ಬಹು ಲೈಂಗಿಕ ಪಾಲುದಾರರನ್ನು ಹೊಂದಿರುವ ಜನರಿಗೆ ಅಧ್ಯಯನವೊಂದು ಎಚ್ಚರಿಕೆ ನೀಡಿದೆ. ಇದು ಬರಿ ಎಸ್ ಟಿಐ ಅಪಾಯ ಹೆಚ್ಚಿಸುವುದು ಮಾತ್ರವಲ್ಲದೆ ಕ್ಯಾನ್ಸರ್ ಗೂ ಕಾರಣವಾಗುತ್ತದೆ. ಅದ್ರಲ್ಲಿ ಮಹಿಳೆಯರ ಪಾಲು ಎಷ್ಟು, ಪುರುಷರ ಪಾಲು ಎಷ್ಟು ಎಂಬುದನ್ನು ಕೂಡ ಹೇಳಲಾಗಿದೆ.
ಲೈಂಗಿಕ ಜೀವನ ಪ್ರತಿಯೊಬ್ಬರ ವೈಯಕ್ತಿಕ ನಿರ್ಧಾರ. ಇಬ್ಬರೂ ಪರಸ್ಪರ ಒಪ್ಪಿ ಲೈಂಗಿಕ ಸುಖವನ್ನು ಪಡೆಯುತ್ತಾರೆ. ಒಬ್ಬ ವ್ಯಕ್ತಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಲೈಂಗಿಕ ಪಾಲುದಾರರನ್ನು ಹೊಂದಬಹುದು. ಲೈಂಗಿಕ ಜೀವನದಲ್ಲಿ ಸಂತೋಷ ಪಡೆಯಲು ಅನೇಕರು ತಮ್ಮ ಪಾಲುದಾರರನ್ನು ಪದೇ ಪದೇ ಬದಲಿಸುತ್ತಾರೆ. ಸಂಗಾತಿ ಬದಲಾವಣೆ ಸಂಭೋಗ ಸುಖವನ್ನು ಹೆಚ್ಚಿಸಬಹುದು. ಆದ್ರೆ ಇದು ಬಹಳ ಅಪಾಯಕಾರಿಯಾಗಿದೆ. ಇದ್ರಿಂದ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ ಎಂಬ ವಿಷ್ಯ ಬಹಿರಂಗವಾಗಿದೆ. ಹತ್ತು ಅಥವಾ ಹತ್ತಕ್ಕಿಂತ ಹೆಚ್ಚು ಜನರ ಜೊತೆ ಲೈಂಗಿಕ ಸಂಬಂಧ ಹೊಂದಿರುವ ವ್ಯಕ್ತಿಗೆ ಕ್ಯಾನ್ಸರ್ ಅಪಾಯ ಹೆಚ್ಚಿರುತ್ತದೆ. ಅದ್ರಲ್ಲೂ ಪುರುಷರಿಗೆ ಹೋಲಿಸಿದ್ರೆ ಮಹಿಳೆಯರು ಈ ಅಪಾಯವನ್ನು ಹೆಚ್ಚು ಎದುರಿಸುತ್ತಾರೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.
ಒಬ್ಬ ಸಂಗಾತಿ ಹೊಂದಿರುವ ವ್ಯಕ್ತಿಗೆ ಹೋಲಿಸಿದ್ರೆ ಹತ್ತು ಅಥವಾ ಹತ್ತಕ್ಕಿಂತ ಹೆಚ್ಚು ಸಂಗಾತಿ ಹೊಂದಿರುವ ವ್ಯಕ್ತಿಗೆ ಕ್ಯಾನ್ಸರ್ (Cancer) ಅಪಾಯ ಶೇಕಡಾ 70ರಷ್ಟು ಹೆಚ್ಚಿರುತ್ತದೆ. ಅದೇ ಹತ್ತಕ್ಕಿಂತ ಹೆಚ್ಚು ಸಂಗಾತಿ ಜೊತೆ ಲೈಂಗಿಕ (sexual) ಸಂಬಂಧ ಹೊಂದಿರುವ ಮಹಿಳೆಯರಿಗೆ ಕ್ಯಾನ್ಸರ್ ಅಪಾಯ, ಒಂದೇ ಸಂಗಾತಿ ಹೊಂದಿರುವ ಮಹಿಳೆಯರಿಗಿಂತ ಶೇಕಡಾ 91ರಷ್ಟು ಹೆಚ್ಚಿರುತ್ತದೆ.
ನಿದ್ರೆ ಸರಿ ಮಾಡ್ಲಿಲ್ಲವೆಂದ್ರೆ ಸೆಕ್ಸ್ ಲೈಫ್‌ಗೂ ತರುತ್ತೆ ಕುತ್ತು!
ಈ ಅಧ್ಯಯನ (Studies) ದ ವೇಳೆ, ಮಹಿಳೆ ಮತ್ತು ಪುರುಷರಲ್ಲಿ ಯಾರಿಗೆ ಹೆಚ್ಚು ಸಂಗಾತಿ ಇದ್ದಾರೆ ಎಂಬುದನ್ನು ಕೂಡ ಪತ್ತೆ ಮಾಡಲಾಗಿದೆ. ಅಲ್ಲದೆ ಇಲ್ಲಿ ಅವಿವಾಹಿತರು ಮತ್ತು ಚಿಕ್ಕ ವಯಸ್ಸಿನವರು ಹೆಚ್ಚಿದ್ದರು ಎಂಬುದು ಗೊತ್ತಾಗಿದೆ. ಲೈಂಗಿಕತೆ ಹೊರತಾಗಿ ಅವರು ಧೂಮಪಾನ ಮತ್ತು ಮದ್ಯಪಾನಿಗಳಾಗಿದ್ದರು ಎಂದು ಸಂಶೋಧಕರು ಹೇಳಿದ್ದಾರೆ.
50 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ 2,500 ಪುರುಷರು ಮತ್ತು 3,200 ಮಹಿಳೆಯರನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಗಿತ್ತು.ಅವರ ಲೈಂಗಿಕ ಪಾಲುದಾರರ ಒಟ್ಟು ಸಂಖ್ಯೆಯ ಮಾಹಿತಿ ಪಡೆಯಲಾಯ್ತು. ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಶೇಕಡಾ 28.5 ರಷ್ಟು ಪುರುಷರು ತಾವು ಲೈಂಗಿಕ ಸಂಗಾತಿಯನ್ನು ಹೊಂದಿರೋದಾಗಿ ಒಪ್ಪಿಕೊಂಡಿದ್ದರು. ಶೇಕಡಾ 29 ಜನರು ಎರಡರಿಂದ ನಾಲ್ಕು ಲೈಂಗಿಕ ಪಾಲುದಾರರನ್ನು ಹೊಂದಿರುವುದಾಗಿ ಹೇಳಿದ್ದರು. ಶೇಕಡಾ 20 ರಷ್ಟು ಜನರು ತಮ್ಮ ಲೈಂಗಿಕ ಪಾಲುದಾರರ ಸಂಖ್ಯೆ ಐದರಿಂದ ಒಂಬತ್ತು ನಡುವೆ ಇದೆ ಎಂದಿದ್ದರು. ಇದನ್ನು ಹೊರತುಪಡಿಸಿ ಶೇಕಡಾ 22 ರಷ್ಟು ಜನರು 10 ಅಥವಾ ಅದಕ್ಕಿಂತ ಹೆಚ್ಚು ಸಂಗಾತಿ ಹೊಂದಿರುವುದಾಗಿ ಹೇಳಿದ್ದರು. ಇನ್ನು ಮಹಿಳೆಯರ ಬಗ್ಗೆ ಹೇಳೋದಾದ್ರೆ ಶೇಕಡಾ 41ರಷ್ಟು ಮಹಿಳೆಯರು ಒಬ್ಬ ಲೈಂಗಿಕ ಸಂಗಾತಿಯನ್ನು ಹೊಂದಿದ್ದರು.ಶೇಕಡಾ 35.5 ರಷ್ಟು ಮಹಿಲೆಯರು ಎರಡರಿಂದ ನಾಲ್ಕು ಲೈಂಗಿಕ ಪಾಲುದಾರರನ್ನು ಹೊಂದಿದ್ದರು. ಶೇಕಡಾ 16 ರಷ್ಟು ಮಹಿಳೆಯರು ಐದರಿಂದ ಒಂಬತ್ತು ಮತ್ತು ಕೇವಲ ಎಂಟು ಪ್ರತಿಶತದಷ್ಟು ಮಹಿಳೆಯರು 10 ಅಥವಾ ಹೆಚ್ಚಿನ ಲೈಂಗಿಕ ಪಾಲುದಾರರನ್ನು ಹೊಂದಿರುವುದಾಗಿ ಒಪ್ಪಿಕೊಂಡಿದ್ದರು.
ಅನೇಕ ಪಾಲುದಾರರ ಜೊತೆ ಸೆಕ್ಸ್ ನಿಂದ ಹೆಚ್ಚಾಗುತ್ತೆ ಪ್ಯಾಪಿಲೋಮಾ ವೈರಸ್ ಅಪಾಯ : ವಿವಿಧ ಸಂಗಾತಿ ಜೊತೆ ಲೈಂಗಿಕ ಸಂಬಂಧ ಬೆಳೆಸುವುದ್ರಿಂದ ಹ್ಯೂಮನ್ ಪ್ಯಾಪಿಲೋಮಾ ವೈರಸ್ ಅಪಾಯ ಹೆಚ್ಚಾಗುತ್ತದೆ. ಇದು ಜನರಲ್ಲಿ ಬಾಯಿ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಈ ವೈರಸ್, ಮನುಷ್ಯನ ಯಾವುದೇ ತೇವದ ಜಾಗದಲ್ಲಿ ಬೇಗ ಪ್ರಭಾವ ಬೀರುತ್ತದೆ. ಹಾಗಾಗಿ ಬಾಯಿ, ಗರ್ಭಕಂಠ, ಯೋನಿ, ಶಿಶ್ನ, ಗುದದ್ವಾರದ ಮೇಲೆ ಪ್ರಭಾವ ಕಾಣಿಸುತ್ತದೆ.
ಊಟಕ್ಕೆ ಕೂತಾಗ ಮಕ್ಕಳೊಂದಿಗೆ ಮಾತಿಗೆ ತೊಡಗಲು ಈ ಪ್ರಶ್ನೆಗಳನ್ನು ಕೇಳಿ..
HIV ಅಪಾಯವೂ ಹೆಚ್ಚು : ಬಹು ಲೈಂಗಿಕ ಪಾಲುದಾರರನ್ನು ಹೊಂದಿರುವವರಿಗೆ ಇಮ್ಯುನೊ ಡಿಫಿಷಿಯನ್ಸಿ ವೈರಸ್ (Immuno Dificiency Virus) ಅಂದ್ರೆ ಎಚ್ಐವಿ ಸೋಂಕಿನ ಅಪಾಯ ಹೆಚ್ಚಿರುತ್ತದೆ. ಕಪೋಸಿಯ ಸಾರ್ಕೋಮಾ ಮತ್ತು ಲಿಂಫೋಮಾದಂತಹ ಕ್ಯಾನ್ಸರ್ ಅಪಾಯವನ್ನೂ ಇದು ಹೆಚ್ಚಿಸುತ್ತದೆ. ಹೆಪಟೈಟಿಸ್ ಬಿ ಮತ್ತು ಹೆಪಟೈಟಿಸ್ ಸಿ ಕಾರಣದಿಂದಾಗಿ ಯಕೃತ್ತಿನ ಕ್ಯಾನ್ಸರ್ ಅಪಾಯ ಕೂಡ ಹೆಚ್ಚಾಗುತ್ತದೆ ಎನ್ನುತ್ತಾರೆ ತಜ್ಞರು.