಗಲೂ ಆರೋಗ್ಯಕರವಾಗಿರ್ತಾರೆ ಎಂಬುದು ಸುಳ್ಳು.
Fitness Tips: ತೂಕ ಇಳಿಸೋಕೆ ಸ್ವಿಮ್ಮಿಂಗ್ – ಸ್ಲೈಕಿಂಗ್ ಯಾವುದು ಬೆಸ್ಟ್ ?
ನಿಮ್ಮ ಆರೋಗ್ಯ ನಿಮ್ಮ ಚರ್ಮದ ಮೇಲೂ ಪರಿಣಾಮ ಬೀರುತ್ತದೆ. ನಾನು ಆರೋಗ್ಯವಾಗಿದ್ದೇನೆ ಎಂಬುದನ್ನು ತೋರಿಸಿಕೊಳ್ಳಲು ನೀವು ಊಟ, ಆಹಾರ ಬಿಟ್ಟು, ತೂಕ ಇಳಿಸಿಕೊಂಡು ಸಣ್ಣಗಾದ್ರೆ ಇದು ಒಳ್ಳೆಯ ಮಾರ್ಗವಲ್ಲ. ಇದು ನಿಮ್ಮ ಮಾನಸಿಕ ಆರೋಗ್ಯವನ್ನು ಹಾಳು ಮಾಡ್ಬಹುದು. ಖಿನ್ನತೆ ನಿಮ್ಮನ್ನು ಕಾಡುವ ಸಾಧ್ಯತೆಯಿರುತ್ತದೆ.
ಅಧ್ಯಯನದ ಪ್ರಕಾರ, ತೂಕವನ್ನು ಕಳೆದುಕೊಳ್ಳುವ ಬದಲು, ದೇಹ ನಿರ್ಮಾಣ ಮತ್ತು ಆರೋಗ್ಯಕರ ದೇಹಕ್ಕೆ ಗಮನ ಕೊಡುವುದು ಮುಖ್ಯ. ತಪ್ಪು ವಿಧಾನವನ್ನು ಅನುಸರಿಸಿ ಬೇಗ ಕಡಿಮೆಯಾದ ತೂಕ, ಮಾನಸಿಕ ಆರೋಗ್ಯ, ದೈಹಿಕ ಆರೋಗ್ಯ ಮತ್ತು ಚರ್ಮದ ಆರೋಗ್ಯ ಮೂರಕ್ಕೂ ಹಾನಿಕಾರಕವಾಗಿದೆ. ವರ್ಕ್ ಔಟ್ ಮಾಡೋದು ಅವಶ್ಯಕ. ನಿಮ್ಮ ತೂಕಕ್ಕೆ ತಕ್ಕಂತೆ ನೀವು ದೈಹಿಕ ಚಟುವಟಿಕೆಯಲ್ಲಿ ತೊಡಗುವುದು ಮುಖ್ಯ. ಆದ್ರೆ ಎಲ್ಲವೂ ಆರೋಗ್ಯಕರವಾಗಿ ನಡೆಯಬೇಕು. ಸುತ್ತಲಿನ ಸಮಾಜ ಕೂಡ ಜನರನ್ನು ಆಕಾರ, ಗಾತ್ರ ಮತ್ತು ನೋಟದ ಮೇಲೆ ಅಳೆಯದೆ ಅರ್ಹತೆಯ ಆಧಾರದ ಮೇಲೆ ಅಳೆಯಬೇಕು. ದೇಹದ ಸಕಾರಾತ್ಮಕತೆಯನ್ನು ಉತ್ತೇಜಿಸುವ ಕೆಲಸವಾಗ್ಬೇಕು.