Smartphone and Heartbeat: ಎಡ ಶರ್ಟ್ ಜೇಬಿನಲ್ಲಿ ಫೋನ್ ಇಡೋದ್ರಿಂದ ಹೃದಯದ ಬಡಿತ ಹೆಚ್ಚಾಗುತ್ತಾ?

Published : Oct 05, 2026, 01:00 PM IST
Mobile phone

ಸಾರಾಂಶ

health tips : ಶರ್ಟ್‌ ಜೇಬಿನಲ್ಲಿ ಮೊಬೈಲ್ ಇಟ್ಟುಕೊಳ್ಳುವವರ ಸಂಖ್ಯೆ ಸಾಕಷ್ಟಿದೆ. ಜೇಬಿನಲ್ಲಿ ಮೊಬೈಲ್‌ ಇಟ್ಟುಕೊಳ್ಳೋದ್ರಿಂದ ಹೃದಯದ ಬಡಿತ ಹೆಚ್ಚಾಗುತ್ತಾ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

ಮೊಬೈಲ್ ಈಗ ನಮ್ಮ ಜೀವನದ ಒಂದು ಇಂಪಾರ್ಟೆಂಟ್‌ ಪಾರ್ಟ್ ಆಗಿಬಿಟ್ಟಿದೆ. ಎಲ್ಲಿಗೆ ಹೋದ್ರೂ ಫೋನ್ ನಮ್ಮ ಜೊತೆಗೇ ಇರುತ್ತೆ. ಕೆಲವರು ಪ್ಯಾಂಟ್ ಜೇಬಿನಲ್ಲಿ ಮೊಬೈಲ್ ಇಟ್ಕೊಳ್ತಾರೆ, ಇನ್ನು ಕೆಲವರು ಶರ್ಟ್ ಜೇಬಿನಲ್ಲಿ ಇಡ್ತಾರೆ. ಅದರಲ್ಲೂ ಎಡಭಾಗದ ಶರ್ಟ್ ಜೇಬು ಹೃದಯಕ್ಕೆ ತುಂಬಾ ಹತ್ತಿರ. ಹೀಗಾಗಿ ಅಲ್ಲಿ ಮೊಬೈಲ್ ಇಟ್ಕೊಂಡ್ರೆ ಅದರ ವೈಬ್ರೇಷನ್ ಅಥವಾ ಸಿಗ್ನಲ್ ನಿಂದ ಹಾರ್ಟ್‌ ಬೀಟ್ ಮೇಲೆ ಎಫೆಕ್ಟ್ ಆಗುತ್ತಾ? ಅದಕ್ಕೆ ಉತ್ತರ ಇಲ್ಲಿದೆ.

ಶರ್ಟ್ ಜೇಬಿನಲ್ಲಿ ಮೊಬೈಲ್ ಇಟ್ಟರೆ ಹೃದಯದ ಬಡಿತ ಬದಲಾಗುತ್ತಾ?

ವೈದ್ಯರ ಪ್ರಕಾರ, ಶರ್ಟ್ ಜೇಬಿನಲ್ಲಿ ಮೊಬೈಲ್ ಇಡುವುದರಿಂದ ಹಾರ್ಟ್‌ ಬೀಟ್ ಬದಲಾಗುತ್ತದೆ ಅನ್ನೋದಕ್ಕೆ ಯಾವುದೇ ಸೂಕ್ತವಾದ ಸಾಕ್ಷ್ಯವಿಲ್ಲ. ಮೊಬೈಲ್ ನೆಟ್ವರ್ಕ್ಗೆ ಕನೆಕ್ಟ್ ಆಗಲು ರೇಡಿಯೋ ಆವರ್ತನ ಸಂಕೇತಗಳನ್ನು ಬಳಸುತ್ತದೆ. ಇವು ಇದು ಅಯಾನೀಕರಿಸದ ವಿಕಿರಣವಾಗಿದ್ದು, ಎಕ್ಸ್ರೇಯಂತಹ ಅಯಾನೀಕರಿಸುವ ವಿಕಿರಣಕ್ಕಿಂತ ಭಿನ್ನವಾಗಿರುತ್ತದೆ. ಹೀಗಾಗಿ ಸಾಮಾನ್ಯ ವ್ಯಕ್ತಿಗಳು ಶರ್ಟ್ ಜೇಬಿನಲ್ಲಿ ಮೊಬೈಲ್ ಇಟ್ಕೊಂಡ ತಕ್ಷಣ ಹೃದಯದ ಮೇಲೆ ಪರಿಣಾಮ ಆಗುತ್ತೆ ಅಂತ ಭಯಪಡುವ ಅಗತ್ಯ ಇಲ್ಲ.

ಮೊಬೈಲ್ ವೈಬ್ರೇಷನ್ ಆದಾಗ ಏನಾಗುತ್ತೆ?

ಕೆಲವೊಮ್ಮೆ ಜೇಬಿನಲ್ಲಿರುವ ಮೊಬೈಲ್ ವೈಬ್ರೇಟ್ ಆದಾಗ, ಹೃದಯದ ಹತ್ತಿರ ಏನೋ ಆಗ್ತಿದೆ ಅನ್ನೋ ಫೀಲಿಂಗ್‌ ಬರುತ್ತದೆ. ಆದ್ರೆ ವೈಬ್ರೇಷನ್ ಆಗಿದೆ ಅಂದ್ರೆ ಹಾರ್ಟ್‌ ಬೀಟ್‌ ಚೇಂಜ್‌ ಆಗಿದೆ ಎಂದಲ್ಲ. ಮೊಬೈಲ್ನ ವೈಬ್ರೇಷನ್ ನಿಂದ ಆ ಭಾಗದಲ್ಲಿ ಸೆನ್ಸೇಷನ್ ಸ್ವಲ್ಪ ಜಾಸ್ತಿ ಫೀಲ್ ಆಗಬಹುದು. ಅದರಲ್ಲೂ ನಮ್ಮ ಹಾರ್ಟ್‌ ಬೀಟ್ ಬಗ್ಗೆ ನಾವು ಮೊದಲೇ ಹೆಚ್ಚು ಗಮನ ಕೊಡ್ತಿದ್ರೆ, ನಾರ್ಮಲ್‌ ಹಾರ್ಟ್‌ ಬೀಟ್‌ ಕೂಡ ಸ್ವಲ್ಪ ಜಾಸ್ತಿ ಆದಂತೆ ಭಾಸವಾಗುತ್ತದೆ. ಅದಕ್ಕಾಗಿ ಮೊಬೈಲ್‌ ವೈಬ್ರೇಷನ್ ಮತ್ತು ಹಾರ್ಟ್‌ ಬೀಟ್‌ ಅನ್ನು ಪ್ರತಿಬಾರಿಯೂ ಲಿಂಕ್ ಮಾಡೋದು ಸರಿಯಲ್ಲ.

ಹೃದಯ ಬಡಿತದ ವೇಗಕ್ಕೆ ಇದು ಮಾತ್ರ ಕಾರಣ ಅಲ್ಲ

ಒಮ್ಮೊಮ್ಮೆ ಇದ್ದಕ್ಕಿದ್ದಂತೆ ಹಾರ್ಟ್ ಬೀಟ್ ಜಾಸ್ತಿ ಆಗಿದೆ ಅನ್ನಿಸಬಹುದು. ಅದಕ್ಕೆ ತಕ್ಷಣ ಮೊಬೈಲ್ ಕಾರಣ ಅಂತ ಅಂದುಕೊಳ್ಳಬೇಡಿ. ಹೆಚ್ಚು ಟೀ ಅಥವಾ ಕಾಫಿ ಕುಡಿಯೋದು, ಸ್ಟ್ರೆಸ್, ನೀರು ಕಡಿಮೆ ಕುಡಿಯೋದು, ಸರಿಯಾಗಿ ನಿದ್ರೆ ಮಾಡದೇ ಇರೋದು ಇವೆಲ್ಲವೂ ಹಾರ್ಟ್ ಬೀಟ್ ಜಾಸ್ತಿ ಆಗೋಕೆ ಕಾರಣವಾಗಬಹುದು. ಕೆಲವು ಹಾರ್ಟ್ ರಿದಮ್ ಸಮಸ್ಯೆಗಳಿಂದಲೂ ಇಂತಹ ಫೀಲಿಂಗ್ ಬರಬಹುದು. ಹೀಗಾಗಿ ಪದೇಪದೇ ಹಾರ್ಟ್ ಬೀಟ್ ಫಾಸ್ಟ್ ಆಗ್ತಿದೆ ಅಥವಾ ಇರ್ರೆಗ್ಯುಲರ್ ಆಗ್ತಿದೆ ಅನ್ನಿಸಿದ್ರೆ, ಕಾರಣ ಏನು ಅಂತ ಪರೀಕ್ಷೆ ಮಾಡಿಸಿಕೊಳ್ಳಿ.

ಇದನ್ನು ಇಗ್ನೋರ್ ಮಾಡಬೇಡಿ

ಹಾರ್ಟ್ ಬೀಟ್ ವೇಗವಾಗಿ ಅಥವಾ ಇರ್ರೆಗ್ಯುಲರ್ ಆಗುವುದರ ಜೊತೆಗೆ ಎದೆ ನೋವು, ತಲೆ ಸುತ್ತುವುದು, ಪ್ರಜ್ಞೆ ತಪ್ಪುವಂತಾಗುವುದು ಅಥವಾ ತುಂಬಾ ಉಸಿರಾಟದ ತೊಂದರೆ ಇದ್ದರೆ ಅದನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಇಂತಹ ಸಿಂಪ್ಟಮ್ಸ್ ಇದ್ದರೆ ತಕ್ಷಣ ಮೆಡಿಕಲ್ ಹೆಲ್ಪ್ ಪಡೆಯಬೇಕು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Stomach Ulcer: ಟೈಮ್‌ಗೆ ಸರಿಯಾಗಿ ಊಟ ಮಾಡದಿದ್ದರೆ ಅಲ್ಸರ್ ಬರುತ್ತಾ? ಸೀಕ್ರೆಟ್ ಮಾಹಿತಿ ಇಲ್ಲಿದೆ!
Fennel Seeds: ಊಟದ ಬಳಿಕ ಸ್ವಲ್ಪ ಸೋಂಪು ಕಾಳು ತಿಂದ್ರೆ ಬೆಟರ್ ಅನ್ಸುತ್ತೆ!