Bedwetting: ಮಕ್ಕಳು ಹಾಸಿಗೆ ಒದ್ದೆ ಮಾಡ್ತಾರಾ? ಕಾರಣ ಏನು, ಪರಿಹಾರ ಹೇಗೆ? ಇಲ್ಲಿದೆ ಮಾಹಿತಿ

Published : Mar 26, 2026, 11:34 AM IST
Why Do Children Wet The Bed A Guide To Causes And Solutions

ಸಾರಾಂಶ

ಮಕ್ಕಳು ಮಾತ್ರವಲ್ಲ, ಕೆಲವೊಮ್ಮೆ ಹದಿಹರೆಯದವರೂ ನಿದ್ದೆಯಲ್ಲಿ ಹಾಸಿಗೆ ಒದ್ದೆ ಮಾಡುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಇದಕ್ಕೆ ನಿಖರವಾದ ಕಾರಣ ಏನು ಅಂತ ಗೊತ್ತಿರಲ್ಲ. ಇದು ಮಕ್ಕಳಲ್ಲಿ ಮುಜುಗರ ಮತ್ತು ಆತ್ಮವಿಶ್ವಾಸದ ಕೊರತೆಗೆ ಕಾರಣವಾಗಬಹುದು.

ಮಕ್ಕಳು ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳುವುದು ಒಂದು ಸಾಮಾನ್ಯ ಸಮಸ್ಯೆ. ಇದೇನೂ ಕಾಯಿಲೆಯಲ್ಲ. ಸಾಮಾನ್ಯವಾಗಿ, ಮಕ್ಕಳು ಬೆಳೆದಂತೆ ಈ ಅಭ್ಯಾಸ ತಾನಾಗಿಯೇ ನಿಂತುಹೋಗುತ್ತದೆ. ಮೂತ್ರಕೋಶದ (Bladder) ಬೆಳವಣಿಗೆಯಲ್ಲಿ ವಿಳಂಬ, ಗಾಢ ನಿದ್ದೆ, ಹಾರ್ಮೋನ್ ಬದಲಾವಣೆ, ಮಾನಸಿಕ ಒತ್ತಡ ಅಥವಾ ಮಲಬದ್ಧತೆ ಕೂಡ ಇದಕ್ಕೆ ಕಾರಣವಾಗಿರಬಹುದು.

ಮಕ್ಕಳಲ್ಲಿ ಮಾತ್ರವಲ್ಲ, ಕೆಲವೊಮ್ಮೆ ಹದಿಹರೆಯದವರಲ್ಲೂ ನಿದ್ದೆಯಲ್ಲಿ ತಿಳಿಯದಂತೆ ಹಾಸಿಗೆ ಒದ್ದೆ ಮಾಡುವ ಅಭ್ಯಾಸ ಇರುತ್ತದೆ. ಹೆಚ್ಚಿನವರಿಗೆ ಇದರ ನಿಜವಾದ ಕಾರಣ ಗೊತ್ತಿರುವುದಿಲ್ಲ. ಆದರೆ, ಹೀಗೆ ಅಚಾನಕ್ಕಾಗಿ ಆಗುವ ಈ ಘಟನೆಯಿಂದ ಮಕ್ಕಳಲ್ಲಿ ಮುಜುಗರ, ನಾಚಿಕೆ ಮತ್ತು ಆತ್ಮವಿಶ್ವಾಸದ ಕೊರತೆ ಉಂಟಾಗುತ್ತದೆ.

ಆರು ವರ್ಷ ಮೇಲ್ಪಟ್ಟ ಮಗು ವಾರದಲ್ಲಿ ಎರಡು ಬಾರಿಗಿಂತ ಹೆಚ್ಚು ನಿದ್ದೆಯಲ್ಲಿ ಮೂತ್ರ ಮಾಡಿಕೊಳ್ಳುತ್ತಿದ್ದರೆ, ವೈದ್ಯರು ಇದನ್ನು 'nocturnal enuresis' ಎಂದು ಕರೆಯುತ್ತಾರೆ. ಮಕ್ಕಳು ಸೋಮಾರಿತನದಿಂದ ಅಥವಾ ಟಾಯ್ಲೆಟ್‌ಗೆ ಹೋಗಲು ಭಯದಿಂದ ಹಾಸಿಗೆಯಲ್ಲೇ ಮೂತ್ರ ಮಾಡುತ್ತಾರೆ ಅಂತ ಪೋಷಕರು ಬೈಯ್ಯುವುದು ಸಾಮಾನ್ಯ. ಆದರೆ, ಇದು ಯಾವುದೇ ನಿರ್ದಿಷ್ಟ ಕಾರಣಕ್ಕಿಂತ ಹೆಚ್ಚಾಗಿ, ಕೆಲವು ವಿಶೇಷ ಸಂದರ್ಭಗಳಿಂದ ಆಗುತ್ತದೆ. ಕೆಲವೊಮ್ಮೆ ನೋವು ಅಥವಾ ಬೇರೆ ಯಾವುದಾದರೂ ಆಂತರಿಕ ಸಮಸ್ಯೆ ಕೂಡ ಇದಕ್ಕೆ ಕಾರಣವಾಗಿರಬಹುದು.

ಹಾಸಿಗೆ ಒದ್ದೆ ಮಾಡುವ ಮಕ್ಕಳಲ್ಲಿ ಪ್ರಮುಖವಾಗಿ ಎರಡು ವಿಧ. ಮೊದಲನೆಯದು, ಮೂತ್ರಕೋಶದ ಮೇಲೆ ನಿಯಂತ್ರಣವೇ ಇಲ್ಲದ ಮಕ್ಕಳು. ಎರಡನೆಯದು, ಮೂತ್ರಕೋಶವನ್ನು ನಿಯಂತ್ರಿಸುವ ಸಾಮರ್ಥ್ಯವಿದ್ದರೂ, ಆ ಕ್ಷಣದಲ್ಲಿ ನಿಯಂತ್ರಣ ಕಳೆದುಕೊಳ್ಳುವ ಮಕ್ಕಳು.

ರಾತ್ರಿ ವೇಳೆ ಹಾಸಿಗೆ ಒದ್ದೆ ಮಾಡುವುದನ್ನು ನಿಲ್ಲಿಸುವುದು ಹೇಗೆ?

ರಾತ್ರಿ ಮಲಗುವ ಮುನ್ನ ಮಕ್ಕಳನ್ನು ಖಂಡಿತವಾಗಿಯೂ ಟಾಯ್ಲೆಟ್‌ಗೆ ಕರೆದುಕೊಂಡು ಹೋಗಿ ಮೂತ್ರ ಮಾಡಿಸಿ.

ರಾತ್ರಿ ಹೊತ್ತು ಮಕ್ಕಳಿಗೆ ಕುಡಿಯಲು ಕಡಿಮೆ ನೀರು ಕೊಡಿ.

ಹತ್ತು ವರ್ಷವಾದ ಮೇಲೂ ಈ ಅಭ್ಯಾಸ ಮುಂದುವರಿದರೆ, ವೈದ್ಯರನ್ನು ಸಂಪರ್ಕಿಸಿ. ಮೂತ್ರನಾಳದಲ್ಲಿ ಸೋಂಕು ಅಥವಾ ಮಧುಮೇಹದಂತಹ ಸಮಸ್ಯೆಗಳಿವೆಯೇ ಎಂದು ಪರೀಕ್ಷೆ ಮಾಡಿಸುವುದು ಉತ್ತಮ.

ಮೂತ್ರ ಬಂದಾಗ ತಕ್ಷಣ ಹೋಗದೆ, ಸ್ವಲ್ಪ ಹೊತ್ತು ಹಿಡಿದಿಟ್ಟುಕೊಂಡು ನಂತರ ವಿಸರ್ಜಿಸಲು ಮಗುವಿಗೆ ಹೇಳಿಕೊಡಿ. ಇದು ನಿಯಂತ್ರಣ ಸಾಧಿಸಲು ಸಹಾಯ ಮಾಡುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

10ನೇ ಕ್ಲಾಸ್ ಕೂಡ ಓದಿಲ್ಲ, ಆದ್ರೂ ದಂತವೈದ್ಯ: 20 ವರ್ಷಗಳಿಂದ ಕ್ಲಿನಿಕ್ ನಡೆಸುತ್ತಿದ್ದ ನಕಲಿ ಡೆಂಟಿಸ್ಟ್ ಅರೆಸ್ಟ್
ಭಾರತಕ್ಕೂ ಬಂತಾ ಝೋಂಬಿ ಡ್ರಗ್: ನಿಂತಲ್ಲೇ ಗಂಟೆಗಳ ಕಾಲ ತೂಕಾಡಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್