ವೈದ್ಯರು ಕೆಲವೊಮ್ಮೆ ಮಹಾ ಎಡವಟ್ಟನ್ನೇ ಮಾಡಿಬಿಡ್ತಾರೆ. ಇದರಿಂದ ಕೆಲವೊಮ್ಮೆ ರೋಗಿಯ ಜೀವಕ್ಕೂ ಸಂಚಕಾರ ಬರೋದಿದೆ. ಹಾಗೆಯೇ ಇಲ್ಲೊಂದು ಆಸ್ಪತ್ರೆಯಲ್ಲಿ ವೈದ್ಯರ ತಂಡ ನಾಲಿಗೆ ಸರ್ಜರಿಗೆ ತೆರಳಿದ್ದ ಬಾಲಕನಿಗೆ ಸುನ್ನತ್ ಮಾಡಿದೆ.
ಬರೇಲಿ: ವೈದ್ಯೋ ನಾರಾಯಣೋ ಹರಿ ಅನ್ನೋ ಮಾತೇ ಇದೆ. ಯಾಕೆಂದರೆ ವೈದ್ಯರು ರೋಗಿಗಳ ಜೀವವನ್ನು ಉಳಿಸುತ್ತಾರೆ. ಸಮಸ್ಯೆಯನ್ನು ಬಗೆಹರಿಸಿ ಆರೋಗ್ಯವಂತರನ್ನಾಗಿ ಮಾಡುತ್ತಾರೆ. ಆದರೆ ವೈದ್ಯರ ಕೈಯಿಂದಲೂ ಕೆಲವೊಮ್ಮೆ ಸಣ್ಣ ಪುಟ್ಟ ತಪ್ಪುಗಳಾಗುತ್ತವೆ. ಆದರೆ ಇಲ್ಲಾಗಿರುವುದು ಸಣ್ಣಪುಟ್ಟ ತಪ್ಪಲ್ಲ, ದೊಡ್ಡ ಎಡವಟ್ಟು. ವೈದ್ಯರು ಮಾಡಿರೋ ಎಡವಟ್ಟಿಗೆ ಕುಟುಂಬ ಸದಸ್ಯರು ಕಂಗಾಲಾಗಿದ್ದಾರೆ.
ನಾಲಿಗೆಯ ಶಸ್ತ್ರಚಿಕಿತ್ಸೆಗೆಂದು (Tongue operation) ಆಸ್ಪತ್ರೆಗೆ ದಾಖಲಾಗಿದ್ದ ಎರಡೂವರೆ ವರ್ಷದ ಬಾಲಕನಿಗೆ ಸುನ್ನತ್ ಮಾಡಿದ ಉತ್ತರಪ್ರದೇಶ ಆಸ್ಪತ್ರೆಯ ಲೈಸೆನ್ಸ್ ಅನ್ನು ಸರ್ಕಾರ ಅಮಾನತುಗೊಳಿಸಿದೆ (License cancel). ಬರೇಲಿಯ ಎಂ.ಖಾನ್ ಆಸ್ಪತ್ರೆಯ ವಿರುದ್ಧ ಕೇಳಿಬಂದ ಆರೋಪ ಕುರಿತು ತನಿಖೆ ನಡೆಸಿದ ಆರೋಗ್ಯ ಇಲಾಖೆ ಅಧಿಕಾರಿಗಳು, ಮೇಲ್ನೋಟಕ್ಕೆ ಆಸ್ಪತ್ರೆ ತಪ್ಪೆಸಗಿರುವುದು ಗೋಚರಿಸಿದ ಹಿನ್ನೆಲೆಯಲ್ಲಿ ಲೈಸೆನ್ಸ್ ಅಮಾನತುಗೊಳಿಸಿದ್ದಾರೆ. ಇದರಿಂದಾಗಿ ಆಸ್ಪತ್ರೆ ಹೊಸ ರೋಗಿಗಳನ್ನು (Patients) ದಾಖಲು ಮಾಡಿಕೊಂಡು, ಚಿಕಿತ್ಸೆ ನೀಡುವಂತಿಲ್ಲ. ತನಿಖೆಯಲ್ಲಿ ಆರೋಪ ಸಾಬೀತಾದರೆ ಮತ್ತಷ್ಟು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಮುಖ್ಯ ಆರೋಗ್ಯಾಧಿಕಾರಿ ಬಲಬೀರ್ ಸಿಂಗ್ ತಿಳಿಸಿದ್ದಾರೆ.
ವಿಮಾನದಲ್ಲಿ ಮಹಿಳೆಗೆ ಹೃದಯಸ್ತಂಭನ, ಚಿಕಿತ್ಸೆ ನೀಡಿ ರಕ್ಷಿಸಿದ ಎಸ್‌ಎಂ ಕೃಷ್ಣ ಅಳಿಯ!
ಬಾಲಕ ತೊದಲಿಸುತ್ತಿದ್ದ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆಗೆ ಸೂಚಿಸಲಾಗಿತ್ತು. ಅದರಂತೆ ಶುಕ್ರವಾರ ಆಸ್ಪತ್ರೆಗೆ ಕರೆದೊಯ್ದಾಗ ಸರ್ಜರಿ ನಡೆದಿತ್ತು. ವೈದ್ಯರು ನಾಲಿಗೆಯ ಬದಲು ಜನನಾಂಗದ ಮುಂಭಾಗವನ್ನು ಕತ್ತರಿಸಿದ್ದರು. ಶಸ್ತ್ರಚಿಕಿತ್ಸೆಗೆ ಅನುಮತಿ ಪಡೆಯುವ ದಾಖಲೆಗಳು ಇಂಗ್ಲಿಷ್‌ನಲ್ಲಿದ್ದಿದ್ದರಿಂದ ತಮಗೆ ಏನೂ ಗೊತ್ತಾಗಲಿಲ್ಲ ಎಂದು ಪೋಷಕರು ದೂರಿದ್ದರು. ವಿಷಯ ತಿಳಿಯುತ್ತಿದ್ದಂತೆ ಹಿಂದು ಸಂಘಟನೆಗಳು ಜಮಾವಣೆಗೊಂಡು ಆಸ್ಪತ್ರೆ ವಿರುದ್ಧ ಪ್ರತಿಭಟನೆ ನಡೆಸಿದವು. ತಕ್ಷಣವೇ ಪೊಲೀಸ್ ಪಡೆ ನಿಯೋಜಿಸಿದ್ದರಿಂದ ಅದು ಮತ್ತಷ್ಟುಬೆಳೆಯುವುದು ತಪ್ಪಿತು.
ಪೊಲೀಸರಿಗೆ ದೂರು ನೀಡಿರುವ ಪೋಷಕರ ಪ್ರಕಾರ, ಎರಡೂವರೆ ವರ್ಷದ ಮಗು ಮಾತನಾಡುವ ಸಮಸ್ಯೆಯಿಂದ ವ್ಯವಹರಿಸುತ್ತಿತ್ತು ಮತ್ತು ನಾಲಿಗೆ ಟೈಗಾಗಿ ಆಪರೇಷನ್ ಮಾಡಲು ಸಲಹೆ ನೀಡಲಾಯಿತು. ಬಳಿಕ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಏತನ್ಮಧ್ಯೆ, ಮಗುವಿಗೆ ಮೂತ್ರ ಸಂಬಂಧಿ ಸಮಸ್ಯೆ ಇದೆ ಎಂದು ವೈದ್ಯರು ಪೊಲೀಸರಿಗೆ ತಿಳಿಸಿದ್ದಾರೆ, ಅದನ್ನು ಸುನ್ನತಿ ಶಸ್ತ್ರಚಿಕಿತ್ಸೆಯಿಂದ ಸರಿಪಡಿಸಬೇಕು ಆದರೆ ಪೋಷಕರು ಗೊಂದಲಕ್ಕೊಳಗಾದರು. ನವಜಾತ ಗಂಡು ಮಗುವಿನಲ್ಲಿ ಸಂಭವಿಸುವ ಮುಂದೊಗಲನ್ನು ತೆರೆಯುವ ಸಂಕೋಚನವಾದ ಫಿಮೊಸಿಸ್‌ಗೆ ಮಗುವಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಸೇರಿಸಿದ್ದಾರೆ.
ಶವ ಪರೀಕ್ಷೆಗೆ ಸಿದ್ಧತೆ ವೇಳೆ ಎದ್ದು ಕುಳಿತ ಹುಡುಗಿ: ವೈದ್ಯರಿಗೆ ಶಾಕ್
ಎಡಗಾಲಿನಲ್ಲಿ ನೋವಿದ್ದ ಮಹಿಳೆಯ ಬಲಗಾಲಿಗೆ ಶಸ್ತ್ರಚಿಕಿತ್ಸೆ ಮಾಡಿದ ಡಾಕ್ಟರ್ಸ್!
ಕೇರಳದ ಕಕ್ಕೋಡಿಯ ಸಜಿನಾ ಸುಕುಮಾರನ್ (60) ಅವರು ತಮ್ಮ ಎಡಗಾಲಿನ ಹಿಮ್ಮಡಿಯ ನರಕ್ಕೆ ಗಾಯವಾಗಿತ್ತೆಂದು ಮಾವೂರು ರಸ್ತೆಯಲ್ಲಿರುವ ರಾಷ್ಟ್ರೀಯ ಆಸ್ಪತ್ರೆಯ ಡಾ.ಬೆಹಿರ್ಶನ್ ಅವರ ಬಳಿ ಚಿಕಿತ್ಸೆ ಪಡೆದುಕೊಂಡಿದ್ದರು. ಆ ನಂತರ ಶಸ್ತ್ರ ಚಿಕಿತ್ಸೆ ಮಾಡಿಕೊಂಡ ಸುಜಿನಾಗೆ ಆಘಾತವಾಗಿತ್ತು. ಯಾಕಂದ್ರೆ ರೋಗಿ ಹೇಳಿದ್ದೇ ಒಂದು, ವೈದ್ಯ ಮಾಡಿದ್ದೇ ಇನ್ನೊಂದು ಎಂಬಂತಾಗಿತ್ತು ಪರಿಸ್ಥಿತಿ. ಕಕ್ಕೋಡಿಯ ಸಜಿನಾ ಸುಕುಮಾರನ್ ತಮ್ಮ ಎಡಗಾಲಿನ ಹಿಮ್ಮಡಿಯ ನರಕ್ಕೆ ಗಾಯವಾಗಿತ್ತೆಂದು ಮಾವೂರು ರಸ್ತೆಯಲ್ಲಿರುವ ರಾಷ್ಟ್ರೀಯ ಆಸ್ಪತ್ರೆಯ ಡಾ.ಬೆಹಿರ್ಶನ್ ಅವರ ಬಳಿ ಚಿಕಿತ್ಸೆ ಪಡೆಡಿದ್ದರು. ನಂತರ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ಬಂದಿದ್ದರು. ಆದರೆ ಆಪರೇಷನ್ ಮುಗಿದ ನಂತರ ವೈದ್ಯರು ನೋಡಿದರೆ ಸುಜಿನಾ ಎಡಗಾಲಿನ ಬದಲು ಬಲಗಾಲಿಗೆ ಆಪರೇಷನ್ ಮಾಡಿರುವುದು ತಿಳಿದುಬಂದಿದೆ.
ಕೆಲವು ವರ್ಷದ ಹಿಂದೆ ಸಜಿನಾ ಅವರ ಎಡಕಾಲು (Left leg) ಬಾಗಿಲಿಗೆ ಸಿಕ್ಕಿ ಹಾಕಿಕೊಂಡ ಕಾರಣ ಗಾಯವಾಗಿತ್ತು. ನೋವು ಕಡಿಮೆಯಾಗದ ಕಾರಣ ವೈದ್ಯರ ಮೊರೆ ಹೋಗಿದ್ದರು. ಮೊದಲು ಖಾಸಗಿ ಕ್ಲಿನಿಕ್‌ನಲ್ಲಿ ಡಾ.ಬೆಹಿರ್ಶನ್ ಬಳಿ ಚಿಕಿತ್ಸೆ ಪಡೆದುಕೊಂಡಿದ್ದರು ನಂತರ ಫೆ.20 ರಂದು ಆಸ್ಪತ್ರೆಗೆ ದಾಖಲಾಗಿದ್ದು, ಮರುದಿನ ಡಾ.ಬೆಹಿರ್ಶನ್ ಅವರೇ ಸಜಿನಾ ಅವರ ಶಸ್ತ್ರಚಿಕಿತ್ಸೆ ಮಾಡಿದ್ದರು. ಆದರೆ ಆಪರೇಷನ್ ಮುಗಿದ ಬಳಿಕ ತಪ್ಪಾದ ಕಾಲಿಗೆ ಚಿಕಿತ್ಸೆ ಮಾಡಿರೋದು ಗೊತ್ತಾಗಿದೆ.