ಅತಿಯಾದ ಜಿಮ್‌ ವರ್ಕೌಟ್ ಅಪ್ಪುಗೆ ಮುಳುವಾಯಿತಾ?

Suvarna News   | Asianet News
Published : Oct 30, 2021, 03:16 PM ISTUpdated : Nov 01, 2021, 10:53 AM IST
ಅತಿಯಾದ ಜಿಮ್‌ ವರ್ಕೌಟ್ ಅಪ್ಪುಗೆ ಮುಳುವಾಯಿತಾ?

ಸಾರಾಂಶ

ಪುನೀತ್ ಸಾವಿನ ಹಿನ್ನೆಲೆಯಲ್ಲಿ, ಯುವಕರು ಎಷ್ಟು ಜಿಮ್ ವರ್ಕ್ಔಟ್ ಮಾಡಿದರೆ ಒಳ್ಳೆಯದು, ಎಷ್ಟು ಮಿತಿ ಮೀರಿದರೆ ಹಾನಿ ಎಂಬ ಬಗ್ಗೆ ಚರ್ಚೆಯಾಗುತ್ತಿದೆ.  

ಪುನೀತ್ (Puneeth) ರಾಜ್ ಕುಮಾರ್ ಅವರಿಗೆ ಆದುದು, ತಜ್ಞರು ಹೇಳುವ ಪ್ರಕಾರ. ಮ್ಯಾಸಿವ್ ಆಂಟಿರಿಯರ್ ವಾಲ್ ಹಾರ್ಟ್ ಅಟ್ಯಾಕ್.(Massive Anterior wall heart attack). ಮ್ಯಾಸಿವ್ ಆಂಟಿರಿಯರ್ ವಾಲ್ ಎಂದರೆ ಹೃದಯದ ಮೇಲ್ಭಾಗದಲ್ಲಿರುವ ಶೇ.60ರಷ್ಟು ಸ್ನಾಯುಗಳನ್ನು ಹೊಂದಿರುವ ಗೋಡೆ. ಈ ಗೋಡೆಗೆ ರಕ್ತ ಪೂರೈಕೆಯಲ್ಲಿ ವ್ಯತ್ಯಯ ಆದರೆ ಹೀಗಾಗುತ್ತದೆ. ಇದು ಹೇಗಾಗುತ್ತದೆ? ಒಮ್ಮೆಲೇ, ದೇಹಕ್ಕೆ ಅಭ್ಯಾಸವಿಲ್ಲದ ಅತಿಯಾದ ವ್ಯಾಯಾಮ (Gym) ಚಟುವಟಿಕೆ ಇದಕ್ಕೆ ಕಾರಣವಾಗಬಹುದು. ಇದರಿಂದ ರಕ್ತದ ಪೂರೈಕೆ ಕುಸಿದು ಹಾರ್ಟ್ ಅಟ್ಯಾಕ್ ಆಗುತ್ತದೆ. ಮೂರು ತಾಸು ಮೊದಲೇ ಇದು ಮುನ್ಸೂಚನೆ ಕೊಡುತ್ತದೆ. ಕೂಡಲೇ ಸುಸಜ್ಜಿತ ಆಸ್ಪತ್ರೆಗೆ ಧಾವಿಸಿದರೆ ಪ್ರಾಣ ಉಳಿಯಬಹುದು. ಹೃದಯದ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಿದ್ದ ಅಪ್ಪು, ಅತಿಯಾದ ವ್ಯಾಯಾಮ ಮಾಡಿರಲಾರರು ಎನ್ನುವವರೂ ಇದ್ದಾರೆ.

"

 

ಅತಿ ಎಂಬುದು ಯಾವತ್ತೂ ಯಾವ ದೇಹಕ್ಕೂ ಒಳ್ಳೆಯದಲ್ಲ. ಹದ ಎಂಬುದೇ ಸುವರ್ಣ ಮಂತ್ರ. ಒಬ್ಬ ಆರೋಗ್ಯವಂತ ವ್ಯಕ್ತಿ ಆರಾಮಾಗಿ ಮಾಡರೇಟ್ ವರ್ಕ್ ಔಟ್ ಗಳನ್ನು ಮಾಡಬಹುದು. ಮಾಡರೇಟ್ ಅಂದರೆ ವಾರಕ್ಕೆ 150ರಿಂದ 300 ನಿಮಿಷಗಳ, ಒಂದು ಘಂಟೆಯಲ್ಲಿ ನಾವು ಸುಮ್ಮನೆ ಕರಗಿಸುವ 4-6 ಪಟ್ಟು ಹೆಚ್ಚು ಕ್ಯಾಲೋರಿಯನ್ನು(calorie)  ವ್ಯಾಯಾಮದ ಮೂಲಕ ಕರಗಿಸುವುದು. ಈ ಸಮಯದಲ್ಲಿ ನಮ್ಮ ಹೃದಯ ಬಡಿತ ನಮ್ಮ ವಯಸ್ಸಿನಾನುಸಾರ ಇರಬಹುದಾದ ಅತಿಹೆಚ್ಚು ಹೃದಯಬಡಿತದ 64%ದಿಂದ 76%ದ ಮಧ್ಯದಲ್ಲಿರುತ್ತದೆ. ಹೆಚ್ಚಿನ ಜಿಮ್ ಮಾಡುವಾಗ ಇದು 77%ದಿಂದ 93% ದಷ್ಟು ಹೋಗುತ್ತದೆ. ಉದಾಹರಣೆಗೆ 45 ವರ್ಷದ ಒಬ್ಬ ವ್ಯಕ್ತಿಯ ಮಾಡರೇಟ್ ವರ್ಕ್ ಔಟ್ ನ ಹೃದಯಬಡಿತ ಅತಿಹೆಚ್ಚು ಅಂದರೆ 133 ಬಿಪಿಎಂ ಆಗಿದ್ದರೆ ಅದೇ ವಯಸ್ಸಿನ ವ್ಯಕ್ತಿಯ ಹೈ ಇಂಟೆನ್ಸಿಟಿ ವರ್ಕ್ ಔಟ್ ಸಂದರ್ಭದಲ್ಲಿ ಹೃದಯಬಡಿತ ಅತಿಹೆಚ್ಚು ಅಂದರೆ 162 ಬಿಪಿಎಂ ತನಕ ಹೋಗುವುದು ಸೇಫ್ ಅನ್ನಬಹುದು. ಇದರಿಂದ ಮೇಲೆ ಹೋಗುವುದು ಸ್ವಲ್ಪ ರಿಸ್ಕಿ. ಆದರೆ 180ಕ್ಕಿಂತ ಮೇಲೆ ಹೋಗುವುದು ಅಪಾಯವೆನ್ನಬಹುದು. ಅಂದರೆ ಒಬ್ಬ ವ್ಯಕ್ತಿ ತನ್ನ ಸಾಮರ್ಥ್ಯಾನುಸಾರ ದಿನಕ್ಕೆ 1 ಗಂಟೆಯ ಲೆಕ್ಕದಲ್ಲಿ ವಾರಕ್ಕೆ ಕನಿಷ್ಟ 5 ದಿನ ಮಾಡರೇಟ್ (moderate) ವರ್ಕೌಟ್ ಮಾಡಬಹುದು. ಇದು ಸೇಫ್ ಮತ್ತು ಇದರಿಂದ ಅನೇಕ ತೂಕದ ಸಂಬಂಧಿ ಕಾಯಿಲೆಗಳನ್ನು ದೂರವಿಡಬಹುದು ಹಾಗೂ ಇಮ್ಯುನಿಟಿ ಹೆಚ್ಚಿಸಿಕೊಂಡು ಆರೋಗ್ಯಕರವಾಗಿ ಬದುಕಬಹುದು.
 

ಇನ್ನು ಹೈ ಇಂಟೆನ್ಸಿಟಿ ವರ್ಕೌಟ್್ಗಳನ್ನು ವಾರದಲ್ಲಿ ಹೆಚ್ಚೆಂದರೆ 40-50 ನಿಮಿಷಗಳ ತನಕ ಮಾಡಬಹುದು. ಅದೂ ಸರಿಯಾದ ರೆಸ್ಟಿಂಗ್‌ನೊಂದಿಗೆ. ಅಂದರೆ 15 ನಿಮಿಷ ನಂತರ 15 ನಿಮಿಷ ರೆಸ್ಟ್ ಇರಬೇಕಾಗುತ್ತದೆ. ಮತ್ತದು ದಿನಾ ಮಾಡುವ ಕೆಲಸವಲ್ಲ. ಹಾಗೊಂದುವೇಳೆ ದಿನವೂ ಮಾಡಿದರೆ ಖಂಡಿತವಾಗಲೂ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮಾಡರೇಟ್ ವ್ಯಾಯಾಮದಲ್ಲಿ ಬ್ರಿಸ್ಕ್ ವಾಕ್(Brisk walk), ಮೀಡಿಯಂ ಸೈಕ್ಲಿಂಗ್(cycling), ಸ್ಲೋ ರನ್ನಿಂಗ್, ಏರೋಬಿಕ್ಸ್(Aerobics), ಬ್ಯಾಡ್ಮಿಂಟನ್, ಟೆನ್ನಿಸ್, ಸ್ವಿಮ್ಮಿಂಗ್‌ ಮುಂತಾದವುಗಳು ಬರುತ್ತವೆ. ಫಾಸ್ಟ್ ರನ್ನಿಂಗ್, ಫಾಸ್ಟ್ ಸೈಕ್ಲಿಂಗ್, ಒಂದಿಷ್ಟು ದೇಹ ತೂಕದೊಂದಿಗೆ ಬ್ಯಾಲೆನ್ಸಿಂಗ್ ವರ್ಕ್ ಔಟ್ ಗಳು, ಬಹಳ ವೇಗವಾಗಿ ಮಾಡುವಂತದ್ದೆಲ್ಲ ಹೈ ಇಂಟೆನ್ಸಿಟಿ ವ್ಯಾಯಾಮ.

ವಿದೇಶಗಳಿಂದ ಅತ್ಯಾಧುನಿಕ ಕ್ಯಾಮರಾ ತರಿಸಿದ್ದ ಪುನೀತ್ ರಾಜ್‌ಕುಮಾರ್

ಇನ್ನು ವೇಟ್ ಟ್ರೈನಿಂಗ್ ಮತ್ತು ಸ್ಟ್ರೆಂತನಿಂಗ್. ಇದು ಮಸಲ್ ಹಚ್ಚಿಸಿ, ದೇಹದಲ್ಲಿನ ಕೊಬ್ಬನ್ನು ಕರಗಿಸುವುದರ ಮೂಲಕ ದೇಹದ ವಯಸ್ಸನ್ನು ಹಿಡಿತದಲ್ಲಿರಿಸಲು ಸಹಾಯ ಮಾಡುತ್ತೆ. ಡಂಬೆಲ್ಸ್, ಕೆಟಲ್ ಬೆಲ್ ಗಳು, ಬ್ಯಾಂಡ್ ಗಳು ಹೀಗೆ ಮುಂತಾದ ಸಾಧನಗಳನ್ನು ಬಳಸಿ ಮಾಡುವಂತದ್ದು. ಇದಕ್ಕೆ ನುರಿತ ಟ್ರೈನರ್ ಗಳ ಅವಶ್ಯಕತೆ ಇರುತ್ತೆ. ಸ್ವಲ್ಪ ಹೆಚ್ಚು ಕಡಿಮೆಯಾಗುವ ಸಣ್ಣ ತಪ್ಪುಗಳು ಜೀವನ ಪರ್ಯಂತ ಅನುಭವಿಸುವ ಗಾಯ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಇದರಲ್ಲೂ ಹೃದಯ ಬಡಿತ ಮೇಲೆ ಹೇಳಿರುವದಕ್ಕಿಂತ ಜಾಸ್ತಿ ಹೋಗಕೂಡದು.

ಇವೆಲ್ಲಕ್ಕೂ ಬಹಳ ಮುಖ್ಯವಾಗಿ ಬೇಕಿರುವುದು ಪ್ರೊಟೀನ್, ವಿಟಮಿನ್, ಮಿನರಲ್ ಯುಕ್ತ ಸಮತೋಲಿತ ಆಹಾರ ಮತ್ತು ಅತಿಮುಖ್ಯವಾದ ವಿರಾಮ, ನಿದ್ದೆ ಮತ್ತು ಜೀವಜಲ. ಹೌದು, ಇಷ್ಟೆಲ್ಲ ಮಾಡುವಾಗ ನಿದ್ದೆಯ ಪ್ರಮಾಣ ಕಡಿಮೆಯಾದರೆ ದೇಹದ ಮೇಲೆ ಒತ್ತಡ ಬೀಳುತ್ತೆ. ಪ್ರತೀ ಬಾರಿ ಇಂತಹ ವರ್ಕ್ ಔಟ್ ಗಳ ನಂತರ ಬೇರೇನೂ ದೇಹ ದಂಡನೆಯ ಕೆಲಸ ಮಾಡದ ಸಾಕಷ್ಟು ವಿರಾಮ ಕೊಡದೇ ಹೋದರೆ ಒತ್ತಡ ಬೀಳುತ್ತದೆ. ನಮ್ಮ ದೇಹಕ್ಕೆ ಒಂದು ಹಂತದವರೆಗೆ ಒತ್ತಡ ತಡೆದುಕೊಳ್ಳುವ ಶಕ್ತಿಯಿದೆಯಾದರೂ ಅದು ಅತಿಯಾದಾಗ ದೇಹ ಕುಸಿದು ಬೀಳುತ್ತದೆ. ಇನ್ನು ಅಗತ್ಯ ಪ್ರಮಾಣದ ನೀರು ನಿಯಮಿತವಾಗಿ ದೇಹ ಸೇರದೇ ಹೋದರೆ ಆಗಲೂ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇನ್ನು ಅನಗತ್ಯವಾಗಿ ಸ್ಟಿರಾಯ್ಡ್, ಪ್ರೊಟೀನ್ ಪುಡಿಗಳು, ಸಪ್ಲಿಮೆಂಟ್ಸ್ ಎಲ್ಲ ಸೇವಿಸುವ ಅಗತ್ಯವೇ ಇಲ್ಲ.

ಚಾಮರಾಜನಗರ : ಕೆಸ್ತೂರು ಗ್ರಾಮದಲ್ಲಿ ಬಾಲ್ಯ ಕಳೆದಿದ್ದ ಅಪ್ಪು

ಇನ್ನು ಹೃದಯ ಸಮಸ್ಯೆಗಳಿಗೆ ಬಹಳ ಕಾರಣಗಳು ಇದ್ದರೂ, ಒಬ್ಬ ಪ್ರತಿನಿತ್ಯ ವ್ಯಾಯಾಮ ಮಾಡುವ ವ್ಯಕ್ತಿಗೆ ಸ್ಟ್ರೆಸ್ ನಿಂದ, ಸರಿಯಾದ ರಿಕವರಿ ಟೈಮ್ ಕೊಡದ ಪ್ರತಿದಿನದ ವರ್ಕ್ ಔಟ್ ನಿಂದ, ಬೇಕಾದಷ್ಟು ನಿದ್ದೆ ಇಲ್ಲದೇ ಇರುವುದರಿಂದ, ಆಹಾರದಲ್ಲಿ ದೀರ್ಘಕಾಲದ ವ್ಯತ್ಯಾಸದಿಂದ, ಲೋ ಫ್ಯಾಟ್ ಡಯಟ್ ನಿಂದ ಸರಿಯಾದ ಮೆಟಬಾಲಿಸಮ್ ಗೆ ಬೇಕಾದ ಅಂಶಗಳು ಸಿಗದೇ ಹೋಗುವುದರಿಂದ, ಅಥವಾ ಗೊತ್ತಿಲ್ಲದ ವಿಸರಲ್ ಫ್ಯಾಟ್ ಇರುವುದರಿಂದ, ಇನ್ನು ವಂಶಪಾರಂಪರಿಕವಾದ ಹೃದಯ ಸಂಬಂಧೀ ಸಮಸ್ಯೆಗಳಿಂದಲೂ ಉಂಟಾಗಬಹುದು.

ಉಡಾಳ ಹುಡುಗನ ಬದುಕು ಬದಲಿಸಿದ ಪುನೀತ ‘ರಾಜಕುಮಾರ'

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾತ್ರಿ ವೇಳೆ ಅಪ್ಪಿತಪ್ಪಿಯೂ ತಿನ್ನಬಾರದ ಹಣ್ಣುಗಳು ಇವು: ತಜ್ಞರು ಹೇಳೋದೇನು?
ಸೀನು ಯಾಕೆ ಬರುತ್ತೆ ಗೊತ್ತಾ? ಇಲ್ಲಿದೆ ಅದರ ಹಿಂದಿರುವ ಕುರಿತ ಅಚ್ಚರಿಯ ಸಂಗತಿಗಳು!