ವೈದ್ಯರ ಹೆಸರು ನೋಂದಣಿ ದತ್ತಾಂಶವನ್ನು ರಾಷ್ಟ್ರೀಯ ವೈದ್ಯಕೀಯ ರಿಜಿಸ್ಟರ್‌ನಲ್ಲಿ ಶೇಖರಿಸಿಡಲಾಗುತ್ತದೆ. ಜತೆಗೆ ಅದನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ ಮತ್ತು ಎನ್‌ಎಂಸಿ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ.
ನವದೆಹಲಿ (ಮೇ 16, 2023): ನಕಲಿ ವೈದ್ಯರ ಹಾವಳಿ ತಡೆಯುವ ಸಲುವಾಗಿ ಇನ್ನು ಮುಂದೆ ಎಲ್ಲಾ ವೈದ್ಯರು, ರಾಜ್ಯ ವೈದ್ಯಕೀಯ ಮಂಡಳಿಗಳ ಜತೆಗೆ ರಾಷ್ಟ್ರೀಯ ವೈದ್ಯಕೀಯ ಆಯೋಗದಲ್ಲಿ (ಎನ್‌ಎಂಸಿ) ಕೂಡ ಹೆಸರು ನೋಂದಾಯಿಸಿಕೊಳ್ಳುವುದನ್ನು ಕೇಂದ್ರ ಸರ್ಕಾರ ಕಡ್ಡಾಯ ಮಾಡಿದೆ. ಜೊತೆಗೆ ದೇಶದಲ್ಲಿ ವೈದ್ಯಕೀಯ ವೃತ್ತಿ ಕೈಗೊಳ್ಳಲು ವಿಶಿಷ್ಟ ಗುರುತಿನ ಸಂಖ್ಯೆಯನ್ನು (ಯುಐಡಿ) ಪಡೆಯಬೇಕು ಎಂದು ಸೂಚಿಸಿದೆ.
ವೈದ್ಯರ ಹೆಸರು ನೋಂದಣಿ ದತ್ತಾಂಶವನ್ನು ರಾಷ್ಟ್ರೀಯ ವೈದ್ಯಕೀಯ ರಿಜಿಸ್ಟರ್‌ನಲ್ಲಿ ಶೇಖರಿಸಿಡಲಾಗುತ್ತದೆ. ಜತೆಗೆ ಅದನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ ಮತ್ತು ಎನ್‌ಎಂಸಿ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ.
undefined
ಇದನ್ನು ಓದಿ: ರೋಗಿಗಳಿಗೆ ಜೆನೆರಿಕ್ ಔಷಧ ಶಿಫಾರಸು ಮಾಡಿ, ಇಲ್ಲದಿದ್ರೆ ಕ್ರಮ ಎದುರಿಸಿ: ಕೇಂದ್ರ ಸರ್ಕಾರ ಎಚ್ಚರಿಕೆ
ನೋಂದಣಿ ಸಂಖ್ಯೆ, ಹೆಸರು, ನೋಂದಣಿ ದಿನಾಂಕ, ಕೆಲಸದ ಸ್ಥಳ (ಆಸ್ಪತ್ರೆ/ಸಂಸ್ಥೆಯ ಹೆಸರು), ವೈದ್ಯಕೀಯ ಅರ್ಹತೆ, ಹೆಚ್ಚುವರಿ ವೈದ್ಯಕೀಯ ಅರ್ಹತೆ, ವಿಶೇಷತೆ ಮತ್ತು ವಿದ್ಯಾಭ್ಯಾಸ ಮಾಡಿರುವ ಸಂಸ್ಥೆ ಅಥವಾ ವಿಶ್ವವಿದ್ಯಾಲಯದ ಹೆಸರು ಸೇರಿದಂತೆ ವೈದ್ಯರಿಗೆ ಸಂಬಂಧಿಸಿದ ಮಾಹಿತಿಯನ್ನು ವೆಬ್‌ಸೈಟ್ ಪ್ರದರ್ಶಿಸುತ್ತದೆ.
ಯಾರು ಅರ್ಹರು?:
ರಾಷ್ಟ್ರೀಯ ವೈದ್ಯಕೀಯ ಆಯೋಗದ ಕಾಯ್ದೆ, 2019 ರ ಅಡಿಯಲ್ಲಿ ಪ್ರಾಥಮಿಕ ವೈದ್ಯಕೀಯ ಅರ್ಹತೆಯನ್ನು ಪಡೆದ ಮತ್ತು ಕಾಯಿದೆಯ ಸೆಕ್ಷನ್ 15 ರ ಅಡಿಯಲ್ಲಿ ನಡೆದ ರಾಷ್ಟ್ರೀಯ ಎಕ್ಸಿಟ್ ಟೆಸ್ಟ್‌ನಲ್ಲಿ ಅರ್ಹತೆ ಪಡೆದ ಯಾವುದೇ ವ್ಯಕ್ತಿ ಎನ್‌ಎಂಆರ್‌ನಲ್ಲಿ ನೋಂದಣಿಗೆ ಅರ್ಹರಾಗಿರುತ್ತಾರೆ. ವಿದೇಶಿ ವೈದ್ಯಕೀಯ ಶಿಕ್ಷಣ ಪಡೆದವರು ಮತ್ತು ಕಾಯಿದೆಯ ಸೆಕ್ಷನ್ 15ರ ಅಡಿಯಲ್ಲಿ ನಡೆಯುವ ರಾಷ್ಟ್ರೀಯ ಎಕ್ಸಿಟ್ ಟೆಸ್ಟ್‌ನಲ್ಲಿ ಅರ್ಹತೆ ಪಡೆದವರು ಕೂಡ ಎನ್‌ಎಂಆರ್‌ನಲ್ಲಿ ನೋಂದಣಿಗೆ ಅರ್ಹರಾಗಿರುತ್ತಾರೆ ಎಂದು ಅದು ಹೇಳಿದೆ.
ಇದನ್ನೂ ಓದಿ: 23 ವರ್ಷವಾದ್ರೂ ಯೋನಿ ಬೆಳವಣಿಗೆಯಾಗದ ಯುವತಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ ಬೆಂಗಳೂರಿನ ವೈದ್ಯರು
ಯುಐಡಿಯನ್ನು ಎಥಿಕ್ಸ್ ಮತ್ತು ಮೆಡಿಕಲ್ ರಿಜಿಸ್ಪ್ರೇಶನ್ ಬೋರ್ಡ್ (ಇಎಮ್‌ಆರ್‌ಬಿ), ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಕೇಂದ್ರೀಯವಾಗಿ ಸಿದ್ಧಪಡಿಸುತ್ತದೆ ಮತ್ತು ಭಾರತದಲ್ಲಿ ವೈದ್ಯಕೀಯ ವೃತ್ತಿ ಕೈಗೊಳ್ಳಲು ಅರ್ಹತೆಯನ್ನು ನೀಡುತ್ತದೆ.
ನೋಂದಣಿ ಹೇಗೆ?:
ಭಾರತೀಯ ವೈದ್ಯಕೀಯ ರಿಜಿಸ್ಟರ್ ಅಥವಾ ರಾಜ್ಯ ವೈದ್ಯಕೀಯ ರಿಜಿಸ್ಟರ್‌ನಲ್ಲಿ ಹೆಸರು ದಾಖಲು ಮಾಡಿಕೊಂಡಿರುವ ವೈದ್ಯರು, ನೋಂದಣಿ ಸಂಖ್ಯೆಯನ್ನು ಹೊಂದಿಲ್ಲದಿದ್ದರೆ, ಇನ್ನು ಮೂರು ತಿಂಗಳ ಅವಧಿಯಲ್ಲಿ ‘ನೈತಿಕ ಮತ್ತು ವೈದ್ಯಕೀಯ ನೋಂದಣಿ ಮಂಡಳಿ’ಯ ವೆಬ್ ಪೋರ್ಟಲ್‌ನಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು. ಆಗ ನೀಡುವ ಲೈಸೆನ್ಸ್ ವಿತರಿಸಿದ ದಿನಾಂಕದಿಂದ 5 ವರ್ಷಗಳ ಅವಧಿಗೆ ಮಾನ್ಯವಾಗಿರುತ್ತದೆ.
ಇದನ್ನೂ ಓದಿ: ಭಾರತೀಯ ವೈದ್ಯರು ಯಾಕೆ ಜನೌಷಧಿ ಯೋಜನೆಯನ್ನು ಒಪ್ಪಿಕೊಳ್ಳುತ್ತಿಲ್ಲ? ಬ್ರ್ಯಾಂಡ್ ಔಷಧಗಳನ್ನೇ ಬರೆಯೋದೇಕೆ!
ಆದರೆ ಹೆಸರು ನೋಂದಾಯಿಸಿಕೊಂಡು ಪರವಾನಗಿ ನವೀಕರಿಸಲು ಯಾವುದೇ ಶುಲ್ಕವಿಲ್ಲ. ಅರ್ಹ ವ್ಯಕ್ತಿಗಳು ವೈದ್ಯ ವೃತ್ತಿ ಕೈಗೊಳ್ಳಲು ಯಾವುದೇ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳಹುದು. ವೆಬ್ ಪೋರ್ಟಲ್ ಮೂಲಕ ಸಲ್ಲಿಸಿದ ಅರ್ಜಿಯನ್ನು ಸಂಬಂಧಿಸಿದ ರಾಜ್ಯ ಅಥವಾ ರಾಜ್ಯಗಳ ವೈದ್ಯಕೀಯ ಮಂಡಳಿಗೆ ಹಸ್ತಾಂತರಿಸಲಾಗುತ್ತದೆ. ಬಳಿಕ ರಾಜ್ಯ ವೈದ್ಯಕೀಯ ಮಂಡಳಿಯು 30 ದಿನಗಳ ಅವಧಿಯೊಳಗೆ ಆ ರಾಜ್ಯದಲ್ಲಿ ವೈದ್ಯಕೀಯ ವೃತ್ತಿ ಕೈಗೊಳ್ಳುವ ಕುರಿತ ಅರ್ಜಿ ಪರಿಗಣಿಸುತ್ತದೆ ಹಾಗೂ ಶುಲ್ಕ ವಿಧಿಸುತ್ತದೆ.
ಪರವಾನಗಿಯ ಪ್ರಮಾಣಪತ್ರವು ನೋಂದಣಿ ಸಂಖ್ಯೆಯನ್ನು ಒಳಗೊಂಡಿರಬೇಕು. ವಿಶಿಷ್ಟ ಗುರುತು ಸಂಖ್ಯೆಯನ್ನು (ಯುಐಡಿಯನ್ನು) ಸಂಬಂಧಿತ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಕೋಡ್‌ನೊಂದಿಗೆ ರಚಿಸಲಾಗುತ್ತದೆ. ರಾಜ್ಯ ವೈದ್ಯಕೀಯ ಮಂಡಳಿಯ ಅರ್ಜಿಯನ್ನು ಅಂಗೀಕರಿಸಿದ ನಂತರ, ಅದು ರಾಷ್ಟ್ರೀಯ ವೈದ್ಯಕೀಯ ನೋಂದಣಿ ಮತ್ತು ರಾಜ್ಯ ವೈದ್ಯಕೀಯ ನೋಂದಣಿಯಲ್ಲಿ ಪ್ರತಿಫಲಿಸುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಯುಕೆಯಲ್ಲಿ ಅಚ್ಚರಿ: ಇಬ್ಬರಲ್ಲ, ಮೂರು ಜನರ ಡಿಎನ್‌ಎ ಹೊಂದಿದ ಮಗು ಜನನ