ಹಾರ್ಟ್‌ಗೂ ಆಗುತ್ತೆ ಶಾರ್ಟ್ ಸರ್ಕ್ಯೂಟ್! ನಿಮಗಿದ್ಯಾ ಹೃದಯ ಬಡಿತ ಏರುಪೇರಾಗೋ ಸಮಸ್ಯೆ?

By Suvarna NewsFirst Published Feb 5, 2024, 11:14 AM IST
Highlights

ಪ್ರೀತಿಯಲ್ಲಿ ಹೃದಯ ಬಡಿತ ಏರುಪೇರಾಗೋದು ಸಾಮಾನ್ಯ. ಆದರೆ, ಅಂಥದ್ದೇನೂ ಇಲ್ಲದೆ ಇದ್ದಕ್ಕಿದ್ದಂತೆ ಹೃದಯ ಜೋರಾಗಿ ಬಡಿದುಕೊಳ್ಳುವುದು, ಇಲ್ಲವೇ ನಿಧಾನ ಗತಿಗೆ ಹೊರಳುವುದು ಆಗುತ್ತಿದ್ದರೆ ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದು.

ಹೃದಯ ಕೂಡಾ ಒಂದು ರೀತಿಯ ವಿದ್ಯುತ್ ಯಂತ್ರ. ಇದು ವಿದ್ಯುತ್ ಆಘಾತಗಳನ್ನು ಪಡೆಯುತ್ತದೆ ಮತ್ತು ಇದರಿಂದಾಗಿ ಅದು ನಿರಂತರವಾಗಿ ಬಡಿಯುತ್ತದೆ. ಆದರೆ, ವಿದ್ಯುತ್‌ನಂತೆಯೇ ಹೃದಯದಲ್ಲಿ ಕೂಡಾ ಶಾರ್ಟ್ ಸರ್ಕ್ಯೂಟ್ ಸಂಭವಿಸಬಹುದು. 

ಹೃದಯದ ಸಮಸ್ಯೆಗಳು ಯಾವತ್ತೂ ಹೆಚ್ಚಿನ ಗಮನ ಬೇಡುತ್ತವೆ. ಹೃದಯಾಘಾತ, ಹೃದಯದಲ್ಲಿ ರಂಧ್ರ, ಹೃದಯ ಬಡಿತ ಏರುಪೇರು- ಹೀಗೆ ಹೃದಯಕ್ಕೆ ಹಲವು ರೀತಿಯ ಸಮಸ್ಯೆಗಳು ಬರಬಹುದು. ಹೃದಯಾಘಾತದ ಬಗ್ಗೆ ಸಾಕಷ್ಟು ವಿಚಾರಗಳು ಹರಿದಾಡುತ್ತಲೇ ಇರುತ್ತವೆ. ಆದರೆ, ಹೃದಯ ಬಡಿತದ ಸಮಸ್ಯೆಗಳ ಬಗ್ಗೆ ತಿಳಿದಿದ್ದೀರಾ?

ಹೃದಯ ಶಾರ್ಟ್ ಸರ್ಕ್ಯೂಟ್ 
 ಹೃದಯದ ವಿದ್ಯುತ್ ಸಂಕೇತಗಳಲ್ಲಿ ಕೆಲವು ಅಡಚಣೆಗಳು ಉಂಟಾದಾಗ ಅದು ಶಾರ್ಟ್ ಸರ್ಕ್ಯೂಟ್‌ನಂತೆ ವರ್ತಿಸುತ್ತದೆ. ಆಗ ಹೃದಯ ಬಡಿತ ಸಿಕ್ಕಾಪಟ್ಟೆ ಜೋರಾಗಬಹುದು(ಟಾಕಿಕಾರ್ಡಿಯಾ). ಇಲ್ಲವೇ ತುಂಬಾ ನಿಧಾನವೂ ಆಗಬಹುದು(ಬ್ರಾಡಿಕಾರ್ಡಿಯಾ). ಒಟ್ಟಿನಲ್ಲಿ ಅನಿಮಿಯತ ಹೃದಯ ಬಡಿತಗಳು ಉಂಟಾಗುತ್ತವೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ 'ಆರ್ಹೆತ್ಮಿಯಾ' ಎನ್ನುತ್ತಾರೆ. 

ಹೃದಯದ ಸಂಕೇತಗಳು ಸಾಮಾನ್ಯಕ್ಕಿಂತ ವಿಭಿನ್ನವಾಗಿ ಚಲಿಸಿದಾಗ ಈ ಅಡಚಣೆ ಉಂಟಾಗುತ್ತದೆ. ಈ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಆದರೆ ಇದೆಲ್ಲದರ ಅರ್ಥವೆಂದರೆ ಹೃದಯ ಬಡಿತವು ಕ್ಷೀಣಿಸುತ್ತಿದೆ. ಜನಸಂಖ್ಯೆಯ ಶೇ.1.5ರಿಂದ ಶೇ.5ರಷ್ಟು ಮಂದಿ ಈ ಸಮಸ್ಯೆ ಎದುರಿಸಬಹುದು.

ಈ ಕಾರಣದಿಂದಾಗಿ ಅನೇಕ ರೀತಿಯ ರೋಗಲಕ್ಷಣಗಳು ಉಂಟಾಗಬಹುದು. ಏಕೆಂದರೆ, ಆರ್ಹೆತ್ಮಿಯಾವು ನಿಮ್ಮ ದೇಹಕ್ಕೆ ರಕ್ತದ ಹರಿವನ್ನು ಅಡ್ಡಿಪಡಿಸಬಹುದು. ಇದರಿಂದ ಇತರೆ ಪ್ರಮುಖ ಅಂಗಗಳಾದ ಮೆದುಳು, ಶ್ವಾಸಕೋಶಗಳು, ಹೃದಯ ಇತ್ಯಾದಿಗಳು ಸರಿಯಾಗಿ ಕೆಲಸ ಮಾಡಲು ಅಡಚಣೆ ಉಂಟಾಗುತ್ತದೆ. ಇದರಿಂದ ತಲೆನೋವು, ಉಸಿರಾಟದ ತೊಂದರೆ, ದೌರ್ಬಲ್ಯ, ಅತಿಯಾದ ಆಯಾಸ, ಮೂರ್ಛೆ ಹೋಗುವುದು, ಬೆವರುವುದು, ಎದೆಬಿಗಿತ. ಕಡಿಮೆ ರಕ್ತದೊತ್ತಡ ಇತ್ಯಾದಿ ರೋಗಲಕ್ಷಣಗಳು ಕಂಡು ಬರುತ್ತವೆ. 
ಚಿಕಿತ್ಸೆ ನೀಡದಿದ್ದರೆ, ಆರ್ಹೆತ್ಮಿಯಾವು ಜೀವಕ್ಕೆ ಅಪಾಯಕಾರಿಯಾಗಬಹುದು.

ಹುಡುಗಿಗೆ ಪ್ರಪೋಸ್ ಮಾಡುವ ಮುಂಚೆ ಈ ವಿಷ್ಯ ತಿಳ್ಕೊಂಡ್ರೆ ರಿಜೆಕ್ಟ್ ಆಗೋ ಚಾನ್ಸ್ ಇರೋದಿಲ್ಲ

ಆರ್ಹೆತ್ಮಿಯಾ ಕಾರಣಗಳು
ಹೃದ್ರೋಗ, ಅಧಿಕ ರಕ್ತದೊತ್ತಡ, ಧೂಮಪಾನ, ಡಿಹೈಡ್ರೇಶನ್, ಅತಿಯಾದ ಮದ್ಯಪಾನ, ಆನುವಂಶಿಕ, ಪೋಷಕಾಂಶದ ಕೊರತೆ, ರಕ್ತಹೀನತೆ, ಒತ್ತಡ ಅಥವಾ ಬಿಪಿ, ಖಿನ್ನತೆ, ಅಲರ್ಜಿ, ಶೀತಕ್ಕೆ ತೆಗೆದುಕೊಂಡ ಕೆಲವು ಔಷಧಿಗಳ ಪರಿಣಾಮದಂತಹ ಹಲವು ಕಾರಣಗಳಿಂದ ಈ ಸಮಸ್ಯೆ ಉಂಟಾಗಬಹುದು.
 

click me!