ವೃದ್ಧಾಪ್ಯದಲ್ಲಿ ಕಾಡುವ ನೋವಿಗೆ ಇಲ್ಲಿದೆ ಪರಿಹಾರ

Published : Apr 21, 2022, 09:52 AM IST
ವೃದ್ಧಾಪ್ಯದಲ್ಲಿ ಕಾಡುವ ನೋವಿಗೆ ಇಲ್ಲಿದೆ ಪರಿಹಾರ

ಸಾರಾಂಶ

60ರ ಗಡಿ ದಾಟುತ್ತಿದ್ದಂತೆ ಕಾಲು, ಬೆನ್ನು, ಸೊಂಟ ಹೀಗೆ ದೇಹದ ಒಂದೊಂದೇ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ವಯಸ್ಸು 40 ಆಗ್ತಿದ್ದಂತೆ ನೋವಿನ ಸಮಸ್ಯೆ ಶುರುವಾಗಿದೆ. ಜನರು ಈ ನೋವಿನಿಂದ ಮುಕ್ತಿ ಪಡೆಯಬೇಕೆಂದ್ರೆ ಸುಲಭ ಟಿಪ್ಸ್ ಪಾಲನೆ ಮಾಡ್ಬೇಕು.  

ವಯಸ್ಸಾದಂತೆ ದೈಹಿಕ ಸಮಸ್ಯೆಗಳೂ ಹೆಚ್ಚಾಗುತ್ತವೆ. ವೃದ್ಧಾಪ್ಯ (Old age) ದಲ್ಲಿ ಕೀಲು ನೋವು (Pain) ಮತ್ತು ಬೆನ್ನು ನೋವು (Back Pain) ಸಾಮಾನ್ಯ. ಎದ್ದು ಕೂರುವುದಕ್ಕೂ ತೊಂದರೆಯಾಗುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ (Treatment ) ನೀಡದಿದ್ದರೆ, ಕ್ರಮೇಣ ಈ ಸಮಸ್ಯೆಗಳು ಹೆಚ್ಚಾಗಲು ಪ್ರಾರಂಭವಾಗುತ್ತೆ. ವಾಕಿಂಗ್ (Walking) ಮತ್ತು ದೈನಂದಿನ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ. ಅಸ್ವಸ್ಥತೆ  ಸದಾ ಕಾಡುತ್ತದೆ. ನೋವು ಕಡಿಮೆ ಮಾಡಿಕೊಳ್ಳಲು ವೃದ್ಧಾಪ್ಯದಲ್ಲಿ ಜನರು ನೋವು ನಿವಾರಕ ಮಾತ್ರೆಗಳನ್ನು ಸೇವಿಸುತ್ತಾರೆ. ಈ ಔಷಧಿಗಳು ದೇಹಕ್ಕೆ ಸ್ವಲ್ಪ ಸಮಯ ವಿಶ್ರಾಂತಿ ನೀಡುತ್ತವೆ. ನಂತರ ಸಮಸ್ಯೆಗಳು ಮತ್ತೆ ಪ್ರಾರಂಭವಾಗುತ್ತವೆ. ಇದ್ರ ಜೊತೆ ನೋವು ನಿವಾರಕಗಳ ನಿರಂತರ ಬಳಕೆಯು ದೇಹಕ್ಕೆ ಹಾನಿಕಾರಕವಾಗಿದೆ. ವೃದ್ಧಾಪ್ಯದಲ್ಲಿ ಕೀಲು ನೋವು, ಬೆನ್ನು ನೋವು ಮತ್ತು ಇತರ ದೈಹಿಕ ಸಮಸ್ಯೆಗಳನ್ನು ಹೋಗಲಾಡಿಸಲು ನೈಸರ್ಗಿಕ ಪರಿಹಾರವೆಂದ್ರೆ ಯೋಗದ ನಿಯಮಿತ ಅಭ್ಯಾಸ. ಕೆಲವು ಯೋಗಾಸನಗಳ ನಿಯಮಿತ ಅಭ್ಯಾಸವು ನೋವಿಗೆ ಪರಿಹಾರವನ್ನು ನೀಡುತ್ತದೆ. ಇಂದು ಯಾವ ಅಭ್ಯಾಸದಿಂದ ನೋವು ದೂರ ಮಾಡಿಕೊಳ್ಳಬಹುದು ಎಂಬುದನ್ನು ನಾವು ಹೇಳ್ತೇವೆ.

ಕೀಲು ನೋವು ಕಡಿಮೆ ಮಾಡುತ್ತೆ ಈ ಯೋಗಾಸನ

ಸೇತುಬಂಧಾಸನ : ಸೇತುಬಂಧಾಸನವನ್ನು ಅಭ್ಯಾಸ ಮಾಡಲು ನಿಮ್ಮ ಬೆನ್ನಿನ ಮೇಲೆ ಆರಾಮವಾಗಿ ಮಲಗಿಕೊಳ್ಳಿ. ನಂತರ ನಿಮ್ಮ ಅಂಗೈಗಳನ್ನು ದೇಹದ ಬಳಿ ನೆಲಕ್ಕೆ ಹತ್ತಿರ ತೆಗೆದುಕೊಂಡು ಹೋಗಿ. ಇದಾದ ನಂತರ ಮೊಣಕಾಲುಗಳನ್ನು ಬಗ್ಗಿಸಿ ಮತ್ತು ಉಸಿರಾಡುವಾಗ ದೇಹವನ್ನು ನಿಧಾನವಾಗಿ ಮೇಲಕ್ಕೆತ್ತಿ. ಈ ಸ್ಥಿತಿಯಲ್ಲಿರುವಾಗ ಉಸಿರಾಟ ಸಾಮಾನ್ಯವಾಗಿರಲಿ. ಅಂದರೆ ನಿಧಾನವಾಗಿ ಉಸಿರು ತೆಗೆದುಕೊಳ್ಳಿ ಮತ್ತು ಬಿಡಿ. ಸ್ವಲ್ಪ ಸಮಯದ ನಂತರ ಸಮ ಸ್ಥಿತಿಗೆ ಹಿಂತಿರುಗಿ. ಸೇತುಬಂಧಾಸನವನ್ನು ನಿಯಮಿತವಾಗಿ ಅಭ್ಯಾಸ ಮಾಡುವುದ್ರಿಂದ ಆರೋಗ್ಯ ವೃದ್ಧಿಯಾಗುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಇದರಿಂದ ಸ್ನಾಯುಗಳಿಗೆ ಶಕ್ತಿ ಸಿಗುತ್ತದೆ. ಈ ಯೋಗದಿಂದ ಇನ್ನೊಂದು ಪ್ರಯೋಜನವೆಂದ್ರೆ ಒತ್ತಡ ಕಡಿಮೆಯಾಗುತ್ತದೆ.

HEALTH TIPS : ಬೇಸಿಗೆಯಲ್ಲಿ ಈ ಹಣ್ಣು ತಿನ್ನಲು ಮರೆಯಬೇಡಿ

ಧನುರಾಸನ : ಧನುರಾಸನವನ್ನು ಅಭ್ಯಾಸ ಮಾಡಲು ನಿಮ್ಮ ಹೊಟ್ಟೆಯ ಮೇಲೆ ಮಲಗಿ ಮತ್ತು ನಿಮ್ಮ ಕಾಲುಗಳನ್ನು ಮೇಲಕ್ಕೆ ಎತ್ತಿ. ಎರಡೂ ಕೈಗಳಿಂದ ಪಾದಗಳ ಬೆರಳುಗಳನ್ನು ಹಿಡಿದುಕೊಳ್ಳಿ. ಉಸಿರಾಡುವಾಗ ಪಾದಗಳನ್ನು ಮೇಲಕ್ಕೆ ಎಳೆಯಿರಿ. ಸ್ವಲ್ಪ ಸಮಯ ಈ ಸ್ಥಿತಿಯಲ್ಲಿದ್ದು, ನಂತರ ಸಾಮಾನ್ಯ ಸ್ಥಿತಿಗೆ ಹಿಂತಿರುಗಿ. ಇದನ್ನು ಮಾಡುವುದ್ರಿಂದ ಹೃದಯ, ಎದೆ, ಶ್ವಾಸಕೋಶಕ್ಕೆ ಬಲ ಸಿಗುತ್ತದೆ. ಬೆನ್ನು, ತೊಡೆ ಸ್ನಾಯುಗಳು ಬಲ ಪಡೆಯುತ್ತವೆ. ಹೊಟ್ಟೆ ಸಮಸ್ಯೆ ಕಡಿಮೆಯಾಗುತ್ತದೆ. ಅಜೀರ್ಣ, ಮಲಬದ್ಧತೆ ಸಮಸ್ಯೆಯಿರುವವರು ಇದನ್ನು ಮಾಡ್ಬೇಕು. 

ಶವಾಸನ : ಈ ಆಸನವನ್ನು ಮಾಡಲು ಮೊದಲನೆಯದಾಗಿ ನಿಮ್ಮ ಬೆನ್ನಿನ ಮೇಲೆ ಮಲಗಿ ಮತ್ತು ಎರಡೂ ಕಾಲುಗಳನ್ನು ಆರಾಮವಾಗಿ ಚಾಚಿ.  ದೇಹದಿಂದ 5 ರಿಂದ 6 ಇಂಚುಗಳಷ್ಟು ದೂರದಲ್ಲಿ ಕೈಗಳನ್ನು ಇರಿಸಿ.  ಕತ್ತನ್ನು ಕೂಡ ಆರಾಮದ ಸ್ಥಿತಿಯಲ್ಲಿಸಿ. ಈಗ ನಿಮ್ಮ ಕಣ್ಣುಗಳನ್ನು ಮುಚ್ಚಿ ಮತ್ತು ಸ್ವಲ್ಪ ಸಮಯದವರೆಗೆ ಇದೇ ಸ್ಥಿತಿಯಲ್ಲಿರಿ. ಇದು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.ತಲೆ ನೋವು ಹಾಗೂ ನಿದ್ರಾಹೀನತೆ ನಿವಾರಿಸಲು ಕೂಡ ಇದು ಬೆಸ್ಟ್. 

ಕಾಂಡೋಮ್ ಮಾತ್ರವಲ್ಲ, ಒಲ್ಲದ ಪ್ರೆಗ್ನೆನ್ಸಿಗೆ ಬೈ ಹೇಳಲಿವೆ ನಾನಾ ಮಾರ್ಗಗಳು

ವೀರಭದ್ರಾಸನ : ಈ ಯೋಗವನ್ನು ಮಾಡಲು, ಮೊದಲನೆಯದಾಗಿ, ನೇರವಾದ ಭಂಗಿಯಲ್ಲಿ ನಿಂತು, ನಿಮ್ಮ ತೋಳುಗಳನ್ನು ನೆಲಕ್ಕೆ ಸಮಾನಾಂತರವಾಗಿ ಮೇಲಕ್ಕೆತ್ತಿ ಮತ್ತು ತಲೆಯನ್ನು ಎಡಕ್ಕೆ ತಿರುಗಿಸಿ. ಈಗ ಎಡಗಾಲನ್ನು 90 ಡಿಗ್ರಿ ಎಡಕ್ಕೆ ಬಗ್ಗಿಸಿ. ಸ್ವಲ್ಪ ಸಮಯದವರೆಗೆ ಈ ಸ್ಥಿತಿಯಲ್ಲಿರಿ. ಈಗ ಅದೇ ವ್ಯಾಯಾಮವನ್ನು ಇನ್ನೊಂದು ಬದಿಯಿಂದ ಮಾಡಿ.  ಬೆನ್ನು, ಕಾಲು – ಕೈ ಸ್ನಾಯುಗಳನ್ನು ಬಲಪಡಿಸುತ್ತದೆ. ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಭುಜಗಳಿಗೆ ಇದು ಹೆಚ್ಚು ಲಾಭಕರ.
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚಳಿಗಾಲದಲ್ಲಿ ಡಯಾಬಿಟಿಸ್ ರೋಗಿಗಳು ಈ ಸಣ್ಣ ಬಿರುಕನ್ನ ನಿರ್ಲಕ್ಷಿಸಿದರೂ ಕಾಲನ್ನೇ ಕತ್ತರಿಸಬೇಕಾಗಬಹುದು!
ಆರೋಗ್ಯಕರ ತುಳಸಿ ಅಗೆದು ತಿಂದ್ರೆ ಅಪಾಯ, ಧರ್ಮ- ಆಯುರ್ವೇದ ಹೇಳೋದೇನು?