ಹೊಟ್ಟೆ ನೋವಾ? ಕಾರಣ ಏನಾದರೂ ಇರಲಿ, ಇಗ್ನೋರ್ ಮಾಡಬೇಡಿ

By Suvarna News  |  First Published Nov 3, 2022, 3:20 PM IST

ಹೊಟ್ಟೆ ಇದ್ಮೇಲೆ ಹೊಟ್ಟೆ ನೋವು ಬರುತ್ತೆ ಅನ್ನೋರಿದ್ದಾರೆ. ಆದ್ರೆ ಕೆಲವೊಂದು ನೋವನ್ನು ಹಾಗೆ ಬಿಟ್ರೆ ಸಮಸ್ಯೆ ಜಾಸ್ತಿಯಾಗುತ್ತೆ. ಸೂಕ್ತ ಸಮಯದಲ್ಲಿ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆಪಡೆದ್ರೆ ಒಳ್ಳೆಯದು. 
 


ಹೊಟ್ಟೆ ನೋವು, ಸಾಮಾನ್ಯವಾಗಿ ಒಂದಲ್ಲ ಒಂದು ಸಮಯದಲ್ಲಿ ನಮ್ಮನ್ನು ಕಾಡುವ ರೋಗ. ಹೊಟ್ಟೆ ನೋವು ವಿಪರೀತವಾಗಿದೆ ಎನ್ನುವವರೆಗೆ ನಾವು ವೈದ್ಯರ ಬಳಿ ಹೋಗೋದಿಲ್ಲ. ನೋವು ಜಾಸ್ತಿಯಾದಾಗ ವೈದ್ಯರು ಕೇಳುವ ಮೊದಲ ಪ್ರಶ್ನೆ, ಎಲ್ಲಿ ನೋವು ಕಾಣಿಸಿಕೊಳ್ತಿದೆ ಎಂದು. ಹೊಕ್ಕಳಿನ ಮೇಲ್ಭಾಗದಲ್ಲಿ, ಹೊಕ್ಕಳಿನ ಪಕ್ಕದಲ್ಲಿ ಅಥವಾ ಹೊಕ್ಕಳಿನ ಕೆಳ ಭಾಗದಲ್ಲಿ ಹೀಗೆ ಎಲ್ಲಿ ನಮಗೆ ಹೊಟ್ಟೆ ನೋವು ಬಂದಿದೆ ಎಂಬುದನ್ನು ವೈದ್ಯರು ಮೊದಲು ತಿಳಿಯುತ್ತಾರೆ. ಇದಕ್ಕೆ ಕಾರಣವಿದೆ. ಹೊಟ್ಟೆಯ ಬೇರೆ ಬೇರೆ ಭಾಗದ ನೋವು ಬೇರೆ ಬೇರೆ ಸಮಸ್ಯೆಗೆ ಕಾರಣವಾಗಿರುತ್ತದೆ.

ಹೊಟ್ಟೆ (Stomach) ನೋವು ಕಾಣಿಸಿಕೊಳ್ಳಲು ಹೊಟ್ಟೆ ಹುಣ್ಣು (Ulcer) ಕೂಡ ಒಂದು ಕಾರಣ. ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ನಿಮ್ಮ ಹೊಟ್ಟೆಯ ಮೇಲ್ಭಾಗದಲ್ಲಿ ವಿಪರೀತ ನೋವಿದ್ದರೆ ಅದು ಹೊಟ್ಟೆ ಹುಣ್ಣಿನಿಂದ ಬರ್ತಿರಬಹುದು. ಹೊಟ್ಟೆಯಲ್ಲಿ ಉಂಟಾಗುವ ಹುಣ್ಣುಗಳನ್ನು ಪೆಪ್ಟಿಕ್ (Peptic) ಅಲ್ಸರ್ ಎಂದು ಕರೆಯಲಾಗುತ್ತದೆ. ನೀವು ಮೂರು ರೀತಿಯ ಅಲ್ಸರ್ ನೋಡಬಹುದು.

Latest Videos

undefined

ಹೊಟ್ಟೆಯ ಅಲ್ಸರ್ ವಿಧಗಳು : 
ಹೊಟ್ಟೆಯಲ್ಲಿ ಉಂಟಾಗುವ ಹುಣ್ಣನ್ನು ಗ್ಯಾಸ್ಟ್ರಿಕ್ ಅಲ್ಸರ್ ಎಂದು ಕರೆಯಲಾಗುತ್ತದೆ.
ಆಹಾರದ ಕೊಳವೆಯಲ್ಲಿ ಉಂಟಾಗುವ ಹುಣ್ಣುಗಳನ್ನು ಅನ್ನನಾಳದ ಅಲ್ಸರ್ ಎಂದು ಕರೆಯಲಾಗುತ್ತದೆ.
ಸಣ್ಣ ಕರುಳಿನಲ್ಲಿ ಉಂಟಾಗುವ ಹುಣ್ಣುಗಳನ್ನು ಡ್ಯುವೋಡೆನಲ್ ಅಲ್ಸರ್ ಎಂದು ಕರೆಯಲಾಗುತ್ತದೆ.

ಕೆಮ್ಮು, ಶೀತವಿದ್ದರೆ ಜ್ವರದ ಸೂಚನೆಯೇ ಆಗಿರಬೇಕೆಂದಿಲ್ಲ, ಮತ್ತೇನು ?

ಹೊಟ್ಟೆ ಹುಣ್ಣಿನ ಲಕ್ಷಣಗಳು : ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡಾಗ ಬಹುತೇಕರು ಅದನ್ನು ನಿರ್ಲಕ್ಷ್ಯ ಮಾಡ್ತಾರೆ. ಗ್ಯಾಸ್ ನಿಂದ ಸಮಸ್ಯೆಯಾಗಿದೆ, ಹೊರಗಿನ ಊಟ ಸೇವನೆಯಿಂದ ಹೀಗಾಗ್ತಿದೆ.. ಹೀಗೆ ಅವರೇ ಕಾರಣಗಳನ್ನು ಕಂಡುಕೊಂಡು ಅದನ್ನು ನಿರ್ಲಕ್ಷ್ಯ ಮಾಡ್ತಾರೆ. ಆದ್ರೆ ಹೊಟ್ಟೆ ಹುಣ್ಣನ್ನು ನಿರ್ಲಕ್ಷ್ಯ ಮಾಡುವುದು ಒಳ್ಳೆಯದಲ್ಲ.
ನಿಮ್ಮ ದೇಹದಲ್ಲಿ ಈ ಕೆಳಗಿನ ಸಮಸ್ಯೆ ಕಾಣಿಸಿಕೊಳ್ತಿದ್ದರೆ ಅದು ಹೊಟ್ಟೆ ಹುಣ್ಣಿನ ಲಕ್ಷಣವಾಗಿರುತ್ತದೆ. 
ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಅಂದ್ರೆ ಹೊಟ್ಟೆ ನೋವು ಹೊಕ್ಕುಳಿನ ಮೇಲೆ ಮತ್ತು ಎದೆಯ ಕೆಳಭಾಗದಲ್ಲಿ ಅಂದರೆ ಶ್ವಾಸಕೋಶದ ಬಳಿ ಕಾಣಿಸಿಕೊಳ್ಳುತ್ತದೆ.
ಹೊಟ್ಟೆ ನೋವಿನ ಜೊತೆಗೆ ವಾಕರಿಕೆ, ಹಸಿವು ಕಡಿಮೆಯಾಗುವುದು ಅಥವಾ ಹಸಿವಾಗದಿರುವುದು ಹೊಟ್ಟೆ ಹುಣ್ಣಿನ ಆರಂಭಿಕ ಲಕ್ಷಣಗಳಾಗಿವೆ.
ಹೊಟ್ಟೆ ಹುಣ್ಣಿನಿಂದ ಕಾಣಿಸಿಕೊಳ್ಳುವ ನೋವು ಆಗಾಗ ಬಂದು ಹೋಗಬಹುದು. ಇಲ್ಲವೆ ದೀಘ್ರ ಕಾಲ ಕಾಡಬಹುದು. 
ವಾಂತಿಯಲ್ಲಿ ರಕ್ತ ಬರುವ ಸಾಧ್ಯತೆಯಿರುತ್ತದೆ. ವಾಂತಿ ಬಣ್ಣ ಕಪ್ಪಾಗುತ್ತದೆ.
ಮಲ ವಿಸರ್ಜನೆ ವೇಳೆ ಕೂಡ ರಕ್ತ ಬರುತ್ತದೆ. ಹಾಗೆ ಕಪ್ಪು ಜಿಗುಟಾದ ವಸ್ತು ಹೊರಗೆ ಬರುತ್ತದೆ.
ಹೊಟ್ಟೆ ಉರಿ ಕೂಡ ನಿಮ್ಮನ್ನು ಕಾಡುತ್ತದೆ. ಈ ಹೊಟ್ಟೆ ನೋವು ಅನೇಕ ಬಾರಿ ಮುಂದೆ ಹಾಗೂ ಹಿಂದೆ ಹೋಗುವುದನ್ನು ನೀವು ಗಮನಿಸಬಹುದು.  
ಹೊಟ್ಟೆ ಖಾಲಿಯಿದ್ದಾಗ ನಿಮಗೆ ನೋವು ಕಾಡುವುದು ಹೆಚ್ಚು. ಅಂದ್ರೆ ಒಂದು ಊಟದಿಂದ ಇನ್ನೊಂದು ಊಟದ ಮಧ್ಯೆ ನೀವು ಏನನ್ನೂ ಸೇವನೆ ಮಾಡಿಲ್ಲವೆಂದ್ರೆ ಆಗ ತೀವ್ರ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ.
ಬೆಳಿಗ್ಗೆ ಈ ಹೊಟ್ಟೆ ನೋವು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕಾರಣ ರಾತ್ರಿ ನೀವು ಊಟ ಮಾಡಿದ ಮೇಲೆ ನಂತ್ರ ಏನನ್ನೂ ಸೇವನೆ ಮಾಡಿರುವುದಿಲ್ಲ. ಅನೇಕ ಗಂಟೆಗಳ ಕಾಲ ಹೊಟ್ಟೆ ಖಾಲಿಯಿರುತ್ತದೆ. 

ಹೊಟ್ಟೆ ಹುಣ್ಣಿಗೆ ಕಾರಣವೇನು ? : ಹೊಟ್ಟೆ ಹುಣ್ಣು ಏಕೆ ಸಂಭವಿಸುತ್ತದೆ ಎನ್ನುವ ಬಗ್ಗೆ ಸ್ಪಷ್ಟವಾದ ಕಾರಣವಿಲ್ಲ. ಆದ್ರೆ ಜೀರ್ಣಕಾರಿ ದ್ರವದಲ್ಲಿ ಅಸಮತೋಲನ ಉಂಟಾದಾಗ ಹೆಲಿಕೋಬ್ಯಾಕ್ಟರ್ ಪೈಲೋರಿ ಬ್ಯಾಕ್ಟೀರಿಯಾ ಬೆಳೆಯುತ್ತದೆ. ಇದ್ರಿಂದ ಹೊಟ್ಟೆಯಲ್ಲಿ ಆಮ್ಲ ಉತ್ಪತ್ತಿಯಾಗುತ್ತದೆ. ಈ ಬ್ಯಾಕ್ಟೀರಿಯಾ ಆಹಾರ ಜೀರ್ಣಿಸುವ ಆಮ್ಲಗಳ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಜೀರ್ಣಕ್ರಿಯೆಯಲ್ಲಿ ಏರುಪೇರಾಗುತ್ತದೆ. ಇದ್ರಿಂದ ಹೊಟ್ಟೆ ಹುಣ್ಣು ಕಾಣಿಸಿಕೊಳ್ಳುತ್ತದೆ.

ಅಡುಗೆಗೆ ನಾನ್‌ಸ್ಟಿಕ್ ಪಾತ್ರೆ ಬಳಸ್ತೀರಾ ? ಮೈಕ್ರೋಪ್ಲಾಸ್ಟಿಕ್ಸ್‌ ಹೊಟ್ಟೆ ಸೇರ್ತವೆ ಹುಷಾರ್‌ !

ಹೊಟ್ಟೆ ಹುಣ್ಣಿಗೆ ಚಿಕಿತ್ಸೆ : ಹೊಟ್ಟೆ ಹುಣ್ಣು ಗಂಭೀರವಾದ ಸಮಸ್ಯೆಗಳಲ್ಲಿ ಒಂದಾಗಿದೆ. ಹಾಗಾಗಿ ಮನೆ ಮದ್ದಿನ ಬದಲು ತಕ್ಷಣ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯುವುದು ಒಳ್ಳೆಯದು.

click me!